ಸಿಂಧು ಶ್ರೀ ವಿ ಕೆ, w/o ಸುನಿ ಎಸ್ ಬೈಚನಹಳ್ಳಿ, ಕುಶಾಲನಗರ, ಕೊಡಗು.
ನಾನು ಪರಸ್ಪರ ದ ಸದಸ್ಯಳು ಎಂದು ಬಹಳ ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ನಾನು ಪರಸ್ಪರದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯಳಾಗಿದ್ದೇನೆ, CSC VLE ಆಗಿ ನಾನು 2019 ರಲ್ಲಿ ನನ್ನ CSC ಕೇಂದ್ರವನ್ನು ಪ್ರಾರಂಭಿಸಿದೆ. ಕೇಂದ್ರದ ಹೆಸರು ಕಾವೇರಿ ಆನ್ಲೈನ್ CSC ಸೆಂಟರ್ ಆಗಿದೆ. ಈಗ ನಾನು ನನ್ನ CSC ಕೇಂದ್ರವನ್ನು 2 ಉದ್ಯೋಗಿಗಳೊಂದಿಗೆ ಯಶಸ್ವಿಯಾಗಿ ನಡೆಸುತ್ತಿದ್ದೇನೆ. ಸಾಮಾನ್ಯ ಜನರಿಗೆ ಸೇವೆ ಸಲ್ಲಿಸಲು CSC ನನಗೆ ಉತ್ತಮ ಅವಕಾಶವನ್ನು ನೀಡಿತು, ಅದು ನಿಜವಾಗಿಯೂ ಅದ್ಭುತವಾಗಿದೆ. ಜೊತೆಗೆ ನನ್ನ ಹೆಮ್ಮೆಯ ಪರಸ್ಪರ ವನ್ನು ಸೇರಲು ಅವಕಾಶ ನೀಡಿತು. ಪರಸ್ಪರ ದಿಂದ ಬಹಳಷ್ಟು ಕಲಿತಿದ್ದೇನೆ. ಪರಸ್ಪರ ನನಗೆ ಸಾಕಷ್ಟು ಜೀವನದ ಮೌಲ್ಯಗಳನ್ನು ಕಲಿಸಿದೆ, ಸಹೋದರ - ಸಹೋದರಿಯರಿರುವ ಉತ್ತಮ ಮತ್ತು ದೊಡ್ಡ ಮಟ್ಟದ ಪರಸ್ಪರ ಕುಟುಂಬವು ನನ್ನದಾಗಿದೆ. ಮತ್ತು ಕರ್ನಾಟಕದ ಪ್ರತಿ ಜಿಲ್ಲೆಯಲ್ಲೂ ನಮ್ಮವರಿದ್ದಾರೆ ಎನ್ನುವ ಭರವಸೆ ನನ್ನದಾಗಿದೆ. ಪರಸ್ಪರ ದ ಕನಸು ದೊಡ್ಡದಾಗಿ ಅದರಿಂದ 14 ವಿಭಾಗಗಳಾಗಿ ಪ್ರತಿಯೊಂದು ವಿಭಾಗವು ವ್ಯತ್ಯಸ್ಥವಾಗಿ ಕಾರ್ಯ ನಿರ್ವಹಿಸಿ ಹಲ ಕೆಲವರನ್ನು ಸಬಲೀಕರಣದತ್ತ ಕೊಂಡೊಯ್ಯಲು ನನ್ನೋದೊಂದು ಸಣ್ಣ ಅಳಿಲು ಸೇವೆ ಇದೆ ಎನ್ನುವುದರಲ್ಲಿ ಹೆಮ್ಮೆಯಿದೆ. ಇಂದು ಸಾಕಷ್ಟು ಜನರ ಕಲಿಕಾ ದಾಹವನ್ನು ಪರಸ್ಪರ ಹೆಚ್ಚಿಸಿದೆ. ಪರಸ್ಪರ ಸಾಗರದಲ್ಲಿ ಸಾಕಷ್ಟು ಕಲಿತಿದ್ದೇನೆ ಮತ್ತು ಇನ್ನು ಕಲಿಯುತ್ತಿದ್ದೇನೆ. ಇದು ನಿತ್ಯ ನಿರಂತರ.
ನಾನು ಎಂದೆಂದೂ ಪರಸ್ಪರ ಕೆ ಸಮಯ ನೀಡುತ್ತೇನೆ.
ನಮ್ಮ ಪರಸ್ಪರ ನಮ್ಮ ಹೆಮ್ಮೆ
ಪರಸ್ಪರ ನಿತ್ಯ ನಿರಂತರ...