ಮಾನವತಾ ವೇದಿಕೆ

 ನಮ್ಮಿಂದ ನಮಗಾಗಿ ಎಂಬ ಧ್ಯೇಯ ವಾಕ್ಯದಿಂದ ವಿಭಿನ್ನ ವಿಚಾರದಿಂದ ತಲೆಯೆತ್ತಿದ ಸಮೂಹವೇ ನಮ್ಮ ಈ ಪರಸ್ಪರ ಮಾನವತಾ ವೇದಿಕೆ. ಸಮಾಜಮುಖಿ ಕಾರ್ಯಗಳಿಗೆ ಸದಾ ತನ್ನನ್ನು ಒಪ್ಪಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಈ ವೇದಿಕೆಯಿಂದ ತುಂಬಾ ಜನರಿಗೆ ಬಹಳ ಸಹಾಯಕಾರಿಯಾಗಿದೆ.

ಕಷ್ಟದಲ್ಲಿರುವವರಿಗೆ ಕೈ ಹಿಡಿದಿದೆ, ಅನಾರೋಗ್ಯದಲ್ಲಿರುವವರಿಗೆ ಸಹಾಯ ಮಾಡಿದೆ, ಪರಿಸರ ಸ್ನೇಹಿ ಪರಿಸರ ಕಾಳಜಿಯನ್ನು   ಮೈಗೂಡಿಸಿಕೊಂಡಿದೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಎಲೆಮರೆಕಾಯಿಯಂತೆ ತಮ್ಮ ಅನುಪಮ ಸೇವೆಯನ್ನು ಸಲ್ಲಿಸಿದ ಸಾಧಕರನ್ನು ಗುರುತಿಸಿದೆ. ಅಂಥವರನ್ನು ಸಮಾಜ ಗುರುತಿಸುವಂತೆ ಮಾಡಿದೆ.

ಭಿನ್ನವಿಭಿನ್ನವಾದ ವೇದಿಕೆಗಳನ್ನು ಹೊತ್ತು ತಂದು ಪ್ರತಿಯೊಂದು ವೇದಿಕೆ ಮೂಲಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದೆ.  ಗುಡಿ ಕೈಗಾರಿಕೆ, ಕರಕುಶಲ, ಕಲೆ, ಸಾಹಿತ್ಯ ಕಲೆ ಮುಂತಾದವುಗಳನ್ನು ಪ್ರೋತ್ಸಾಹಿಸಿ ಬೆಳೆಸಿದೆ. ತಾಯಿನಾಡು, ತಾಯಿ ಭಾಷೆ ಹೀಗೆ ನಾಡು-ನುಡಿಗಾಗಿ ಶ್ರಮಿಸಿದವರನ್ನು ಗುರುತಿಸಿ ಸನ್ಮಾನಿಸಿ ಪ್ರೋತ್ಸಾಹಿಸಿದೆ.

ವೇದಿಕೆಯಿಂದ ಬಡತನದಿಂದ ಬಳಲುವವರಿಗೆ, ನಿರಾಶ್ರಿತ-ನಿರ್ಗತಿಕರಿಗೆ, ಅನಾಥಾಶ್ರಮ, ವೃದ್ಧಾಶ್ರಮ, ವಿಕಲಚೇತನರಿಗೆ ನೆರವು ನೀಡುವುದು ಹಾಗೂ ಮಾರಕ ರೋಗಗಳಿಂದ ಬಳಲುವವರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ಸಹಾಯ ಮಾಡಿದೆ.

ಈ ವೇದಿಕೆಯಿಂದ ಸಮಾಜದ ಅಭಿವೃದ್ಧಿಗೆ ಸಂಬಂಧಪಟ್ಟ ಇಲಾಖೆಗಳಾದ ಸಮಾಜ ಕಲ್ಯಾಣ ಇಲಾಖೆಯ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯಿತಿ, ಶಿಕ್ಷಣ ಇಲಾಖೆ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ನೀರಾವರಿ ಇಲಾಖೆ ಇನ್ನಿತರ ಸರ್ಕಾರಿ ಇಲಾಖೆಗಳ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿದೆ.

.

ಪರಸ್ಪರ

ನಮ್ಮ ಪರಸ್ಪರ ಸಮೂಹ ಇರುವುದೇ ಸಮಾಜಮುಖಿ ಸೇವೆಯನ್ನು ಮಾಡುತ ಸ್ವಾವಲಂಬಿಗಳನ್ನಾಗಿ ಮಾಡುವುದು ಅದುವೇ ನಮ್ಮಿಂದ ನಮಗಾಗಿ ಎಂಬ ಧ್ಯೇಯ ವಾಕ್ಯದಿಂದ ವಿಭಿನ್ನ ವಿಚಾರದಿಂದ ತಲೆಯೆತ್ತಿದ ಸಮೂಹ.

ನಮ್ಮ ಸಂಪರ್ಕಗಳು