• ಪರಸ್ಪರ ಸಮೂಹ

    ವ್ಯಕ್ತಿತ್ವ ಎಂಬುದು ಅನೇಕ ಶಕ್ತಿಗಳ ಸಂಗಮ. ಆದರ್ಶ,ಸದಾಚಾರ,ಶ್ರದ್ಧೆ, ನಿಷ್ಠೆ, ದಕ್ಷತೆ, ಎಚ್ಚರ-ಸನ್ನಿವೇಶಗಳೊಡನೆಹೊಂದಿಕೊಳ್ಳುವ ಸಾಮರ್ಥ್ಯ, ವೃತ್ತಿಪ್ರಿಯತೆ,ಪರೋಪಕಾರ ಬುದ್ಧಿ,ಪ್ರಾಮಾಣಿಕತೆ....ಗಳು ವ್ಯಕ್ತಿತ್ವ ನಿರ್ಮಿಸುವ ಶಕ್ತಿಗಳು.

  • ಪರಸ್ಪರ ಸಮೂಹ

    ಪರಸ್ಪರರಲ್ಲಿ ನೀನೊಬ್ಬನಾಗು, ಏನಾದರಾಗು ಮೊದಲು ಮಾನವನಾಗು.

  • ಪರಸ್ಪರ ಸಮೂಹ

    ಪರಸ್ಪರ ನಿಂತ ನೀರಲ್ಲ.ಸಪ್ತ ಸಾಗರದಾಚೆಯೂ ಸಾಗುವ ಮಾನವತಾ ವೇದಿಕೆ. ಉಚಿತ ನೋಂದಣಿ.

  • ಪರಸ್ಪರ ಕುಟುಂಬದ ಮಹಿಳಾ ಶಕ್ತಿಯರು.

ಇಲ್ಲಿ ಯಾರೂ ಮುಖ್ಯರಲ್ಲ ಯಾರೂ ಅಮುಖ್ಯರಲ್ಲ ಯಾವುದು ಯಃಕಶ್ಚಿತವಲ್ಲ! ಇಲ್ಲಿ ಯಾವುದಕ್ಕೂ ಮೊದಲಿಲ್ಲ ಯಾವುದಕ್ಕೂ ತುದಿಯಿಲ್ಲ ಯಾವುದೂ ಎಲ್ಲಿಯೂ ನಿಲ್ಲುವುದೂ ಇಲ್ಲ, ಕೊನೆ ಮುಟ್ಟುವುದೂ ಇಲ್ಲ! ಇಲ್ಲಿ ಅವಸರವೂ ಸಾವಧಾನದ ಬೆನ್ನೇರಿದೆ! ಇಲ್ಲಿ ಎಲ್ಲದಕ್ಕೂ ಇದೆ ಅರ್ಥ ಯಾವುದೂ ಅಲ್ಲ ವ್ಯರ್ಥ ನೀರೆಲ್ಲವೂ ತೀರ್ಥ! - ಕುವೆಂಪು.

"ನಮ್ಮ ಬಗ್ಗೆ"

"ಸೇವೆ ಮತ್ತು ಸಬಲೀಕರಣದೆಡೆಗೆ ನಮ್ಮ ಹೆಜ್ಜೆ"

