*ನನ್ನ ವೃತ್ತಿ ಮತ್ತು ಪ್ರವೃತ್ತಿ – ಜನಸೇವೆ ಎಂಬ ಧ್ಯೇಯ*
ನಾನು ಕಳೆದ ಐದು ವರ್ಷಗಳಿಂದ Common Service Centre (CSC) ಎಂಬ ಕೇಂದ್ರವನ್ನು ಸವದತ್ತಿಯಲ್ಲಿ ನಡೆಸುತ್ತಿದ್ದು, ಇಲ್ಲಿ ಜನತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಸೇವೆಗಳನ್ನು ಒದಗಿಸುತ್ತೇನೆ. ಈ ಕ್ಷೇತ್ರದಲ್ಲಿ ನನಗೆ *ಐದು* ವರ್ಷಗಳಿಗಿಂತ ಹೆಚ್ಚು ಅನುಭವವಿದ್ದು, ಆರೋಗ್ಯ ವಿಮೆ ಹಾಗೂ ವಿವಿಧ ಸೇವೆಗಳ ಉತ್ತಮ ಕಾರ್ಯಕ್ಷಮತೆಗಾಗಿ *ಮೂರು ಬಾರಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದೇನೆ*. ಇದರೊಂದಿಗೆ, *ಸಿ ಎಸ್ ಸಿ* *ರಾಜ್ಯ ಮುಖ್ಯಸ್ಥ ಶಕೀಬ್ ಸರ್* ಅವರ ಸಮ್ಮುಖದಲ್ಲಿ ದೊಡ್ಡ ವೇದಿಕೆಯಲ್ಲಿ *ಗೌರವಿಸಲಾಯಿತು*. ಈ ಪ್ರಶಸ್ತಿ ನನಗೆ ಇನ್ನಷ್ಟು ಪ್ರೇರಣೆ ನೀಡಿದ್ದು, ಇನ್ನಷ್ಟು ಉತ್ಸಾಹದಿಂದ ಸೇವೆಗೆ ಮುಂದಾಗುವ ಶಕ್ತಿ ಒದಗಿಸಿವೆ.
ನಾನು ನಂಬಿರುವುದು *ಶ್ರಮ(Work) ಮತ್ತು ತಂಡ ಕಾರ್ಯವೇ (Team Work)* ಯಶಸ್ಸಿನ ಮೂಲ ಮಂತ್ರಗಳು. ಈ ಐದು ವರ್ಷಗಳಲ್ಲಿ ಜನರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸೇವೆಗಳನ್ನು ಏಕೆ ಸಮರ್ಪಕವಾಗಿ ಪಡೆಯಲಾಗುತ್ತಿಲ್ಲ ಎಂಬ ಅನೇಕ ಸಂಗತಿಗಳನ್ನು ತಿಳಿದುಕೊಂಡೆ. ನಮ್ಮ ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಸರಿಯಾದ ಮಾಹಿತಿಯ ಕೊರತೆಯೇ ಪ್ರಮುಖ ಅಡಚಣೆಯಾಗಿದೆ. ಈ ಕೊರತೆಯನ್ನು ನೀಗಿಸಿ ಸರಿಯಾದ ಮಾಹಿತಿಯನ್ನು ಜನರಿಗೆ ನೀಡುವುದು ನಮ್ಮ ಜವಾಬ್ದಾರಿಯಾಗಿದೆ. ನನ್ನ ನಂಬಿಕೆಯ ಪ್ರಕಾರ, ನಾವು *'ಮಾಹಿತಿ ಅಧಿಕಾರಿ'ಗಳಾಗಿ (Information Officers)* ಕಾರ್ಯನಿರ್ವಹಿಸಿ ಜನರಿಗೆ ಅವರ ಹಕ್ಕುಗಳು ಮತ್ತು ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಬೇಕು.
