ಗುರಿಗಳು

🌻ಎಂ  ಶಾಂತಪ್ಪ ಬಳ್ಳಾರಿ 🌻

 

      *ಗುರಿಗಳು*

 

*ಗುರಿಗಳು – ಜೀವನದ ದಿಕ್ಕೂಚಿ*

 

* ಸಮುದ್ರದಲ್ಲಿ ಎಲ್ಲೆಲ್ಲೂ ನೀರೇ ಇದೆ. ಒಂದು ದೋಣಿಯಲ್ಲಿ ನಿಂತು ನೋಡಿದರೆ ಯಾವ ದಿಕ್ಕಿಗೆ ಹೋಗಬೇಕು ಎಂಬುದು ಅರ್ಥವಾಗುವುದಿಲ್ಲ, ಏಕೆಂದರೆ ಎಲ್ಲೆಡೆ ನೀರೇ ಕಾಣಿಸುತ್ತದೆ. ಆದರೆ, ಆ ದೋಣಿಯಲ್ಲಿ ಒಂದು ಸಣ್ಣ ದಿಕ್ಕೂಚಿ (Compass) ಇದ್ದರೆ, ಅದು ದೋಣಿಯನ್ನು ಸರಿಯಾದ ದಡಕ್ಕೆ ಸೇರಿಸಬಲ್ಲದು.

 

* ಜೀವನವೂ ಅದೇ ರೀತಿ.

* ಎಲ್ಲಾ ವೃತ್ತಿಗಳೂ ಆಕರ್ಷಕವಾಗಿ ತೋರುತ್ತವೆ. ಆದರೆ ಗುರಿಯ ದಿಕ್ಕೂಚಿ ಇಲ್ಲದೆ ಹೋದರೆ, ನಮ್ಮ ಜೀವನ ದೋಣಿ ಸಮುದ್ರದ ಮಧ್ಯೆ ಸುತ್ತಿ, ಗುರಿಯಿಲ್ಲದ ಭ್ರಮಣೆಯಲ್ಲೇ ಮುಳುಗುತ್ತದೆ.

 

* ನಾವು ರೈಲಿನಲ್ಲಿ ಪ್ರಯಾಣ ಮಾಡುವಾಗ ಟಿಕೆಟ್‌ನಲ್ಲಿ ಪ್ರತಿಯೊಂದು ವಿವರ ನಮೂದಿಸಲಾಗಿದೆ. ಏಕೆಂದರೆ ನಮ್ಮ ಪ್ರಯಾಣ ಸುಗಮವಾಗಿರಬೇಕೆಂಬುದು ಉದ್ದೇಶ. ಒಂದು ಸಣ್ಣ ಪ್ರಯಾಣಕ್ಕೂ ಇಷ್ಟು ಮಾಹಿತಿ ಬೇಕಾದರೆ, 70-80 ವರ್ಷಗಳ ಜೀವನಕ್ಕೆ ಎಷ್ಟು ಮಹತ್ವದ ದಿಕ್ಕೂಚಿ ಅಗತ್ಯವೋ ಯೋಚಿಸಿ!

 

* ನೀವು ಯಾವುದೋ ಒಂದು ಬಸ್ ಹತ್ತುವಾಗ, ಅದು ಎಲ್ಲಿಗೆ ಹೋಗುತ್ತದೆ ಎಂಬ ಮಾಹಿತಿ ತಿಳಿಯದೇ ಹೋಗುತ್ತೀರಾ? ಖಂಡಿತಾ ಇಲ್ಲ! ಹಾಗಾದರೆ, ಜೀವನ ಎಂಬ ಹಾದಿಯಲ್ಲಿ ಗುರಿಯ ದಿಕ್ಕೂಚಿಯಿಲ್ಲದೆ ಸಾಗಿದರೆ ಅದು ಎಷ್ಟು ಅಪಾಯಕರ?

 

* ಗುರಿಗಳು ನಮ್ಮ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ.

 

* ಹೊಸ ಅವಕಾಶಗಳನ್ನು ಬಳಸಿಕೊಳ್ಳಲು ಸಹಾಯ ಮಾಡುತ್ತವೆ.

* ಗುರಿಯಿಲ್ಲದ ಜೀವನ, ಗಾಣದ ಎತ್ತಿನಂತೆ – ಎಲ್ಲಿ ಸುತ್ತಿದರೂ ಆದೃಷ್ಟದ ಹೆಸರಿನಲ್ಲಿ ಅದೇ ಜಾಗದಲ್ಲಿ ಸುತ್ತುತ್ತಾ ಇರುತ್ತದೆ.