ಮನುಷ್ಯ ತನ್ನ ನೋವನ್ನು, ತನ್ನ ತೊಂದರೆಗಳನ್ನು ಹಂಚಿಕೊಳ್ಳಲು ಇನ್ನೊಬ್ಬರನ್ನ ಹುಡುಕುತ್ತಾನೆಯೇ ಹೊರತು, ಇನ್ನೊಬ್ಬರ ನೋವುಗಳನ್ನು ಕೇಳಲು ಎಂದಿಗೂ ಮುಂದೆ ಬರಲಾರ. ಆದರೆ ವಿಭಿನ್ನತೆಯ ಅನಾವರಣದಿಂದ ಕೂಡಿದ ನಮ್ಮ ಪರಸ್ಪರ ಸಮೂಹ ಇರುವುದೇ, ಸಮಾಜಮುಖಿ ಸೇವೆಯನ್ನು ಮಾಡುತ ಸ್ವಾವಲಂಬಿಗಳನ್ನಾಗಿ ಮಾಡುವುದು. ಬನ್ನಿ ಬಂಧುಗಳೇ ನಮ್ಮ ಪರಸ್ಪರ ಸಮೂಹದ ಬಗ್ಗೆ ಸಂಕ್ಷಿಪ್ತ ಮಾಹಿತಿ ತಿಳಿಯೋಣ... ಮೊಟ್ಟ ಮೊದಲಿಗೆ ಪರಸ್ಪರವೇ ಒಂದು ವಿನೂತನ ಹಾಗೂ ವಿಶಿಷ್ಟವಾದಂತಹ ಪ್ರಯತ್ನ. ಅದುವೇ ನಮ್ಮಿಂದ ನಮಗಾಗಿ ಎಂಬ ಧ್ಯೇಯ ವಾಕ್ಯದಿಂದ ವಿಭಿನ್ನ ವಿಚಾರದಿಂದ ತಲೆಯೆತ್ತಿದ ಸಮೂಹ. ಇದರಲ್ಲಿ 14 ವಿಭಾಗಗಳಿವೆ. ಆ ವಿಭಾಗಗಳ ಮಹತ್ವವು ಕೂಡ ಅಪಾರವಾಗಿದೆ. ಮುಂದುವರಿಸಿ





ಸೇವೆ ಮತ್ತು ಸಬಲೀಕರಣದೆಡೆಗೆ ನಮ್ಮ ಹೆಜ್ಜೆ

ಮನುಷ್ಯ ತನ್ನ ನೋವನ್ನು ತನ್ನ ತೊಂದರೆಗಳನ್ನು ಹಂಚಿಕೊಳ್ಳಲು ಇನ್ನೊಬ್ಬರನ್ನ ಹುಡುಕುತ್ತಾನೆಯೇ ಹೊರತು ಇನ್ನೊಬ್ಬರ ನೋವುಗಳನ್ನ ಕೇಳಲು ಎಂದಿಗೂ ಮುಂದೆ ಬರಲಾರ... ಆದರೆ ವಿಭಿನ್ನತೆಯ ಅನಾವರಣದಿಂದ ಕೂಡಿದ ನಮ್ಮ *ಪರಸ್ಪರ ಸಮೂಹ* ಇರುವುದೇ ಸಮಾಜಮುಖಿ ಸೇವೆಯನ್ನು ಮಾಡುತ ಸ್ವಾವಲಂಬಿಗಳನ್ನಾಗಿ ಮಾಡುವುದು. ಬನ್ನಿ ಬಂಧುಗಳೇ ನಮ್ಮ ಪರಸ್ಪರ ಸಮೂಹದ ಬಗ್ಗೆ ಸಂಕ್ಷಿಪ್ತ ಮಾಹಿತಿ ತಿಳಿಯೋಣ... ಮೊಟ್ಟ ಮೊದಲಿಗೆ ಪರಸ್ಪರವೇ ಒಂದು ವಿನೂತನ ಹಾಗೂ ವಿಶಿಷ್ಟವಾದಂತಹ ಪ್ರಯತ್ನ ಅದುವೇ ನಮ್ಮಿಂದ ನಮಗಾಗಿ ಎಂದು, ಅದರಲ್ಲಿ 14 ವಿಭಾಗಗಳಿವೆ. ಆ ವಿಭಾಗಗಳ ಮಹತ್ವವು ಕೂಡ ಅಪಾರವಾಗಿದೆ.

ಮಾನವತಾ ವೇದಿಕೆ

 ನಮ್ಮಿಂದ ನಮಗಾಗಿ ಎಂಬ ಧ್ಯೇಯ ವಾಕ್ಯದಿಂದ ವಿಭಿನ್ನ ವಿಚಾರದಿಂದ ತಲೆಯೆತ್ತಿದ ಸಮೂಹವೇ ನಮ್ಮ ಈ ಪರಸ್ಪರ ಮಾನವತಾ ವೇದಿಕೆ. ಸಮಾಜಮುಖಿ ಕಾರ್ಯಗಳಿಗೆ ಸದಾ ತನ್ನನ್ನು ಒಪ್ಪಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಈ ವೇದಿಕೆಯಿಂದ ತುಂಬಾ ಜನರಿಗೆ ಬಹಳ ಸಹಾಯಕಾರಿಯಾಗಿದೆ.ಕಷ್ಟದಲ್ಲಿರುವವರಿಗೆ ಕೈ ಹಿಡಿದಿದೆ, ಅನಾರೋಗ್ಯದಲ್ಲಿರುವವರಿಗೆ ಸಹಾಯ ಮಾಡಿದೆ, ಪರಿಸರ ಸ್ನೇಹಿ ಪರಿಸರ ಕಾಳಜಿಯನ್ನು   ಮೈಗೂಡಿಸಿಕೊಂಡಿದೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಎಲೆಮರೆಕಾಯಿಯಂತೆ ತಮ್ಮ ಅನುಪಮ ಸೇವೆಯನ್ನು...


