ನಿಜವಾದ ಸಂಪತ್ತು ಸಂಪತ್ತಲ್ಲ

ನಿಜವಾದ ಸಂಪತ್ತು ಸಂಪತ್ತಲ್ಲ, ಮಾನವೀಯತೆ, ಪ್ರೀತಿ, ಮತ್ತು ವಾತ್ಸಲ್ಯ  ನೆನಪುಗಳು ಮಾತ್ರ

ಹಣ ಸಂಪಾದನೆ ಅಗತ್ಯ, ಆದರೆ ಮೌಲ್ಯಗಳು ಜೀವಮಾನ ಭದ್ರತೆ ನೀಡುತ್ತವೆ. ಜೀವನವನ್ನು ಸಂಪತ್ತಿನಿಂದ ಅಲ್ಲ, ಮೌಲ್ಯಗಳಿಂದ ಶ್ರೀಮಂತಗೊಳಿಸೋಣ!"

* ಇಂದು ನಾವು ಹಣದ ಹಿಂದೆ ಓಡುತ್ತಲೇ ಇರುತ್ತೇವೆ – ಹೆಚ್ಚೆಚ್ಚು ಸಂಪಾದಿಸಬೇಕು, ಹೆಚ್ಚು ಭವ್ಯ ಜೀವನ ನಡೆಸಬೇಕು, ಹೆಚ್ಚು ಸಾಮಗ್ರಿಗಳನ್ನು ಸಂಗ್ರಹಿಸಬೇಕು! ಆದರೆ ಈ ಓಟದ ಮಧ್ಯೆ ನಾವು ಏನನ್ನು ಕಳೆದುಕೊಳ್ಳುತ್ತಿದ್ದೇವೆ ಎಂಬುದು ಮನಸ್ಸಿನ ತುದಿಯಲ್ಲಾದರೂ ಬಂತಾ?

* ನಿಜವಾದ ಸಂಪತ್ತು ಬಂಗಾರ, ಬೆಳ್ಳಿ, ಬ್ಯಾಂಕ್ ಖಾತೆಗಳಲ್ಲಿಲ್ಲ. ಅದು ಪ್ರೀತಿ, ಮಾನವೀಯತೆ, ಸ್ನೇಹ, ಒಬ್ಬರಿಗೊಬ್ಬರು ನೀಡುವ ಬೆಂಬಲ, ಹಾಗೂ ಹೃದಯದಲ್ಲಿ ಉಳಿಯುವ ನೆನಪುಗಳಲ್ಲಿ ಅಡಗಿದೆ. ಹಣ ಜೇಬನ್ನು ತುಂಬಬಹುದು, ಆದರೆ ಮಾನವೀಯತೆ ಮಾತ್ರ ಮನಸ್ಸನ್ನು ತುಂಬಬಲ್ಲದು.

* ಎಷ್ಟೇ ಹಣವಿದ್ದರೂ, ಪ್ರೀತಿಯಿಲ್ಲದ ಕುಟುಂಬ ಕಣ್ಮುಂದೆ ಬಿಕಾರಿಯಂತಿರುತ್ತದೆ. ಎಷ್ಟೇ ಆಸ್ತಿಯಿದ್ದರೂ, ಸ್ನೇಹಿತರಿಲ್ಲದ ಜೀವನ ನಿರರ್ಥಕ. ನಿಜವಾದ ಶ್ರೀಮಂತಿಕೆ ಹಣದಿಂದಲೇ ಉಂಟಾಗುವುದಿಲ್ಲ; ಅದನ್ನು ಮೌಲ್ಯಗಳು, ಸಂಬಂಧಗಳು ಮತ್ತು ಒಳ್ಳೆಯ ಕಾರ್ಯಗಳ ಮೂಲಕ ಪಡೆಯಬೇಕು.

* ಸಂಪತ್ತಿನ ಹಿಂದೆ ಓಡುವ ಈ ಯುಗದಲ್ಲಿ, ನಾವು ಸಜ್ಜನತೆ, ಸಹಾನುಭೂತಿ ಮತ್ತು ಪರೋಪಕಾರವನ್ನು ಮರೆಯಬಾರದು. ಹಣ ಸಂಪಾದಿಸುವುದು ಇಂದಿನ ಅಗತ್ಯ, ಆದರೆ ಮಾನವೀಯತೆ ಮತ್ತು ನಂಬಿಕೆ ನಾಳೆಯ ಪರಂಪರೆ.

* ಇಂದು ಒಬ್ಬರಿಗೆ ಸಹಾಯ ಮಾಡಿ – ಏಕೆಂದರೆ ನಾಳೆ ಅವರು ನಿಮ್ಮ ನೆನಪನ್ನು ಹೃದಯದಲ್ಲಿ ಇರಿಸಿಕೊಳ್ಳುವರು. ಶಾಶ್ವತವಾಗಿ ಉಳಿಯುವುದು ಹಣವಲ್ಲ, ನಿಮ್ಮ ಒಳ್ಳೆಯ ಕಾರ್ಯಗಳು ಮಾತ್ರ!

      ಪರಸ್ಪರ ನಿರಂತರ