“ನಾಟ್ಯಂ ಪರಿಪೂರ್ಣ ಜೀವನಂ” - ನಾಟ್ಯವೇ ಪರಿಪೂರ್ಣ ಜೀವನದ ಆಧಾರ ಎನ್ನುವಂತಹ ಗುರಿಯೊಡನೆ ಮಕ್ಕಳಿಗೆ ಅತೀ ಕಡಿಮೆ ಹಾಗೂ ಆಗದವರಿಗೆ ಉಚಿತವಾಗಿ ನಾಟ್ಯವಿದ್ಯೆಯ ಶಿಕ್ಷಣ ದೊರಕಿಸಬೇಕು ಎಂಬ ಧ್ಯೇಯ ಉದ್ದೇಶದಿಂದ ೨೦೨೨ ಮಾರ್ಚ್ ತಿಂಗಳಲ್ಲಿ ‘ಪುರುಷೋತ್ತಮ ನೃತ್ಯಾಲಯ’ ನೃತ್ಯಶಾಲೆ ಎದುರು ಕಟ್ಟಡದ ಮಹಡಿಯಲ್ಲಿ ಶುರುವಾಯಿತು.

ತನ್ನ ಮೊದಲ ಹಂತವಾಗಿ GC pageants ಮೇ ೨೦೨೨ ರ ಕಾರ್ಯಕ್ರಮದಲ್ಲಿ ತನ್ನ ಪಯಣವನ್ನು ಶುರು ಕಂಡಿತು. ಅದೇ ವರುಷ ಪರಸ್ಪರ ಬಹುಮುಖಿ ವಿಭಾಗದಲ್ಲಿ multimedia ಚಂದ್ರು ಸರ್ , ಗುಹಾನಂದ ಶರ್ಮ ಅವರಿಂದ ಅವಕಾಶ ದೊರೆತು ಎಲ್ಲರಲ್ಲೂ ಚಿರಪಚಿತವಾಗಲು ಕಾರಣವಾಯಿತು. ಈ ಕಾರ್ಯಕ್ರಮಕ್ಕೆ ಕೂಡ ನಾವು ನನ್ನ ಸಹಪಾಠಿಯ ಮನೆಯಲ್ಲಿ ನೃತ್ಯಾಭ್ಯಾಸ ಮಾಡಿದ್ದೆವು.

ಈ ಘಟ್ಟದಲ್ಲಿ ತಂಡವು ಬೆಳೆಯಲಾರಂಭಿಸಿತು, ನೃತ್ಯಾಭ್ಯಾಸ ಮಾಡಲು ಜಾಗದ ಕೊರತೆ ಉಂಟಾಯಿತು. ಆಗ ತಕ್ಷಣ ನನಗೆ ನೆನಪಿಗೆ ಬಂದಿದ್ದು ‘ ಶ್ರೀ ಗುರು ದತ್ತಾತ್ರೇಯ ಟ್ರಸ್ಟ್ (ರಿ)-NGO ‘ ಸಂಸ್ಥಾಪಕರು ಶ್ರೀ. ಲೋಕೇಶ್ ಶರ್ಮಾ ರವರು, ಅವರ ಬಳಿ ನೃತ್ಯಾಭ್ಯಾಸಕ್ಕೆ ಸ್ಥಳ ಕೇಳಿದಾಗ ಇನ್ನೊಂದು ಮಾತಿಲ್ಲದಂತೆ ನಮಗೆ ಸಂಜೆ ೫ ರಿಂದ ೯ ರವರೆಗೆ ನೃತ್ಯಾಭ್ಯಾಸ ಮಾಡಲು ಸ್ಥಳಾವಕಾಶ ಕಲ್ಪಿಸಿ ಕೊಟ್ಟರು. ನಂತರ ಮನೆಯ ಬಳಿಯ ಮಹದೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿಯ ಸಲುವಾಗಿ ನೃತ್ಯ ಮಾಡುವ ಅವಕಾಶ ದೊರೆತು ಇನ್ನೇತರ ಕಾರ್ಯಕ್ರಮಗಳನ್ನು ಮಾಡಿದೆವು.
ಪರಸ್ಪರ ಬಹುಮುಖಿ ವಿಭಾಗ ಹಾಗೂ ದತ್ತಧಾಮಕ್ಕೆ ನಾವೆಂದು ಚಿರಋಣಿ 🙏🏻

