ಜೀವ ಜಲ

 

ಒಂದು ಕಾಲದಲ್ಲಿ ನೆಲದಿಂದ ಮೇಲಕ್ಕೆ ಹೊರ ಚಿಮ್ಮುತ್ತಿದ್ದ ಕೆಲವು ನೀರ ಚಿಲುಮೆಗಳು ಈಗ ತಮ್ಮ ಕೆಲಸವನ್ನು ನಿಲ್ಲಿಸಿವೆ. ಓವರ್ ಫ್ಲೋ ಆಗುತ್ತಿದ್ದ ಕೊಳವೆ ಬಾವಿಗಳು ಆಯಾಸವಾಗಿ ತಮ್ಮ ಕೆಲಸವನ್ನು ನಿಲ್ಲಿಸಿವೆ. ಮನೆ ಮುಂದೆ ಕುಡಿಯುವ ನೀರಿಗಾಗಿ ಇದ್ದ ಬಾವಿಗಳಲ್ಲಿ ನೀರಿಲ್ಲದೆ ಖಾಲಿಯಾಗಿವೆ.ಎಲ್ಲಿ ನೋಡಿದರಲ್ಲಿ ಕೊಳವೆ ಬಾವಿಯ ನೀರು. ನೀರಿನ ಬಳಕೆ ಮಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.

ಫರಸ್ಪರರು ಏನು ಮಾಡಬೇಕು:

• ಸಾಧ್ಯವಾದಷ್ಟು ಅರಣ್ಯ ಇಲಾಖೆಯ ಜೊತೆ ಕೈ ಜೋಡಿಸಿ ಸಸಿ ನೆಟ್ಟಾದರೂ ಅರಣ್ಯ ಮರು ನಿರ್ಮಾಣ ಮಾಡೋಣ.

• ಹಸಿರಿನ ಮರು ಸ್ಥಾಪನೆಯಿಂದ ಭೂಮಿಗೆ ತಂಪಾಗುತ್ತದೆ. ಭೂಮಿ ನಮಗೆ ತಂಪನ್ನು ಕೊಡುತ್ತಾಳೆ.

• ಎಲ್ಲವೂ ಪರಸ್ಪರ ಕೊಡು ಕೊಳ್ಳುವಿಕೆ.

• ನಾವು ಬಳಕೆ ಮಾಡುವ ನೀರಿನಲ್ಲಿ ಮಿತವ್ಯಯ ಸಾಧಿಸೋಣ.

• ಕೈಕಾಲು ತೊಳೆಯುವುದಕ್ಕೆ ಮಿತ ನೀರು ಬಳಸೋಣ.

• ಬಟ್ಟೆ ಒಗೆಯುವುದಕ್ಕೆ ಮಿತವಾಗಿ ಸಾಬೂನು ಬಳಸೋಣ.

• ನೀರಾವರಿಗೆ ಮಿತ ನೀರಾವರಿ ಮಾಡೋಣ.

• ಕೈ ಕಾಲು ತೊಳೆದ, ಪಾತ್ರೆ ತೊಳೆದ ನೀರನ್ನು ಮರಗಳಿಗೆ ಉಣಿಸೋಣ.

• ನೆಲಕ್ಕೆ ಹೊದಿಕೆ ಹಾಕಿ ತೇವಾಂಶ ಸಂರಕ್ಷಿಸೋಣ.

• ಅತಿಯಾದ ನೀರಿನ ಬಳಕೆಯನ್ನು ಕಡಿಮೆ ಮಾಡಿ ಮಿತ ಬಳಕೆ ಮಾಡೋಣ.

• ಇದು ನಮ್ಮ ಮಕ್ಕಳಿಗೆ ನಾವು ನಮ್ಮ ಭೂಮಿಯನ್ನು ಸುಸ್ಥಿತಿಯಲ್ಲಿ ಕೊಡಲು ಮಾಡಬೇಕಾದ ಅಗತ್ಯ ಕೆಲಸ.

