ಉತ್ತಮ ಭವಿಷ್ಯಕ್ಕಾಗಿ, ಜೀವ ವಿಮೆ, ಆರೋಗ್ಯ ವಿಮೆ ಮಾತ್ರವಲ್ಲದೇ ತುರ್ತು ನಿಧಿ ಕೂಡ ಬಹಳ ಮುಖ್ಯ.
ಯಾಕೆಂದರೆ ಇದು ಅನಿರೀಕ್ಷಿತ ಹಣಕಾಸಿನ ಪರಿಸ್ಥಿತಿಗಳಿಂದ ನಿಮ್ಮನ್ನು ಕಾಪಾಡುತ್ತದೆ.
ಜೀವನಕ್ಕೆ ಭದ್ರತೆ ನೀಡುತ್ತೆ.
ವೈದ್ಯಕೀಯ ತುರ್ತುಸ್ಥಿತಿಗಳು ಅಥವಾ ವ್ಯಾಪರ / ಉದ್ಯೋಗ ನಷ್ಟದಂತಹ ಸವಾಲುಗಳು ಉದ್ಭವಿಸಿದಾಗ ವೆಚ್ಚಗಳನ್ನು ಭರಿಸಲು ಸಹಾಯ ಮಾಡುತ್ತದೆ.
ಈ ವಿಭಾಗದ ಮೂಲಕ ಅರ್ಥಿಕ ಸಹಾಯ ಅಸ್ತದ ವಿಭಿನ್ನ ಅಲೋಚನೆ ಪ್ರತಿವಾರಕ್ಕೊಮ್ಮೆ ಆಹಾರ, ಆರೋಗ್ಯ, ಅಕ್ಷರ, ವ್ಯವಹಾರಿಕ ತುರ್ತು ಪರಿಸ್ಥಿತಿಯಲ್ಲಿ ಪರಸ್ಪರ ತಂಡ ಒಬ್ಬರಿಗೊಬ್ಬರು ಕೈಜೋಡಿಸುವ ಮೂಲಕ ಆಕಸ್ಮಿಕ ತುರ್ತು ಪರಿಸ್ಥಿತಿಯಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡುವ ನಂಬಿಕೆಯ ತಂಡ ರಚನೆ ಹಾಗೂ ಕಾರ್ಯನಿರ್ವಹಣೆಯ ಯೋಜನೆ.
ಜೀವನ ಎಂದರೆ ಹಾಗೆಯೇ. ಕೆಲವೊಂದು ಬಾರಿ ಅನಿರೀಕ್ಷಿತ ಆಘಾತಗಳು ಬರುತ್ತವೆ. ಅದನ್ನು ಎದುರಿಸಲಿಕ್ಕಾಗಿಯೇ ಪ್ರತಿಯೊಬ್ಬರ ಬಳಿ ನಿಗದಿತ ಮೊತ್ತ ಇರಲೇಬೇಕು. ಕನಿಷ್ಠವೆಂದರೆ ಮೂರು ತಿಂಗಳ ವರೆಗಿನ ಖರ್ಚು ವೆಚ್ಚ ನಿಭಾಯಿಸುವ ಪರಿಸ್ಥಿತಿ ಇರಬೇಕು.
ಆಪತ್ ಧನ ಜೊತೆಯಲ್ಲಿ ಸಬಲೀಕರಣ:
ಉದಾಹರಣೆಗೆ ನನ್ನಲ್ಲಿ ಒಂದು ಸಾವಿರ ಹಣ ಇದೆ.. ಅದರಲ್ಲಿ ಕನಿಷ್ಟ ವ್ಯಾಪಾರ ಮಾಡಬಹುದು..
ಆದರೆ.. ಕಿರು ವ್ಯಾಪಾರ ವಹಿವಾಟು ಮಾಡ ಬೇಕಾದರೆ ಕನಿಷ್ಠ ಮೊತ್ತದ ಹಣ ಹೂಡಿಕೆ ಬೇಕಲ್ವಾ, ಹಾಗಾಗಿ...
_ಉದಾಹರಣೆಗೆ.._
ಮೂವತ್ತು ಜನ ಸದಸ್ಯರು ಇದ್ದು ವಾರಕ್ಕೊಮ್ಮೆ ತಲಾ ಸಾವಿರ ಹಣ ಹೂಡಿಕೆ ಮಾಡಿದಲ್ಲಿ. ಮೂವತ್ತು ಸಾವಿರ ಆಗುತ್ತದೆ ಅದನ್ನು ವಾರಕ್ಕೊಮ್ಮೆ ಒಬ್ಬರಿಗೆ ನೀಡಿದಲ್ಲಿ ಸಾಮಾನ್ಯ ವ್ಯಾಪಾರ ವಹಿವಾಟು ನಡೆಸಲು ಸಾಧ್ಯ ಅಲ್ಲವೇ.
ನಿಮ್ಮ ಕಷ್ಟಕ್ಕೆ ಯಾರು ಬರೋದಿಲ್ಲ, ಇದೇ ಕಾರಣಕ್ಕೆ ಎಲ್ಲರೂ ಎಮರ್ಜೆನ್ಸಿ ಫಂಡಿಂಗ್ ಮಾಡ್ಬೇಕು!
.