ಮುಂದುವರಿಸಿ

ಪಾಠಶಾಲಾ ವಿಭಾಗ

 ಶಾಲೆಯಲ್ಲಿ ಮಕ್ಕಳಿಗೆ ಪಾಠ ಭೋದನೆ ಮಾಡಿದ ಹಾಗೆ ಪ್ರತಿಯೊಂದು ಉಪಯುಕ್ತ ಸೇವೆಗಳ ಮಾಹಿತಿ ಹಾಗೂ ಅರ್ಜಿ ಹಾಕುವುದನ್ನು ಆನ್ಲೈನ್ ತರಬೇತಿ ಮುಖಾಂತರ ನಾಳೆಯ ಬದುಕಿಗಾಗಿ ಸದಸ್ಯರಿಗೆ ಕಲಿಸಿ ಆದಾಯದ ಮೂಲ ಹೆಚ್ಚಿಸುವುದು. ಪರಸ್ಪರ ಪಾಠಶಾಲಾದ ಮುಖ್ಯ ಧ್ಯೇಯವೇ "ಹೆಚ್ಚು ಕಲಿಕೆ, ಹೆಚ್ಚು ಗಳಿಕೆ".


ಮುಂದುವರಿಸಿ

ಶಿಕ್ಷಣ ಮತ್ತು ಕೌಶಲ್ಯ ವಿಭಾಗ

 ಶಿಕ್ಷಣ ಮತ್ತು ಕೌಶಲ್ಯ ವಿಭಾಗದಲ್ಲಿ ನಾವು ಆಸಕ್ತಿಗೆ ತಕ್ಕ ಆದಾಯ ಬರುವ ಕೌಶಲ್ಯ, ಆಯಾ ಕಾಲಕ್ಕೆ ತಕ್ಕಂತೆ ಗುರು ಶಿಷ್ಯ ಪದ್ದತಿಯ ಅರ್ಹತೆ ಹಾಗೂ ಆಸಕ್ತಿಗೆ ಅನುಗುಣವಾಗಿ ಉದ್ಯೋಗ ಕೌಶಲ್ಯಗಳ ಸಾಮಾನ್ಯ ಜ್ಞಾನ ಮತ್ತು ಸಂಹವಹನ ಕೌಶಲ್ಯ ಕಲೆಗಳ ಕಲಿಕೆ ಮಾಡಿಕೊಂಡು ವ್ಯಕ್ತಿತ್ವ ವಿಕಾಸನವೂ ಕೂಡ ನಾವಿಲ್ಲಿ ಕಲಿಯುತ್ತೇವೆ.


ಮುಂದುವರಿಸಿ

ತಾಂತ್ರಿಕ ನೆರವು ವಿಭಾಗ

 ನಾವು ನೀಡುತ್ತಿರುವ ಸೇವೆಯಲ್ಲಿ ನಮಗೆ ಏನಾದರೂ ತಾಂತ್ರಿಕ ತೊಂದರೆಗಳು ಎದರು ಆದಾಗ ಅಥವಾ ಇನ್ನಿತರ ಸಮಸ್ಯೆಗಳು ಎದುರಾದಾಗ ಯಾವುದೇ ರೀತಿ ಫಲಾಪೇಕ್ಷಿಸದೆ ಅಂತರಜಾಲದ ಮುಖಾಂತರ ಅವರ ಸಮಸ್ಯೆಗೆ ಪರಿಹಾರ ನೀಡುತ್ತಾರೆ, ಪರಸ್ಪರರು ತಾಂತ್ರಿಕ ವಿಭಾಗದವರನ್ನು *ತಾಂತ್ರಿಕ ವೀರರು ಅಥವಾ ತಾಂತ್ರಿಕ ಪಡೆ* ಎಂದೇ ಕರೆಯುತ್ತಾರೆ. ಪರಸ್ಪರ ತಾಂತ್ರಿಕ ವೀರರಿಂದ ನಮಗೆ ಯಾವುದೇ ತಾಂತ್ರಿಕ ದೋಷ ಉಂಟಾದಲ್ಲಿ ತ್ವರಿತವಾಗಿ ಪರಿಹರಿಸಿಕೊಳ್ಳುತ್ತಿದ್ದೇವೆ.