ಪ್ರಕೃತಿ ಮುನಿಯುವ ಮುನ್ನ ನಾವೇ ಪ್ರಕೃತಿಗೆ ಶರಣಾಗಬೇಕು. ಇಲ್ಲವಾದರೆ  ಸಹಿಸಲಾಗದ ಪ್ರಹಾರದ ಮೂಲಕ ಅದು ನಮಗೆ ರೋಗ ರುಜಿನಗಳ ಮೂಲಕ ಕಷ್ಟವನ್ನು ಕೊಟ್ಟೇ ಕೊಡುತ್ತದೆ.

ನಿಮ್ಮ ವ್ಯಾಪಾರ ವಹಿವಾಟಿನ ಸ್ಥಳದಲ್ಲಿ ನೈಸರ್ಗಿಕ ಮಣ್ಣಿನ ಮಡಿಕೆಯಲ್ಲಿ ನೀರನ್ನು ಇಡಿ, ಗ್ರಾಹಕರಿಗೆ ಶುದ್ದ ಕುಡಿಯುವ ನೀರು ಸಿಗುವುದರೊಂದಿಗೆ ಜಲಜಾಗೃತಿ ಮೂಡಿಸಿ..

ನೆನಪಿರಲಿ ನಾವು ನಮ್ಮ ಮೂರನೇ ತಲೆಮಾರಿನ ಪ್ರಕೃತಿಯನ್ನು ಎರವಲು ಪಡೆದು ಬಳಸುತ್ತಿದ್ದೇವೆ..  "ಇತಿಮಿತಿಯ ಬಳಕೆ ಕಡ್ಡಾಯವಾಗಿರಲಿ" 

ಹೀಗೆ ಒಂದೊಂದು ವಿಭಾಗವು ತನ್ನ ವಿನೂತನ ಹಾಗೂ ವಿಭಿನ್ನವಾದ ಪ್ರಯತ್ನದಿಂದ ಒಂದು ಹೊಸ ಕ್ರಾಂತಿಯನ್ನು ಶುರು ಮಾಡುತ್ತಿದೆ.

ಒಬ್ಬ ಯಾವುದೇ ಕ್ಷೇತ್ರದ ಸಾಮಾನ್ಯ ಮನುಷ್ಯನು ನಮ್ಮ ಪರಸ್ಪರಕ್ಕೆ ಸೇರಿದರೆ ಅವರಿಗೂ ಉಪಯುಕ್ತವಾಗುವಂತಹ ಎಲ್ಲಾ ಕ್ಷೇತ್ರಗಳಲ್ಲೂ ವಿಭಾಗಗಳನ್ನು ಹೊಂದಿರುವುದೇ ಪರಸ್ಪರ 14 ವಿಭಾಗಗಳ ವಿಶಿಷ್ಟತೆ.

*ವಿಶಿಷ್ಟತೆ ಅಷ್ಟೇ ಅಲ್ಲ, ವೈವಿಧ್ಯತೆಯಲ್ಲಿ ಏಕತೆ.*

"ಪ್ರತಿದಿನ ಪ್ರಗತಿಯತ್ತ ಪರಸ್ಪರ"

.

ಪರಸ್ಪರ

ನಮ್ಮ ಪರಸ್ಪರ ಸಮೂಹ ಇರುವುದೇ ಸಮಾಜಮುಖಿ ಸೇವೆಯನ್ನು ಮಾಡುತ ಸ್ವಾವಲಂಬಿಗಳನ್ನಾಗಿ ಮಾಡುವುದು ಅದುವೇ ನಮ್ಮಿಂದ ನಮಗಾಗಿ ಎಂಬ ಧ್ಯೇಯ ವಾಕ್ಯದಿಂದ ವಿಭಿನ್ನ ವಿಚಾರದಿಂದ ತಲೆಯೆತ್ತಿದ ಸಮೂಹ.

ನಮ್ಮ ಸಂಪರ್ಕಗಳು