ಈಶ್ವರಲಿಂಗ ಆರೇರ,

ಈಶ್ವರಲಿಂಗ ಆರೇರ,

ಬಿ.ಎ. (ಜನಪದ ಸಾಹಿತ್ಯ/ಅಪರಾಧಶಾಸ್ತ್ರ)

ಮೂಲತಃ ವಿಜಯಪುರ ಜಿಲ್ಲೆಯ ಶಿವಶರಣ ಶ್ರೀ ನೂಲಿ ಚಂದಯ್ಯನವರ ಹುಟ್ಟೂರಾದ ಶಿವಣಗಿಯವನು...

ಜನನ: 17-4-1978

ಮನೆಗೆ ಹಿರಿಯವನು, ಐದು ಜನ ತಂಗಿಯರು, ಒಬ್ಬ ತಮ್ಮ

ಶಾಲೆ : 1-10ರವೆಗೆ ಹುಟ್ಟೂರಾದ ಶಿವಣಗಿಯಲ್ಲಿ...

ಪಿಯುಸಿಯಿಂದ ಪದವಿ (ಅಪರಾಧಶಾಸ್ತ್ರ & ಜನಪದ ಸಾಹಿತ್ಯ) ವರೆಗೆ ಸಿಂದಗಿಯಲ್ಲಿ..

1997ರಲ್ಲಿ ಪದವಿ ಅರ್ಧದಲ್ಲೆ ಬಿಟ್ಟು ರಾಯಚೂರಿನ ಸರ್ಕಾರಿ ಐ.ಟಿ.ಐ.ನಲ್ಲಿ ಎರಡು  ವರ್ಷ ಮಶಿನಿಷ್ಟ ಟ್ರೇಡನಲ್ಲಿ ಸಂಸ್ಥೆಗೆ ಪ್ರಥಮರಾಗಿ *ಬೆಸ್ಟ ಟ್ರೇನಿ* ಅವಾರ್ಡ ಪಡೆದು ಮುಂದೆ ಮೂರು ವರ್ಷಗಳ ಕಾಲ ಬೆಂಗಳೂರಿನ ಹಲವಾರು ಪ್ರತಿಷ್ಠಿತ ಕಂಪೆನಿಗಳಲ್ಲಿ ಕೆಲಸನಿರ್ವಹಿಸಿ 2002ರಲ್ಲಿ ಗುರುಗ್ರಾಮದ (ನವದೆಹಲಿ ಹತ್ತಿರದ) ಅಂತಾರಾಷ್ಟ್ರೀಯ ದ್ವಿಚಕ್ರ ವಾಹನ ತಯಾರಿಸುವ ಕಂಪೆನಿಯಾದ ಹೋಂಡಾದಲ್ಲಿ 20ವರ್ಷ ಟೀಮ್ ಲೀಡರ್ ಆಗಿ ಸೇವೆ ಸಲ್ಲಿಸಿ 2021ರ ನವೆಂಬರ್ ನಿಂದ  ತಮ್ಮ ಸ್ವಂತೂರಿನಲ್ಲಿ ಗ್ರಾಹಕ ಸೇವಾ ಕೇಂದ್ರ(CSC)ಯೊಂದನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.

ಇನ್ನು ಕನ್ನಡ ಸಾಹಿತ್ಯದ ಬಗ್ಗೆ ಮೊದಲಿಂದಲೂ ಆಸಕ್ತಿ ಭಾಷಾಭಿಮಾನ ಇರುವವನು ಜೊತೆಗೆ ಚಿಕ್ಕವನಿದ್ದಾಗ ಅಂದರೆ ೬ನೆಯ ತರಗತಿಯಲ್ಲಿದ್ದಾಗ ಹಿರಿಯರಿಗಾಗಿ ರಾತ್ರಿ ಶಾಲೆಯ ಕುರಿತು ಮತ್ತು ಸಾಕ್ಷರತೆಯ ಅರಿವು ಮೂಡಿಸಲೆಂದು *ಅನಕ್ಷರಸ್ಥ* ಅನ್ನೋ ಮಕ್ಕಳ ನಾಟಕ (ಸ್ವರಚಿತ) ಬರೆದು ನಾಟಕವಾಡಿದ್ದು ಮರೆಯದ ನೆನಪು..

