ತಾಳ್ಮೇ ಒಂದಿದ್ದರೆ ನಾವು ಎಲ್ಲವನ್ನು ಗೆಲ್ಲಬಹುದು. ಶಿವಕುಮಾರ್ ಕೊಟ್ರಯ್ಯ

ನನ್ನ ಹೆಸರು ಶಿವಕುಮಾರ ಕೊಟ್ರಯ್ಯ ವಸ್ತ್ರದ, ನನ್ನ ಹುಟ್ಟೂರು ಕೊಪ್ಪಳ ಜಿಲ್ಲೆ ಕೊಪ್ಪಳ ತಾಲೂಕು ಚಿಕ್ಕಬೊಮ್ಮನಾಳ ನಾನು  ಚಿಕ್ಕವನಿದ್ದಾಗಲೆ ಅಪ್ಪ ಅಮ್ಮ ಬಿಟ್ಟೋದ್ರು, ನಾನು ಇಷ್ಟೆಲ್ಲ ಬೆಳೆಯೊಕೆ ಕಾರಣ ಅಂದ್ರೆ ನನ್ನ (ತಾಯಿಯ ತಂಗಿ) ಚಿಕ್ಕಮ್ಮ   ನಾನು ಬೆಳದಿದ್ದೆಲ್ಲ ನಮ್ಮ ಅಜ್ಜನ ಮನೆಯಲ್ಲಿ.  ಮೊದಲಿಗೆ ನಾನು ಗದಗ ಜಿಲ್ಲೆ ಮುಂಡರಗಿ ತಾಲೂಕ ಬಾಗೇವಾಡಿ ಯಲ್ಲಿ.

ನಂಗೆ ಪರಸ್ಪರ ಸಿಕ್ಕಿದ್ದು ನನ್ನ ಗೆಳೆಯ ರುದ್ರೇಶ ಹಿರೇಮಠ ಇವರಿಂದ ಜುಲೈ  2024ರಲ್ಲಿ ಪರಿಚಯ ವಾಯ್ತು. ಈಗಿನ ಸ್ವಾರ್ಥ ಪ್ರಪಂಚದಲ್ಲಿ ಪರಸ್ಪರ  ಸಿಕ್ಕಿದ್ದು ನಮ್ಮ ಅದೃಷ್ಠ ಅಂತ ಹೆಳಬಹುದು ಯಾಕಂದ್ರೆ ಎಲ್ಲರೂ ಅಣ್ಣ-ತಮ್ಮ- ಅಕ್ಕ- ತಂಗಿ ಇದ್ದ ಹಾಗೆ ಇದಾರೆ. 2021 ರಲ್ಲಿ ʼʼದಿವ್ಯಶ್ರೀ ನೆಟ್ ಝೋನ್ʼʼ ಎಂದು ಆನ್ ಲೈನ್ ಸೆಂಟರ್  ಪ್ರಾರಂಭ ಮಾಡಿದೆ. ನಾನು ಮೊದಲಿಗೆ ಆನ್ ಲೈನ್ ಸೆಂಟರ್ ಪ್ರಾರಂಭ ಮಾಡಿದಾಗ ಯಾವ ಅರ್ಜಿ ಗಳನ್ನು ಸಹ ಹಾಕಲು ಬರುತ್ತಿದ್ದಿಲ್ಲ ಕೆಲವು ಆನ್ಲೈನ್ ಸೆಂಟರ್ ನವರನ್ನು ಕೇಳಿದಾಗ ಅವರು ಹೆಳೊದನ್ನ ಕೆಳಿದಾಗ ತುಂಬಾ ಕಷ್ಟ ಅನ್ನೊ ಹಾಗ ಹೇಳ್ತಿದ್ರು ಆದರೂ ನಾವು ಕಲಿಯುವ ಆಸೆ ಇದ್ದರೆ ಎಲ್ಲವನ್ನು ಕಲಿಯಬಹುದು. ನನ್ನ ಸೆಂಟರ್ ಪ್ರಾರಂಭವಾದಾಗ ನನ್ನ ಹತ್ತಿರ ಯಾವುದೆ ತರಹದ ಸಿ.ಎಸ್.ಸಿ ಐಡಿ ಇತರೆ ಯಾವುದೆ ಸರಕಾರದಿಂದ  ಬರುವ ಐಡಿಗಳು ಇರಲಿಲ್ಲ. ಮತ್ತೆ ನನ್ನದು ಚಿಕ್ಕ ಅಂಗಡಿ ಯಾಗಿತ್ತು. ನನ್ನ ಸೆಂಟರ್ ಎದುರಿಗೆ ಮತ್ತು 200 ಮೀಟರ್ ಹತ್ತಿರ 2 ಸಿ.ಎಸ್.ಸಿ ಸೆಂಟರ್ ಗಳು ಇದ್ದರೂ ಕೂಡ ಜನ ನನ್ನ ಶಾಪಗೆ ಬರ್ತಿದ್ರು ಅದರಲ್ಲಿ ನನಗೆ ಹೆಚ್ಚು ಆದಾಯ ಜೊತೆಗೆ ಹೆಚ್ಚು ಕೆಲಸ ಬರ್ತಿತ್ತು, ಜನ ಎಲ್ಲೊದ್ರು ಕೂಡ ನನ್ನ ಸೆಂಟರ್ ಗೆ ಕಳಿಸ್ತಾ ಇದ್ರು  ತುಂಬಾ ಖುಷಿಯಾಗ್ತಿತ್ತು. ಇದಕ್ಕೆ ಕಾರಣ  ನಮ್ಮ ಪ್ರಾಮಾಣಿಕತೆ, ನಮ್ಮ ಕೆಲಸದ ಮೇಲಿರುವ ಶ್ರದ್ದೆ. 2022 ರಲ್ಲಿ ಗ್ರಾಮ ಒನ್ ಗೆ 3 ಕಡೆ ಅರ್ಜಿ ಹಾಕಿದೆ  ನನ್ನ ಸ್ವಂತ ಊರಿಗೆ ಹತ್ತಿರ ದಲ್ಲೆ ಇರುವ ಊರಿಗೆ ಅನುಮೊದನೆ ಆಯ್ತು ನಾವು ಎಲ್ಲೆ ಇದ್ರು ನಮ್ಮ ಹುಟ್ಟೂರಿಗೆ ಯಾವತ್ತಿದ್ರು ಬರ್ಲೆ ಬೇಕ ಅಲ್ವಾ.

