ಪರಸ್ಪರದ ದೃಷ್ಟಿಕೋನ

ಪರಸ್ಪರ ಎಂಬುದು ಸಾಮಾನ್ಯವಾದ ಸಹಕಾರ ಅಥವಾ ವಿನಿಮಯದ ಬಗ್ಗೆ ಮಾತ್ರವಲ್ಲ; ಇದು ಮನುಷ್ಯರ ನಡುವೆ ಸಂಬಂಧ, ಪರಸ್ಪರ ನಿರ್ಭರತೆ, ಮತ್ತು ಸಾಮೂಹಿಕ ಅಭಿವೃದ್ಧಿಯ ದಾರಿಯನ್ನು ಚಿತ್ತಗಟ್ಟುವ ಒಂದು ಪರಿಕಲ್ಪನೆ. ಪರಸ್ಪರದ ದೃಷ್ಟಿಕೋನವು ಸಮುದಾಯವನ್ನು ಬೆಳೆಸಲು, ನೈತಿಕ ಮೌಲ್ಯಗಳನ್ನು ಉತ್ತೇಜಿಸಲು ಮತ್ತು ನ್ಯಾಯಸಂಗತತೆಯನ್ನು ಸೃಷ್ಟಿಸಲು ಶ್ರೇಷ್ಠವಾದ ದೃಷ್ಟಿಕೋನವನ್ನು ಹೊಂದಿದೆ.

1. ಪರಸ್ಪರ ಸಹಕಾರದ ಮಹತ್ವ

  • ಸಮಾಜದ ಅಭಿವೃದ್ಧಿಯ ಹಿರಿಮೆಯು ನಾವೆಲ್ಲರೂ ಒಟ್ಟಾಗಿ ಹೇಗೆ ಬೆಳೆದೆವು ಎಂಬುದರ ಮೇಲೆ ಅವಲಂಬಿತವಾಗಿದೆ. ಪರಸ್ಪರವು ಸಹಯೋಗ, ಸೃಜನಶೀಲತೆ, ಮತ್ತು ಬದಲಾವಣೆಗಾಗಿ ವೇದಿಕೆಯನ್ನು ಒದಗಿಸುತ್ತದೆ.

2. ಮಾನವೀಯ ಮೌಲ್ಯಗಳ ಉಳಿವಿಗೆ ಪೂರಕ

  • ಪರಸ್ಪರ ದೃಷ್ಟಿಕೋನವು ಸಂವೇದನೆ, ಸಹಾನುಭೂತಿ, ಮತ್ತು ಕಠಿಣ ಪರಿಸ್ಥಿತಿಗಳಲ್ಲಿ ಸಹಾಯ ಮಾಡುವ ಮನೋಭಾವವನ್ನು ಉತ್ತೇಜಿಸುತ್ತದೆ. ಇದು ಮಾನವೀಯತೆ, ಸಮಾನತೆ ಮತ್ತು ವಿಶ್ವಾಸವನ್ನು ಬಲಪಡಿಸಲು ಪ್ರೇರೇಪಣೆ ನಿಡುತ್ತದೆ.

3. ಸಮುದಾಯದ ಶ್ರೇಯಸ್ಸಿಗೆ

  • ಪರಸ್ಪರ ದೃಷ್ಟಿಕೋನವು ಸಮುದಾಯದ ಎಲ್ಲ ಸ್ತರಗಳಲ್ಲೂ ಸಮಗ್ರ ಅಭಿವೃದ್ಧಿ ಮತ್ತು ಶ್ರೇಯಸ್ಸನ್ನು ಸಾಧಿಸಲು ಸಹಾಯ ಮಾಡುತ್ತದೆ. ಇದು ಎಲ್ಲರಿಗೂ ಸಮಾನ ಅವಕಾಶಗಳನ್ನು ಸೃಷ್ಟಿಸಲು, ವ್ಯಕ್ತಿಗಳ ಶಕ್ತಿಯನ್ನು ಗುರುತಿಸಲು, ಮತ್ತು ಪರಸ್ಪರ ನಂಬಿಕೆಯನ್ನು ಬೆಳೆಸಲೂ ಸಹ ಸಹಾಯ ಮಾಡುತ್ತದೆ.

4.ನಾವೆಲ್ಲರೂ ಒಂದೇ ಎಂಬ ಬೋಧನೆ:

  • ಪರಸ್ಪರವು "ನಾನು" ಎಂಬ ಅಹಂಕಾರವನ್ನು ತೊರೆದು "ನಾವು" ಎಂಬ ಸಹ ಭಾವನೆಗೆ ಪರಿವರ್ತಿಸುವ ಮಹತ್ತರ ಶಕ್ತಿಯಾಗಿದೆ. ಇದು ವೈವಿಧ್ಯತೆಯನ್ನು ಗೌರವಿಸಿ, ಒಗ್ಗಟ್ಟನ್ನು ಉನ್ನತೀಕರಿಸುತ್ತದೆ. ಈ ದೃಷ್ಟಿಕೋನವು ನಾವೆಲ್ಲರೂ ಒಂದಾಗಿ ಬೆಳೆದು ಹೊಸತೊಂದು ಆದರ್ಶ ಸಮಾಜವನ್ನು ನಿರ್ಮಿಸಲು ದಾರಿ ತೋರಿಸುತ್ತದೆ. ಈ ಮೂಲಕ "ಪರಸ್ಪರ" ಎಂಬುದು ಕೇವಲ ಪರಿಕಲ್ಪನೆಯಲ್ಲ, ಕಲ್ಪನೆಗೂ ಮೀರಿದ ಒಂದು ಸತ್ಯದ ಜೀವನಚರಿತ್ರೆಯಾಗಿದೆ.

ಪರಸ್ಪರದ ಗುರಿ

ಪರಸ್ಪರದ ಗುರಿ ಮಾನವೀಯ ಮೌಲ್ಯಗಳ ಬೆಳವಣಿಗೆ, ಸಹಭಾಗಿತ್ವದ ಶಕ್ತಿಕರಣ, ಮತ್ತು ಸಮಗ್ರ ಸಮುದಾಯದ ಶ್ರೇಯಸ್ಸಿಗೆ ಸಂಕೇತವಾಗಿದೆ. ಇದು "ನಾವು ಒಟ್ಟಾಗಿ ಬೆಳೆದಾಗ ಮಾತ್ರ ನಾವೊಂದು ಶ್ರೇಷ್ಠ ಸಮಾಜವನ್ನು ನಿರ್ಮಾಣ ಮಾಡಬಹುದು" ಎಂಬ ತತ್ವದ ಮೇಲೆ ಪರಸ್ಪರ ಆಧಾರಿತವಾಗಿದೆ.

