ಆಧುನಿಕ ಚಾಣಾಕ್ಷ ಸಂತೋಷ್ ಜಿ

ಹೆಸರು: ಸಂತೋಷ್ ಜಿ.                                       

ವಿದ್ಯಾರ್ಹತೆ: B.E ಪದವೀಧರ (ಮೆಕ್ಯಾನಿಕಲ್ ಇಂಜಿನಿಯರಿಂಗ್).                                                 

ವೃತ್ತಿ: _ಚಾಣಾಕ್ಷ ಎಂಟರ್ಪ್ರೈಸಸ್_ ಎಂಬ ಸಂಸ್ಥೆಯ ಮಾಲಿಕನಾಗಿ ಹಲವಾರು ವ್ಯಾಪಾರ ವ್ಯವಹಾರಗಳನ್ನು ನಡೆಸುತ್ತಿದ್ದು, ಅದರಲ್ಲಿ  ಲ್ಯಾಪ್ಟಾಪ್/ ಡೆಸ್ಕ್ಟಾಪ್ ಗಳ ಸೇಲ್ಸ್ ಹಾಗೂ ಸರ್ವೀಸ್ ಮಾಡುವ _"ಚಾಣಾಕ್ಷ ಟೆಕ್"_,

ಕೇಂದ್ರ ಸರ್ಕಾರದ ಸೇವೆಗಳನ್ನು ನಾಗರಿಕರಿಗೆ ತಲುಪಿಸುವ _"ಸಾಮಾನ್ಯ ಸೇವಾ ಕೇಂದ್ರ"_ ಹಾಗೂ ರಾಜ್ಯ ಸರ್ಕಾರದ ಸೇವೆಗಳನ್ನು ನಾಗರಿಕರಿಗೆ ತಲುಪಿಸುವ _"ಕರ್ಣಾಟಕ ಒನ್"_ ಪ್ರಮುಖವಾದವುಗಳು.                                 

ಪುಸ್ತಕ ಓದುವುದು, ಗಾಯನ, ಜಾದೂ ಪ್ರದರ್ಶನ ನನ್ನ ಹವ್ಯಾಸ. ಪರೋಪಕಾರದಲ್ಲಿ ಆಸಕ್ತಿ ಮೊದಲಿನಿಂದಲೂ ಇದ್ದರೂ ಇತ್ತೀಚೆಗೆ ಹೆಚ್ಚಾಗಿದ್ದು ಪರಸ್ಪರದ ಕೊಡುಗೆ ಎಂದರೆ ತಪ್ಪಾಗಲಾರದು.

 

ಹೆಚ್ಚಾಗಿ ಕೇವಲ ಬಿಸಿನೆಸ್ ಮನ್ ಆಗಿ ಗುರುತಿಸಿಕೊಂಡಿದ್ದ ನನಗೆ,

ಮೋಟಿವೇಷನಲ್ ಸ್ಪೀಕರ್, ಬಿಸಿನೆಸ್ ಕೋಚ್, ಹೀಗೆ ಅನೇಕ ಗುರುತನ್ನು ನೀಡಿ, ನನ್ನೊಳಗೆ ಮರೆಯಲ್ಲಿ ಮಲಗಿದ್ದ ಮಾತುಗಾರನ ಹೊರಗೆಳೆದು ಕರೆತಂದದ್ದು ಇದೇ ಪರಸ್ಪರ ಪರಿವಾರ.

ಇದೇ ಅವಕಾಶ ಬಳಸಿಕೊಂಡು ಈಗಾಗಲೇ ನೂರಾರು ತರಬೇತಿ ನೀಡಿದ್ದೇನೆ. ಅದರಲ್ಲಿ ವಿಶೇಷವೇನೆಂದರೆ ಈ ತರಬೇತಿಗಳನ್ನು ಪಡೆದವರೆಲ್ಲಾ ತರಬೇತಿ ನೀಡಲು ನನಗೆ ತರಬೇತಿ ನೀಡಿದ ತರಬೇತುದಾರರು. ನಾನೇ ಫಲಾನುಭವಿ .