ದೇಸಿ ಸಂತೆ ಮೂಲಕ ಗುಡಿ ಕೈಗಾರಿಕೆಯ ವಸ್ತುಗಳನ್ನು ಮುನ್ನಲೆಗೆ ತಂದು, ಒಬ್ಬರಿಂದ ಒಬ್ಬರು ಖರೀದಿ ಮಾಡಲು ಪ್ರೇರೆಪಿಸಿ, ನಿರುದ್ಯೋಗ ಸಮಸ್ಯೆಗೆ ಪರ್ಯಾಯ ವ್ಯವಸ್ಥೆ ಮಾಡಿ ಅಂತರ್ಜಾಲ ತಾಣ, ಸಾಮಾಜಿಕ ಜಾಲತಾಣಗಳ ಮೂಲಕ ಮಾರುಕಟ್ಟೆ ಒದಗಿಸಿಕೊಳ್ಳಲು.
ವಿಭಿನ್ನವಾದ ಕೈಯಿಂದ ಮಾಡಿದ ಕಲೆ, ಗುಡಿ ಕೈಗಾರಿಕೆ, ಕರಕುಶಲ ವಸ್ತುಗಳು, ಸ್ಥಳೀಯ ಜನಪ್ರಿಯ ಪದಾರ್ಥಗಳು ಹಾಗೂ ಮನೆಯಲ್ಲಿ ತಯಾರಿಸಿದಂತ ಆಹಾರ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿ ಒಳ್ಳೆ ವ್ಯಾಪಾರ ವೇದಿಕೆ ಕಲ್ಪಿಸಿ ಕೊಡುವುದು.
ಪರಸ್ಪರ ದೇಸಿ ಸಂತೆಯ ವಿಭಾಗವು ಉತ್ಪಾದಕರಿಗೆ ಮತ್ತು ಗ್ರಾಹಕರಿಗೆ ವಿಭಿನ್ನ ಕೌಶಲ್ಯ ಮತ್ತು ಜ್ಞಾನವನ್ನು ಕೊಟ್ಟು ತಮ್ಮ ಉತ್ಪಾದನೆಗಳನ್ನು ಮಾರಾಟ ಮಾಡಲು ದೇಸಿ ಸಂತೆ ಯನ್ನು ಪರಿಚಯಿಸಿದೆ.
ದೇಸಿ ಸಂತೆಯ ಉಪಯುಕ್ತತೆಗಳು :
ಉತ್ಪಾದಕರ ಉತ್ಪನ್ನಗಳನ್ನು ಸ್ಥಳಿಯರಿಗೆ ಪರಿಚಯಿಸುವುದು ಹಾಗೂ ನಾಗರೀಕರಿಗೆ, ಮನೆ-ಮನಗಳಿಗೆ ಸುಲಭವಾಗಿ ದೇಸಿ ಉತ್ಪನ್ನಗಳನ್ನು ತಲುಪಿಸುವುದು. ಬಳಕೆದಾರರನ್ನು ನೇರವಾಗಿ ಭೇಟಿಯಾಗುವುದು ಮತ್ತು ಬಳಕೆದಾರರಿಗೆ ಉತ್ಪನ್ನಗಳ ಗುಣಮಟ್ಟದ ಬಗ್ಗೆ ತಿಳಿಸುವ ಪ್ರಯತ್ನ ಸುಲಭ ಸಾಧ್ಯವಾಗುವುದು.
ನಮ್ಮಿಂದ-ನಮಗಾಗಿ ಎಂದು ಎಲ್ಲಾ ದೇಸಿ ಸಂತೆ ವಿಭಾಗದ ಸದಸ್ಯರು ತಮ್ಮ ಅವಶ್ಯಕತೆಗೆ ಬೇಕಾದ ಉತ್ಪನ್ನಗಳನ್ನು ನಮ್ಮ ನಮ್ಮಲ್ಲಿಯೇ ಕೊಳ್ಳಲು / ಮಾರಾಟ ಮಾಡಲು ಶಪಥ ಮಾಡುವುದು.
.