1. ಸಮಗ್ರ ಸಮುದಾಯದ ಅಭಿವೃದ್ಧಿಗೆ

  • ವಿದ್ಯೆ: ಪ್ರತಿಯೊಬ್ಬ ವ್ಯಕ್ತಿಗೂ ಗುಣಮಟ್ಟದ ಶಿಕ್ಷಣದ ಪ್ರಾಪ್ತಿಯನ್ನು ಸುಲಭಗೊಳಿಸುವ ಮೂಲಕ ಜ್ಞಾನ ಮತ್ತು ಕೌಶಲ್ಯದ ವೃದ್ಧಿಗೆ ಬಂಡವಾಳ ಹಾಕುವುದು.
  • ಆರೋಗ್ಯ: ಆರೋಗ್ಯ ಸೇವೆಗಳ ತಲುಪುವಿಕೆಯನ್ನು ಹೆಚ್ಚಿಸುವ ಮೂಲಕ ದೀರ್ಘಕಾಲಿಕ ಸಬಲ ಮತ್ತು ಆರೋಗ್ಯಕರ ಸಮುದಾಯವನ್ನು ನಿರ್ಮಿಸಲು ಶ್ರಮಿಸುವುದು.
  • ಆರ್ಥಿಕಸಬಲತೆ: ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸಿ, ಆರ್ಥಿಕವಾಗಿ ಸಮುದಾಯವನ್ನು ಭಲವಮನತಗೊಳಿಸುವುದು.

2. ಮಾನವೀಯ ಮೌಲ್ಯಗಳು

ಪರಸ್ಪರ ವಿಶ್ವಾಸ, ಸಹಾನುಭೂತಿ, ಮತ್ತು ಸಂವೇದನೆಯನ್ನು ಉತ್ತೇಜಿಸಿ ಮಾನವೀಯ ಸಂಬಂಧಗಳನ್ನು ಬಲಪಡಿಸುವುದು.
  • ನಿಷ್ಠೆ (Commitment): ಪರಸ್ಪರವು ತನ್ನ ಕಾರ್ಯಗಳಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕತೆಯನ್ನು ಕಾಯ್ದುಕೊಳ್ಳುತ್ತದೆ. ಇದು ಗುರಿ ಸಾಧನೆಗಾಗಿ ಶ್ರಮಿಸುವ ಪ್ರತಿಯೊಬ್ಬರ ಸಹಾಯಕ್ಕಾಗಿ ಸದಾ ಕಟಿಬದ್ಧವಾಗಿರುತ್ತದೆ.
  • ದಿಟ್ಟತೆ (Courage): ಪರಿಸ್ಥಿತಿಗಳ ಕಠಿಣತೆಯನ್ನು ಎದುರಿಸಲು ಅಗತ್ಯವಾದ ಧೈರ್ಯ ಮತ್ತು ದೃಢತೆಯನ್ನು ಪ್ರದರ್ಶಿಸಿ, ಸಮುದಾಯಕ್ಕೆ ಆದರ್ಶವಾಗುವುದು.
  • ಸೇವಾಭಾವನೆ (Service-Oriented Mindset): ಪ್ರತಿಯೊಬ್ಬ ಇನ್ನೋರ್ವ ವ್ಯಕ್ತಿಯ ಜೀವನದ ಗುಣಮಟ್ಟವನ್ನು ಸುಧಾರಿಸಲು ಸೇವಾ ಮನೋಭಾವದಿಂದ ನಿರಂತರ ಕಾರ್ಯನಿರ್ವಹಿಸುವುದು.
  • ಒಗ್ಗಟ್ಟಿನ ಶಕ್ತಿ: ಪರಸ್ಪರ ಸಹಕಾರ ಮತ್ತು ನಂಬಿಕೆಯ ಮೂಲಕ ಸಮುದಾಯವನ್ನು ಒಂದಾಗಿ(ಒಗ್ಗಟ್ಟಿನಲ್ಲಿ) ಬೆಳೆಸಿ, ಪ್ರಾಮಾಣಿಕ ಮತ್ತು ಶ್ರೇಷ್ಠ ಸಮಾಜವನ್ನು ನಿರ್ಮಾಣ ಮಾಡುವುದು.

ಪರಸ್ಪರ ಸಮೂಹದ ಮೌಲ್ಯಗಳು

ಸೇವಾ ಮನೋಭಾವ, ಸಮಾನ ಮನಸ್ಥಿತಿ, ಮತ್ತು ಮಾನವೀಯತೆ ಹೊಂದಿರುವ ಪರಸ್ಪರ ಸಮೂಹವು ಸೇವಾ ಮನೋಭಾವ, ಸಮಾನ ಮನೋಭಾವ ಮತ್ತು ಮಾನವೀಯತೆಯನ್ನು ತನ್ನ ಮುಖ್ಯ ತತ್ವಗಳಾಗಿ ಸ್ವೀಕರಿಸಿ, ಸಮಾಜದ ಒಳಿತಿಗಾಗಿ ಕೆಲಸ ಮಾಡುತ್ತದೆ. ಈ ಮೌಲ್ಯಗಳು ಎಲ್ಲರೊಂದಿಗೂ ಸಮಾನತೆ, ಸಹಕಾರ, ಮತ್ತು ಸಂವೇದನಾಶೀಲತೆಯನ್ನು ಬೆಳೆಸಲು ಸಹಾಯ ಮಾಡುತ್ತವೆ

