ಚಿಕ್ಕ ಚಿಕ್ಕ ವಸ್ತುಗಳ ದೊಡ್ಡತನ

🌻ಎಂ  ಶಾಂತಪ್ಪ ಬಳ್ಳಾರಿ 🌻

 

*ಚಿಕ್ಕ ಚಿಕ್ಕ ವಸ್ತುಗಳ ದೊಡ್ಡತನ*

 

ಬೃಹತ್ತಾದ ಪ್ರಪಂಚದಲ್ಲಿ ಬದಲಾವಣೆ ತರಲು ನಾವು ಎಷ್ಟು ದೊಡ್ಡದು ಮಾಡಬೇಕು ಎಂದು ನಾವು ಬಹುಸಲ ಯೋಚಿಸುತ್ತೇವೆ. ಆದರೆ ಹಲವಾರು ಸರ್ವೇಕ್ಷಣಾತ್ಮಕ ಅಧ್ಯಯನಗಳು ತೋರಿಸಿರುವುದೇನೆಂದರೆ, ಕರುಣಾಮಯಿ ವ್ಯಕ್ತಿಗಳು ಮಾತ್ರವಲ್ಲ, ಅವರ ಈ ಸಹಾನುಭೂತಿಯ ಚಿಕ್ಕ ಚಿಕ್ಕ ಕ್ರಮಗಳೂ ಲೋಕಕ್ಕೆ ದಾರಿ ತೋರಿಸುತ್ತವೆ. ಪರಹಿತ ಚಿಂತನೆಯು ನಮ್ಮ ವೈಯಕ್ತಿಕ ನೆಮ್ಮದಿಗೆ ನೇರ ಸಂಬಂಧ ಹೊಂದಿದೆ ಎನ್ನುವುದು ನಿಜ.

 

2016ರ ಏಪ್ರಿಲ್‌ನಲ್ಲಿ ಜಪಾನಿನ ಕುಮಮೊಟೋದಲ್ಲಿ ಸಂಭವಿಸಿದ ಭೂಕಂಪ ಅನೇಕರ ಜೀವಹಾನಿಗೆ ಕಾರಣವಾಯಿತು. ಟೋಕಿಯೋ ನಗರದಲ್ಲಿ ಉದ್ಯೋಗಿಯಾಗಿದ್ದ ಒಬ್ಬರು ಕಿಯೋಟಾ, ತನ್ನ ಕೆಲಸವನ್ನು ಬಿಡುತ್ತಾ ನೇರವಾಗಿ ಕುಮಮೊಟೋಗೆ ತೆರಳಿ, ಅಲ್ಲಿ ಭೂಕಂಪ ಪೀಡಿತರಿಗೆ ಉಚಿತವಾಗಿ ಬಿಸಿ ಕಾಫಿ ನೀಡಲಾರಂಭಿಸಿದ. ಆರಂಭದಲ್ಲಿ ಈ ಕೆಲಸ ಅತ್ಯಂತ ಸರಳ, ಮಾಮೂಲಿಯೆನಿಸಿದರೂ, ಅದು ದೊಡ್ಡ ರೂಪವನ್ನು ತಾಳಿತು. ಸಾಮಾಜಿಕ ಜಾಲತಾಣಗಳಲ್ಲಿ ಅವನ ಕಾಫಿ ಮಳಿಗೆ ಜನಪ್ರಿಯತೆಯ ಶಿಖರ ಸೇರಿತು. ಈ ಮೂಲಕ ಅವನು ವೆಬ್ ಪೇಜ್ ಆರಂಭಿಸಿ, ನಿಧಿ ಸಂಗ್ರಹಣೆಗೆ ಮುಂದಾಗಿ ಹತ್ತಾರು ಸಾವಿರ ಯುರೋಗಳನ್ನು ಸಂಗ್ರಹಿಸಗಲಿದ.

