ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ನೋಬಲ್ ಇನ್ಸಿಟ್ಯೂಟ್ ಆಫ್ ಎಜುಕೇಷನ್ ಸೋಸೈಟಿಯಲ್ಲಿ 5 ವರ್ಷದ ಅನುಭವ ಪಡೆದುಕೊಂಡು ರಾಯಚೂರು ಜಿಲ್ಲೆ ದೇವದುರ್ಗ ತಾಲೂಕ ಗಟ್ಟೂರು ಗ್ರಾಮದಲ್ಲಿ ಗುರುದೀಪ ಹೊಂಬೆಳಕು ಕಂಪ್ಯೂಟರ್ ತರಬೇತಿ ಎಂಬ ಹೆಸರಿನ ಒಂದು ಸಂಸ್ಥೆಯನ್ನು ಡಿಸೆಂಬರ್ 14 2018 ರಲ್ಲಿ ಪ್ರಾರಂಭಿಸಲಾಯಿತು. ಹೇಳಿಕೊಳ್ಳವಷ್ಟು ದೊಡ್ಡ ಗ್ರಾಮ ಇದಲ್ಲ ಒಂದು ಹೋಬಳಿ ಹಂತದಲ್ಲಿ ಗ್ರಾಮೀಣ ಮಕ್ಕಳು ಕಂಪ್ಯೂಟರ್ ಕಲಿಯಲು ರಾಯಚೂರು ಪಟ್ಟಣಕ್ಕೆ ಹೋಗಬೇಕು, ಹೋಗಲು ಆದಗೆ ತುಂಬಾ ವಿದ್ಯಾರ್ಥಿಗಳು ಕಂಪ್ಯೂಟರ್ ಶಿಕ್ಷಣ ಪಡೆಯಲು ವಂಚಿತರಾಗುವರು ಎಂದು ಭಾವಿಸಿ ಮಕ್ಕಳಿಗೆ ಸಹಾಯವಾಗಲಿ ಎಂದು ಹೊಂಬೆಳಕು ಕಂಪ್ಯೂಟರ್ ತರಬೇತಿ ಪ್ರಾರಂಭಿಸಿದರು. ಪ್ರಾರಂಭದಲ್ಲಿ ಕೇವಲ 10 ವಿದ್ಯಾರ್ಥಿಗಳಿಗೆ ಕಲಿಸಲು ಪ್ರಾರಂಭಿಸಿ 5 ವರ್ಷದಲ್ಲಿ ಸುಮಾರು 2000 ಕ್ಕೂ ಹೆಚ್ಚು ಜನರಿಗೆ ತರಬೇತಿ ನೀಡಿದ್ದಾರೆ. ಅದರ ಜೊತೆಗೆ ಸುತ್ತಮುತ್ತಲಿನ ಎಲ್ಲಾ ಖಾಸಗಿ ಶಾಲೆಗಳಿಗೆ ಕಂಪ್ಯೂಟರ್ ಆಪರೇಟರ್ ಆಗಿ ಹಲವು ವಿದ್ಯಾರ್ಥಿಗಳನ್ನು ತಯಾರುಮಾಡಿ ಅವರ ಜೀವನಕ್ಕೆ ದಾರಿದೀಪವಾಗಿದ್ದಾರೆ. ಅದೇಷ್ಟೋ ಮಕ್ಕಳಿಗೆ ಪಾವತಿಸಲು ಶುಲ್ಕ ವಿಲ್ಲ ಎಂದಾಗ ಅಂತಹ ಮಕ್ಕಳಿಗೆ ಉಚಿಯವಾಗಿ ಕಂಪ್ಯೂಟರ್ ತರಬೇತಿ ನೀಡಿದ್ದಾರೆ ಜೊತೆಗೆ ಸಿ.ಎಸ್.ಸಿ ಕೇಂದ್ರ ಪ್ರಾರಂಭಿಸಿ ಅದರಲ್ಲಿ ಬರುವ PMG Disha ಯೋಜನೆಯ ಅಡಿಯಲ್ಲಿ ಸರಿಸುಮಾರು 500 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಿದ್ದಾರೆ.