ಮುಖ್ಯ ಮೌಲ್ಯಗಳು

  • ಸೇವಾ ಮನೋಭಾವ (Service-mindedness): ಸ್ವಾರ್ಥವಿಲ್ಲದ ಸೇವಾ ಮನೋಭಾವವು ಪರಸ್ಪರ ಸಮೂಹದ ಮೂಲ ತತ್ವವಾಗಿದೆ. ತೊಂದರೆಗೀಡಾದವರಿಗೆ ಸಹಾಯ ಮಾಡಲು ಸದಾ ಸಿದ್ಧರಾಗಿರಿಸುವ ಗುಣ
  • ಸಮಾನ ಮನಸ್ಥಿತಿ (Equality of Mind): ಜಾತಿ, ಧರ್ಮ, ಪಂಗಡ, ಲಿಂಗ ಅಥವಾ ಆರ್ಥಿಕ ಸ್ಥಿತಿಯನ್ನು ಮೀರಿ ಎಲ್ಲರೊಂದಿಗೆ ಸಮಾನತೆ ಕಾಣುವ ಮನೋಭಾವ. ಎಲ್ಲರಿಗಿಂತ ಮಾನವೀಯತೆಯನ್ನು ಮೇಲುಗೈಗೊಳ್ಳುವ ದೂರದ ದೃಷ್ಟಿಕೋನ.
  • ಮಾನವೀಯತೆ (Humanity): ಪರಸ್ಪರ ಪ್ರೀತಿ, ಸಹಾನುಭೂತಿ, ಮತ್ತು ಒಗ್ಗೂಡಿಸುವ ಮನೋಭಾವ. ಸಂಕಷ್ಟದಲ್ಲಿರುವವರಿಗೆ ನೆರವು ನೀಡುವ ಮಾನವೀಯ ಕಾಳಜಿ.
  • ಸಹಾನುಭೂತಿ ಮತ್ತು ದಯೆ (Empathy and Kindness): ಇತರರ ನೋವು-ಸಂತೋಷಗಳನ್ನು ಮನದಟ್ಟುಮಾಡಿಕೊಂಡು ಸಹಾಯ ಮಾಡುವ ಗುಣ. ದಯಾ ಮತ್ತು ಸಹಿಷ್ಣುತೆಯ ಮೂಲಕ ಸಂಬಂಧಗಳನ್ನು ಗಾಢಗೊಳಿಸುವುದು.
  • ಸಮಾಜಮುಖಿ ಚಿಂತನೆ (Social Responsibility): ಸಮಾಜದ ಶ್ರೇಯಸ್ಸಿಗಾಗಿ ಪ್ರತ್ಯೇಕ ವ್ಯಕ್ತಿಗಳು ಮತ್ತು ಸಮೂಹವಾಗಿ ಸೇವೆ ಸಲ್ಲಿಸುವ ಮನೋಭಾವ. ಪರಿಸರ, ಸಾಮಾಜಿಕ ನ್ಯಾಯ, ಮತ್ತು ಸಮಾನತೆಯ ಉಳಿವಿಗಾಗಿ ಸಮಾಜಮುಖಿ ಕೆಲಸ.
  • ಸಹಕರಿಸಲು ಸಿದ್ಧತೆ (Willingness to Cooperate): ಒಬ್ಬರ ಸೌಲಭ್ಯವನ್ನು ಇತರರೊಂದಿಗೆ ಹಂಚಿಕೊಳ್ಳುವ ಮನೋಭಾವ. ಸಾಮೂಹಿಕ ಅಭಿಯಾನಗಳಿಗೆ ಬೆಂಬಲ ನೀಡುವದು.
  • ಆದರ ಮತ್ತು ಗೌರವ (Respect and Dignity): ಪ್ರತಿಯೊಬ್ಬ ವ್ಯಕ್ತಿಯ ಅಸ್ತಿತ್ವ ಮತ್ತು ಅವನ ಅಭಿಪ್ರಾಯಗಳಿಗೆ ಗೌರವ ನೀಡುವುದು. ಸಮುದಾಯದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಒತ್ತು ಕೊಡುವುದು.
  • ಸಮತೋಲಿತ ಜೀವನಶೈಲಿ (Balanced Way of Life): ವೈಯಕ್ತಿಕ ಹಾಗೂ ಸಾಮಾಜಿಕ ಜೀವನದ ನಡುವೆ ಸಮತೋಲನ ಸಾಧಿಸುವ ಗುಣ. ಆಂತರಿಕ ಶಾಂತಿಯನ್ನು ಉಳಿಸುವಂತಹ ಕಾರ್ಯಗಳನ್ನು ಮಾಡುವುದು.
  • ಸಂವಾದ ಮತ್ತು ಸಂಘಟನೆ (Dialogue and Unity): ಸ್ಪಷ್ಟ ಸಂವಹನ ಮತ್ತು ಪರಸ್ಪರವನ್ನು ಅರ್ಥಮಾಡಿಕೊಳ್ಳುವ ಚಟುವಟಿಕೆಗಳು. ಸಂಘಟಿತ ಕಾರ್ಯದಿಂದ ಸಮುದಾಯದ ಒಗ್ಗಟ್ಟಿನ ಶಕ್ತಿ.
  • ಶ್ರದ್ಧಾ ಮತ್ತು ನಂಬಿಕೆ (Faith and Trust): ಪರಸ್ಪರ ನಂಬಿಕೆ ಹಾಗೂ ವಿಶ್ವಾಸವನ್ನು ಬೆಳೆಸುವ ಗುಣ. ಸಂಘಟನೆಯ ಆಧಾರ ಸ್ತಂಭವಾಗಿ ವಿಶ್ವಾಸದ ಸ್ಥಾಪನೆ.

ಈ ಮೌಲ್ಯಗಳ ಮಹತ್ವ

ಸಮಾಜದ ಎಲ್ಲ ವರ್ಗಗಳ ಜನರನ್ನು ಒಗ್ಗೂಡಿಸಿ, ತಾರತಮ್ಯವಿಲ್ಲದ ಶ್ರೇಯಸ್ಸನ್ನು ಒದಗಿಸಲು ಸಹಾಯ ಮಾಡುತ್ತದೆ. ಸೇವಾ ಮನೋಭಾವ, ಸಮಾನತೆ, ಮತ್ತು ಮಾನವೀಯತೆಯ ಮೂಲಕ ದ್ವೇಷ ಮತ್ತು ವೈಷಮ್ಯವನ್ನು ದೂರ ಮಾಡುತ್ತದೆ. ಶ್ರೇಷ್ಠ ವ್ಯಕ್ತಿತ್ವವನ್ನು ಹಾಗೂ ದಕ್ಷ ಸಮುದಾಯವನ್ನು ರೂಪಿಸಲು ಸಾಧ್ಯವಾಗುತ್ತದೆ. ಈ ಮೌಲ್ಯಗಳು ಪರಸ್ಪರ ಸಮೂಹವನ್ನು ಬಲಶಾಲಿ, ಪ್ರಾಮಾಣಿಕ, ಮತ್ತು ಸಹಜ ಬದುಕಿಗೆ ಪೂರಕವಾಗುವಂತೆ ಮಾಡುತ್ತವೆ.

ಮುನ್ನುಡಿ

ನಮ್ಮಿಂದ-ನಮಗಾಗಿ ಎಂಬ ತತ್ತ್ವದ ಆಶಯವನ್ನು ಹೊತ್ತು ಸಾಗುತ್ತಿರುವ ಪರಸ್ಪರ ಸಮೂಹವು ಸಮಾನ ಮನಸ್ಕರ ಮತ್ತು ಸೇವಾ ಮನೋಭಾವದಿಂದ ಸಬಲೀಕರಣದ ದಾರಿಗೆ ಕೊಂಡೊಯ್ಯಲು ಬದ್ಧವಾಗಿದೆ. ಈ ಸಮೂಹವು ವ್ಯಕ್ತಿಯ ಸ್ವಾವಲಂಬನೆ ಮತ್ತು ಮಾನವೀಯತೆಯನ್ನು ತನ್ನ ಕೇಂದ್ರ ಬಿಂದುವಾಗಿಟ್ಟುಕೊಂಡು, ಎಲ್ಲರಿಗೂ ಸಮಾನ ಅವಕಾಶ ಮತ್ತು ಸಹಕಾರದ ವೆದಿಕೆಯನ್ನು ಒದಗಿಸಲು ಶ್ರಮಿಸುತ್ತಿದೆ.