 

ಅವನ ಸಣ್ಣ ಹೆಜ್ಜೆಯೇ ಸಾವಿರಾರು ಮಂದಿಗೆ ಆಶಾಕಿರಣವಾಯಿತು. ಇದು ನಮಗೆಲ್ಲಾ ನೆನಪಿಸುತ್ತಿದೆ — ಪ್ರಪಂಚವನ್ನು ಸರಿಪಡಿಸುವ ಬೃಹತ್ ಯೋಜನೆಗಿಂತ, ನಮ್ಮ ಹೃದಯದಿಂದ ಬರುವ ಚಿಕ್ಕ ಕಾಳಜಿಯ ಕ್ರಿಯೆಗಳೇ ಹೆಚ್ಚು ಪ್ರಭಾವ ಬೀರುತ್ತವೆ. ನಾವು ತೋರಿಸುವ ಸಹಾನುಭೂತಿ, ಸಣ್ಣ ಸಹಾಯ, ಅಥವಾ ಒಂದು ನಗೆಯೂ ಯಾರಿಗಾದರೂ ವಿಶ್ವಾಸ ತುಂಬಬಹುದು.

 

ಚಿಕ್ಕ ಚಿಕ್ಕ ಕೆಲಸಗಳೂ ದೊಡ್ಡ ಬದಲಾವಣೆ ತರುವ ಸಾಮರ್ಥ್ಯವಿರುತ್ತದೆ. ಪ್ರಪಂಚ ಬದಲಾಯಿಸಲು ನಮ್ಮಲ್ಲಿರುವದು ಸಾಕು. ಆರಂಭಿಸೋಣ, ಒಂದು ನಗು, ಒಂದು ಸಹಾಯದ ಕೈ, ಒಂದು ಬಿಸಿ ಕಾಫಿಯಿಂದ.

 

*ಮನೋ ಇಚ್ಛಿತ ಕಾರುಣ್ಯಪೂರಿತ ಕ್ರಿಯೆಗಳಿಗಾಗಿ ಉಪಾಯಗಳು*

 

ಮಾನವೀಯತೆಯ ಪ್ರತಿ ಸ್ಪಂದನವೂ ಒಂದು ಆಧ್ಯಾತ್ಮಿಕ ಪ್ರಯಾಣದ ಆರಂಭವಾಗಬಹುದು. Random Acts of Kindness (RAK) ಎಂದರೆ ಯಾ ರೀತಿ ನಿರೀಕ್ಷೆ ಇಲ್ಲದ ಸಹಾಯ ಅಥವಾ ಸಾನ್ನಿಧ್ಯವನ್ನು ನೀಡುವುದು. ಈ ಇಚ್ಛಿತ ಕ್ರಿಯೆಗಳು ನಮ್ಮ ದೈನಂದಿನ ಬದುಕಿಗೆ ಒಂದು ಹೊಸ ಆಯಾಮ ನೀಡುತ್ತವೆ. ಇಲ್ಲಿ ಕೆಲವು ಸರಳ ಆದರೆ ಪ್ರಭಾವಶಾಲಿಯಾದ ಉಪಾಯಗಳಿವೆ:

 

* *ಹೆಸರು ಗೊತ್ತಿಲ್ಲದ ಸೇವಕರಿಗೂ ಮೆಚ್ಚುಗೆ ನೀಡಿರಿ:* ಹೋಟೆಲ್‌ನಲ್ಲಿ ಚಹಾ ಅಥವಾ ಉಪಹಾರ ನೀಡುವ ಸೇವಕನು ಕೇವಲ ತನ್ನ ಕರ್ತವ್ಯವನ್ನು ಸಲ್ಲಿಸುತ್ತಿಲ್ಲ – ಅವನು ನಿಮ್ಮ ದಿನವನ್ನು ಸುಖಮಯವಾಗಿಸಲು ಶ್ರಮಿಸುತ್ತಿದ್ದಾನೆ. ಅವನಿಗೆ ಒಂದು ನಗು ನೀಡಿ. "ಧನ್ಯವಾದಗಳು" ಎಂಬ ಎರಡು ಶಬ್ದಗಳು ಅವನ ಮನಸ್ಸಿಗೆ ಸಂತೋಷ ತಂದೊಯ್ಯುತ್ತವೆ. ಹೆಸರು ಗೊತ್ತಿಲ್ಲದ ಈ ಸೇವಕರನ್ನು ಗೌರವದಿಂದ ನೋಡಿ, ಅವರ ಕೆಲಸಕ್ಕೂ ಕೃತಜ್ಞತೆ ವ್ಯಕ್ತಪಡಿಸಿ.

