ಪರಸ್ಪರ ಕೀಲಿ ಕೈ

🌻ಎಂ ಶಾಂತಪ್ಪ ಬಳ್ಳಾರಿ🌻

 

ನಮ್ಮ ಜೀವನದಲ್ಲಿ ಜೀವಿಸಲು ಇರುವ 35 ಪರಸ್ಪರ ಕಿಲುಕೈ

 

1. ಶೇ.10ರಷ್ಟು ಉತ್ತಮಗೊಳ್ಳಲು ನೀವು ಗುರಿ ಇಡುವಿರಾದರೆ, ಶೇ.100 ರಷ್ಟು ಉತ್ತಮಗೊಳ್ಳಲು ನಿಮಗೆ ಏನು ಅಗತ್ಯವಿದೆ ಎಂಬುದನ್ನು ವಿಚಾರ ಮಾಡಿ ಪರಿಗಣಿಸಿ.

 

2. ನಿಮ್ಮ ದೈನಂದಿನ ಕಾರ್ಯಸೂಚಿಯಲ್ಲಿ ಕಡೇ ಪಕ್ಷ 'ಅಸಾಧ್ಯತೆ' ಎಂಬ ವರ್ಗಕ್ಕೆ ಸೇರುವ ಒಂದು ಕಾರ್ಯವನ್ನು ಸೇರಿಸಿಕೊಳ್ಳಿ.

 

3. ನೀವು ಏನನ್ನು ಮಾಡಬೇಕೆಂದುಕೊಂಡಿದ್ದೀರೋ ಅದರಲ್ಲಿ ತಾಳ್ಮೆ ಮತ್ತು ಅವಿರತ ಪರಿಶ್ರಮವನ್ನು ಅಭ್ಯಾಸ ಮಾಡಿ.

 

4. ಒಂದು ಹೊಸ ಮತ್ತು ಧನಾತ್ಮಕ ಅಭ್ಯಾಸವನ್ನು ಆಚರಣೆಗೆ ತರಲು ಇಪ್ಪತ್ತೊಂದು ದಿನಗಳನ್ನು ಮುಡಿಪಾಗಿರಿಸಿ.

 

5. ನೀವು ಏನನ್ನು ಮಾಡುತ್ತಿದ್ದೀರೋ ಅದರ ಬಗ್ಗೆ ನಿಮ್ಮ ನಂಬಿಕಸ್ಥರಿಂದ ಆಗಾಗ ಪ್ರತಿಕ್ರಿಯೆ/ಅಭಿಪ್ರಾಯ(feedback) ಪಡೆಯಿರಿ.

 

6. ನಿಮ್ಮ ಹಂಬಲವನ್ನು ಸಾಧಿಸುವುದರಲ್ಲಿ ನಿಮಗೆ ಮಾರ್ಗದರ್ಶಿಯಾಗಲು ಒಬ್ಬ 'ಅನುಭವಶಾಲಿ ಸಲಹೆಗಾರರನ್ನು ಕಂಡುಕೊಳ್ಳಿರಿ.

 

7. ನಿಮ್ಮ ಮುಂದಿನ ಯೋಜನೆಗೆ ನಿಮಗೆ ಏನು ಇಷ್ಟವಾಗುತ್ತದೋ ಅದನ್ನು ಅನುಕರಿಸಿ ಮತ್ತು ಉತ್ತಮಗೊಳಿಸಿಕೊಳ್ಳಿರಿ.

 

8. ನಿಮಗೇನು ಇಷ್ಟವಾಗುತ್ತದೆ ಎಂಬುದನ್ನು ಅರಿತುಕೊಳ್ಳಲು, ತೆಗೆದು ಹಾಕುವ ಪ್ರಕ್ರಿಯೆಯ ಮೂಲಕ ನಿಮಗೆ ಏನು ಇಷ್ಟವಾಗುವುದಿಲ್ಲವೋ ಅದನ್ನು ಗುರುತಿಸಿರಿ.

 

9. ನೀವು ಬಲಪಡಿಸಲಿಚ್ಛಿಸುವ ಯಾವುದಾದರೂ ಒಂದು ಸದ್ಗುಣವನ್ನು ಪ್ರತಿವಾರವೂ ಉತ್ತಮಪಡಿಸುತ್ತಾ ಹೋಗಿ.

 

10. ನಿಮ್ಮ ಹಂಬಲ, ತೀವ್ರ ಆಸಕ್ತಿಯ ವಿಷಯವನ್ನು ಚೆನ್ನಾಗಿ ಕಲಿಯಲು ಮತ್ತು ಜೊತೆಜೊತೆಗೆ ಉತ್ತಮಪಡಿಸಲು ಅದನ್ನು ಸಮಾನ ಮನಸ್ಕರ ಜತೆ ಹಂಚಿಕೊಳ್ಳಿ

 

11. ನಿಮ್ಮ ಹಿತವಲಯದಿಂದ ಆಚೆಗೆ ಬಂದು ಹೊಸಹೊಸ ಎಲ್ಲೆ, ಸೀಮೆಗಳನ್ನು ಅನ್ವೇಷಿಸಿರಿ.