ಪರಸ್ಪರ ಸಮೂಹದ ಮುಖ್ಯ ಲಕ್ಷಣಗಳು:

  • ಸಹಕಾರ ಮತ್ತು ಸಂವಹನ: ಸಮೂಹದ ಎಲ್ಲಾ ಸದಸ್ಯರು ಪರಸ್ಪರ ಸಹಕಾರದಿಂದ ಮತ್ತು ಹಿತಚಿಂತನೆಯಿಂದ ತಮ್ಮದೇ ಆದ ಸಾಮರ್ಥ್ಯಗಳನ್ನು ಬೆಳೆಸಲು ಸಹಕರಿಸುತ್ತಾರೆ.
  • ಸಬಲೀಕರಣ: ಸೇವಾ ಮನೋಭಾವದಿಂದ ಒಟ್ಟಾಗಿ ಕಾರ್ಯನಿರ್ವಹಿಸುವ ಮೂಲಕ, ಹಿಂದುಳಿದವರು ಮತ್ತು ಅಸಹಾಯಕರಿಗೆ ಜೀವನದಲ್ಲಿ ಉತ್ತಮ ಅವಕಾಶಗಳನ್ನು ಸೃಷ್ಟಿಸುವ ಮುಖ್ಯ ಉದ್ದೇಶ ಈ ಸಮೂಹದ ಒಳಾರ್ಥವಾಗಿದೆ..
  • ತಂತ್ರಜ್ಞಾನ ಮತ್ತು ನವೀನತೆಯ ಬಳಕೆ: ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ, ಸದಸ್ಯರು ತಮ್ಮ ಆದಾಯ ಮೂಲಗಳನ್ನು ವಿಸ್ತರಿಸಲು ಮತ್ತು ಜೀವನಮಟ್ಟವನ್ನು ಸುಧಾರಿಸಲು ಪ್ರಯತ್ನಿಸುತ್ತಾರೆ.
  • ಪರಿಸರ ಜಾಗೃತಿ ಮತ್ತು ನವೀಕರಣ: ಶುದ್ಧ ಪರಿಸರದ ಸಂರಕ್ಷಣೆ, ಪ್ಲಾಸ್ಟಿಕ್ ಬಳಕೆಯ ತಾಂಡವ ತಡೆಗಟ್ಟುವುದು ಮತ್ತು ನವೀನ ಪರಿಸರ ಸ್ನೇಹಿ ತಂತ್ರಗಳನ್ನು ಪರಿಚಯಿಸುವುದರಲ್ಲಿ ಸಮೂಹವು ನಿರಂತರ ಬದ್ಧತೆಯಿಂದಿದೆ.

ಸಮೂಹದ ಬೆಳವಣಿಗೆ ಉದ್ದೇಶಗಳು

ಸಮುದಾಯದ ಎಲ್ಲಾ ಸದಸ್ಯರಿಗೆ ಸ್ವಾವಲಂಬನೆಯ ಮನೋಭಾವ ಬೆಳೆಸುವುದು. ಆರ್ಥಿಕ, ಸಾಮಾಜಿಕ, ಮತ್ತು ಮಾನಸಿಕ ಸ್ವಾತಂತ್ರ್ಯದ ದಿಕ್ಕಿನಲ್ಲಿ ಕಾರ್ಯೋನ್ಮುಖವಾಗಿರುವ ದಾರಿಗಳನ್ನು ಅಳವಡಿಸಿಕೊಳ್ಳುವುದು. ಪರಿಸರ ಜಾಗೃತಿ ಮತ್ತು ಸಾಮಾಜಿಕ ಸಾಮರಸ್ಯವನ್ನು ಹುರಿದುಂಬಿಸುವ ಕಾರ್ಯಪ್ರವೃತ್ತಿಗಳನ್ನು ಪ್ರೋತ್ಸಾಹಿಸುವುದು. "ನಮ್ಮಿಂದ ನಮಗಾಗಿ" ಎಂಬ ನಿಲುವಿನಿಂದ ಸಬಲೀಕರಣಗೊಳ್ಳುವ ಈ ಪಯಣವು, ಶೋಷಿತರ ನ್ಯಾಯ, ಸಮಾನತೆ, ಮತ್ತು ಸ್ವಾಯತ್ತತೆಯ ದಿಕ್ಕಿನಲ್ಲಿ ಶ್ರೇಷ್ಠ ಮಾದರಿಯಾಗಿ ಪರಿಣಮಿಸುತ್ತಿದೆ. ಇದು ನಾನಾ ರೀತಿಯಲ್ಲಿ ಹಿನ್ನಡೆಯುಳ್ಳವರಿಗಾಗಿ ಹೊಸ ದಾರಿಗಳನ್ನು ತೋರುವ ಪ್ರಯತ್ನವಾಗಿದ್ದು, ಸಮಾಜದಲ್ಲಿ ಬದಲಾವಣೆಯ ಮೆಟ್ಟಿಲುಗಳನ್ನು ನಿಮರ್ಮಿಸುವಲ್ಲಿ ಬಹುದೊಡ್ಡ ಪಾತ್ರ ವಹಿಸುತ್ತದೆ. ಪರಸ್ಪರ ಸಮೂಹವು "ನಮ್ಮಿಂದ ನಮಗಾಗಿ ಮಾನವೀಯತೆಯೇ ಮೊದಲ ಆದ್ಯತೆ" ಎಂಬ ತತ್ವದೊಂದಿಗೆ ಬಡವ-ಬಲ್ಲಿದ ಎಂಬ ಭೇದ ಭಾವವಿಲ್ಲದೆ, ಮಾನವೀಯತೆ ನೋಟದ ಜೊತೆಗೆ ಸೇವಾ ಮನೋಭಾವದ ಸಮಾನ-ಮನಸ್ಥಿತಿವಂತವರ ಶ್ರಮದಿಂದಲೇ ಆಕರ್ಷತೆಯನ್ನು ಸೃಷ್ಟಿಸುವ ಮಹಾಸೇತುವೆ. ಸಮಾಜದ ಬದಲಾವಣೆಯ ಯಂತ್ರವಾಗಿ ಇದು ಎಲ್ಲರ ಪಾಲಿಗೆ ಜೀವನದ ಹೊಸ ಆಯಾಮಗಳನ್ನು ತೆರೆದಿಡುತ್ತಿದೆ.

ಸದಸ್ಯರ ಪಾತ್ರ

ಮಾನವೀಯತೆ, ಸೇವಾ ಮನೋಭಾವ, ಮತ್ತು ಸಮಾನ ಮನೋಭಾವ ಹೊಂದಿರುವ ಗುಂಪಿನಲ್ಲಿ ಸದಸ್ಯರ ಪಾತ್ರವು ಅತ್ಯಂತ ಪ್ರಮುಖವಾಗಿದೆ. ಪ್ರತಿ ಸದಸ್ಯನೂ ತನ್ನದೇ ಆದ ಕರ್ತವ್ಯಗಳನ್ನು ಸಮರ್ಪಕವಾಗಿ ಪಾಲಿಸಿದಾಗ ಮಾತ್ರ ಸಂಘಟನೆಯ ಕಾರ್ಯಕ್ಷಮತೆಯು ಉತ್ತುಂಗವನ್ನು ತಲುಪುತ್ತದೆ.

