🌻ಎಂ ಶಾಂತಪ್ಪ ಬಳ್ಳಾರಿ 🌻
*ಗ್ರಾಹಕರ ಹಕ್ಕುಗಳು*
ಗ್ರಾಹಕರು ತಾವು ಪಡೆಯುತ್ತಿರುವ ಹಕ್ಕುಗಳೊಂದಿಗೆ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುತ್ತದೆ. ಹಕ್ಕುಗಳು ಮತ್ತು ಜವಾಬ್ದಾರಿಗಳು ಒಂದೇ ನಾಣ್ಯದ ಎರಡು ಮೂಖಗಳಾಗಿವೆ.
ಗ್ರಾಹಕರ ಜವಾಬ್ದಾರಿಗಳು ನಮ್ಮ ಸಮಾಜದಲ್ಲಿ ಮತ್ತು ಆರ್ಥಿಕ ವ್ಯವಸ್ಥೆಯಲ್ಲಿ ಬಹಳ ಮುಖ್ಯವಾದ ಭಾಗವಾಗಿವೆ. ಗ್ರಾಹಕರು ತಮ್ಮ ಹಕ್ಕುಗಳನ್ನು ಅರಿತುಕೊಂಡು ಜವಾಬ್ದಾರಿಯುತವಾಗಿ ನಡೆದುಕೊಂಡರೆ ಮಾತ್ರ ವ್ಯವಹಾರದಲ್ಲಿ ನ್ಯಾಯ ಮತ್ತು ಸಮತೋಲನ ಉಳಿಯುತ್ತದೆ. ಉಲ್ಲೇಖಿಸಿದ ಈ 10 ಜವಾಬ್ದಾರಿಗಳು ಗ್ರಾಹಕರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತವೆ
*ಗ್ರಾಹಕರ ಜವಾಬ್ದಾರಿಗಳು ಕೆಳಕಂಡಂತಿವೆ:*
1. *ಹಕ್ಕುಗಳ ಬಗ್ಗೆ ಜಾಗೃತಿ (Awareness of Rights)*
* ಗ್ರಾಹಕರು ಸರಕು ಮತ್ತು ಸೇವೆಗಳನ್ನು ಖರೀದಿಸುವ ಸಂದರ್ಭದಲ್ಲಿ ತಮಗೆ ದೊರೆಯುವ ಹಕ್ಕುಗಳಾದ ಸುರಕ್ಷತೆ, ಮಾಹಿತಿ ಪಡೆಯುವ ಹಾಗೂ ಇತರೆ ಹಕ್ಕುಗಳ ಬಗ್ಗೆ ಸಂಪೂರ್ಣ ಜಾಗೃತಿಯನ್ನು ಹೊಂದಿರಬೇಕು.
2. *ಗುಣಮಟ್ಟದ ಅರಿವು (Quality conscious)*
* ಗ್ರಾಹಕರು ತಾವು ಸರಕುಗಳನ್ನು ಖರೀದಿಸುವ ಸಂದರ್ಭದಲ್ಲಿ ಗುಣಮಟ್ಟ ನಿರ್ಧರಿಸಿದ ಬಿ.ಐ.ಎಸ್, ಅಗ್-ಮಾರ್ಕ್, ಹಾಲ್-ಮಾರ್ಕ್, ಇತ್ಯಾದಿಗಳ ಬಗ್ಗೆ ಅರಿವನ್ನು ಹೊಂದಿರಬೇಕು.
3. *ದೂರು ನೀಡಲು ಸಿದ್ಧರಿರಬೇಕು (Ready to lodge complaint* )
* ಗ್ರಾಹಕರು ತಾವು ಖರೀದಿಸಿದ ಸರಕು ಅಥವಾ ಸೇವೆಗಳಲ್ಲಿ ನ್ಯೂನತೆಗಳಿದ್ದಲ್ಲಿ ಅದರ ಮೌಲ್ಯವನ್ನು ಪರಿಗಣಿಸದೇ ಸಂಬಂಧಿಸಿದ ಗ್ರಾಹಕ ನ್ಯಾಯಾಲಯದಲ್ಲಿ ದೂರನ್ನು ಸಲ್ಲಿಸಬೇಕಾದ ಜವಾಬ್ದಾರಿಯನ್ನು ಹೊಂದಿರುತ್ತಾರೆ.
