ಶಾಂತಪ್ಪ ಎಂ
ಸಿ ಎಸ್ ಸಿ ಸೆಂಟರ್ ಬಳ್ಳಾರಿ
ಸ್ಮಾರ್ಟ್ ವರ್ಕ್ ನಿರ್ವಹಣೆ
ನನ್ನ ಹೆಸರು ಎಂ ಶಾಂತಪ್ಪ ನನ್ನ ವಿದ್ಯಾಭ್ಯಾಸ ಬಿಕಾಂ ನಾನು ಹುಟ್ಟಿದ್ದು ಬಳ್ಳಾರಿ ಜಿಲ್ಲೆಯ ಕುಂಟನಹಾಳ್ ಗ್ರಾಮದಲ್ಲಿ ಒಂದು ಚಿಕ್ಕ ಹಳ್ಳಿಯಲ್ಲಿ ಬೆಳೆದಿದ್ದೇನೆ.
ಬಾಲ್ಯದಲ್ಲಿ ಶಿಕ್ಷಣವು ಕೇವಲ ಪುಸ್ತಕದ ಅರಿವನ್ನು ಮಾತ್ರವಲ್ಲ, ಬದುಕಿನಲ್ಲಿ ಅಗತ್ಯವಿರುವ ಕೌಶಲ್ಯಗಳನ್ನು ಸಹ ಕಲಿತಿದ್ದೇನೆ.ಪ್ರಾಮಾಣಿಕತೆ, ಕರ್ತವ್ಯ, ಶಿಸ್ತು, ಸಹನೆ ಮತ್ತು ಸಾಮರಸ್ಯ ಹೀಗಿನ ಮೌಲ್ಯಗಳು ಬಾಲ್ಯದಲ್ಲಿ ಬೆಳೆಸಿಕೊಳ್ಳುವ ಅತ್ಯಗತ್ಯ ಗುಣಗಳು ಕಲಿತಿದ್ದೇನೆ. ನನ್ನ ಬಗ್ಗೆ ಹೇಳುವುದು ಸ್ವಲ್ಪ ಕಷ್ಟ. ಹೇಳಬೇಕಂತ ಹೊರಟಾಗ ಉತ್ತಮ ವ್ಯಕ್ತಿ ಸರ್ವ ಗುಣ ಸಂಪನ್ನ ಪದಗಳೇ ಉಳಿಯುತ್ತೇವೆ ಹೊರತು ನಮ್ಮಲ್ಲಿ ದೋಷಗಳು ತಪ್ಪುಗಳು ಕೊರತೆಗಳು ನಮ್ಮ ಕಣ್ಣಿಗೆ ಕಾಣಿಸುವುದಿಲ್ಲ. ನಮ್ಮ ತಂದೆ ತಾಯಿ ಬಹಳ ಶಿಸ್ತಿನ ಮನುಷ್ಯರು. ನಾವು ಯಾವುದೇ ಕೆಲಸವನ್ನು ಮಾಡಿದರೂ ಅವರು ಸಂತೋಷವಾಗಿ ಸ್ವೀಕರಿಸುತ್ತಿದ್ದರು. ಹಾಗೆ ಮಾಡು ಹೀಗೆ ಮಾಡು ಅದನ್ನು ಓದು ಇದನ್ನು ಓದು ಅಂತಲೂ ಹೇಳಲಿಲ್ಲ. ಅವರು ಹೇಗೆ ಹಾಗೆ ನಡೆದುಕೊಂಡರೂ ಅದನ್ನು ನೋಡಿ ನಾನು ಕಲಿತ ಹೋದೆ.