 

* *ಧನ್ಯವಾದಗಳನ್ನು ಬರೆದಾಗಿ ಹೇಳಿ:* ನಿಮ್ಮ ಸಹೋದ್ಯೋಗಿಯೊಬ್ಬರು ನೆರವಾದಿದ್ದರೆ, ಒಂದು ಸುಂದರ ಧನ್ಯವಾದ ಪತ್ರ ಬರೆದು ಅವರ ಮೇಜಿನ ಮೇಲಿಟ್ಟು ಬನ್ನಿ.

 

* *ಪ್ರಶಂಸೆ ಹೇಳುವ ಸಾಮರ್ಥ್ಯ ಬೆಳೆಸಿಕೊಳ್ಳಿ* : ಯಾರಾದರೂ ಹೊಸ ಹೆರ್‌ಕಟ್ ಮಾಡಿಕೊಂಡಿದ್ದರೆ ಅಥವಾ ಸೊಗಸಾಗಿ ಉಡುಗೆ ತೊಟ್ಟಿದ್ದರೆ, ಅವರನ್ನು ಸತ್ಯಸಂಧವಾಗಿ ಮೆಚ್ಚಿ.

 

* *ಆತ್ಮೀಯತೆಯ ಸಂದೇಶ ಕಳುಹಿಸಿ:* ನಿಮ್ಮ ಹತ್ತಿರದ ಸ್ನೇಹಿತರಿಗೆ ನೀವು ನನ್ನ ಬಾಳಲ್ಲಿ ಇದ್ದದ್ದು ಆಕಾಶದ ನಕ್ಷತ್ರಗಳಂತೆ – ಸದಾ ಬೆಳಕು ನೀಡುವವರಾಗಿ. ಜೀವನದ ಒಡನಾಟದಲ್ಲಿ ಕೆಲವರು ಹಾದಿ ಸೇರುತ್ತಾರೆ, ಆದರೆ ಕೆಲವರು ಹೃದಯದಲ್ಲಿ ಮನೆ ಮಾಡುತ್ತಾರೆ. ನೀವು ನನ್ನ ಸಂತೋಷದ ಕ್ಷಣಗಳನ್ನು ಇನ್ನಷ್ಟು ಮಧುರಗೊಳಿಸಿದ್ದೀರಿ ಮತ್ತು ದುಃಖದ ಸಮಯದಲ್ಲಿ ಬಲವಾಗಿ ನಿಂತಿದ್ದೀರಿ. ನಿಮ್ಮ ಸ್ನೇಹ ನನ್ನ ಬದುಕಿಗೆ ಅರ್ಥವನ್ನೂ, ಬಾಳಿಗೆ ನೆರೆಹಾಸು ಕೂಡ.ಧನ್ಯವಾದಗಳು ನನ್ನೊಂದಿಗೆ ಇರಲು.

 

* *ರಸ್ತೆಯ ಕಲಾವಿದರಿಗೆ ಸಹಾಯ:* ಬೀದಿಯಲ್ಲಿಯೇ ಹಾಡುವ ಅಥವಾ ತಂತ್ರಜ್ಞಾನದ ಹೊರತು ಕಲೆ ತೋರಿಸುವ ವ್ಯಕ್ತಿಗಳಿಗೆ ನಿಮ್ಮಿಂದ ಸಾಧ್ಯವಾದಷ್ಟು ಕೊಡುಗೆ ನೀಡಿ.

 

* *ಕಾರ್ಯಸ್ಥಳದ ಅಕಾಜ್ಞೆ ಕೆಲಸಗಾರರ ಪ್ರೀತಿಗೆ ಪಾತ್ರರಾಗಿ:* ಕಛೇರಿ ಅಥವಾ ಅಪಾರ್ಟ್‌ಮೆಂಟ್‌ನ ಸ್ವಚ್ಚತೆ ನಿರ್ವಹಕರಿಗೆ ವಾರದಲ್ಲಿ ಕನಿಷ್ಠ ಒಂದೇ ದಿನವಾದರೂ ಚಹಾ ಅಥವಾ ಕಾಫಿ ತಂದು ಕೊಡಿ. ಅವರು ನಮ್ಮ ಸುತ್ತಲಿನ ಶುದ್ಧತೆಗಾಗಿ ಶ್ರಮಿಸುತ್ತಾರೆ; ಅವರ ಮೇಲಿನ ಕಾಳಜಿ ಕೇವಲ ಕೃತಜ್ಞತೆಯ ಸೂಚನೆಯಷ್ಟೇ ಅಲ್ಲ, ಮಾನವೀಯತೆಯ ಪ್ರತಿಬಿಂಬವೂ ಆಗಿದೆ.

