🌻ಎಂ ಶಾಂತಪ್ಪ ಬಳ್ಳಾರಿ,l🌻
ಯಶಸ್ವಿಗೆ 8 ಸೂತ್ರಗಳು
*ಯಶಸ್ವಿಗೆ*
1. ನಿಮ್ಮ ಮನೋಭಾವ ಉನ್ನತವಾಗಿರಲಿ
* ನಾವು ಬೆಳಗ್ಗೆ ಎದ್ದ ಕ್ಷಣದಿಂದ ರಾತ್ರಿ ಮಲಗುವವರೆಗೆ ಅನೇಕ ನಿರೀಕ್ಷೆಗಳ ನಡುವೆ ಜೀವನ ಸಾಗುತ್ತದೆ. ಕುಟುಂಬದವರು, ಸ್ನೇಹಿತರು, ಸಹೋದ್ಯೋಗಿಗಳು, ಗ್ರಾಹಕರು, ಮಾರುಕಟ್ಟೆ—ಇವರು ಎಲ್ಲರೂ ನಮ್ಮಿಂದ ಏನೋ ನಿರೀಕ್ಷಿಸುತ್ತಾರೆ. ಅನೇಕ ಬಾರಿ ಈ ನಿರೀಕ್ಷೆಗಳು ಪೂರೈಸಲಾಗದೇ ಇದ್ದರೆ ನಮ್ಮ ಮನಸ್ಸು ಬೇಸರಗೊಳ್ಳಬಹುದು, ದಿಕ್ಕು ತಪ್ಪಬಹುದು.
* ಆದರೆ ನಾವು ನಮಗೆ ಸಾಧ್ಯವಿರುವುದನ್ನು ಮನಸ್ಸಾರೆ ಮಾಡುವುದರ ಜೊತೆಗೆ, ನಿರೀಕ್ಷೆಗಳ ಜಾಲದಲ್ಲಿ ಬೀಳದೆ, ನಮ್ಮ ಮನೋಭಾವವನ್ನು ಸದಾ ಉನ್ನತವಾಗಿಟ್ಟುಕೊಳ್ಳುವುದು ಮುಖ್ಯ. ಪಾಸಿಟಿವ್ ಮನೋಭಾವ ನಮ್ಮ ದಿನನಿತ್ಯದ ಆಲೋಚನೆಗಳು, ನಿರ್ಧಾರಗಳು ಮತ್ತು ಕ್ರಿಯೆಗಳ ಗುಣಮಟ್ಟವನ್ನು ಹೆಚ್ಚಿಸುತ್ತದೆ.
* ಅದು ಸಾಧ್ಯವಾಗುವುದೇ? ಖಂಡಿತವಾಗಿಯೂ! ನಕಾರಾತ್ಮಕತೆಯನ್ನು ಸ್ವೀಕರಿಸುವ ಬದಲು, ಅದನ್ನು ಹೊಸ ಅವಕಾಶಗಳೆಂದು ಪರಿಗಣಿಸಿ. ನಿರೀಕ್ಷೆಗಳ ತೂಕ ನಿಮ್ಮ ಮನಸ್ಸನ್ನು ಜಗ್ಗಿಸಲು ಬಿಡದೆ, ಒತ್ತಡವನ್ನು ನಿರ್ವಹಿಸುವ ನಿಷ್ಠೆ ಮತ್ತು ಧೈರ್ಯವನ್ನು ಉಳಿಸಿ . ನಿಮ್ಮ ಮನೋಭಾವ ಸದಾ ಉನ್ನತವಾಗಿರಲಿ, ಏಕೆಂದರೆ ಅದೇ ಯಶಸ್ಸಿನ ದಾರಿ
2. ಸಮಯ ಪಾಲನೆ
* ಸಮಯ ನಮ್ಮ ಜೀವನದ ಅಮೂಲ್ಯ ಸಂಪತ್ತು. ಅದನ್ನು ಸರಿಯಾಗಿ ಬಳಸಿದರೆ ಯಶಸ್ಸು ಖಚಿತ. ಸಮಯದ ಸರಿಯಾದ ಬಳಕೆ ನಮ್ಮ ಉದ್ದೇಶಗಳನ್ನು ಸಾಧಿಸಲು, ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಹಾಗೂ ಜೀವನದಲ್ಲಿ ಸಮತೋಲನ ಸಾಧಿಸಲು ಸಹಾಯ ಮಾಡುತ್ತದೆ.