  • ಸಹಭಾಗಿತ್ವ: ಪ್ರತಿಯೊಬ್ಬ ಸದಸ್ಯನು ತಮ್ಮ ಕೌಶಲ್ಯ, ಜ್ಞಾನ, ಮತ್ತು ಅನುಭವವನ್ನು ಸಂಘಟನೆಯ ಗುರಿಗಳನ್ನು ಸಾಧಿಸಲು ಹಂಚಿಕೊಳ್ಳಬೇಕು. ಇದರಿಂದ ಚಟುವಟಿಕೆಗಳು ಹೆಚ್ಚು ಫಲಧಾಯಕವಾಗುತ್ತವೆ.
  • ಸಹಕಾರ: ಗುಂಪಿನಲ್ಲಿ ಹೊಂದಾಣಿಕೆಯ ಗುಣ ಬಹಳ ಅಗತ್ಯ. ಪರಸ್ಪರ ಸಹಕಾರದಿಂದ ಮಾತ್ರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಗುಂಪಿನ್ ಸಾಮರಸ್ಯ ಬೆಳೆಸಲು ಸಾಧ್ಯ.
  • ಮಾನವೀಯತೆಗೆ ಆದ್ಯತೆ: ಪರಸ್ಪರದಲ್ಲಿ ಕಾಳಜಿ, ಗೌರವ, ಮತ್ತು ಸಹಾನುಭೂತಿ ಹೊಂದುವುದು ಸದಸ್ಯರ ಮುಖ್ಯ ಕರ್ತವ್ಯವಾಗಿದೆ. ಇದು ತಂಡದ ಸಾಮೂಹಿಕ ಶಕ್ತಿಯನ್ನು ಹೆಚ್ಚಿಸುತ್ತದೆ.
  • ಸೇವಾ ಮನೋಭಾವ: ಯಾವುದೇ ಸ್ವಾರ್ಥವನ್ನು ಮೀರಿ ಗುಂಪಿನ ಒಟ್ಟು ಹಿತಕ್ಕಾಗಿ ಕೆಲಸ ಮಾಡುವುದು ಸದಸ್ಯನ ಸೇವಾ ಮನೋಭಾವವನ್ನು ತೋರಿಸುತ್ತದೆ. ಇದು ಸಂಘಟನೆಯನ್ನು ಬಲಿಷ್ಠಗೊಳಿಸುತ್ತದೆ.
  • ಸಮಾನ ಮನೋಭಾವಕ್ಕೆ ಮೌಲ್ಯ: ಯಾವುದೇ ಬೆಲೆಗೂ ವೈಮನಸ್ಸು ಅಥವಾ ಎದೆಗುಂದುವುದನ್ನು ನಿರಾಕರಿಸಿ, ಸಮಾನತೆಯ ಆಧಾರದ ಮೇಲೆ ಎಲ್ಲರ ಅಭಿಪ್ರಾಯಗಳನ್ನು ಗೌರವಿಸುವುದು ತಂಡದ ಸಫಲತೆಯ ಪ್ರಮುಖ ಭಾಗ.
  • ನೀತಿಗೆ ಬದ್ಧತೆ: ಸಂಘಟನೆಯ ಮೌಲ್ಯಗಳು ಮತ್ತು ಉದ್ದೇಶಗಳನ್ನು ಅನುಸರಿಸಿ, ಪ್ರಾಮಾಣಿಕವಾಗಿ ಮತ್ತು ನಂಬಿಕೆಯನ್ನು ಉಳಿಸುವಂತೆ ತನ್ನ ಪಾತ್ರವನ್ನು ನಿಭಾಯಿಸಬೇಕು.

ಸಾರಾಂಶ

ಸಂಘಟನೆಯ ಪ್ರತಿ ಸದಸ್ಯನು "ಸೇವೆಯ ಮೂಲಕ ಶ್ರೇಷ್ಠತೆಯ" ಸಿದ್ಧಾಂತವನ್ನು ಅನುಸರಿಸಿದಾಗ ಮಾತ್ರ, ಮಾನವೀಯತೆ, ಸೇವಾ ಮನೋಭಾವ, ಮತ್ತು ಸಮಾನ ಮನೋಭಾವವನ್ನು ಸಮರ್ಥಕವಾಗಿ ಜೀವನದಲ್ಲಿ ಅಳವಡಿಸಬಹುದು. ಇಂತಹ ಸದಸ್ಯರ ಪಾತ್ರವೇ ಸಂಘಟನೆಯನ್ನು ಶಕ್ತಿಯುತವಾಗಿ ಮುನ್ನಡೆಯಿಸಲು ನೆರವಾಗುತ್ತದೆ. "ತನು-ಮನ-ಧನ" ಸಮರ್ಪಣೆಯಿಂದ ತಮ್ಮ ಸ್ಥಾನಕ್ಕೆ ನ್ಯಾಯವನ್ನು ನೀಡುವ ಸದಸ್ಯರು ಮಾತ್ರ ಸಂಘಟನೆಯ ದೀರ್ಘಕಾಲೀನ ಯಶಸ್ಸಿಗೆ ಕಾರಣರಾಗುತ್ತಾರೆ.

ಪರಸ್ಪರ ಸಮೂಹ: ಯಶಸ್ವಿ ಯಾತ್ರೆ

ಪರಸ್ಪರ ಸಮೂಹವು 2022ರ ಆಗಸ್ಟ್ 15ರಂದು ಬಳ್ಳಾರಿ ಜಿಲ್ಲೆಯ ರಾಜಸಾಬ್ ಅವರ ಆಲ್ ಇನ್ ವನ್ ಯುಟ್ಯೂಬ್ ಚಾನೆಲ್ ಮುಖಾಂತರ ಲೋಕಾರ್ಪಣೆಗೊಂಡಿತು. ಈ ಗುಂಪು ಬಹುಮುಖ್ಯ ಉದ್ದೇಶಗಳೊಂದಿಗೆ ಸಿದ್ಧವಾಯಿತು: ಪರಸ್ಪರ ಸಹಾಯ, ಅಭಿವೃದ್ಧಿ, ಮತ್ತು ಸಮಾಜಮುಖಿ ಸೇವೆ. ಇದು ತನ್ನ ಆದರ್ಶಗಳನ್ನು ಮತ್ತು ಕಾರ್ಯತತ್ವಗಳನ್ನು ಹತ್ತಿರದಿಂದ ಅನುಸರಿಸುತ್ತಾ, ಹಲವು ಹಂತಗಳಲ್ಲಿ ಬೆಳವಣಿಗೆಯನ್ನು ಸಾಧಿಸಿದೆ.

