ಸ್ವಾವಲಂಬಿ ವಿಭಾಗ

ಸ್ವಾವಲಂಬಿ ಮುಖಾಂತರ ಮಾನಸಿಕವಾಗಿ, ಆರ್ಥಿಕವಾಗಿ ಹೇಗೆ ಪ್ರಬಲರನ್ನಾಗಿಸುವುದು ಎಂಬುದನ್ನು ತಿಳಿಸಿ, ಹೊಸ ಯೋಜನೆಗಳನ್ನು ಹೊತ್ತು ತಂದು ಪರಸ್ಪರ ಸದಸ್ಯರಿಗೆ ಬೆನ್ನೆಲುಬಾಗಿ ನಿಲ್ಲುವುದು, ವೃತ್ತಿ ಕೌಶಲ್ಯಗಳನ್ನು ಹೊಂದಿದ್ದು ಆರ್ಥಿಕವಾಗಿ ಕಷ್ಟದಲ್ಲಿರುವವರಿಗೆ ಸಹಾಯ ಹಸ್ತದ ನೆರವು ನೀಡಿ ಅವರಿಗೆ ಜೀವನೋಪಾಯ ಕಲ್ಪಿಸುವ ವ್ಯವಸ್ಥೆ ಹಾಗೂ ಸರ್ಕಾರದ ವಿವಿದ ಯೋಜನೆಗಳ ಫಲಾನುಭವಿಗಳಾಗಿಸುವ ನಿಟ್ಟಿನಲ್ಲಿ ಇಷ್ಟೆಲ್ಲಾ ಭರವಸೆ ದೊರಕಿದ ಮೇಲೆ ನಮಗೆ ಖಂಡಿತವಾಗಿಯೂ ಇನ್ನು ಹೆಚ್ಚಿನ ಸೇವೆಗಳನ್ನ ನೀಡಬಹುದು ಎಂಬ ದೃಢವಾದ ಮನೋಸ್ಥೈರ್ಯ ಮೂಡುತ್ತದೆ, ಅದಕ್ಕೆ ಅಗತ್ಯವಿರುವ ಹೂಡಿಕೆಯನ್ನು ಸ್ವಾವಲಂಬಿ ಮುಖಾಂತರ ಆರ್ಥಿಕ ಬೆಂಬಲವನ್ನು ಕೂಡ ಪರಸ್ಪರ ನೀಡುತ್ತದೆ.

ಸಮಾಜದಲ್ಲಿನ ಹಲವು ಕಟ್ಟುಪಾಡುಗಳು, ಅಚಾರ- ವಿಚಾರಗಳಿಂದ ಮಹಿಳೆಯರಿಗೆ ಅನಾನುಕೂಲ ಆಗಿರುವುದೇ ಹೆಚ್ಚು. ಇದರಿಂದ ಪಾರಾಗಲು ಮಹಿಳೆಯರು ಸ್ವಾವಲಂಬನೆಯ ಬದುಕನ್ನು ಕಟ್ಟಿಕೊಳ್ಳಬೇಕು. ಅವರನ್ನು ಸಬಲೀಕರಣದ ಹಾದಿಯಲ್ಲಿ ತರುವುದು ಕರ್ತವ್ಯ.

ಹೆಚ್ಚಾಗಿ ಮಹಿಳೆಯರು ಸಂಸ್ಕೃತಿ, ಆಚಾರ ವಿಚಾರವನ್ನು ಉಳಿಸಿ ಬೆಳೆಸುವ ಮಹತ್ವದ ಜವಾಬ್ದಾರಿ ಹೊಂದಿದ್ದಾರೆ.  ಈಗ ಎಲ್ಲಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಮುದಾಯವು ಸಂಕುಚಿತ ಭಾವನೆ ಇಲ್ಲದೇ ಸಮಾಜದ ಎಲ್ಲಾ ವರ್ಗದೊಂದಿಗೆ ಸಮಾನ ಭಾವನೆ ಹೊಂದ ಬೇಕಾಗಿದೆ.

.

ಪರಸ್ಪರ

ನಮ್ಮ ಪರಸ್ಪರ ಸಮೂಹ ಇರುವುದೇ ಸಮಾಜಮುಖಿ ಸೇವೆಯನ್ನು ಮಾಡುತ ಸ್ವಾವಲಂಬಿಗಳನ್ನಾಗಿ ಮಾಡುವುದು ಅದುವೇ ನಮ್ಮಿಂದ ನಮಗಾಗಿ ಎಂಬ ಧ್ಯೇಯ ವಾಕ್ಯದಿಂದ ವಿಭಿನ್ನ ವಿಚಾರದಿಂದ ತಲೆಯೆತ್ತಿದ ಸಮೂಹ.

ನಮ್ಮ ಸಂಪರ್ಕಗಳು