ನನ್ನ ವಿದ್ಯಾಭ್ಯಾಸ ಬಿ ಕಾಂ 3 ವರ್ಷ ಬಹಳ ಸರಳವಾಗಿ ವೇಗವಾಗಿ ಮುಗಿತು. ನನಗೆ ಸಿಎ ಚಾರ್ಟೆಡ್ ಅಕೌಂಟೆಂಟ್ ಓದಬೇಕೆಂದು ಹಂಬಲವಿತ್ತು ನಾವಿರುವ ಬಡತನ ಸ್ಥಿತಿಯಲ್ಲಿ ವಿದ್ಯಾಭ್ಯಾಸ ಮಾಡ್ಲಿಕ್ಕೆ ಆಗಿಲ್ಲ.
ಆಡಿಟರ್ ಹತ್ತಿರ 5 ವರ್ಷ ಕೆಲಸ ಅನುಭವದ ಆಧಾರದಲ್ಲಿ, ಶಿಸ್ತು ಜೀವನದ ಪ್ರಗತಿಗೆ ಹೇಗೆ ಸಹಕಾರಿಯಾಗುತ್ತದೆಯೆಂದು
ಜೀವನದಲ್ಲಿ ಕ್ರಮ ಶಿಕ್ಷಣ ಶಿಸ್ತು ಬಾಧ್ಯತೆ ಪ್ರತಿಯೊಂದು ಅಲ್ಲಿ ಕಲಿತಿದ್ದು. ನಮ್ಮ auditors ಶ್ರೀ ವೆಂಕಟನಾರಾಯಣ ಸರ್ ಪ್ರತಿಯೊಂದು ವಿಷಯದಲ್ಲಿ ಕಲಿಸಿದ ಪಾಠ ಅವರು ನೆಚ್ಚಿನ ಗುರುಗಳಾಗಿದ್ದಾರೆ. "ನಾನು ಹಣಕ್ಕಾಗಿ ಕೆಲಸ ಮಾಡಲಿಲ್ಲ, ಪ್ರತಿಯೊಂದು ಕೆಲಸ ಸಂತೋಷದಿಂದ ಮಾಡಿದೆ" "ನಾನು ಎಂದೂ ಸರ್ಕಾರಿ ಕೆಲಸಕ್ಕೆ ಅರ್ಜಿ ಹಾಕಿಲ್ಲ, ಯಾಕೆಂದರೆ ನನಗೆ ನನ್ನ ಮೇಲೆ ವಿಶ್ವಾಸ ಇತ್ತು." ಪ್ರತಿಯೊಂದು ಕೆಲಸವನ್ನು ನಾನು ಮಾಡಬಲ್ಲೆ ಎಂದು.
ತದನಂತರ ಅಕೌಂಟೆಂಟ್ ಆಫೀಸಿಡಬೇಕೆಂದು ಮಹಾನಗರ ಪಾಲಿಕೆ ಬಳ್ಳಾರಿ ಅಲ್ಲಿ ಆಫೀಸ್ ಓಪನ್ ಮಾಡಿದೆ ನಾನು ಅಕೌಂಟ್ ಕೆಲಸವನ್ನು ಮಾಡಬೇಕಾಗಿತ್ತು, ಆದರೆ ಆನ್ಲೈನ್ ಅಪ್ಲಿಕೇಶನ್ ಹಾಗೂ ಜೆರಾಕ್ಸ್ ಸೇವೆಗಳ ಬೇಡಿಕೆ ಹೆಚ್ಚಾಗಿತ್ತು. ಈ ಕಾರಣದಿಂದಾಗಿ ನಾನು ನನ್ನ ಕೆಲಸದಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಯಿತು, ಅಷ್ಟೇ."