 

* *ಮೌನಚರಿತ್ರೆಯ ಗೆಳೆಯನಿಗೆ ಜೊತೆಯಾಗಿರಿ* : "ನಿಮ್ಮ ಸ್ನೇಹಿತರ ಹಾಗೂ ಪರಿಚಯಸ್ಥರ ಬಳಗದಲ್ಲೇ ಈಗಾಗಲೇ ಬಹಳ ಜನಪ್ರಿಯ ವ್ಯಕ್ತಿಯೊಂದಿಗೆ ಭೇಟಿಯಾಗುವುದಕ್ಕಿಂತ, ಬಹುಸಂಕೋಚ ಪ್ರವೃತ್ತಿಯುಳ್ಳ ಮತ್ತು ಹೆಚ್ಚಾಗಿ ಏಕಾಂಗಿಯಾಗಿ ಇರುವ ಯಾರಾದರೂ ವ್ಯಕ್ತಿಯೊಂದಿಗೆ ಕಾಫಿ ಕುಡಿಯಿರಿ. ಇಂತಹ ವ್ಯಕ್ತಿಗಳಿಗೆ ಬೇರೆಯವರಿಗಿಂತ ಹೆಚ್ಚು ಸ್ನೇಹದ ಅಗತ್ಯವಿರುತ್ತದೆ.

 

* *ಕ್ಷಮೆ ಕೊಡುವ ಧೈರ್ಯ ತಾಳಿರಿ:* ನಿಮ್ಮೊಂದಿಗೆ ಮಾತನಾಡುವುದು ನಿಲ್ಲಿಸಿದ ವ್ಯಕ್ತಿಗೆ ನಿಮ್ಮ ಮನಸ್ಸಿನಲ್ಲಿ ಶಾಂತಿ ತುಂಬುವಂತೆ ಕ್ಷಮೆ ನೀಡಿ.

 

* *ಸಂಸ್ಥೆಗಳಿಗೆ ಧನಸಹಾಯ ಮಾಡಿ:* ನಿಮ್ಮ ನಂಬಿಕೆಯೆತ್ತ ಕಾರ್ಯ ನಿರ್ವಹಿಸುತ್ತಿರುವ ಸಣ್ಣ ಅಥವಾ ದೊಡ್ಡ ಸಂಸ್ಥೆಗಳಿಗೆ ದಾನ ನೀಡಿ.

 

* *ಪ್ರಿಯ ಪುಸ್ತಕ ಉಡುಗೊರೆ ನೀಡಿ* : ನೀವು ಇಷ್ಟಪಡುವ ಪುಸ್ತಕವೊಂದನ್ನು ಖರೀದಿ ಮಾಡಿ, ಒಬ್ಬ ಗೆಳೆಯನಿಗೆ ಉಡುಗೊರೆ ನೀಡಿ.

 

* *ಬಾಸ್‌ಗೆ ಧೈರ್ಯದ ಮೆಚ್ಚುಗೆ ತೋರಿಸಿ* : ನಿಮ್ಮ ಮೇಲಧಿಕಾರಿಗೆ ಅವರಿಂದ ಬರುವ ಪ್ರೇರಣೆಯ ಬಗ್ಗೆ ಹೇಳಿ. ಅವರಿಗೂ ಇಂಥ ಸಹೃದಯ ಮೆಚ್ಚುಗೆ ಅವಶ್ಯಕ.

 

* *ಒಬ್ಬರಿಗೊಬ್ಬರು ಕಾಲ ಮೀರಿ ಹಂಚಿಕೊಳ್ಳಿ* : ಒಂದು ರಜೆ ತೆಗೆದು, ನೀವು ದೂರವಾದ ಸ್ನೇಹಿತ ಅಥವಾ ಸಂಬಂಧಿಕನೊಂದಿಗೆ ಒಂದು ಸ್ಮರಣೀಯ ಟ್ರಿಪ್‌ಗೆ ಹೋಗಿ ಬನ್ನಿ.

 

*ಪರಸ್ಪರ ನಿರಂತರ*