ವಿನೋದ ಕುಮಾರ ರಾಯಚೂರು

ಎಲ್ಲರಿಗೂ ನಮಸ್ಕಾರ,

ನನ್ನ ಹೆಸರು ವಿನೋದ ಕುಮಾರ ರಾಯಚೂರು ಜಿಲ್ಲೆಯ, ಮಾನವಿ ತಾಲೂಕಿನ,ನೀರಮಾನವಿ ಗ್ರಾಮದವನು. ನಾನು 2019 ರಲ್ಲಿ ಸಾಮಾನ್ಯ ಸೇವಾ ಕೇಂದ್ರ ವನ್ನು ಪ್ರಾರಂಭ ಮಾಡಿದೆ.ಮೊದಮೊದಲು ನನಗೆ ತುಂಬಾ ಕಷ್ಟವಾಯಿತು ಗ್ರಾಹಕರು ನನ್ನ ಕೇಂದ್ರಕ್ಕೆ ಬರ್ತಾ ಇರಲಿಲ್ಲ..ಆದರೂ ಛಲ ಬಿಡದೆ ನನ್ನ ಕೆಲಸ ಹೇಗೆ ಅಂದ್ರೆ ಎಲ್ಲರಿಗೂ ಗ್ರಾಹಕರಿಗೆ ಯಾವುದೇ ರೀತಿ ಮೋಸ ಹೋಗ್ಬಾರ್ದು ಅನ್ನುವ ಕಾರಣಕ್ಕೆ ಯಾವುದೇ ರೀತಿಯ ಯೋಜನೆಗಳು ಇರಲಿ ನನ್ನಲ್ಲಿಯೇ ಮಾಡಿಕೊಳ್ಳಬೇಕು ಅಂತ ಏನಿಲ್ಲ ಆದರೂ ಬೇರೆ ಕಡೆ ಹೋದರು ಕೂಡ ಗ್ರಾಹಕರಿಗೆ ಮೋಸ ಆಗಬಾರದು ಅಂತ ಯಾವುದೇ ಯೋಜನೆ ಇರಲಿ ಅದರ ಬಗ್ಗೆ ಸ್ಪಷ್ಟವಾದ ಮಾಹಿತಿ ಕೊಟ್ಟು ಈ ತರ ಮಾಡಿಸಿ ನಿಮಗೆ ಯೋಜನೆಯ ಕೆಲಸವಾಗುತ್ತೆ ಎಂದು ಹೇಳುತ್ತಿದ್ದೇನೆ. ನನ್ನ ಬಳಿ ಬಂದ ಗ್ರಾಹಕರಿಗೆ ಕಡಿಮೆ ದರದಲ್ಲಿ ಕೆಲಸ ಮಾಡಿಕೊಡುತಿದ್ದೆ. ಹಾಗಾಗಿ ಗ್ರಾಹಕರು ನನ್ನ ಬಳಿ ಬರುವ ಹಾಗೆ ಆಯ್ತು. ದಿನದಿಂದ ದಿನಕ್ಕೆ ನನಗೆ ಗ್ರಾಹಕರು ಹೆಚ್ಚಾಗಿ ತೊಡಗಿದರು.

 

