ಸೇವಾ ಡಬ್ಬಿ / ಉಳಿತಾಯ ಡಬ್ಬಿ ವಿಭಾಗ

 

ನಮ್ಮ ದಿನನಿತ್ಯದ ಆದಾಯದ ಮೂಲದಲ್ಲಿ ಒಂದು ಭಾಗ ತೆಗೆದು ಇಡುವುದರಿಂದ ನಮಗೆ ಏನೆಲ್ಲಾ ಅನುಕೂಲವಾಗುತ್ತದೆ ಮತ್ತು ನಾವೆಲ್ಲ ಹೇಗೆ ಅಭಿವೃದ್ಧಿ ಹೊಂದಬಹುದು ಎಂದು ತಿಳಿಸಿಕೊಡುವ ಉದ್ದೇಶವೇ ಸೇವಾ/ಉಳಿತಾಯ ಡಬ್ಬಿ.

ಕಾಸು ಕುಡಿಕೆ ಯಲ್ಲಿ ಹೇಗೆಲ್ಲಾ ಕಾನೂನುಬದ್ಧ ರೀತಿಯಲ್ಲಿ ಹಣ ಹೂಡಿಕೆ ಮಾಡಿ ಮುಂದಿನ ಬದುಕನ್ನು ಹಸನು ಮಾಡಿಕೊಳ್ಳಲು ಅವಕಾಶ ನೀಡುವ ಮೂಲಕ ಆರ್ಥಿಕವಾಗಿ ಸಬಲೀಕರಣದ ಹೆಜ್ಜೆಯನ್ನು ಇಡಲು ಉಳಿತಾಯ, ಠೇವಣಿ, ಹೂಡಿಕೆಯಲ್ಲಿ ತೊಡಗುವಂತೆ ಮಾಡುವುದು ಈ ವಿಭಾಗದ ಉದ್ದೇಶ.

"ಕೇವಲ ದುಡ್ಡು ಕೊಟ್ಟರೆ ದೊಡ್ಡವರಾಗಲ್ಲ ಒಳ್ಳೆಯ ಗುಣಗಳನ್ನು ನಾವು ಅಳವಡಿಸಿಕೊಂಡು ಜೊತೆಗೆ ಬೇರೆಯವರಿಗೂ ಕೂಡ ಒಳ್ಳೆಯ ಗುಣಗಳನ್ನ ರೂಢಿ ಮಾಡಿಸುವವರು ದೊಡ್ಡವರಾಗುತ್ತಾರೆ" 

ಇದೇ ರೀತಿ ನಾವು ಪ್ರತಿದಿನ ಉಳಿತಾಯ ಡಬ್ಬಿಯಲ್ಲಿ ಉಳಿತಾಯ ಮಾಡಿ ಎಂದು ಪ್ರೇರೇಪಿಸುವುದರಿಂದ ಅವರ ಕಷ್ಟಕ್ಕೆ ಸಮಯಕ್ಕೆ ಸರಿಯಾಗಿ ನಾವು ಆಗದೆ ಹೋದರೂ ಅವರ ಉಳಿತಾಯ ಡಬ್ಬಿಯಲ್ಲಿನ ಹಣ ಖಂಡಿತವಾಗಿಯೂ ಅವರಿಗೆ ಸಹಾಯವಾಗುತ್ತೆ.

ಹಣದ ಉಳಿತಾಯವು ಜೀವನದ ಅನಿಶ್ಚಿತತೆಗಳಿಂದ ಹೊರಬರಲು ಒಂದು ಮಾರ್ಗವನ್ನು ನೀಡುತ್ತದೆ ಮತ್ತು ಗುಣಮಟ್ಟದ ಜೀವನವನ್ನು ಆನಂದಿಸಲು ನಿಮಗೆ ಅವಕಾಶವನ್ನು ಒದಗಿಸುತ್ತದೆ. ವ್ಯವಸ್ಥಿತ ರೀತಿಯಲ್ಲಿ ಹಣವನ್ನು ಬದಿಗಿಡುವುದರಿಂದ ಜೀವನದಲ್ಲಿ ಅನೇಕ ಅಡೆತಡೆಗಳು ಮತ್ತು ಅಡೆತಡೆಗಳಿಂದ ಹೊರಬರಲು ನಿಮಗೆ ಸಹಾಯ ಮಾಡುತ್ತದೆ.

.

ಪರಸ್ಪರ

ನಮ್ಮ ಪರಸ್ಪರ ಸಮೂಹ ಇರುವುದೇ ಸಮಾಜಮುಖಿ ಸೇವೆಯನ್ನು ಮಾಡುತ ಸ್ವಾವಲಂಬಿಗಳನ್ನಾಗಿ ಮಾಡುವುದು ಅದುವೇ ನಮ್ಮಿಂದ ನಮಗಾಗಿ ಎಂಬ ಧ್ಯೇಯ ವಾಕ್ಯದಿಂದ ವಿಭಿನ್ನ ವಿಚಾರದಿಂದ ತಲೆಯೆತ್ತಿದ ಸಮೂಹ.

ನಮ್ಮ ಸಂಪರ್ಕಗಳು