ಸಾವಯುವ ರೀತಿಯಲ್ಲಿ ನಾವು ಕಡಿಮೆ ಬಂಡವಾಳದಲ್ಲಿ ಹೆಚ್ಚು ಆದಾಯ ತಂದು ಕೊಡುವಂತಹ ಕೃಷಿಯೇತರ ಚಟುವಟಿಕೆಗಳ ಮಾಹಿತಿಯನ್ನು ಮತ್ತು ಕೃಷಿಯಲ್ಲಿ ಕಡಿಮೆ ಬಂಡವಾಳದಲ್ಲಿ ಯಶಸ್ವಿ ಆದಂತಹ ಸಂಪನ್ಮೂಲ ವ್ಯಕ್ತಿಗಳ ನಡುವೆ ಸಂಪರ್ಕ ಕಲ್ಪಿಸಿ, ಇತರರಿಗೂ ಮಾದರಿಯಾಗುವಂತೆ ಕೃಷಿ ಪದ್ಧತಿಯನ್ನು ಕಲಿಯುವದರ ಜೊತೆಗೆ ಹಣವನ್ನು ಸಂಪಾದಿಸಿ ಮಣ್ಣಿನ ಫಲವತ್ತತೆಯನ್ನು ಹಾಗೂ ಮಾನವನ ಆರೋಗ್ಯ ಕೂಡ ಕಾಪಾಡಿಕೊಳ್ಳಬಹುದು. ಸಾವಾಯವ ಕೃಷಿ ಉತ್ಪನ್ನಗಳ ತಯಾರಿಕೆಗೆ ಉತ್ತೇಜನ ಹಾಗೂ ಮಾರುಕಟ್ಟೆ ಸ್ಥಾಪನೆ. ಜೊತೆಯಲ್ಲಿ ಭೂರಹಿತ ಕೃಷಿ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದವರಿಗೆ ತಾರಸಿ ತೋಟ, ಅಣಬೆ ಬೇಸಾಯ, ನಾಟಿ ಕೋಳಿ ಸಾಕಾಣಿಕೆ, ಜೇನು ಕೃಷಿ, ನರ್ಸರಿ, ಸಮುದಾಯ ಕೃಷಿಯ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸಿ ಸ್ವಾವಲಂಬಿ ಬದುಕನ್ನು ರೂಪಿಸುವ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸುವುದು.
.