ಮುಂದುವರಿಸಿ

ಸ್ವಾವಲಂಬಿ ವಿಭಾಗ

ಸ್ವಾವಲಂಬಿ ಮುಖಾಂತರ ಮಾನಸಿಕವಾಗಿ, ಆರ್ಥಿಕವಾಗಿ ಹೇಗೆ ಪ್ರಬಲರನ್ನಾಗಿಸುವುದು ಎಂಬುದನ್ನು ತಿಳಿಸಿ, ಹೊಸ ಯೋಜನೆಗಳನ್ನು ಹೊತ್ತು ತಂದು ಪರಸ್ಪರ ಸದಸ್ಯರಿಗೆ ಬೆನ್ನೆಲುಬಾಗಿ ನಿಲ್ಲುವುದು, ವೃತ್ತಿ ಕೌಶಲ್ಯಗಳನ್ನು ಹೊಂದಿದ್ದು ಆರ್ಥಿಕವಾಗಿ ಕಷ್ಟದಲ್ಲಿರುವವರಿಗೆ ಸಹಾಯ ಹಸ್ತದ ನೆರವು ನೀಡಿ ಅವರಿಗೆ ಜೀವನೋಪಾಯ ಕಲ್ಪಿಸುವ ವ್ಯವಸ್ಥೆ ಹಾಗೂ ಸರ್ಕಾರದ ವಿವಿದ ಯೋಜನೆಗಳ ಫಲಾನುಭವಿಗಳಾಗಿಸುವ ನಿಟ್ಟಿನಲ್ಲಿ ಇಷ್ಟೆಲ್ಲಾ ಭರವಸೆ ದೊರಕಿದ ಮೇಲೆ ನಮಗೆ ಖಂಡಿತವಾಗಿಯೂ ಇನ್ನು ಹೆಚ್ಚಿನ ಸೇವೆಗಳನ್ನ ನೀಡಬಹುದ...


ಮುಂದುವರಿಸಿ

ವ್ಯಾಪಾರ ವಿಭಾಗ

 Start-up, MSME, Franchise, Distribution, Retail ಕ್ಷೇತ್ರದ ಹಾಗೂ ಸಣ್ಣ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಬಯಸುವಂಥವರಿಗೆ ವೇದಿಕೆ ಕಲ್ಪಿಸಿ, ಪ್ರತಿ ತಿಂಗಳ ಕೊನೆಯ ಭಾನುವಾರ ರಾಜ್ಯದ ವಿವಿಧ ಜಿಲ್ಲೆಯಲ್ಲಿ ವ್ಯಾಪಾರ ವಹಿವಾಟು ನಡೆಸುವ ಯಶಸ್ವಿ ಉದ್ಯಮಿಗಳಿಂದ ಯಶೋಗಾಥೆ/ ಅವರಿಗೆ ಗೌರವಿಸುವುದು, ವ್ಯಾಪಾರ ಅನ್ವೇಷಕರು (Business Seekers) & ವ್ಯಾಪಾರ ಪೂರೈಕೆದಾರರು (Business Providers) ವ್ಯಾಪಾರ ಭೇಟಿ (Business meet up) ಮೂಲಕ ಆದಾಯದ ಮೂಲಕ್ಕೆ ದಾರಿ ಮಾಡಿಕೊಡು...