  • ಉದ್ಯಮಶೀಲತೆಯ ಬೆಂಬಲ: ಪರಸ್ಪರ ಸೇವಾ ಸಂಸ್ಥೆಯೊಂದಿಗೆ ಕೈ ಜೋಡಿಸಿ ಯಶಸ್ವಿ ಉದ್ಯಮಿಗಳು ಆಗಲು ಪ್ರೇರಣೆ ನೀಡುವುದು. ಹೊಸ ಉದ್ಯಮ ಆರಂಭಿಸಲು ಮಾರ್ಗದರ್ಶನ ಒದಗಿಸಿ, ಲಾಭದಾಯಕ ಪಥವನ್ನು ತೋರಿಸುವುದು
  • ಆರೋಗ್ಯ ಮತ್ತು ಸುರಕ್ಷೆ: ಪರಸ್ಪರದ ಸದಸ್ಯರಿಗೆ ಉಚಿತ ಆರೋಗ್ಯ ಮತ್ತು ಅಪಘಾತ ವಿಮೆ. ದೈಹಿಕ ಮತ್ತು ಆರ್ಥಿಕ ಸಂಕಷ್ಟದಲ್ಲಿ ಸಹಾಯ ಹಸ್ತ.
  • ಸನ್ಮಾನ ಮತ್ತು ಗುರುತಿಸುವಿಕೆ: ಉತ್ತಮ ಉದ್ಯಮಶೀಲರನ್ನು ಗುರುತಿಸಿ ಸನ್ಮಾನಿಸುವುದು. ಪ್ರತಿ ತಿಂಗಳು ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲು ನಿಶ್ಚಯ. ಸಾರ್ವಜನಿಕ ಸೇವೆಯಲ್ಲಿ ತೊಡಗಿರುವವರ ಸಾಧನೆಗೆ ಗೌರವ.
  • ಪರಿಸರ ಸಂರಕ್ಷಣೆ: ಸಸಿ ನೆಡುವ ಕಾರ್ಯಕ್ರಮಗಳು ಮತ್ತು ಪರಿಸರ ಕಾಳಜಿ. ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ನೀಡಲು ಸಹಾಯವಾಣಿ.
  • ಸಮಾಜಮುಖಿ ಕಾರ್ಯಗಳು: ಅಕಾಲಿಕ ಸಾವಿನ ಸಂದರ್ಭಗಳಲ್ಲಿ ಕುಟುಂಬಗಳಿಗೆ ಆರ್ಥಿಕ ನೆರವು. ಮಾರಣಾಂತಿಕ ಕಾಯಿಲೆಗಳಲ್ಲಿ ವೈದ್ಯಕೀಯ ವೆಚ್ಚ ಭರಿಸಲು ಸಹಾಯ.
  • ವಿದ್ಯೆ ಮತ್ತು ಇ-ಕಾಮರ್ಸ್: "ಹೆಚ್ಚು ಕಲಿಕೆ-ಹೆಚ್ಚು ಗಳಿಕೆ" ಎಂಬ ಧ್ಯೇಯ ವಾಕ್ಯಕ್ಕೆ ಬಲತುಂಬುವುದು. ಇ-ಕಾಮರ್ಸ್ ಡಿಜಿಟಲ್ ಮಾರುಕಟ್ಟೆಯ ಅರಿವು ಮೂಡಿಸಲು ವೇದಿಕೆಯನ್ನು ಕಲ್ಪಿಸುವುದು.

ಪರಸ್ಪರ ಸಮೂಹ: ಯಶಸ್ವಿ ಯಾತ್ರೆ

ಪರಸ್ಪರ ಸಮೂಹವು 2022ರ ಆಗಸ್ಟ್ 15ರಂದು ಬಳ್ಳಾರಿ ಜಿಲ್ಲೆಯ ರಾಜಸಾಬ್ ಅವರ ಆಲ್ ಇನ್ ವನ್ ಯುಟ್ಯೂಬ್ ಚಾನೆಲ್ ಮುಖಾಂತರ ಲೋಕಾರ್ಪಣೆಗೊಂಡಿತು. ಈ ಗುಂಪು ಬಹುಮುಖ್ಯ ಉದ್ದೇಶಗಳೊಂದಿಗೆ ಸಿದ್ಧವಾಯಿತು: ಪರಸ್ಪರ ಸಹಾಯ, ಅಭಿವೃದ್ಧಿ, ಮತ್ತು ಸಮಾಜಮುಖಿ ಸೇವೆ. ಇದು ತನ್ನ ಆದರ್ಶಗಳನ್ನು ಮತ್ತು ಕಾರ್ಯತತ್ವಗಳನ್ನು ಹತ್ತಿರದಿಂದ ಅನುಸರಿಸುತ್ತಾ, ಹಲವು ಹಂತಗಳಲ್ಲಿ ಬೆಳವಣಿಗೆಯನ್ನು ಸಾಧಿಸಿದೆ.