ಇನ್ನು ಸಮಯ ಸಿಕ್ಕಾಗಲೆಲ್ಲಾ ಚುಟುಕು ಕವನ ಕಥೆ ಬರೆಯುವ ಹವ್ಯಾಸಿ ಕನ್ನಡಿಗ....

 

ಅವರ ಕಿರುಸಾಹಿತ್ಯಗಳಾದ ಕವನ,ಕಥೆ, ಕಿರು ಕಾದಂಬರಿಗಳಿಗೆ ಮೆಚ್ಚಿ ಹಲವಾರು  ಪ್ರಶಸ್ತಿಗಳು (ಅಂತರ್ಜಾಲವೂ ಸೇರಿ) ಮುಡಿಗೇರಿದ್ದು ವಿಶೇಷವೂ ಹೌದು.

 

ಇನ್ನು 2021ರ ನವಂಬರ್ ನಲ್ಲಿ ಚಿಕ್ಕ ಶೆಡ್ ಒಂದರಲ್ಲಿ ಪ್ರಾರಂಭಗೊಂಡ ಇವರ  ಜೀವನದ ಇನ್ನೋಂದು ಹಂತವೆಂದರೆ CSC VLE ಆಗಿ ಪಯಣ ನಂತರದ ದಿನಗಳಲ್ಲಿ ಸುಮಾರು ಒಂದೆರಡು ವರ್ಷ ಕಳೆದರೂ ಸಿಎಸ್ಸಿಯಲ್ಲಿ ಯಾವುದೇ ಲಾಭ ಕಾಣದೇ ಹೋದಾಗ, ಇನ್ನೇನು ಮುಚ್ಚಬೇಕು ಇಲ್ಲ ಬೇರೆ ಉದ್ಯಮವನ್ನು ಪ್ರಾರಂಭಿಸಬೇಕು ಅನ್ನೋ ತಳವಳದಲ್ಲಿದ್ದಾಗಲೇ (ಸಾಯುವ ಕೊನೆ ಕ್ಷಣದಲ್ಲಿ ಜೀವ ಜಲ ಸಿಕ್ಕ ಹಾಗೆ)  ಕೊಡಗಿನ ಕುವರ ಶ್ರೀ ಮಿಥುನವರು ಇವರಿಗೆ ಪರಸ್ಪರದ ಸ್ನೇಹವನ್ನು ದೊರಕಿಸಿ ಕೊಟ್ಟರು. ಇದರಿಂದ ಇವರ ಜೀವನ  ಅಲ್ಲಿಂದ ಇಲ್ಲಿಯವರೆಗೂ ಸುಮಾರು ಎರಡುವರೆ ವರ್ಷಗಳ ಪರಸ್ಪರದ ನಂಟಿನಲ್ಲಿ ತಮ್ಮ ಅಂಟನ್ನು ಬೆರೆಸಿ ಪರಸ್ಪರೊಂದಿಗೆ ಬೆರೆತು ಹೋಗಿದ್ದಾರೆ ಇವರು ಕೇವಲ ಬೆರೆತು ಹೋಗದೆ ಪರಸ್ಪರದ ಹಲವಾರು ಸೇವೆಗಳನ್ನು ಬಳಸಿಕೊಂಡು, ಅಸಾಯಕರಿಗೆ ಸಹಾಯಕನಾಗಿ, ಹಲವರಿಗೆ ನಾಯಕನಾಗಿ ಅಷ್ಟೇ ಯಾಕೆ  ತಮ್ಮ ಕುಟುಂಬಕ್ಕೆ ಪರಸ್ಪರದಿಂದ ಒಂದೊಳ್ಳೆ ಆದಾಯವನ್ನು ಕೂಡ ಹೆಚ್ಚಿಸಿಕೊಂಡಿದ್ದಾರೆಂದು ಹಲವಾರು ಬಾರಿ ಇವರ ಮಾತಿನಿಂದಲೇ ನಾವು ಅರಿತಿದ್ದೇವೆ ಹಾಗಾಗಿ ಪರಸ್ಪರ

ನಿತ್ಯ ನಿರಂತರ,

ಜೀವನಕ್ಕೆ ಜೀವ ಜಲ💧💧