4. *ತಪ್ಪು ಜಾಹೀರಾತುಗಳಿಂದ ದಿಕ್ಕು ತಪ್ಪಬಾರದು (Not to be misled by false advertisements)*
* ಸಾಮಾನ್ಯವಾಗಿ ಉತ್ಪಾದಕ/ಮಾರಾಟಗಾರ ಜಾಹೀರಾತಿನಲ್ಲಿ ತಪ್ಪು ಮಾಹಿತಿಗಳನ್ನು ನೀಡುವುದರ ಮೂಲಕ ಸರಕುಗಳ [ಗುಣಮಟ್ಟ]ವನ್ನು ವಾಸ್ತವಕ್ಕಿಂತ ಹೆಚ್ಚಾಗಿದೆಯೆಂದು ಬಿಂಬಿಸುತ್ತಾನೆ. ಆದರೆ, ಗ್ರಾಹಕರು ನೈಜ ಗುಣವನ್ನು ಪರಿಶೀಲಿಸಿ, ತಮ್ಮ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ತಪ್ಪು ಮಾಹಿತಿಯ ಜಾಹಿರಾತಿನಿಂದ ರಕ್ಷಣೆಯನ್ನು ಪಡೆಯುವ ಜವಾಬ್ದಾರಿಯನ್ನು ಹೊಂದಿರುತ್ತಾರೆ.
5. *ನಗದು ರಶೀದಿಗಾಗಿ ಬೇಡಿಕೆ (Demand for Cash memo* )
* ಗ್ರಾಹಕರು ತಾವು ಖರೀದಿಸಿದ ಸರಕು ಮತ್ತು ಸೇವೆಗಳ ಪುರಾವೆಗಾಗಿ ನಗದು [ರಶೀದಿ]ಯನ್ನು ಕೇಳಿ ಪಡೆಯಬೇಕಾದ ಜವಾಬ್ದಾರಿಯನ್ನು ಹೊಂದಿರುತ್ತಾನೆ. ಖರೀದಿದಾರ ನಗದು ರಶೀದಿಯನ್ನು ಅಪೇಕ್ಷಿಸದೇ ಇದ್ದರೂ ಅದನ್ನು ನೀಡುವುದು ಮಾರಾಟಗಾರನ ಆದ್ಯ ಕರ್ತವ್ಯವಾಗಿರುತ್ತದೆ.
6. *ಜಾಗೃತ ಬಳಕೆದಾರ (Cautious Consumer)*
* ಗ್ರಾಹಕರು ತಾವು ಸರಕು ಮತ್ತು ಸೇವೆಗಳನ್ನು ಖರೀದಿಸುವ ಸಂದರ್ಭದಲ್ಲಿ ಅದರ ಸ್ವಭಾವ, [ಬೆಲೆ] ತಯಾರಿಕೆಯ ಮತ್ತು ವಾಯಿದೆಯ ದಿನಾಂಕ, ಸರಕುಗಳನ್ನು ಉಪಯೋಗಿಸುವ ಬಗ್ಗೆ ನಿರ್ದೇಶನ ಮತ್ತು ಸರಕುಗಳನ್ನು ಉಪಯೋಗಿಸುವಾಗ ತೆಗೆದುಕೊಳ್ಳಬೇಕಾದ ಮುಂಜಾಗ್ರತೆಯ ಬಗ್ಗೆ ಜಾಗರೂಕರಾಗಿರಬೇಕಾಗುತ್ತದೆ.
7. *ಸರಕುಗಳ ಆಯ್ಕೆ (Selection of Goods)*
* ಗ್ರಾಹಕರು ಕಾನೂನುಬದ್ಧ ಸರಕು ಮತ್ತು ಸೇವೆಗಳನ್ನು ಖರೀದಿಸಬೇಕು. ಕಳ್ಳಸಾಗಾಣಿಕೆ, ಕಾಳಸಂತೆಯ ಸರಕುಗಳನ್ನು ಖರೀದಿಸಬಾರದು.