 

12. ತುರ್ತು ವಿಷಯಗಳಿಗೂ ಮುಂಚೆಯೇ ಗಮನ ಕೊಡಬೇಕಾದ ಮುಖ್ಯ ವಿಷಯಗಳಿಗೆ ಆದ್ಯತೆ ನೀಡಿ.

 

13. ನಿಮ್ಮ ಜೀವನದಲ್ಲಿ ಯಾವುದು ಅತ್ಯಗತ್ಯವಲ್ಲ, ಅಂತೆಯೇ, ಅರ್ಹವಾದುದಲ್ಲವೆನಿಸಿದರೆ ಅದನ್ನು ಪಕ್ಕಕ್ಕೆ ಸರಿಸಿರಿ.

 

14. ನಿಮ್ಮ ಯೋಜನೆಗೆ, ಅದು ನಿಮ್ಮನ್ನು ಕಾರ್ಯಕ್ಕೆ ಪ್ರೇರೇಪಿಸುವಂತಹ ಒಂದು ಒಳ್ಳೆಯ ಹೆಸರು ಕೊಡಿ.

 

15. ನಿಮ್ಮ ಬಾಲ್ಯದ ದಿನಗಳ ಮೌಲ್ಯಗಳನ್ನು ಮತ್ತು ಕನಸುಗಳನ್ನು ಮರಳಿ ಪಡೆಯಿರಿ.

 

16. ನಿಮ್ಮ ಜೀವನದ 'ಮಹಾನ್ ಜಯಪ್ರದ ಕ್ಷಣಗಳನ್ನು' ಮರುಜ್ಞಾಪಿಸಿಕೊಳ್ಳುವ ಮೂಲಕ ನಿಮ್ಮನ್ನು ನೀವೇ ಪ್ರೇರೇಪಿಸಿಕೊಳ್ಳಿರಿ.

 

17. ನಿಮ್ಮ ಉತ್ಕೃಷ್ಟ ಮಟ್ಟದ ಸ್ನೇಹಿತರುಗಳನ್ನು ಗುರುತಿಸಿ ಮತ್ತು ಅವರಿಗೆ ತಕ್ಕುದಾದ ಗಮನವನ್ನು ನೀಡಿ.

 

18. ನಿಮ್ಮ ಪ್ರಸಕ್ತ ಕಾಲವನ್ನು ಅರ್ಥೈಸಲು ಅನುವಾಗುವಂತೆ ನಿಮ್ಮ ಭೂತಕಾಲದ ಬಿಟ್ಟು ಹೋದ ಚುಕ್ಕೆ/ಬಿಂದುಗಳನ್ನು ಸೇರಿಸುತ್ತಾ ಹೋಗಿರಿ.

 

19. ಕಂಪ್ಯೂಟರ್, ಟೆಲಿವಿಷನ್ ಪರದೆ-ಮುಕ್ತ ಹಾಗೂ ವರ್ಚುಯಲ್ ಜೀವನಮುಕ್ತವಾದ ಕಾಲದ ಅವಧಿಯನ್ನು ಸ್ಥಾಪಿಸಿಕೊಳ್ಳಿ, ಅಂದರೆ ಅವುಗಳ ಗೋಜಲು, ಗದ್ದಲ ಇಲ್ಲದ ಮುಕ್ತ ವೇಳೆಯನ್ನು ನಿಮಗಾಗಿ ಉಳಿಸಿಕೊಳ್ಳಿ.

 

20. ನಿಮ್ಮ ಊಟದ ವೇಳೆಯನ್ನು ನಿಮಗಾಗಿ ಮತ್ತು ವಿಶ್ರಾಂತಿಯ ವೇಳೆಯನ್ನು ನಿಧಾನಗತಿಯ ಜೀವನ'ದ ಒಂದು ಭಾಗವಾಗಿಸಿಕೊಳ್ಳಿ.

 

21. ಅತ್ತ-ಇತ್ತ ಪಥ ಬದಲಾಯಿಸಲು ಹೋಗದೆ, ಒಂದು ಸಲಕ್ಕೆ ಕೇವಲ ಒಂದೇ ಕೆಲಸ ಮಾಡಿ. ಅಂದರೆ ಏಕಕಾಲಕ್ಕೆ ಹಲವು ಕೆಲಸಗಳು (Multi-tasking) ಬೇಡ ಅಂತ.

 

22. ಪ್ರತಿದಿನವೂ ಕನಿಷ್ಠ ಐದು ನಿಮಿಷವಾದರೂ ವೈಯಕ್ತಿಕವಾದ ವಿಷಯವನ್ನೇನಾದರೂ ಬರೆಯಿರಿ.