* ಮುತ್ತು ಒಡೆದರೆ ಹೋಯಿತು. ಹೊತ್ತು ಕಳೆದರೆ ಹೋಯಿತು. ವ್ಯವಹಾರದಲ್ಲಿ ಪ್ರತಿಕ್ಷಣವೂ ಹಣವೇ. ಒಂದು ಕ್ಷಣ ಕಳೆಯಿತು ಎಂದರೆ ನೀವು ಹಣ ಕಳೆದುಕೊಂಡ ಹಾಗೆ.
* ಪ್ರಾಥಮಿಕತೆ ನಿರ್ಧಾರ – ಮಹತ್ವದ ಕೆಲಸಗಳನ್ನು ಮೊದಲಿಗೆ ಮಾಡಿ, ತುರ್ತು ಮತ್ತು ಅತೀಮುಖ್ಯ ಕಾರ್ಯಗಳಿಗೆ ಆದ್ಯತೆ ಕೊಡಿ.
* ಗಮನ ಕೆಂದ್ರಿತ ಮಾಡಿ – ಒಮ್ಮೆ ಒಂದೇ ಕೆಲಸಕ್ಕೆ ಗಮನ ಕೊಡಿ, ಬಹುತಾಸಿ (multitasking) ಹಲವೊಮ್ಮೆ ಸಮರ್ಪಕ ಫಲಿತಾಂಶ ನೀಡುವುದಿಲ್ಲ.
* ಗುರಿ ಹೊಂದಿ ಕೆಲಸ ಮಾಡಿ – ಸಣ್ಣ ಹಾಗೂ ದೀರ್ಘಾವಧಿ ಗುರಿಗಳನ್ನು ನಿಗದಿಪಡಿಸಿ, ಅವುಗಳನ್ನು ಸಾಧಿಸಲು ಪ್ಲಾನ್ ಮಾಡಿ.
* ಸಮಯ ಕದಿಯುವ ಅಂಶಗಳನ್ನು ತೊಡೆದುಹಾಕಿ – ಅತಿಯಾದ ಮೊಬೈಲ್ ಬಳಕೆ, ಅನಗತ್ಯ ಮಾತುಕತೆ, ಇತರ ಕೆಲಸಗಳಲ್ಲಿ ಸಮಯ ವ್ಯರ್ಥ ಮಾಡದೇ ಇರಿ.
* ಆರೋಗ್ಯದ ಕಾಳಜಿ – ಸಮರ್ಪಕ ವಿಶ್ರಾಂತಿ, ಆರೋಗ್ಯಕರ ಆಹಾರ, ವ್ಯಾಯಾಮ ಇವು ಮನಸ್ಸನ್ನು ಉಜ್ಜೀವನಗೊಳಿಸಿ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತವೆ.
3. ತಯಾರಿ ಇಲ್ಲದಿದ್ದರೆ ಸೋಲು ಖಚಿತ.
* ಯಾವುದೇ ಗುರಿಯನ್ನು ಸಾಧಿಸಲು ತಯಾರಿ ಅತ್ಯಗತ್ಯ. ಸಿದ್ಧತೆಯಿಲ್ಲದೆ ಕಾರ್ಯಪ್ರವೃತ್ತರಾದರೆ ಯಶಸ್ಸು ಸಾಧಿಸುವ ಸಾಧ್ಯತೆ ಕಡಿಮೆ. ಸಮರ್ಥತೆಯಿಂದ ಯೋಜನೆ ರೂಪಿಸಿ, ಮುನ್ನೋಟದೊಂದಿಗೆ ಕಾರ್ಯಾಚರಣೆ ನಡೆಸಿದರೆ ಮಾತ್ರ ಯಶಸ್ಸು ಖಚಿತ. ಶ್ರಮ, ಸಮಯ ನಿಯಂತ್ರಣ, ಹಾಗೂ ಜಾಣ್ಮೆಯ ಯೋಜನೆಯಿಲ್ಲದೆ ಪ್ರಯತ್ನಿಸಿದರೆ ಸೋಲು ಅನುಭವಿಸಬೇಕಾಗುತ್ತದೆ.