 

* "ಮುಂದೆ ಗುರಿ – ಹಿಂದೆ ಗುರು" ಎಂಬ ನುಡಿ ನಿಜ.

* ಜೀವನದಲ್ಲಿ ನಿಜವಾದ ಗೆಲುವು ಸಾಧಿಸಲು ಗುರಿ ಅನಿವಾರ್ಯ

 

*ವೃತ್ತಿಯಲ್ಲಿ ಗುರಿಗಳನ್ನು ಹೊಂದುವ ಮಹತ್ವ ಮತ್ತು ಅವುಗಳನ್ನು ಸಾಧಿಸುವ ಮಾರ್ಗ*

 

1. ಗುರಿಗಳನ್ನು ನಿರ್ದಿಷ್ಟವಾಗಿ ಹೊಂದಿಕೊಳ್ಳಿ

* ಗುರಿಗಳನ್ನು ಜನರಲ್ ಆಗಿ ಇಡುವ ಬದಲು ಸ್ಪಷ್ಟವಾಗಿ ಹಾಗೂ ಅಳತೆ ಮಾಡಬಹುದಾದಂತೆ ಹೊಂದಿಕೊಳ್ಳಿ. ಉದಾಹರಣೆಗೆ:"ನಾನು ಒಳ್ಳೆಯ ಸೇಲ್ಸ್ ಮ್ಯಾನ್ ಆಗಬೇಕು" ಎಂಬ ಗುರಿ ಹೂಡಬೇಡಿ.

 

* ಅದರ ಬದಲು, "ನಾನು ದಿನಕ್ಕೆ ₹10,000 ಸೇಲ್ಸ್ ಮಾಡಬೇಕು" ಅಥವಾ "ನಾನು ತಿಂಗಳಿಗೆ ₹1,20,000 ಟರ್ನೋವರ್ ಸಾಧಿಸಬೇಕು" ಎಂಬ ಗುರಿ ಹೊಂದಿಕೊಳ್ಳಿ.

 

* ನಿಮ್ಮ ಗುರಿಗಳು ಸ್ಪಷ್ಟವಾಗಿದ್ದರೆ, ಅವನ್ನು ಅಳತೆ ಮಾಡಬಹುದು ಮತ್ತು ಸಾಧನೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬಹುದು.

 

2. ಪ್ರಗತಿಯ ಅಳತೆ ಮತ್ತು ಪರಿಶೀಲನೆ

* ನಿಮ್ಮ ಗುರಿಗಳ ಪ್ರಗತಿಯನ್ನು ಕಾಲಕಾಲಕ್ಕೆ ಹಿಂತಿರುಗಿ ನೋಡಿ.

 

* ಕಳೆದ ತಿಂಗಳ ಸಾಧನೆ ಎಷ್ಟು?

 

* ಈ ತಿಂಗಳು ಏನಾದರೂ ಬದಲಾವಣೆ ಆಯಿತೇ?

 

* ನಿಮ್ಮ ಗುರಿಯನ್ನು ತಲುಪಲು ನೀವು ಇನ್ನಷ್ಟು ಏನು ಮಾಡಬಹುದು?

 

* ನಿಮ್ಮ ಸಾಧನೆಯನ್ನು ಅಳತೆ ಮಾಡದೇ ಹೋದರೆ, ಗುರಿ ತಲುಪುವುದು ಅಸಾಧ್ಯವಾಗಬಹುದು. ಗುರಿ ಮುಟ್ಟಲು ನಿಮ್ಮನ್ನು ಪ್ರೇರೇಪಿಸುವುದೇ ನೀವು ಈಗಾಗಲೇ ಎಷ್ಟು ಸಾಧಿಸಿದ್ದೀರಿ ಎಂಬುದು ನಿಮಗೆ ತಿಳಿದಾಗ.

 

3. ನಿಮ್ಮ ಬಲಗಳನ್ನು ಗುರುತಿಸಿ ಮತ್ತು ಉಪಯೋಗಿಸಿ

* ಗುರಿ ಮುಟ್ಟಲು ನಿಮ್ಮ ಬಳಿ ಇರುವ ಸಕಾರಾತ್ಮಕ ಅಂಶಗಳನ್ನು ಲೆಕ್ಕಹಾಕಿ:

 

* ನೀವು ಈಗಾಗಲೇ ಯಾವ ಕೌಶಲಗಳನ್ನು ಹೊಂದಿದ್ದೀರಿ?

