ಪರಸ್ಪರ ಸಂಕೇತಗಳು
*ಪರಸ್ಪರ ಸಂಕೇತ ಉಪಾಯಗಳು*
1. ಪರಸ್ಪರ ಒಬ್ಬರಿಗೊಬ್ಬರು ಪರಿಚಯವಿಲ್ಲದಂತಹ ನಿಮ್ಮ ಸ್ನೇಹಿತರ ಒಂದು ಔತಣ ಕೂಟವನ್ನು ಏರ್ಪಡಿಸಿರಿ.
2. ನಿಮಗೆ ಅಷ್ಟೇನು ಚೆನ್ನಾಗಿ ಗೊತ್ತಿಲ್ಲದ, ಆದರೆ ಅವರು ನಿಮ್ಮ ಒಳ್ಳೆಯ ಸ್ನೇಹಿತರಾಗಬಹುದು ಎಂದು ನಿಮಗೆ ಅನ್ನಿಸುವ ಒಬ್ಬರ ಜೊತೆಗೆ ಕಾಫಿ ಅಥವಾ ಚಹಾ ಸೇವನೆಗೆ ಒಂದೆಡೆ ವ್ಯವಸ್ಥೆ ಮಾಡಿ. ಈ ರೀತಿ ಬೇಟೆಯಿಂದ ಆತ ನಿಮಗೆ ಒಳ್ಳೆಯ ಸ್ನೇಹಿತನ ಆಗಿ ಬಿಡಬಹುದು ಯಾರಿಗೆ ಗೊತ್ತು.
3. ನೀವು ಸಾಮಾನ್ಯವಾಗಿ ಓದಲು ಹೋಗದ ವಿಭಾಗ ಅಥವಾ ವಿಷಯ ಕುರಿತು ಒಂದು ಪುಸ್ತಕ ಓದಿರಿ.
4. ಯಾವುದಾದರೂ ಒಂದು ಹೊಸ ವಿಷಯವನ್ನು ಅಧ್ಯಯನ ಮಾಡಿರಿ. ಬೇರೆ ಯಾವುದಾದರೂ ಜ್ಞಾನವನ್ನು ಗಳಿಸಲು ಪ್ರಾರಂಭಿಸಿ ಅಥವಾ ಕೌಶಲಗಳಿಗಾಗಿ ಪ್ರಯತ್ನಿಸಿ.
5. ನೀವು ಹಿಂದೆ ಎಂದಿಗೂ ಮಾಡಿರದ ಯಾವುದಾದರೂ ಒಂದು ಕೆಲಸ ಮಾಡಿರಿ.
6. ಆದಷ್ಟು ಸಲ ಪ್ರವಾಸ ಮಾಡಿ. ಸ್ನೇಹಿತರೊಡಗೂಡಿ ಪ್ರವಾಸ ಮಾಡುವುದು ಉತ್ತಮ ಅಥವಾ ನಿಮ್ಮನ್ನು ಸ್ಥಳೀಯ ಜಾಗಗಳಲ್ಲಿ ಪರಿಚಯ ಮಾಡಿಸಬಲ್ಲ ನಿಮಗೆ ಗೊತ್ತಿರುವ ಜನಗಳಿರುವ ಜಾಗಕ್ಕೆ ಪ್ರವಾಸ ಮಾಡುವುದು ಕೂಡ ಉತ್ತಮ.
7. ಚಿಕ್ಕ ಚಿಕ್ಕ ಪ್ರಯಾಣಗಳಲ್ಲಿ ಕಾರು ಅಥವಾ ಸಾರ್ವಜನಿಕ ಸಾರಿಗೆ ಬದಲು ನಡೆದಾಡಿಕೊಂಡು ಹೋಗಲು ಹೆಚ್ಚು ಒತ್ತು ಕೊಡಿ ಮತ್ತು ನಿಮ್ಮ ಸುತ್ತಮುತ್ತ ಇರುವುದು ಚೆನ್ನಾಗಿ ಗಮನಿಸಿ ಕಣ್ತುಂಬಿಕೊಳ್ಳಿ.
8. ನೀವು ಇದುವರೆಗೆ ಹೋಗಿಯೇ ಇಲ್ಲದ ಜಗಕ್ಕೆ ಅಥವಾ ಹೋಟೆಲಿಗೆ ಹೋಗಿ
9. ನಿಮ್ಮ ಕೆಲಸ ಜಾಗವನ್ನು ತಲುಪಲು ಸಾಧ್ಯವಾದಷ್ಟು ಬೇರೆ ಬೇರೆ ದಾರಿಗಳನ್ನು ಅನುಸರಿಸುವ ರೂಡಿ ಮಾಡಿಕೊಳ್ಳಿ.
10. ನೀವು ಸಾಮಾನ್ಯವಾಗಿ ಯಾರಿಗೆ ಸಹಾಯ ಮಾಡಲು ಬಯಸಿದಲ್ಲವೋ ಅಂತಹವರಿಗೆ ಸಹಾಯ ಹಸ್ತ ಮಾಡಿ.
11. ನೀವು ಸಾಮಾನ್ಯವಾಗಿ ಯಾವುದನ್ನು ಮಾಡಲು ಸಹಾಯ ಕೋರುವುದಿಲ್ಲವೋ ಅಂತಹದೇನಾದರೂ ಮಾಡುವಾಗ ಸಹಾಯ ಕೋರಿರಿ.
ಪ್ರತಿಯೊಬ್ಬರೂ ಈ ಸಂಕೇತವನ್ನು ಅಳವಡಿಸಿಕೊಂಡರೆ ಪರಸ್ಪರದಲ್ಲಿ ಒಳ್ಳೆಯ ವ್ಯಕ್ತಿಗಳನಾಗುತ್ತಿರಿ
ಪರಸ್ಪರ ನಿರಂತರ
🌻ಎಂ ಶಾಂತಪ್ಪ ಬಳ್ಳಾರಿ 🌻