ನಮ್ಮ ಪರಸ್ಪರ ಮಾನವತಾ ವೇದಿಕೆ

ನಮ್ಮಿಂದ ನಮಗಾಗಿ ಎಂಬ ಧ್ಯೇಯ ವಾಕ್ಯದಿಂದ ವಿಭಿನ್ನ ವಿಚಾರದಿಂದ ತಲೆಯೆತ್ತಿದ ಸಮೂಹವೇ ನಮ್ಮ ಈ ಪರಸ್ಪರ ಮಾನವತಾ ವೇದಿಕೆ.   ಸಮಾಜಮುಖಿ ಕಾರ್ಯಗಳಿಗೆ ಸದಾ ತನ್ನನ್ನು ಒಪ್ಪಿಕೊಂಡು ಕಾರ್ಯನಿರ್ವಹಿಸುತ್ತಿರುವ ಈ ವೇದಿಕೆಯಿಂದ ತುಂಬಾ ಜನರಿಗೆ ಬಹಳ ಸಹಾಯಕಾರಿಯಾಗಿದೆ.ಕಷ್ಟದಲ್ಲಿರುವವರಿಗೆ ಕೈ ಹಿಡಿದಿದೆ, ಅನಾರೋಗ್ಯದಲ್ಲಿರುವವರಿಗೆ ಸಹಾಯ ಮಾಡಿದೆ, ಪರಿಸರ ಸ್ನೇಹಿ ಪರಿಸರ ಕಾಳಜಿಯನ್ನು ಮೈಗೂಡಿಸಿಕೊಂಡಿದೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಎಲೆಮರೆಕಾಯಿಯಂತೆ ತಮ್ಮ ಅನುಪಮ ಸೇವೆಯನ್ನು ಸಲ್ಲಿಸಿದ ಸಾಧಕರನ್ನು ಗುರುತಿಸಿದೆ. ಅಂಥವರನ್ನು ಸಮಾಜ ಗುರುತಿಸುವಂತೆ ಮಾಡಿದೆ