 

* ನಿಮ್ಮ ಕಾರ್ಯಶೀಲತೆಯಲ್ಲಿ ನೀವು ಯಾವದರಲ್ಲಿ ಬಲಶಾಲಿಯಲ್ಲಿರಿ?

 

* ಈ ಬಲಗಳನ್ನು ಗುರಿ ಸಾಧನೆಗೆ ಬಳಸಿಕೊಳ್ಳಿ.

 

4. ಸಂಪನ್ಮೂಲಗಳ ಸದುಪಯೋಗ

* ನಿಮ್ಮ ಗುರಿ ತಲುಪಲು ಅಗತ್ಯವಾದ ಸಂಪನ್ಮೂಲಗಳ ಪಟ್ಟಿ ಮಾಡಿಕೊಳ್ಳಿ.

* ಹೊಸ ಕೌಶಲಗಳನ್ನು ಕಲಿಯಬೇಕೇ?

* ಅನುಭವಿಗಳು ಅಥವಾ ಗೆಳೆಯರ ನೆರವು ಬೇಕೇ?

* ಸರಿಯಾದ ನೆಟ್ವರ್ಕ್ ಹೊಂದಬೇಕೇ?

* ಉದಾಹರಣೆಗೆ, ಸೇಲ್ಸ್‌ನಲ್ಲಿ ಉತ್ತಮವಾಗಲು ಇಂಗ್ಲಿಷ್ ಸಮರ್ಥ್ಯ ಬೆಳೆಸುವುದು ಮುಖ್ಯವೆನಿಸಿದ್ದರೆ, ನೀವು ಅದರತ್ತ ಗಮನ ಹರಿಸಿ. ಮಾರಾಟದ ಕೌಶಲ ಹೆಚ್ಚಿಸಲು, ನಿಮ್ಮ ಸಹೋದ್ಯೋಗಿಗಳಿಂದ ಕಲಿಯಬಹುದು ಅಥವಾ ತರಬೇತಿ ಪಡೆಯಬಹುದು.

 

5. ಪ್ರೇರಣೆಯೊಂದಿಗೆ ಮುಂದುವರಿಯಿರಿ

* ಗುರಿ ಮುಟ್ಟಲು ಸಂಯಮ ಮತ್ತು ಸತತ ಪ್ರಯತ್ನ ಅಗತ್ಯ. ಏಕೆಂದರೆ ಏಕಾಏಕಿ ದೊಡ್ಡ ಯಶಸ್ಸು ಸಾಧ್ಯವಿಲ್ಲ. ನಿತ್ಯವೂ ಸ್ವಲ್ಪ ಸ್ವಲ್ಪ ಬದಲಾವಣೆಗಳನ್ನು ಮಾಡುತ್ತಾ ಹೋದರೆ, ನೀವು ದೊಡ್ಡ ಮಟ್ಟದ ಸಾಧನೆ ಮಾಡಬಹುದು.

 

*ಮುಖ್ಯ ಅಂಶ:*

✔ ನಿರ್ದಿಷ್ಟ ಗುರಿ ಇಟ್ಟುಕೊಳ್ಳಿ

✔ ಪ್ರಗತಿಯನ್ನು ನಿಯಮಿತವಾಗಿ ಅಳತೆ ಮಾಡಿಕೊಳ್ಳಿ

✔ ನಿಮ್ಮ ಬಲವನ್ನು ಬಳಸಿಕೊಳ್ಳಿ

✔ ಸಂಪನ್ಮೂಲಗಳನ್ನು ಪಟ್ಟಿ ಮಾಡಿ ಮತ್ತು ಬಳಸಿಕೊಳ್ಳಿ

✔ ಸ್ಥಿರ ಪ್ರಯತ್ನ ಮತ್ತು ಪ್ರೇರಣೆ ಇರಲಿ

 

 

ನಿಮ್ಮ ವೃತ್ತಿಜೀವನದ ಗುರಿಗಳನ್ನು ದಿಟ್ಟವಾಗಿ ಹೊಂದಿ, ಅದರತ್ತ ನಿರಂತರ ಪ್ರಯತ್ನ ಮಾಡಿ, ಯಶಸ್ಸನ್ನು ನಿಮ್ಮದಾಗಿಸಿಕೊಳ್ಳಿ!

 

*ಪರಸ್ಪರ ನಿರಂತರ*