*ಸಿದ್ಧತೆಯ ಮಹತ್ವ* :
* ಗುರಿ ನಿಶ್ಚಯ & ಯೋಜನೆ
* ಶ್ರದ್ಧೆ & ಶಿಸ್ತು
* ಆತ್ಮವಿಶ್ವಾಸ & ಆತ್ಮವಿಕಾಸ
* ಕಾರ್ಯೋದ್ಯಮ & ಹಗಲೋಟ
* ಸಿದ್ಧತೆಯೊಂದಿಗೇ ಜಯ!
4. ಎಂಟು ಗಂಟೆ ಕಾರ್ಯನಿರ್ವಹಿಸಿ
* ಹಲವಾರು ಬಾರಿ ಮಾರಾಟದವರು ಅನಗತ್ಯವಾಗಿ ವಿಶ್ರಾಂತಿ ತೆಗೆದುಕೊಳ್ಳುತ್ತಾರೆ – ಪದೇ ಪದೇ ಕಾಫಿ, ಟೀ ಕುಡಿಯಲು ಹೋಗುವುದು, ಅಥವಾ ಗ್ರಾಹಕರು ನಿರಾಕರಿಸಿದಾಗ ಮನಸ್ಸು ಕಳೆದುಕೊಂಡು ಮುಂದಿನ ಗ್ರಾಹಕರೊಂದಿಗೆ ಸಮರ್ಪಕವಾಗಿ ವರ್ತಿಸದೇ, ಸಂಪೂರ್ಣ ಮಾಹಿತಿ ನೀಡದೆ ಬಿಡುವುದು.
* ಕಲ್ಪಿಸಿ ನೋಡಿ, ಒಬ್ಬ ಗ್ರಾಹಕರು ನಮ್ಮ ಬಳಿಯಿಂದ ಕೊಂಡುಕೊಳ್ಳದೇ ಹೋದರೆ ಅಥವಾ ನಮ್ಮನ್ನು ಹೀಯಾಳಿಸಿದರೆ, ಅದರಿಂದ ಪ್ರಭಾವಿತಾಗಿ ದೀರ್ಘಕಾಲ ಕುಳಿತಿದ್ದರೆ, ನಮ್ಮ ಪ್ರಗತಿಗೆ ಅದು ಸಹಾಯಕವೇ? ಅನೇಕ ಬಾರಿ, ಈ ದುಃಖದಿಂದ ಪೂರ್ತಿ ದಿನವೇ ವ್ಯರ್ಥ ಮಾಡಲಾಗುತ್ತದೆ. ಆದರೆ, ಯಶಸ್ವಿಯಾದ ಮಾರಾಟಗಾರರು ಒಂದೇ ಒಂದು ನಿಯಮ ಪಾಲಿಸುತ್ತಾರೆ – ಸಮಯ ವ್ಯರ್ಥ ಮಾಡದೇ, ಪೂರ್ತಿ ಮನಸ್ಸಿನಿಂದ ಕೆಲಸ ಮಾಡುವುದು!
* ನಿಮ್ಮ ಯಶಸ್ಸು ನಿಮ್ಮ ಶ್ರಮದಲ್ಲಿ ಇರುತ್ತದೆ. ಗ್ರಾಹಕರ ನಿರಾಕರಣೆಗೆ ಬೇಸರಗೊಳ್ಳದೆ, ಪ್ರತಿಯೊಂದು ನಿಮಿಷವನ್ನು ಉತ್ಪಾದಕವಾಗಿ ಬಳಸಿ, ನಿತ್ಯ ಎಂಟು ಗಂಟೆ ಶ್ರದ್ಧೆಯಿಂದ ಕೆಲಸ ಮಾಡಿ. ಅದನ್ನು ಅನುಸರಿಸಿದರೆ, ಗೆಲುವು ನಿಮಗೆ ಗ್ಯಾರಂಟಿ!