ಕೆಲವು ಸಂದರ್ಭಗಳಲ್ಲಿ ನಮ್ಮ ಯೋಜನೆಗಳು ಸಾಧ್ಯವಾಗದೆ ಬೇರೇ ದಾರಿಯಲ್ಲಿ ಸಾಗಬೇಕಾಗಬಹುದು. ಇದರಲ್ಲಿ ಕಳವಳ ಪಡುವದಕ್ಕಿಂತ ಅದನ್ನು ಹೊಸ ಅವಕಾಶವೆಂದು ನೋಡಿ ಮುಂದುವರಿಯುವುದು ಉತ್ತಮ. ನಮ್ಮ ಗುರಿಯ ಕಡೆಗೆ ಸಾಗುವ ಮಾರ್ಗ ಒಂದೇ ಆಗಿರಬೇಕೆಂದಿಲ್ಲ — ಅವಕಾಶಗಳು ಹಲವಾರು ರೂಪಗಳಲ್ಲಿ ಬರುತ್ತವೆ.
"ಯಶಸ್ಸು ಎಂದರೆ ಎಷ್ಟು ಬಾರಿ ಬೀಳುತ್ತೇವೆ ಎಂಬುದಲ್ಲ, ಎಷ್ಟು ಬಾರಿ ಎದ್ದು ನಿಲ್ಲುತ್ತೇವೆ ಎಂಬುದಾಗಿದೆ."
"ಯಾವುದೇ ಕೆಲಸ ಸಣ್ಣದು ಅಥವಾ ದೊಡ್ಡದು ಎಂಬ ಭೇದವಿಲ್ಲ. ನಾವು ಅದನ್ನು ಎಷ್ಟು ನಿಷ್ಠೆಯಿಂದ, ಸಂತೋಷದಿಂದ ಮಾಡುತ್ತೇವೋ ಅದುವೇ ನಮಗೆ ಗೌರವ ತರುತ್ತದೆ."
"ನೀವು ಏನೇ ಕೆಲಸ ಮಾಡುತ್ತಿದ್ದರೂ, ಶ್ರದ್ಧೆಯಿಂದ ಮಾಡಿದರೆ ಅದರಲ್ಲಿ ಗೌರವವಿದೆ"
"ನಮ್ಮಿಂದ ಸಂಪೂರ್ಣ ಡಿಜಿಟಲ್ ಸೇವೆಗಳು — ನಿಮ್ಮ ಪರವಾಗಿ, ನಿಮ್ಮ ಹಿತಕ್ಕಾಗಿ!"
ಅಂತರ್ಗತ ವಿಷಯ:
✅ PMEGP ಲೋನ್ಸ್
✅ ಜನ ಸಮರ್ಥ ಮುದ್ರಾ ಲೋನ್
✅ ಸೇವಾ ಸಿಂಧು ಸೇವೆಗಳು
✅ ಭೂಮಿ ನಾಡಕಚೇರಿ ಸೇವೆಗಳು
✅ FID / FRUITS ID
✅CSC ID ಮೂಲಕ ಎಲ್ಲಾ ಸರ್ಕಾರಿ ಸೇವೆಗಳು
✅ ಉದ್ಯಮ ರಿಜಿಸ್ಟ್ರೇಷನ್
ಇವು ಹೆಚ್ಚು ಆದಾಯದ ಮೂಲಗಳು ಇದರ ಜೊತೆಗೆ ಇನ್ನು ಹಲವಾರು a to z ಸೇವೆಗಳು ನಿರ್ವಹಿಸಿದ್ದೇವೆ.
ನಮ್ಮ ಸೇವೆಗಳೊಂದಿಗೆ ಜನರಿಗೆ ಸುಲಭ, ಸುಗಮ ಮತ್ತು ಸಮರ್ಥ ಸೇವೆಯನ್ನು ಒದಗಿಸುತ್ತೇವೆ.