ಹೀಗೆ  CSC Family ವಾಟ್ಸ್ ಅಪ್ ಗ್ರೂಪಲ್ಲಿ ಪರಸ್ಪರ ದ ಲಿಂಕ್ ಸಿಕ್ತು ನನಗೆ ಆ ಲಿಂಕ್ ಓಪನ್ ಮಾಡಿದ ಮೇಲೆ ನನಗೆ ಮೀಟಿಂಗ್ ಲಿಂಕ್ ಸಿಕ್ತು ಅದಕ್ಕೂ ಜಾಯಿನ್ ಆಗಿ ನೋಡಿದೆ ದಿನಾಲು ತರಬೇತಿ ಕೊಡ್ತಾ ಇದ್ದರು ದಿನದಿಂದ ದಿನಕ್ಕೆ ನನಗೆ ತರಬೇತಿಯಿಂದ ಹಲವಾರು ಪ್ರಯೋಜನಗಳು ದೊರೆತವು ಉದಾ : RTO ಸರ್ವಿಸ್, ಆಧಾರ್ ವಿಳಾಸ, PF, ಅರೋಗ್ಯ ವಿಮೆ, ಇನ್ನು ಮುಂತಾದ ತರಬೇತಿಗಳಿಂದ ನನಗೆ ನನ್ನ ಸೇವಾ ಕೇಂದ್ರವನ್ನು ಬಲ ಪಡಿಸಲು ಸಹಕಾರಿಯಾಗಿ, ಬೆನ್ನಲುಬುಗಳಾಗಿ ಈ ನನ್ನ ಪರಸ್ಪರ ನಿಂತಿದೆ. ಈ ಪರಸ್ಪರದಿಂದ ನಾನು ಒಂದು ಹೆಜ್ಜೆ ಮುಂದಕ್ಕೆ ಹೋಗಿರುವೆ ಅದು ಏನಂದರೆ ಒಂದು ಶೆಡ್ ರೂಪದಲ್ಲಿ ನಮ್ಮ ಅದು ಆಡು ಭಾಷೆ ಯಲ್ಲಿ ಹೇಳಬೇಕಂದರೆ ನನ್ನ ಅಂಗಡಿ ಡಬ್ಬದಲ್ಲಿ ಮಾಡುತಿದ್ದೆ ಇವತ್ತು ನಾನು ಹೊಸ ಮಳಿಗೆಯಲ್ಲಿ ಪ್ರಾರಂಭ ಮಾಡಿದ್ದೇನೆ ಇದಕ್ಕೆ ಕಾರಣ ಪರಸ್ಪರದ ಮೂಲ ಕರ್ತೃಗಳಾದ "ಶ್ರೀಯುತ ಚಂದ್ರು ಮಲ್ಟಿ ಮೀಡಿಯ" ಸರ್ ರವರಿಗೆ ಸಂದೇಶ ಕಳುಹಿಸಿದ್ದೆ  ಈ ತರ ಮಳಿಗೆಯಲ್ಲಿ ಮಾಡಬೇಕು ಎಂದಿದ್ದೆ. ಮಾಡಿ ಧೈರ್ಯವಾಗಿ ಮುನ್ನುಗ್ಗಿ ನಾವು ಇದ್ದೇವೆ ಎಂದು ಧೈರ್ಯ ತುಂಬಿದ್ರು ತಮಗೆ ಹೃತ್ಪೂರ್ವಕವಾದ ಧನ್ಯವಾದಗಳು ಸರ್ ಇಷ್ಟು ಹೇಳಿದ ಮೇಲೆ ನಾನು ಹೊಸ ಮಳಿಗೆಯಲ್ಲಿ ನನ್ನ ಸೇವಾ ಕೇಂದ್ರವನ್ನು ಅಂದ್ರೆ " ಶ್ರೀ ವೀರಭದ್ರೇಶ್ವರ ಡಿಜಿಟಲ್ ಸೇವಾ ಕೇಂದ್ರ" ವನ್ನು ಪ್ರಾರಂಭಿಸಿದೆ. ಈ ಏಳಿಗೆಯೇ ಕಾರಣ ಚಂದ್ರು ಸರ್ ಹಾಗೂ ತರಬೇತಿಕೊಟ್ಟಂತ ನನ್ನ ಎಲ್ಲ ಪರಸ್ಪರ ತರಬೇತಿದಾರರು ಹಾಗೂ ಸದಸ್ಯರುಗಳು ಮುಖ್ಯ ಕಾರಣಕರ್ತೃಧಾರರು..

 

ಧನ್ಯವಾದಗಳು 💐💐💐🙏🙏