5. ನಿಮ್ಮ ವ್ಯಾಪ್ತಿಯಲ್ಲಿ ಸೂಕ್ತವಾಗಿ ಕಾರ್ಯ ನಿರ್ವಹಿಸಿ
* ಸ್ವತಃ ಅರಿವು: ನಿಮ್ಮ ಸಾಮರ್ಥ್ಯ, ಜವಾಬ್ದಾರಿಗಳು, ಮತ್ತು ಮಿತಿಗಳನ್ನು ತಿಳಿದುಕೊಳ್ಳುವುದು.
* ಪ್ರಾಮಾಣಿಕತೆ: ಅತಿಯಾಗಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವುದು, ಅನಗತ್ಯವಾಗಿ ಇತರರ ಹೊಣೆಹೊತ್ತುಕೊಳ್ಳದೆ.
* ಪರಿಣಾಮಕಾರಿ ನಿರ್ಧಾರಗಳು: ತಮ್ಮ ವ್ಯಾಪ್ತಿಯೊಳಗಿನ ನಿರ್ಧಾರಗಳನ್ನು ಹೊಣೆಯುತವಾಗಿ ತೆಗೆದುಕೊಳ್ಳುವುದು.
* ಸಹಕಾರ ಮತ್ತು ತಂಡದ ಮನೋಭಾವ: ಬೇರೆ ವಿಭಾಗಗಳಿಗೆ ಅಥವಾ ಅಧಿಕಾರಿಗಳಿಗೆ ಆದ್ದೇಶ ನೀಡುವ ಬದಲು, ಅವರೊಂದಿಗೆ ಸಮನ್ವಯ ಸಾಧಿಸುವುದು.
* ಉತ್ತಮ ಕಾರ್ಯಕ್ಷಮತೆ: ತಮ್ಮ ವೃತ್ತಿಪರ ಮೌಲ್ಯಗಳನ್ನು ಪಾಲಿಸಿಕೊಂಡು, ಪರಿಪೂರ್ಣತೆಯೊಂದಿಗೆ ಕೆಲಸ ನಿರ್ವಹಿಸುವುದು
6. ನಿಮ್ಮ ಮನೋಭಾವನೆಯನ್ನು ಸಂರಕ್ಷಿಸಿ
* ಸಕಾರಾತ್ಮಕ ಮನೋಭಾವನೆಯನ್ನು ಸದಾ ಕಾಪಾಡಿ. ಒಮ್ಮೆ ಸೋಲಿದರೆ, ಅದು ನಿಮ್ಮ ಮನೋಭಾವನೆಗೆ ಹೊಡೆತ ನೀಡಿದೆ ಎಂದು ಭಾವಿಸಬೇಡಿ. ಸೋಲು ಎಂದರೆ ಯಶಸ್ಸಿನ ತಡಿಯಾಗುವಿಕೆ ಅಷ್ಟೆ – ಅದನ್ನು ಹೊಸ ಅವಕಾಶವಾಗಿ ಪರಿಗಣಿಸಿ. ನಿಮ್ಮ ಗುರಿಯನ್ನು ಸಾಧಿಸುವ ಮಾರ್ಗದಲ್ಲಿ ಅನೇಕ ಅಡೆತಡೆಗಳು ಎದುರಾಗಬಹುದು, ಆದರೆ ಧೈರ್ಯ ಮತ್ತು ದೃಢವಿಶ್ವಾಸದಿಂದ ಮುಂದುವರಿದರೆ, ಗೆಲುವು ನಿಶ್ಚಿತ!
7. ನೀವು ಎತ್ತಕ್ಕಾಗಿ ಎಲ್ಲಿದ್ದೀರಿ? ನೀವು ಮಾಡುತ್ತಿರುವ ಕೆಲಸವೇನು?
* ನೀವು ಇಲ್ಲಿರುವ ಉದ್ದೇಶವನ್ನು ಮನಗಂಡು, ಸಕಾರಾತ್ಮಕ ಮನೋಭಾವನೆಯನ್ನು ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯ. ಸ್ವಯಂಪ್ರೇರಣೆ ಮೂಲಕ ನಾನು ಏಕೆ ಇಲ್ಲಿದ್ದೇನೆ? ನಾನು ಏನು ಮಾಡುತ್ತಿದ್ದೇನೆ? ನನ್ನ ಕನಸು ನನಸಾಗಲು ಏನು ಮಾಡಬೇಕು? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕಿ.