ನಮ್ಮ ಕಾರ್ಯದಲ್ಲಿ ನಿಷ್ಠೆಯಿಂದ, ಪ್ರಾಮಾಣಿಕತೆಯಿಂದ ಹಾಗೂ ಶ್ರದ್ಧೆಯಿಂದ ಶ್ರಮಿಸಿದ್ದರೆ, ಆ ಫಲವಾಗಿ ಯಶಸ್ಸು ಮತ್ತು ಹಣವು ತಾನಾಗಿಯೇ ನಮ್ಮತ್ತ ಬರಲು ಪ್ರಾರಂಭಿಸುತ್ತವೆ. ಧನವನ್ನು ಮುಖ್ಯ ಗುರಿಯೆಂದು ನೋಡದೆ, ಮಾಡುತ್ತಿರುವ ಕೆಲಸದಲ್ಲಿ ಗುಣಮಟ್ಟ ಮತ್ತು ಬದ್ಧತೆಯನ್ನು ಮುಖ್ಯಗೊಳಿಸಿದಾಗ, ಅದು ನಿರಂತರವಾಗಿ ಸಮೃದ್ಧಿಯನ್ನು ತರುತ್ತದೆ.
"ಕೈಲದ ಕೆಲಸದಲ್ಲಿ ಶ್ರದ್ಧೆಯಿಂದ ಇರಿ, ಹಣವು ತಾನಾಗಿ ನಮ್ಮ ಬೆನ್ನುಹತ್ತಿ ಬರಲಿದೆ." — ಇದು ಜೀವನದ ಪ್ರಮುಖ ಪಾಠವಾಗಿದೆ.
ನಾನು ಹಳ್ಳಿಯಿಂದ ಬಳ್ಳಾರಿಗೆ ಬಂದು, ಇಲ್ಲಿ ಸೈಟ್ ತಗೆದು ಮನೆ ಕಟ್ಟಿಸಿ, ನನ್ನ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸುತ್ತಿದ್ದೇನೆ.
ನಮ್ಮ ಆಫೀಸಿನಲ್ಲಿ ನಾಲ್ಕು ಜನ ಕೆಲಸ ಮಾಡುತ್ತಿದ್ದಾರೆ. ನನ್ನ ಹತ್ತಿರ 20 ಜನಕ್ಕಿಂತ ಹೆಚ್ಚು ಜನ ನನ್ನ ಶಾಪ್‌ನಲ್ಲಿ ಕೆಲಸ ಮಾಡಿದ್ದಾರೆ. ಅವರು ಈಗ ಒಳ್ಳೆಯ ಶಾಪ್ ತೆರೆದು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದಲ್ಲದೆ, ಅವರು ಹಲವಾರು ಸರ್ಕಾರಿ ಪ್ರಾಜೆಕ್ಟ್‌ಗಳನ್ನು ಸಹ ಪಡೆದು ಉತ್ತಮ ಪ್ರಗತಿ ಸಾಧಿಸಿದ್ದಾರೆ. ಮತ್ತು ಹಲವಾರು ಸರ್ಕಾರಿ ಉದ್ಯೋಗವನ್ನು ಪಡೆದಿದ್ದಾರೆ.