ಮುಂದುವರಿಸಿ

ಕೃಷಿ ವಿಭಾಗ

 ಸಾವಯುವ ರೀತಿಯಲ್ಲಿ ನಾವು ಕಡಿಮೆ ಬಂಡವಾಳದಲ್ಲಿ ಹೆಚ್ಚು ಆದಾಯ ತಂದು ಕೊಡುವಂತಹ ಕೃಷಿಯೇತರ ಚಟುವಟಿಕೆಗಳ ಮಾಹಿತಿಯನ್ನು ಮತ್ತು ಕೃಷಿಯಲ್ಲಿ ಕಡಿಮೆ ಬಂಡವಾಳದಲ್ಲಿ ಯಶಸ್ವಿ ಆದಂತಹ ಸಂಪನ್ಮೂಲ ವ್ಯಕ್ತಿಗಳ ನಡುವೆ ಸಂಪರ್ಕ ಕಲ್ಪಿಸಿ, ಇತರರಿಗೂ ಮಾದರಿಯಾಗುವಂತೆ ಕೃಷಿ ಪದ್ಧತಿಯನ್ನು ಕಲಿಯುವದರ ಜೊತೆಗೆ ಹಣವನ್ನು ಸಂಪಾದಿಸಿ ಮಣ್ಣಿನ ಫಲವತ್ತತೆಯನ್ನು ಹಾಗೂ ಮಾನವನ ಆರೋಗ್ಯ ಕೂಡ ಕಾಪಾಡಿಕೊಳ್ಳಬಹುದು. ಸಾವಾಯವ ಕೃಷಿ ಉತ್ಪನ್ನಗಳ ತಯಾರಿಕೆಗೆ ಉತ್ತೇಜನ ಹಾಗೂ ಮಾರುಕಟ್ಟೆ ಸ್ಥಾಪನೆ.  ಜೊತೆಯ...


ಮುಂದುವರಿಸಿ

ದೇಸಿ ಸಂತೆ ವಿಭಾಗ

 ದೇಸಿ ಸಂತೆ ಮೂಲಕ ಗುಡಿ ಕೈಗಾರಿಕೆಯ ವಸ್ತುಗಳನ್ನು ಮುನ್ನಲೆಗೆ ತಂದು, ಒಬ್ಬರಿಂದ ಒಬ್ಬರು ಖರೀದಿ ಮಾಡಲು ಪ್ರೇರೆಪಿಸಿ, ನಿರುದ್ಯೋಗ ಸಮಸ್ಯೆಗೆ ಪರ್ಯಾಯ ವ್ಯವಸ್ಥೆ ಮಾಡಿ ಅಂತರ್ಜಾಲ ತಾಣ, ಸಾಮಾಜಿಕ ಜಾಲತಾಣಗಳ ಮೂಲಕ ಮಾರುಕಟ್ಟೆ ಒದಗಿಸಿಕೊಳ್ಳಲು.ವಿಭಿನ್ನವಾದ ಕೈಯಿಂದ ಮಾಡಿದ ಕಲೆ, ಗುಡಿ ಕೈಗಾರಿಕೆ, ಕರಕುಶಲ ವಸ್ತುಗಳು, ಸ್ಥಳೀಯ ಜನಪ್ರಿಯ ಪದಾರ್ಥಗಳು ಹಾಗೂ ಮನೆಯಲ್ಲಿ ತಯಾರಿಸಿದಂತ ಆಹಾರ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿ ಒಳ್ಳೆ ವ್ಯಾಪಾರ ವೇದಿಕೆ ಕಲ್ಪಿಸಿ ಕೊಡುವುದು. ಪ...


