ಬಹುಮುಖಿ ವಿಭಾಗ

 

ನಮ್ಮ ನಾಡಿನ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿರುವ ವಿಶೇಷ ವ್ಯಕ್ತಿತ್ವದ ಮಹನೀಯರು, ವಿಭಿನ್ನವಾದ ಪ್ರತಿಭೆಗಳು, ಕಿರುತೆರೆ, ಬೆಳ್ಳಿ ತೆರೆ ಕಲಾವಿದರು / ಕಲಾ ತಂಡಗಳು ಹಾಗೂ ಕಲಾ ತರಬೇತಿದಾರರು/ಕಲಾ ತರಬೇತಿ ತಂಡಗಳ ಪ್ರೋತ್ಸಾಹ, ಪ್ರಚಾರ, ಅಭಿವೃದ್ಧಿ, ಉತ್ತೇಜನದಿಂದ ವಿಶ್ವ ಪರಿಚಯದೆಡೆಗೆ ಕೊಂಡೊಯ್ಯುವುದರ ಜೊತೆ-ಜೊತೆಗೆ ಆದಾಯ ಗಳಿಸುವ ಮೂಲವನ್ನು ಕಂಡುಕೊಳುವುದರ ಜೊತೆಯಲ್ಲಿ ಪೋಷಣೆ ಮಾಡುವ ಮಹತ್ಕಾರ್ಯಗಳನ್ನು ಮಾಡುವ ನಿಟ್ಟಿನಲ್ಲಿ ಪರಸ್ಪರ ಬಹುಮುಖಿ ವೇದಿಕೆ ಕಾರ್ಯನಿರ್ವಹಿಸುತ್ತದೆ.

ಕೆಲವರು ಹಾಡಲು ಬರೆಯಲು ಹಾಗೂ ನೃತ್ಯ ನಾಟಕ ದಂತ ಕಲಾ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುತ್ತಾರೆ, ಆದರೆ ಸರಿಯಾದ ಮಾರ್ಗ ಹಾಗೂ ತರಬೇತಿ ಸಿಗದೇ ಕೇವಲ ತಮ್ಮ ಪುಟ್ಟ ಪ್ರಪಂಚಕ್ಕೆ ಮಾತ್ರ ಸೀಮಿತರಾಗಿರುತ್ತಾರೆ, ಅಂತ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಹಾಗೂ ಪ್ರತಿಭೆಗೆ ವೇದಿಕೆ ದೊರಕಿಸುವುದು ನಮ್ಮ ಪರಸ್ಪರ ಬಹುಮುಖಿಯ ಉದ್ದೇಶ.

.

ಪರಸ್ಪರ

ನಮ್ಮ ಪರಸ್ಪರ ಸಮೂಹ ಇರುವುದೇ ಸಮಾಜಮುಖಿ ಸೇವೆಯನ್ನು ಮಾಡುತ ಸ್ವಾವಲಂಬಿಗಳನ್ನಾಗಿ ಮಾಡುವುದು ಅದುವೇ ನಮ್ಮಿಂದ ನಮಗಾಗಿ ಎಂಬ ಧ್ಯೇಯ ವಾಕ್ಯದಿಂದ ವಿಭಿನ್ನ ವಿಚಾರದಿಂದ ತಲೆಯೆತ್ತಿದ ಸಮೂಹ.

ನಮ್ಮ ಸಂಪರ್ಕಗಳು