ನನ್ನ ತಿಂಗಳ Investment
1. ಚಿಟ್ ಫಂಡ್
2. ಮ್ಯೂಚುಯಲ್ ಫಂಡ್
3. ಪೋಸ್ಟ್ ಆಫೀಸ್ ಆರ್ ಡಿ
4. ಗೋಲ್ ಇನ್ವೆಸ್ಟ್ಮೆಂಟ್
5. ಸ್ಟಾಕ್ ಟ್ರೇಡಿಂಗ್ ಟ್ರೇಡ್ ತಕ್ಕಂಗೆ ಉದಾಹರಣೆಗೆ ವಾಸವಿ ಮಮತಾ
6. ಎನ್‌ಪಿಎಸ್
7. ಸೇವ ಡಬ್ಬಿ
8. ಈಗ ತುರ್ತು ನಿಧಿ ಪರಸ್ಪರ ವಾರಕ್ಕೆ
ಇನ್ನೂ ತಿಂಗಳ ಉಳಿದ ಹಣ
1.ರಿಯಲ್ ಎಸ್ಟೇಟ್ ಹೂಡಿಕೆ
2.ಚಿಟ್‌ಫಂಡ್ ನಮ್ಮದು ಇದೆ
3.ಬಡ್ಡಿ ಮತ್ತು ಫೈನಾನ್ಸ್
4.ಮನೆಯ ಆರ್ಥಿಕ ಕರ್ಚು ಹೆಚ್ಚು ಗಳಿಗೆ
5. ಎಲ್ಐಸಿ
6. ಆರೋಗ್ಯ ವಿಮೆ
*ನನ್ನ ಗಳಿಕೆ ಉಳಿಕೆ*
"ಪರಸ್ಪರ ಬಗ್ಗೆ ಹೇಳಬೇಕೆಂದರೆ, ಒಂದು ದಿನದಲ್ಲಿ ಹೇಳುವುದಕ್ಕೆ ಸಾಧ್ಯವಿಲ್ಲ — ಒಂದು ವರ್ಷವೇ ಬೇಕಾಗಬಹುದು! ನಾವು ಪರಸ್ಪರ ಪರಿಚಯವಾಗಿದ್ದು 'ಸಿಎಸ್ಸಿ' ಎಂಬ ಗ್ರೂಪ್ನಲ್ಲಿ ಲಿಂಕ್ ಆಗುವ ಮೂಲಕ. ನಾನು 'ಲರ್ನ್ ಅಂಡ್ ಎರ್ನ್ ಮೋರ್ ' ಗ್ರೂಪಿಗೆ ಸೇರಿದ್ದೆ, ಆದರೆ ಅಲ್ಲಿ ನಡೆಯುತ್ತಿದ್ದ ಪ್ರತಿಯೊಂದು ಚರ್ಚೆ ನನಗೆ ಅಷ್ಟೇನು ಗೊತ್ತಾಗಿರಲಿಲ್ಲ. ಆದರೆ ಕಾಲ ಕ್ರಮೇಣ , ಆ ಚರ್ಚೆಗಳು ನನಗೆ ಹೊಸ ವಿಚಾರಗಳನ್ನು ತಿಳಿಸಿತು ಮತ್ತು ನನಗೆ ಹೊಸ ದಿಕ್ಕು ತೋರಿಸಿತು."
*ಬದುಕು ಭವಿಷ್ಯ: ಒತ್ತಡದಿಂದ ಉನ್ನತಿಗೆ*
ತದನಂತರ ಮತ್ತೊಂದು ತಂಡವನ್ನು 'ಪರಸ್ಪರ ಅನ್ವೇಷಣೆ' ಎಂಬ ಹೆಸರಿನಲ್ಲಿ ಸೇರಿಸಿದರು. ಈ ತಂಡವು ಪರಸ್ಪರ ಸಹಕಾರ ಮತ್ತು 7 ಅದ್ಭುತಗಳನ್ನು ಆಧಾರವಾಗಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿದೆ.
ಬದುಕು ಭವಿಷ್ಯ ಎಂಬ ಕಾರ್ಯಕ್ರಮವು ಹೊಸಪೇಟೆಯಲ್ಲಿ ಯಶಸ್ವಿಯಾಗಿ ನಡೆಯಿತು. ಈ ಅಪೂರ್ವ ಕಾರ್ಯಕ್ರಮವು ನನಗೆ ಜೀವನದ ಅತ್ಯಮೂಲ್ಯ ಪಾಠವನ್ನು ಕಲಿಸಿಕೊಟ್ಟಿದೆ. ಪ್ರತಿದಿನದ ತರಬೇತಿ ಇಷ್ಟೊಂದು ಸಂತೋಷ ನೀಡಬಹುದು ಎಂದು ನಾನು ಊಹಿಸಿಯೂ ನೋಡಿರಲಿಲ್ಲ.