* ನಿಮ್ಮ ಮೂಲ ಉದ್ದೇಶವನ್ನು ಮರೆಯದೆ, ನಿಮ್ಮ ಗುರಿ ಸಾಧನೆಗೆ ನಿಷ್ಠೆಯಾಗಿರಿ. ಹಣ ಗಳಿಕೆ, ವೃತ್ತಿಜೀವನದ ಬೆಳವಣಿಗೆ, ಅಥವಾ ಬೇರೆ ಯಾವುದೇ ಉದ್ದೇಶ ಇದೆಯೋ ಅದನ್ನು ನೆನಪಿನಲ್ಲಿ ಇಟ್ಟುಕೊಂಡು ನಿಮ್ಮ ಮಾರ್ಗವನ್ನು ಗಟ್ಟಿಯಾಗಿ ರೂಪಿಸಿಕೊಳ್ಳಿ.
* ಅವಶ್ಯಕತೆ ಇಲ್ಲದ ವ್ಯರ್ಥ ಮಾತುಗಳು, ಅನಾವಶ್ಯಕ ಪ್ರೇಮ ಸಂಬಂಧಗಳು, ವದಂತಿಗಳು, ಮತ್ತು ಕೆಟ್ಟ ಸ್ನೇಹಗಳು ನಿಮ್ಮ ದಾರಿಯನ್ನು ತಪ್ಪಿಸಬಾರದು. ಹಡಗು ತನ್ನ ಗುರಿ ತಲುಪಲು ದಿಕ್ಕೂಚಿ ಮುಖ್ಯವಾದಂತೆ, ನೀವು ನಿಮ್ಮ ಜೀವನದಲ್ಲಿ ಮುಂದೆ ಸಾಗಲು ನಿಮ್ಮ ದಿಕ್ಕೂಚಿಯಾಗಬೇಕು.
8. ನಿಮ್ಮ ಕೈಯಲ್ಲಿರಲಿ ನಿಯಂತ್ರಣ
* ಯೋಚನೆ ಮೇಲೆ ಹಿಡಿತ – ನಿಮ್ಮ ಚಿಂತನೆಗಳು ನಿಮ್ಮ ನಡೆ-ನುಡಿಯನ್ನೂ ನಿರ್ಧರಿಸುತ್ತವೆ. ಸಕಾರಾತ್ಮಕವಾಗಿ ಯೋಚಿಸಿ, ಆತ್ಮವಿಶ್ವಾಸದಿಂದ ಮುಂದುವರಿಯಿರಿ.
* ಭಾವನ ಮೇಲೆ ಹಿಡಿತ – ಭಾವೋದ್ವೇಗಗಳಿಗೆ ಒಳಗಾಗದೆ, ಸಮತೋಲನವನ್ನು ಉಳಿಸಿ. ಧೈರ್ಯ ಮತ್ತು ಶಾಂತಿಯೊಂದಿಗೆ ಪ್ರತಿಸ್ಪಂದಿಸಿ.
* ನಿಮ್ಮ ಸಮಯದ ಮೇಲೆ ಹಿಡಿತ – ಸಮಯದ ಸದುಪಯೋಗ ಮಾಡಿಕೊಳ್ಳಿ, ಪ್ರಾಮಖ್ಯತೆ ನೀಡಬೇಕಾದ ಕೆಲಸಗಳಿಗೆ ಆದ್ಯತೆ ನೀಡಿ.
* ಆರೋಗ್ಯದ ಮೇಲೆ ಹಿಡಿತ – ಶಾರೀರಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಿ. ಸರಿಯಾದ ಆಹಾರ, ವ್ಯಾಯಾಮ ಮತ್ತು ವಿಶ್ರಾಂತಿಯೊಂದಿಗೆ ಆರೋಗ್ಯಕರ ಜೀವನ ನಡೆಸಿ