  • ಪ್ರಥಮ ವಾರ್ಷಿಕೋತ್ಸವ (2022): (ಪರಸ್ಪರ ಪರಿವಾರ ಸಮ್ಮೇಳನ) ಬೆಂಗಳೂರು, ಜಯನಗರದ ಯುವಪಥ ವಿವೇಕ ಸಭಾಂಗಣದಲ್ಲಿ ಪರಸ್ಪರ ಸಮೂಹವು ತನ್ನ ಪ್ರಥಮ ವಾರ್ಷಿಕೋತ್ಸವವನ್ನು ಆಯೋಜಿಸಿತು. ಈ ವೇಳೆ, ಕನ್ನಡ ನಾಡು ನುಡಿ ನಾಡಿಗರ ವಿಚಾರಪರ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಶ್ರೇಷ್ಠ ಪರಿಣತಿಯನ್ನು ಗುರುತಿಸಿ, ಶ್ರೀ ಎಂ ಪ್ರಕಾಶ್ ಮೂರ್ತಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಅವರಿಗೆ "ವರ್ಷದ ಕನ್ನಡಿಗ" ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಈ ಸಮ್ಮೇಳನವು ಸಮಾಜದಲ್ಲಿ ಕನ್ನಡ ನಾಡಿನ ವಿಚಾರಪರ ಚಟುವಟಿಕೆಗಳನ್ನು ಪೋಷಿಸುವ ಮಹತ್ವದ ಕಾರ್ಯಗಳನ್ನು ಪ್ರಾರಂಭಿಸಿದ ದೃಢವಾತಾವರಣವನ್ನು ಹುಟ್ಟುಹಾಕಿತು.
  • ದ್ವಿತೀಯ ವಾರ್ಷಿಕೋತ್ಸವ (2023): "ಅನ್ವೇಷಣೆ" 2023ರ ನವೆಂಬರನಲ್ಲಿ, ಕೊಡಗಿನ ಕುಶಾಲನಗರದಲ್ಲಿ ಎರಡನೇ ವರ್ಷದ ವಾರ್ಷಿಕೋತ್ಸವ "ಅನ್ವೇಷಣೆ" ಎಂಬ ಶೀರ್ಷಿಕೆಯಲ್ಲಿ ವೃತ್ತಿಪರ ಕೌಶಲ್ಯ ಆಧಾರಿತ ತರಬೇತಿಗಳನ್ನು ಆಯೋಜಿಸಲಾಯಿತು. ಈ ಸಂದರ್ಭದಲ್ಲಿ, ದಿವಂಗತ ಶಿವಾನಂದ ಸ್ವಾಮಿಯವರ ಸ್ಮರಣಾರ್ಥವಾಗಿ ಸಮೂಹವು ಅವರ ಸಾಧನೆಗಳನ್ನು ಗುರುತಿಸಿ ಗೌರವಿಸಿತು. ಶ್ರೀಮತಿ ವೇದಶ್ರೀ, ಗ್ರಾಮೀಣ ಪ್ರದೇಶದಲ್ಲಿ ಮಹಿಳಾ ಉದ್ಯಮಿಯಾಗಿ ಸಾಧನೆ ಮಾಡಿದವರನ್ನು, "ವರ್ಷದ ಕನ್ನಡಿಗ" ಪ್ರಶಸ್ತಿಯ ಮೂಲಕ ಗೌರವಿಸಿ ಸನ್ಮಾನಿಸಲಾಯಿತು. ಈ ಸಂಭ್ರಮವು ಕಾರ್ಯನಿರ್ವಹಣೆಯಲ್ಲಿನ ಹೊಸ ಮುಖಗಳನ್ನು ಮತ್ತು ವೈಶಿಷ್ಟ್ಯತೆಗಳನ್ನು ಒಳಗೊಂಡಿತ್ತು, ಅವರು ಸಮಾಜದಲ್ಲಿ ತಮ್ಮ ಪ್ರಭಾವವನ್ನು ಬಲಪಡಿಸುತ್ತಿದ್ದುದನ್ನು ದಾಖಲಿಸಿತು. ಪರಿಶ್ರಮ ಸಾಧಕ ಹಾಗೂ ಯಶಸ್ವಿ ಉದ್ಯಮಿ ಪ್ರಶಸ್ತಿ ನೀಡಿ ಗೌರವಿಸಲಾಯಿತು
  • ಮೂರನೇ ವಾರ್ಷಿಕೋತ್ಸವ (2024): (ಬದುಕು ಭವಿಷ್ಯ) ಬಳ್ಳಾರಿ ವಿಜಯನಗರ ಜಿಲ್ಲೆಯ ಮುನಿರಾಬಾದನ ಸರ್ ಎಂ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ “ಬದುಕು ಭವಿಷ್ಯ” ಎಂಬ ಶೀರ್ಷಿಕೆಯಡಿ ಕಾರ್ಯಕ್ರಮವು ಶಿವಾನಂದ ಸ್ವಾಮಿಯವರ ವೇದಿಕೆ ಎಂದು ಅವರ ಸ್ಮರಣಾರ್ಥವಾಗಿ ತುಂಬಾ ವಿಜೃಂಭಣೆಯಾಗಿ ವೃತ್ತಿಪರ ಏಳಿಗೆಯ ತರಬೇತಿಯೊಂದಿಗೆ ಕೆಲವೇ ಸೀಟುಗಳನ್ನು ಸೀಮಿತವಾಗಿಸಿ ಯಶಸ್ವಿಯಾದ ಸಾರ್ಥಕ ಕಾರ್ಯಕ್ರಮ ಇದಾಗಿತ್ತು. ಪರಸ್ಪರ ಪರಿವಾರ ಪರಿಶ್ರಮ ಸಾಧಕ ಹಾಗೂ ಯಶಸ್ವಿ ಉದ್ಯಮಿ ಪ್ರಶಸ್ತಿಗಳನ್ನು ಸಹ ನೀಡಿ ಗೌರವಿಸಲಾಯಿತು. ಶ್ರೀಯುತ ದಯಾನಂದ್ ಹೆಚ್ಒ ತರಿಕೇರಿ ಇವರ ವಿಚಾರಧಾರೆ ಹಾಗೂ ಇವರ ಪರಿಸರ ಕಾಳಜಿ ನಾಡು-ನುಡಿ ಪರಿಚಾರಿಕೆಯನ್ನು ಗಣನೆಗೆ ತೆಗೆದುಕೊಂಡು ಇವರನ್ನು ಪರಸ್ಪರ ವರ್ಷದ ಕನ್ನಡಿಗ ಎಂದು ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.ಶ್ರೀ ದಯಾನಂದ್ ಹೆಚ್ ಓ ತರಿಕೇರಿ, ಪರಿಸರ ಕಾಳಜಿಯ ಕುರಿತು ಮಾತನಾಡಿದರು, ತಮ್ಮ ದೇಶಭಕ್ತಿಯ ಕಾರ್ಯಗಳನ್ನು ಮತ್ತು ನಾಡು-ನುಡಿ ಪರಿಚಾರಿಕೆಯನ್ನು ವ್ಯಕ್ತಪಡಿಸಿದರು.
  • “ತರಬೇತಿ ತರಬೇತಿಗೇ ಬೇಕಾದ ದಾರಿ, ಸಾಧನೆಗಳೇ ಸವಾಲು, ಬದಲಾವಣೆಯ ಬಾಗಿಲು ಪರಿಶ್ರಮವೇ ತರಬೇತಿಯ ಧರ್ಮಗುಟ್ಟು, ನಾವು ಬಿತ್ತಿದ ಬೀಜದ ಫಲವಿತ್ತ. "ಬದುಕು ಭವಿಷ್ಯ" ಎಂಬ ದೀಪಾಲೋಚನೆ, ಮುಂದಿನ ಹೆಜ್ಜೆಯೇ ಪರಸ್ಪರ ಭರವಸೆ ಜ್ಯೋತಿಯಾರ್ಚನೆ.”