ಈ ಕಾರ್ಯಕ್ರಮದಲ್ಲಿ ಪರಸ್ಪರ 12 ವಿಭಿನ್ನ ವಿಭಾಗಗಳು ಇರವು, ಮತ್ತು ಪ್ರತಿಯೊಂದು ವಿಭಾಗವೂ ಅರ್ಥಪೂರ್ಣವಾಗಿತ್ತು. ಈ ವಿಭಾಗಗಳಲ್ಲಿ ಪ್ರತಿಯೊಬ್ಬರೂ ಚಾಣಕ್ಯರಂತೆ ತಮ್ಮ ತಮ್ಮ ಕ್ಷೇತ್ರದಲ್ಲಿ ಮಿಂಚುತ್ತಾರೆ. ನಾನು ಸಹ ಒಂದು ವಿಭಾಗದಲ್ಲಿ ಶ್ರಮಿಸುತ್ತಿದ್ದುದು ನನಗೆ ಅಪ್ರತಿಮ ಸಂತೋಷ ನೀಡುತ್ತಿದೆ.
ನಾನು ಈ ಕಾರ್ಯಕ್ರಮದಿಂದ ನನಗೆ ಹೊಸ ಉತ್ಸಾಹ ಮತ್ತು ದಾರಿದೀಪವನ್ನು ಕಂಡುಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಬದುಕನ್ನು ಎಲ್ಲಿ ಮತ್ತು ಹೇಗೆ ಕಟ್ಟಿಕೊಳ್ಳಬೇಕು ಎಂಬುದರ ಬಗ್ಗೆ ಹೊಸ ದಿಕ್ಕು ದೊರೆತಂತಾಗಿದೆ.
ಬದುಕು ಭವಿಷ್ಯ ಎಂಬ ಈ ಕಾರ್ಯಕ್ರಮ ನಮಗೆ ನೀಡಿದ ಮಾರ್ಗದರ್ಶನ ಮತ್ತು ಸ್ಪೂರ್ತಿ ಮರೆಯಲಾಗದ ಅನುಭವ!
ಚಂದ್ರು ಸರ್ ಅವರ ಬಗ್ಗೆ ಹೇಳಬೇಕಾದರೆ, ಅವರು ನಿಜವಾಗಿಯೂ ನನ್ನಗೆ ಸ್ಪೂರ್ತಿದಾಯಕರು ಮತ್ತು ಮಾರ್ಗದರ್ಶಕರು. ಅವರ ಶ್ರಮ, ಸಮರ್ಪಣೆ ಮತ್ತು ಜನರಿಗೆ ಮೌಲ್ಯಯುತ ಸಂದೇಶ ನೀಡುವ ಪ್ರಯತ್ನವು ಅತ್ಯಂತ ಗಮನಾರ್ಹವಾಗಿದೆ. ವಿಶೇಷವಾಗಿ, ಅವರ 14 ವಿಭಾಗಗಳ ವಿಚಾರಗಳು ಮತ್ತು ಅದರ ಕಾರ್ಯಪದ್ಧತಿಗಳು ಜನರ ಮನಸ್ಸಿನಲ್ಲಿ ಚಿಂತನೆಗೆ ಎಳೆಯುವಂತಹುದಾಗಿದೆ. ಇವು ಸಮಾಜಕ್ಕೆ ಹಿತಕರ ಬೆಳಕು ನೀಡುವುದರ ಜೊತೆಗೆ, ಮಾನವೀಯ ಮೌಲ್ಯಗಳನ್ನು ಹೆಚ್ಚಿಸಲು ಪ್ರೇರಣೆ ನೀಡುತ್ತದೆ. ಅವರ ಕೊಡುಗೆಗಳು ನಮಗೆ ಜೀವನದಲ್ಲಿ ಸದ್ವಿಚಾರಗಳನ್ನು ಅಳವಡಿಸಿಕೊಳ್ಳುವ ಪಾಠವನ್ನು ಕಲಿಯುತ್ತೇನೆ.
*ಪರಸ್ಪರ ನಿರಂತರ*