8. *ಗ್ರಾಹಕ ಸಂಘಟನೆ (Consumer organisation* )
* ಗ್ರಾಹಕರು ಉತ್ಪಾದಕ/ಮಾರಾಟಗಾರರ ಅನೈತಿಕ ವ್ಯಾಪಾರಿ ಪದ್ಧತಿಗಳಿಂದ ರಕ್ಷಣೆ ಪಡೆಯಲು ತಮ್ಮದೇ ಆದ ಗ್ರಾಹಕ ಸಂಘಟನೆಗಳನ್ನು ಸ್ಥಾಪಿಸಿಕೊಳ್ಳಬೇಕಾದ ಜವಾಬ್ದಾರಿಯನ್ನು ಹೊಂದಿರುತ್ತಾರೆ.
9. *ಪರಿಸರ ರಕ್ಷಣೆ (Protection of Environment)*
* ಗ್ರಾಹಕರು ಸಂಪನ್ಮೂಲಗಳನ್ನು ಅನುಪಯುಕ್ತಗೊಳಿಸದೇ [ಪರಿಸರ]ದ ಬಗ್ಗೆ ಗೌರವ ಹಾಗೂ ರಕ್ಷಣೆಯ ಜವಾಬ್ದಾರಿಯನ್ನು ಹೊಂದಿರುತ್ತಾರೆ.
10. *ಅವಸರದಲ್ಲಿ ಖರೀದಿಸಬಾರದು (Not to buy in hurry)*
* ಗ್ರಾಹಕರು ಅವಸರದಿಂದ ಯಾವುದೇ ಸರಕು ಮತ್ತು ಸೇವೆಯನ್ನು ಖರೀದಿಸಬಾರದು ಮತ್ತು ಖರೀದಿಸುವ ಸಂದರ್ಭದಲ್ಲಿ ಅವುಗಳ ಗುಣಮಟ್ಟ, ಪ್ರಮಾಣ, [ಬೆಲೆ], ಖರೀದಿಯ ಸಮಯ ಮುಂತಾದವುಗಳ ಬಗ್ಗೆ ಸುದೀರ್ಘವಾಗಿ ಯೋಚಿಸಿ ಖರೀದಿಸಬೇಕಾದ ಜವಾಬ್ದಾರಿಯನ್ನು ಹೊಂದಿರುತ್ತಾನೆ.
*ಉದಾಹರಣೆಗೆ* , ಗುಣಮಟ್ಟದ ಅರಿವು ಗ್ರಾಹಕರಿಗೆ ಉತ್ತಮ ಮತ್ತು ಸುರಕ್ಷಿತ ಉತ್ಪನ್ನಗಳನ್ನು ಆಯ್ಕೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಹಾಗೆಯೇ, ನಗದು ರಶೀದಿಗಾಗಿ ಬೇಡಿಕೆ ಎಂಬ ಜವಾಬ್ದಾರಿ ಭವಿಷ್ಯದಲ್ಲಿ ಏನೇನಾದರೂ ಸಮಸ್ಯೆಗಳು ಉಲ್ಬಣವಾದರೆ ಪುರಾವೆಯಾಗಿ ಉಪಯೋಗಿಸಬಹುದು.
ಅದರ ಜೊತೆಗೆ, ತಪ್ಪು ಜಾಹೀರಾತುಗಳಿಂದ ದಿಕ್ಕು ತಪ್ಪಬಾರದು ಎಂಬ ಅಂಶವು ಗ್ರಾಹಕರಿಗೆ ಎಚ್ಚರಿಕೆಯಿಂದ, ಮಾರಾಟಗಾರರ ಮೋಸವನ್ನು ತಪ್ಪಿಸುವಲ್ಲಿ ಸಹಕಾರಿ ಆಗುತ್ತದೆ.
ಗ್ರಾಹಕರು ತಮ್ಮ ಜವಾಬ್ದಾರಿಗಳನ್ನು ಸಮರ್ಪಕವಾಗಿ ಪಾಲಿಸಿದರೆ, ಅದು ಅವರ ಸ್ವಂತ ಹಿತಾಸಕ್ತಿ ಮಾತ್ರವಲ್ಲದೆ, ಸಮಾಜದ ಒಟ್ಟು ಅಭಿವೃದ್ಧಿಗೂ ಸಹಕಾರಿಯಾಗುತ್ತದೆ.
*ಪರಸ್ಪರ ನಿರಂತರ*