ಪರಸ್ಪರ ಸದಸ್ಯರ ಆಶಯ

ಒಂದು ನಿಸ್ವಾರ್ಥ ಸೇವಾ ಸಂಸ್ಥೆ. ಇಲ್ಲಿ ಜಾತಿ,ಧರ್ಮ,ಲಿಂಗ, ಭೇದವಿಲ್ಲದೆ ಎಲ್ಲರಿಗೂ ಸಮಾನ ಮತ್ತು ಮುಕ್ತ ಅವಕಾಶ ಕಲ್ಪಿಸುವ ಒಂದು ಮಹಾನ್ ವೇದಿಕೆ. ಪರಸ್ಪರದ ಮೂಲ ಉದ್ದೇಶ "ಅಕ್ಷರ-ಆಹಾರ-ಆರೋಗ್ಯ" ಎಂಬ ಮೂರು ಸಿದ್ಧಾಂತಗಳ ಜೊತೆ ಸರ್ವರನ್ನೂ ಆರ್ಥಿಕ ಸಬಲೀಕರಣದೆಡೆಗೆ ಕೊಂಡೊಯ್ಯುವುದು. ಅಭಿಜ್ಞಾನ, ಅರಿವು, ಗುರುತು, ಜ್ಞಾನ, ತಿಳಿವಳಿಕೆ, ಪ್ರಜ್ಞೆ, ಬುದ್ಧಿ, ಸಂವೇದನೆ. ಜೀವನದಲ್ಲಿ ಏನನ್ನಾದರೂ ಸಾಧಿಸುವ ಛಲ ಹೊಂದಿರುವ ವ್ಯಕ್ತಿ ಸತತ ಪರಿಶ್ರಮ ಮತ್ತು ದೃಢಸಂಕಲ್ಪ ಎಂಬ ಇವೆರಡು ಬಾಣಗಳನ್ನು ತನ್ನ ಬತ್ತಳಿಕೆಯಲ್ಲಿ ಯಾವಾಗಲೂ ಇಟ್ಟುಕೊಂಡಿರಬೇಕಾಗುತ್ತದೆ. ಅದಾವ ಕಾಲದಲ್ಲಿ ಅವುಗಳ ಪ್ರಯೋಗ ಒದಗಿಬರುತ್ತದೆಯೋ ಗೊತ್ತಾಗುವುದಿಲ್ಲ! ಅನೇಕ ಸಾಧಕರ ಜೀವನವನ್ನು ಓದುವುದರಿಂದ ಸ್ಪೂರ್ತಿ ದೊರೆಯುತ್ತದೆ. ಮನಸ್ಸು ಯಾವುದನ್ನು ಹೆಚ್ಚೆಚ್ಚು ಯೋಚಿಸುವುದೋ? ಓದುವುದೋ? ವಿಮರ್ಷಿಸುವುದೋ? ಅದರ ಕಡೆ ಅದು ತುಂಬಾ ಫೋಕಸ್ ಆಗುತ್ತದೆ. ಇದು ಮನಸ್ಸಿನ ವ ಮನುಷ್ಯನ ಸಹಜ ಗುಣ ಹಾಗೂ ಯಶಸ್ಸಿನ ರಹಸ್ಯವೂ ಹೌದು! ಯಶಸ್ಸಿಗೆ ಯಾವುದೇ ನಿರ್ದಿಷ್ಟ ಅಂಕೆಯ ಮೆಟ್ಟಿಲುಗಳಿಲ್ಲ. ಯಶಸ್ಸಿಗೆ ಶಾರ್ಟಕಟ್, ಕಳ್ಳದಾರಿ ಅದು ಇದು ಎನ್ನುವುದು ಏನಿಲ್ಲ. ಅದೇನಿದ್ದರೂ ಮೂರ್ಖರು ಸೃಷ್ಟಿಸಿಕೊಂಡ ಭ್ರಮೆ. ಒಂದು ವೇಳೆ ಆ ಶಾರ್ಟಕಟ್ ನಲ್ಲಿ ದಕ್ಕಿಸಿಕೊಂಡ ಯಶಸ್ಸು ಬಹುಕಾಲ ಉಳಿಯುವುದಿಲ್ಲ. ಅದರ ವ್ಯಾಲಿಡಿಟಿ ತುಂಬಾ ಕಡಿಮೆ! ಹಾಗಾಗಿ ಸತತ ಪರಿಶ್ರಮ ಮತ್ತು ದೃಢಸಂಕಲ್ಪ ಇದರ ಜೊತೆ ಸಮಯಪಾಲನೆ, ಸತತ ಅಧ್ಯಯನ, ಏಕಾಗ್ರತೆ, ಹಾಗೂ ಬುದ್ಧಿವಂತಿಕೆ ಇವುಗಳನ್ನೆಲ್ಲ ಹದವಾದ ಪ್ರಮಾಣದಲ್ಲಿ ಮಿಶ್ರಣಮಾಡಿಕೊಂಡರೆ ಯಶಸ್ಸು ಅನ್ನುವ ಹಬ್ಬದೂಟವನ್ನು ಸವಿಯಬಹುದು! ಇವೆಲ್ಲವೂ ಒಂದೇ ಒಂದು ಪರಸ್ಪರ ಎಂಬ ಕೊಂಡಿಯೊಂದರಲ್ಲಿ ಬೆಸೆದಿದೆ ಎಂದರೆ ತಪ್ಪಾಗಲಾರದು ಇಂಥಹ ದೂರ ದೃಷ್ಟಿಕೋನದ ಯೋಚನೆ ಮತ್ತು ಯೋಜನೆಯ ಸಣ್ಣ ಪ್ರಯತ್ನದಲ್ಲಿ ದೊಡ್ಡ ಯಶಸ್ಸನ್ನು ಕಂಡು ಇಂದಿನ ಈ ಮಹಾ ವೇದಿಕೆಗೆ ಸತತ ಪರಿಶ್ರಮದ ಜೊತೆಗೆ ನಿರಂತರ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡುವಲ್ಲಿ ತಮ್ಮನ್ನು ಸಂಪೂರ್ಣವಾಗಿ ಪರಸ್ಪರಕ್ಕಾಗಿ ತೊಡಗಿಸಿಕೊಂಡಿರುವ ಶ್ರೀಯುತ ಮಲ್ಟಿ ಮೀಡಿಯಾ ಚಂದ್ರು ಅಣ್ಣ ಅವರಿಗೂ ಧನ್ಯವಾದಗಳನ್ನು ಅರ್ಪಿಸುತ್ತಾ ನಿಮ್ಮೆಲ್ಲರ ಸಕ್ರಿಯತೆ ಹಾಗೂ ಪಾಲ್ಗೊಳ್ಳುವಿಕೆ ಪರಸ್ಪರದೊಂದಿಗೆ ನಿರಂತರವಾಗಿ ಹೀಗೆ ಮುಂದುವರೆಯಲಿ ಎಂದು ಬಯಸುತ್ತೇವೆ.

ಪರಸ್ಪರ

ನಮ್ಮ ಪರಸ್ಪರ ಸಮೂಹ ಇರುವುದೇ ಸಮಾಜಮುಖಿ ಸೇವೆಯನ್ನು ಮಾಡುತ ಸ್ವಾವಲಂಬಿಗಳನ್ನಾಗಿ ಮಾಡುವುದು ಅದುವೇ ನಮ್ಮಿಂದ ನಮಗಾಗಿ ಎಂಬ ಧ್ಯೇಯ ವಾಕ್ಯದಿಂದ ವಿಭಿನ್ನ ವಿಚಾರದಿಂದ ತಲೆಯೆತ್ತಿದ ಸಮೂಹ.

ನಮ್ಮ ಸಂಪರ್ಕಗಳು