 

23. ನಿಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಸಲುವಾಗಿಯಾದರೂ 'ಹೈಕು' (Haiku) ಕವನ ಬರೆಯುವ ಕಲೆ ಕೈಗೆತ್ತಿಕೊಳ್ಳಿ.

 

24. ನಿಮ್ಮ ಜೀವನದ ಈ ಕಾಲಘಟ್ಟದಲ್ಲಿ ನಿಮಗೆ ಅಗತ್ಯವಿರುವ ನಿಷ್ಕರ್ಷಕ/ ನಿರ್ಣಾಯಕ (crucial) ತೀರ್ಮಾನಗಳನ್ನು ತೆಗೆದುಕೊಳ್ಳಿ.

 

25. ನಿಮಗೆ ಉತ್ತರ ಹೊಳೆಯದ ಪ್ರಶ್ನೆಗಳೇನಾದರೂ ನಿಮ್ಮಲ್ಲಿ ಇನ್ನೂ ಉಳಿದಿದ್ದರೆ ಅವುಗಳನ್ನು ತಳಕ್ಕೆ ಹಾಕಿ (sleep on) ಮಲಗಿಬಿಡಿ.

 

26. ಎನ್ಸೋ  ವೃತ್ತ ಬರೆದು ಅದರಂತೆ ನಿಮ್ಮ ಹರಿವನ್ನೂ ಇರಿಸಿಕೊಳ್ಳಿ.

 

27. ಪ್ರತಿವಾರವೂ ಒಂದು ಕೊಆನ್ (Koan)ನ್ನು (ಪಾರ್ಶ್ವ ಚಿಂತನೆಯ ಶಕ್ತಿಯನ್ನು ಅರಿಯುವುದು) ಬಿಡಿಸಿರಿ. ಇದು ಸಾಂಪ್ರದಾಯಿಕ ನಂಬಿಕೆಯ ಚಿಂತನಾ ಮಾರ್ಗಕ್ಕಿಂತ ವಿಭಿನ್ನ ಚಿಂತನೆ.

28. ನಿಮ್ಮ ದೈನಂದಿನ ಚಟುವಟಿಕೆಗಳಿಗೆ ನಿಮ್ಮ ಸಂಪೂರ್ಣ ಅಂದರೆ ಅವಿಭಾಜಿತ ಲಕ್ಷ್ಯ ನೀಡುವುದನ್ನು ಅಭ್ಯಾಸಮಾಡಿರಿ.

 

29. ನಿಮ್ಮ ಜೀವನದ ಅನಿರೀಕ್ಷಿತ ಘಟನೆಗಳಿಂದ ಮತ್ತು ಇತರ ಸಂಭವನೀಯ ಕಾಕತಾಳೀಯಗಳ ಜತೆ ನೀವು ತೇಲಿಹೋಗುವ ಸುಖ ಅನುಭವಿಸಿ.

 

30. ಪ್ರತಿದಿನವೂ ಒಂದಾದರೂ ಕಾರುಣ್ಯಪೂರಿತ ಪರೋಪಕಾರ ಕಾರ್ಯವನ್ನು ಮಾಡಿರಿ.

 

31. ನಿಮ್ಮ ಪ್ರೀತಿ ಪಾತ್ರರನ್ನು ನಿಯಮಿತವಾಗಿ ತಬ್ಬಿಕೊಂಡು ಮನಸ್ಸು ಹಗುರಗೊಳಿಸಿಕೊಳ್ಳಿ.

 

32. ಆಗಾಗ ಯಾವ ಗೊತ್ತು ಗುರಿಯೂ ಇಲ್ಲದ ಜಾಗಗಳಿಗೆ ಪ್ರವಾಸ ಮಾಡಿ ನಿಮಗೆ ನೀವೇ ಕೌತುಕಭರಿತರಾಗಲು ಅವಕಾಶ ಮಾಡಿಕೊಳ್ಳಿ.

 

33. ನಿರಂತರ ಉತ್ತಮಗೊಳ್ಳುವಿಕೆಯ ತತ್ವ ನಮ್ಮ ಪರಸ್ಪರ  ಜಾಗೃತಗೊಳಿಸುವ ಒಂದು ಭಾಗವಾಗಿಸಿಕೊಳ್ಳಿ.

 

34. ಉತ್ತಮಗೊಳಿಸಿಕೊಳ್ಳುವ ಬಾಣವನ್ನು ನಿಮ್ಮತ್ತಲೇ ಸದಾ ಗುರಿಯಾಗಿಸಿಕೊಳ್ಳಿ.

 

35. ಋಣಾತ್ಮಕ ವಿಷಯಗಳ ಮೂಲಗಳಿಂದ ನೀವು ದೂರವಿರಿ.

 

*ಪರಸ್ಪರ ನಿರಂತರ*