2022 ರಲ್ಲಿ ಕೊಪ್ಪಳ ಜಿಲ್ಲೆ, ಕೊಪ್ಪಳ ತಾಲೂಕಿನ ಚಿಲಕಮುಖಿ ಯಲ್ಲಿ ನನ್ನ ಜರ್ನಿ ʼʼದಿವ್ಯಶ್ರೀ ನೆಟ್ ಗ್ರಾಮ ಒನ್ʼʼ ಅಂತ ಪ್ರಾರಂಭ ವಾಯಿತು ಈಗಲೂ ಕೂಡ ನನ್ನ ಪಯಣ ಇದರಲ್ಲಿ ಸಾಗುತ್ತಿದೆ.

*ನಾವು ತಿಳಿದು ಕೊಳ್ಳಬೇಕಾದದ್ದು ಇಷ್ಠೆ ನಮ್ಮಲ್ಲಿ ತಾಳ್ಮೇ ಒಂದಿದ್ದರೆ ನಾವು ಎಲ್ಲವನ್ನು ಗೆಲ್ಲಬಹುದು*

ನಮ್ಮ ಈ ಪರಸ್ಪರ ನಿರಂತರವಾಗಿ ಹಿಗೆ ಸಾಗುತಿರಲಿ ಸಾಗಬೇಕಾದರೆ ನಿಮ್ಮೆಲ್ಲರ ಸಹಾಕಾರ ಬೇಕು ನೀವೂ ಕೂಡ ನಮ್ಮ ಪರಸ್ಪರ ಕ್ಕೆ ಬನ್ನಿ ಪರಸ್ಪರ ವನ್ನು ಪ್ರೀತ್ಸಿ ಜೊತೆಗೆ ಬೆಳಸಿ.