ಮುಂದುವರಿಸಿ

ಸೇವಾ ಡಬ್ಬಿ / ಉಳಿತಾಯ ಡಬ್ಬಿ ವಿಭಾಗ

 ನಮ್ಮ ದಿನನಿತ್ಯದ ಆದಾಯದ ಮೂಲದಲ್ಲಿ ಒಂದು ಭಾಗ ತೆಗೆದು ಇಡುವುದರಿಂದ ನಮಗೆ ಏನೆಲ್ಲಾ ಅನುಕೂಲವಾಗುತ್ತದೆ ಮತ್ತು ನಾವೆಲ್ಲ ಹೇಗೆ ಅಭಿವೃದ್ಧಿ ಹೊಂದಬಹುದು ಎಂದು ತಿಳಿಸಿಕೊಡುವ ಉದ್ದೇಶವೇ ಸೇವಾ/ಉಳಿತಾಯ ಡಬ್ಬಿ.ಕಾಸು ಕುಡಿಕೆ ಯಲ್ಲಿ ಹೇಗೆಲ್ಲಾ ಕಾನೂನುಬದ್ಧ ರೀತಿಯಲ್ಲಿ ಹಣ ಹೂಡಿಕೆ ಮಾಡಿ ಮುಂದಿನ ಬದುಕನ್ನು ಹಸನು ಮಾಡಿಕೊಳ್ಳಲು ಅವಕಾಶ ನೀಡುವ ಮೂಲಕ ಆರ್ಥಿಕವಾಗಿ ಸಬಲೀಕರಣದ ಹೆಜ್ಜೆಯನ್ನು ಇಡಲು ಉಳಿತಾಯ, ಠೇವಣಿ, ಹೂಡಿಕೆಯಲ್ಲಿ ತೊಡಗುವಂತೆ ಮಾಡುವುದು ಈ ವಿಭಾಗದ ಉದ್ದೇಶ."ಕೇವಲ ದುಡ್ಡು...


ಮುಂದುವರಿಸಿ

ಪ್ರವಾಸಿ ವಿಭಾಗ

 ಪ್ರತಿಯೊಬ್ಬರೂ ಕೂಡ ಪ್ರವಾಸಕ್ಕೆ ಹೋಗುವ ಮೂಲಕ ರಿಲ್ಯಾಕ್ಸ್ ಮಾಡಿಕೊಳ್ಳಲು ಬಯಸುತ್ತಾರೆ. ಜನರು ದಿನದಿಂದ ದಿನಕ್ಕೆ ಹೆಚ್ಚು ಪ್ರವಾಸಿ ಮುಖಿಯಾಗುತ್ತಿರುವ ಕಾರಣ ಈಗ ಪ್ರವಾಸೋದ್ಯಮ ಹಿಂದಿಗಿಂತಲೂ ಹೆಚ್ಚು ಬೃಹತ್ತಾಗಿ ಬೆಳೆಯುತ್ತಿದೆ. ಪ್ರವಾಸವು ದೇಶದ ಆರ್ಥಿಕ ಸ್ಥಿತಿಗತಿಗಳನ್ನು ರೂಪಿಸುವಲ್ಲಿ ಮಹತ್ವದ ಪಾತ್ರವಹಿಸುತ್ತಿದೆ, ಬಹಳಷ್ಟು ಜನರು ಪ್ರವಾಸ ಉದ್ಯಮದಲ್ಲಿ ಮಾರ್ಗದರ್ಶಿಯಾಗಿ ಕೆಲಸ ಮಾಡಲು ಆಸಕ್ತಿ ತೋರುತ್ತಿದ್ದಾರೆ ಆದರೆ ಅವರಿಗೆ ಯಾವುದೇ ತರಬೇತಿ ನೀಡಲು ಯಾವುದೇ ಸಂಸ್ಥೆಗಳು ಇಲ್...


ಮುಂದುವರಿಸಿ

ಬಹುಮುಖಿ ವಿಭಾಗ

 ನಮ್ಮ ನಾಡಿನ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿರುವ ವಿಶೇಷ ವ್ಯಕ್ತಿತ್ವದ ಮಹನೀಯರು, ವಿಭಿನ್ನವಾದ ಪ್ರತಿಭೆಗಳು, ಕಿರುತೆರೆ, ಬೆಳ್ಳಿ ತೆರೆ ಕಲಾವಿದರು / ಕಲಾ ತಂಡಗಳು ಹಾಗೂ ಕಲಾ ತರಬೇತಿದಾರರು/ಕಲಾ ತರಬೇತಿ ತಂಡಗಳ ಪ್ರೋತ್ಸಾಹ, ಪ್ರಚಾರ, ಅಭಿವೃದ್ಧಿ, ಉತ್ತೇಜನದಿಂದ ವಿಶ್ವ ಪರಿಚಯದೆಡೆಗೆ ಕೊಂಡೊಯ್ಯುವುದರ ಜೊತೆ-ಜೊತೆಗೆ ಆದಾಯ ಗಳಿಸುವ ಮೂಲವನ್ನು ಕಂಡುಕೊಳುವುದರ ಜೊತೆಯಲ್ಲಿ ಪೋಷಣೆ ಮಾಡುವ ಮಹತ್ಕಾರ್ಯಗಳನ್ನು ಮಾಡುವ ನಿಟ್ಟಿನಲ್ಲಿ ಪರಸ್ಪರ ಬಹುಮುಖಿ ವೇದಿಕೆ ಕಾರ್ಯನಿರ್...