ಕಾಲಕ್ಕೆ ತಕ್ಕ ಹಾಗೆ ಜನರಿಗೆ ನೃತ್ಯವನ್ನು ಕೇವಲ ನೋಡಿ ಅರ್ಥವಾಗದಂತೆ ಬಿಡುವ ಬದಲು; ಅವರಿಗೆ ಅರಿವಾಗುವ ಭಾಷೆಯಲ್ಲಿ ನೃತ್ಯರೂಪಕ ಮತ್ತು ನಾಟ್ಯನಾಟಕ ಮಾಡಲು ಶುರು ಮಾಡಿದೆವು. ಹಲವು ಕಡೆ ಇಂದ ಸಂಗೀತ ಹುಡುಕಿ ಮೊದಲನೆಯ ಮೆಟ್ಟಿಲು ಎನ್ನುವಂತೆ “ಶಿವಸಂಭೂತ” ನಾಟ್ಯನಾಟಕ ಮಾಡಿದೆವು, ಇದು ಜನರ ಮನದಲ್ಲಿ ಗುಳಿಗ ದೈವರ ಹುಟ್ಟು ಮತ್ತು ಭೂಮಿಯಲ್ಲಿ ಅವರ ನೆಲೆಗೊಳ್ಳುವ ಚರಿತೆಯನ್ನು ಹೊಂದಿದೆ.

ನಂತರ ಬೇರೆ ಏನಾದರೂ ಮಾಡಬೇಕೆಂದು ತಲೆಕೆಳಗೆ ಮಾಡಿದ ಮಡಿಕೆಯ ಮೇಲೆ ನೃತ್ಯವನ್ನು ಮಾಡಲು ಯೋಚಿಸಿದೆ, ಮುಂದಿದ್ದ ಕಾರ್ಯಕ್ರಮದಲ್ಲೇ ಪ್ರಯೋಗಿಸಬೇಕು ಎಂದು ೧ ದಿನ ಮುಂಚಿತವಾಗಿ ಮಡಿಕೆ ತಂದು ಅಭ್ಯಸಿಸಿ ನಂತರ ಅದನ್ನು ಎಲ್ಲರ ಮುಂದೆ ಪ್ರದರ್ಶನ ನೀಡಿದೆ.

ನಂತರ “ಶಕ್ತಿ ವೈಭವಂ “ ಎನ್ನುವ ನೃತ್ಯರೂಪಕ ರಚಿಸಿ ದೇವಿಯ ಮಹಿಮೆಯನ್ನು ಎಲ್ಲರಿಗೂ ತಿಳಿಸಿದೆವು. ಅದರಲ್ಲಿ ಮಹಾಕಾಳಿಯ ಪಾತ್ರವನ್ನು ಮಾಡಿದ ಕಥೆಯೇ ರೋಚಕ, ೮ ಹೆಣ್ಣು ಮಕ್ಕಳು ಇದ್ದರು ಆದರೆ ಇನ್ನೊಬ್ಬರು ಬೇಕಿತ್ತು ಈ ಕಾರಣ ದೇವಿಯ ರೂಪ ಧರಿಸುವ ಅವಕಾಶ ದೊರೆಯಿತು. ಇದಕ್ಕೆ ಮೀರಿ ಇನ್ನೊಂದು ಸಂಘಟನೆ ಎಂದರೆ ನೃತ್ಯಾಭ್ಯಾಸ ಮುಗಿಸಿ ನಾಳೆ ಕಾರ್ಯಕ್ರಮಕ್ಕೆ ಹೋಗಬೇಕು ಎನ್ನುವಾಗ ಮುಖ್ಯಪಾತ್ರದಲ್ಲಿದ್ದ ಹುಡುಗಿ ಪರೀಕ್ಷೆಯ ಕಾರಣ ಕೈಬಿಡಬೇಕಾದ ಪರಿಸ್ಥಿತಿ ಬಂದು, ಶಕ್ತಿ ವೈಭವದ ಮಹಿಷಾಸುರ ಮರ್ದಿನಿ ನಾನೇ ಮಾಡಬೇಕಾಯ್ತು.
ಇದಲ್ಲದೆ ಮಂಜುನಾಥ ಚರಿತೆ ಚಲನಚಿತ್ರ ಹಾಡನ್ನು ನಮಗೆ ತಕ್ಕಂತೆ ಬೇರೆ ಸಂಗೀತದ ಸಂಯೋಜನೆಯೊಂದಿಗೆ ೨೦ ನಿಮಿಷದ ಕಿರು ನೃತ್ಯರೂಪಕ ಸೃಷ್ಟಿಸಿದೆವು.

ಇದಲ್ಲದೆ ಇನ್ನೂ ಮುಂದಿನ ದಿನಗಳಲ್ಲಿ ಕೈಲಾದಷ್ಟು ಪರಂಪರೆಯ ನೃತ್ಯವನ್ನು ಹೇಳಿಕೊಟ್ಟು ಇನ್ನಷ್ಟು ನೃತ್ಯರೂಪಕ, ನೃತ್ಯ ಸಂಯೋಜನೆಗಳೊಂದಿಗೆ ಜನರ ಮನೆ-ಮನ ತಲುಪಬೇಕು ಎನ್ನುವುದು ನಮ್ಮ ಉದ್ದೇಶ..

ಧನ್ಯವಾದ ಪರಸ್ಪರ ಪರಿವಾರ ☺️