ಮುಂದುವರಿಸಿ

ಅರಿವಿನ ಗುರುಕುಲ ವಿಭಾಗ

 ಮಕ್ಕಳಿಂದ ಮಕ್ಕಳಿಗಾಗಿಯೇ ಎಂದು ಸಾದರಿಪಡಿಸಲಾಗಿದೆ. ಬೆಳೆಯುವ ಪೈರು ಮೊಳಕೆಯಲ್ಲಿ ಎಂದು ಹೇಳುತ್ತಾರೆ ಅಂತೆಯೇ ಇಷ್ಟೆಲ್ಲಾ ಕಾರ್ಯ ಚಟುವಟಿಕೆ ಮಾಡುತ್ತಿರುವ ನಮ್ಮ ಪರಸ್ಪರ ಸದಸ್ಯರ ಮಕ್ಕಳೇ ಆಸಕ್ತಿಯಿಂದ ಸೃಜನಶೀಲ ಹಾಗೂ ಸಕಲಕಲಾವಲ್ಲಭರಾಗುವತ್ತ ಹೆಜ್ಜೆ ಇಡುತ್ತಿದ್ದಾರೆ.ನಮ್ಮ ವ್ಯಾಪಾರ ವಹಿವಾಟಿನ ಕ್ಷೇತ್ರವನ್ನು ಉನ್ನತ ಮಟ್ಟದ ಮುಂದಿನ ಜನಾಂಗಕ್ಕೆ ಕೊಂಡ್ಯೊಯುವ ಸದೃಡ ಯುವಪಡೆ ಸೃಷ್ಟಿಸಲು ಅರಿವಿನ ಗುರುಕುಲ ಸಹಕಾರಿಯಾಗಲಿದೆ.


ಮುಂದುವರಿಸಿ

ತುರ್ತುನಿಧಿ

 ಉತ್ತಮ ಭವಿಷ್ಯಕ್ಕಾಗಿ, ಜೀವ ವಿಮೆ, ಆರೋಗ್ಯ ವಿಮೆ ಮಾತ್ರವಲ್ಲದೇ ತುರ್ತು ನಿಧಿ ಕೂಡ ಬಹಳ ಮುಖ್ಯ. ಯಾಕೆಂದರೆ ಇದು ಅನಿರೀಕ್ಷಿತ ಹಣಕಾಸಿನ ಪರಿಸ್ಥಿತಿಗಳಿಂದ ನಿಮ್ಮನ್ನು ಕಾಪಾಡುತ್ತದೆ.ಜೀವನಕ್ಕೆ ಭದ್ರತೆ ನೀಡುತ್ತೆ. ವೈದ್ಯಕೀಯ ತುರ್ತುಸ್ಥಿತಿಗಳು ಅಥವಾ ವ್ಯಾಪರ / ಉದ್ಯೋಗ ನಷ್ಟದಂತಹ ಸವಾಲುಗಳು ಉದ್ಭವಿಸಿದಾಗ ವೆಚ್ಚಗಳನ್ನು ಭರಿಸಲು ಸಹಾಯ ಮಾಡುತ್ತದೆ. ಈ ವಿಭಾಗದ ಮೂಲಕ ಅರ್ಥಿಕ ಸಹಾಯ ಅಸ್ತದ ವಿಭಿನ್ನ ಅಲೋಚನೆ ಪ್ರತಿವಾರಕ್ಕೊಮ್ಮೆ ಆಹಾರ, ಆರೋಗ್ಯ, ಅಕ್ಷರ, ವ್ಯವಹಾರ...


ಮುಂದುವರಿಸಿ

ಜೀವ ಜಲ

 ಒಂದು ಕಾಲದಲ್ಲಿ ನೆಲದಿಂದ ಮೇಲಕ್ಕೆ ಹೊರ ಚಿಮ್ಮುತ್ತಿದ್ದ ಕೆಲವು ನೀರ ಚಿಲುಮೆಗಳು ಈಗ ತಮ್ಮ ಕೆಲಸವನ್ನು ನಿಲ್ಲಿಸಿವೆ. ಓವರ್ ಫ್ಲೋ ಆಗುತ್ತಿದ್ದ ಕೊಳವೆ ಬಾವಿಗಳು ಆಯಾಸವಾಗಿ ತಮ್ಮ ಕೆಲಸವನ್ನು ನಿಲ್ಲಿಸಿವೆ. ಮನೆ ಮುಂದೆ ಕುಡಿಯುವ ನೀರಿಗಾಗಿ ಇದ್ದ ಬಾವಿಗಳಲ್ಲಿ ನೀರಿಲ್ಲದೆ ಖಾಲಿಯಾಗಿವೆ.ಎಲ್ಲಿ ನೋಡಿದರಲ್ಲಿ ಕೊಳವೆ ಬಾವಿಯ ನೀರು. ನೀರಿನ ಬಳಕೆ ಮಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.ಫರಸ್ಪರರು ಏನು ಮಾಡಬೇಕು:• ಸಾಧ್ಯವಾದಷ್ಟು ಅರಣ್ಯ ಇಲಾಖೆಯ ಜೊತೆ ಕೈ ಜೋಡಿಸಿ ಸಸಿ ನೆಟ್ಟಾದರೂ...


ಮುಂದುವರಿಸಿ

ಸಹಾಯ ಹಸ್ತ

ಪ್ರತಿಯೊಬ್ಬ ಮನುಷ್ಯನಲ್ಲೂ ಒಬ್ಬ ಸೇವಾ ಮನೋಭಾವದ ಪರೋಪಕಾರಿ ಇರುತ್ತಾನೆ ಅನ್ನೋದು ನಮ್ಮ ದೃಢವಾದ ನಂಬಿಕೆ, ಆ ಮನುಷ್ಯ ಒಬ್ಬ ಅರ್ಹ ವ್ಯಕ್ತಿಗಾಗಿ, ಒಂದು ಒಳ್ಳೆಯ ಉದ್ದೇಶಕ್ಕಾಗಿ ಕೈ ಜೋಡಿಸಲು ಕಾಯುತ್ತಿರುತ್ತಾನೆ.ಆಹಾರ, ಆರೋಗ್ಯ, ಅಕ್ಷರ ಈ ಮೂರು ವಿಷಯಗಳಿಗೆ ಸಂಬಂಧಿಸಿದಂತೆ ಆಪತ್ಕಾಲದಲ್ಲಿ ಮಾಸಿಕ / ತುರ್ತುಸ್ಥಿತಿ ಯಲ್ಲಿ ಮಾನವೀಯ ಸಹಾಯ ಹಸ್ತದ ನೆರವು ನೀಡಲು ಪರಸ್ಪರ ಪರಿವಾರ ಸದಾ ಮುಂಚೂಣಿಯ ಸಹೃದಯರು.'ಸೇವಾಹಿ ಪರಮೋ ಧರ್ಮಃ' ಎಂದು ಹೇಳುವ ಮಾತು ಸೇವೆಯೇ ಧರ್ಮಗಳಲ್ಲಿ ಶ್ರೇಷ್ಠ ಎಂದು ಸಾರುತ...


ಮುಂದುವರಿಸಿ

ನಮ್ಮ ಹೊಸ ಬ್ಲಾಗ್ ಪೋಸ್ಟ್‌ಗಳು

ಪರಸ್ಪರ

ನಮ್ಮ ಪರಸ್ಪರ ಸಮೂಹ ಇರುವುದೇ ಸಮಾಜಮುಖಿ ಸೇವೆಯನ್ನು ಮಾಡುತ ಸ್ವಾವಲಂಬಿಗಳನ್ನಾಗಿ ಮಾಡುವುದು ಅದುವೇ ನಮ್ಮಿಂದ ನಮಗಾಗಿ ಎಂಬ ಧ್ಯೇಯ ವಾಕ್ಯದಿಂದ ವಿಭಿನ್ನ ವಿಚಾರದಿಂದ ತಲೆಯೆತ್ತಿದ ಸಮೂಹ.

ನಮ್ಮ ಸಂಪರ್ಕಗಳು