ನಾನು ನಂಬಿರುವುದು ಹಣವೇ ಎಲ್ಲವೂ ಅಲ್ಲ; *ಜನಸೇವೆ ಮಾಡುವುದರಿಂದ ಸಿಗುವ ಸಂತೋಷ ಹಾಗೂ ತೃಪ್ತಿಯು ನಮ್ಮ ದಿನನಿತ್ಯದ ಜೀವನದಲ್ಲಿ ಮೂಡಿಬರಬೇಕು*. ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವಾಗ ಅವರಿಗೆ ಸಹಾಯ ಮಾಡುವುದು *ನನಗೆ ಆತ್ಮತೃಪ್ತಿಯ ಅನುಭವವನ್ನು ನೀಡುತ್ತದೆ*. ನನ್ನ *ತಂದೆ ಸದಾ ಕಲಿಸಿದ್ದ (Work is Worship) "ಕೆಲಸವೇ ದೇವರು" ಅಥವಾ ಕೆಲಸದಲ್ಲಿಯೇ ದೇವರು ಕಾಣು* ಎಂಬ ವಿಚಾರ ನನ್ನ ಜೀವನದ ಮಾರ್ಗದರ್ಶಿಯಾಗಿದ್ದು, ಅದನ್ನೇ ನಾನು ಪಾಲಿಸಿಕೊಂಡು ಹೋಗುತ್ತಿದ್ದೇನೆ. *ಜನಸೇವೆಯಲ್ಲಿ ನನಗೆ ಶಾಂತಿ ದೊರೆಯುತ್ತದೆ, ಗ್ರಾಹಕರ ಸಂತೋಷದಲ್ಲಿ ನನಗೆ ಖುಷಿ ದೊರೆಯುತ್ತದೆ*. ಈ ಸೇವೆಯಲ್ಲಿ ನಾನು ನನ್ನ ಧರ್ಮವನ್ನೇ ಕಂಡಿದ್ದೇನೆ.
ನಾನು ನನ್ನ CSC ಕಾರ್ಯಕಾಲದಲ್ಲಿ *"ಪರಸ್ಪರ"* ತಂಡದ ಮೇಲೆ ಅಪಾರವಾಗಿ ಋಣಿಯಾಗಿದ್ದೇನೆ. ಪರಸ್ಪರದ ಪ್ರೋತ್ಸಾಹದಿಂದ ನಾನು ಇಡೀ ಕರ್ನಾಟಕದಲ್ಲಿ ಸುಲಭವಾಗಿ ಗುರುತಿಸಲ್ಪಟ್ಟಿದ್ದೇನೆ, ವಿಶೇಷವಾಗಿ *"ಸವದತ್ತಿ ಯಲ್ಲಮ್ಮ ಅಲಿ ಸರ್"* ಎಂದು ಹೆಸರಾಗಿದ್ದೇನೆ. ಪರಸ್ಪರ ತಂಡದ ಒಂದು ಅವಿಭಾಜ್ಯ ಅಂಗ ವಾಗಿರುವುದು ನನಗೆ ಜೀವನದ ಪ್ರಮುಖ ತಿರುವುಗಳಲ್ಲಿ ಒಂದಾಗಿದೆ. ಇದು ನನ್ನ ಬದುಕಿನಲ್ಲಿ ನಾನಾ ಅನುಭವಗಳನ್ನು ಕೊಟ್ಟಿದ್ದು, ಹೊಸ ಸಂಪರ್ಕಗಳು, ಸ್ನೇಹಿತರು, ಸಹೋದರ-ಸಹೋದರಿಯರು ಸಿಗುವ ಪಾವನ ಅವಕಾಶವನ್ನೂ ನೀಡಿದೆ.
ಈ ಅದ್ಭುತ ಅವಕಾಶವನ್ನು ನನಗೆ ಒದಗಿಸಿದ್ದಕ್ಕಾಗಿ *ಚಂದ್ರು ಸರ್ ಹಾಗೂ ರಾಜಸಾಬ್ ಸರ್ ಅವರಿಗೆ ನಾನು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ*. ನನ್ನ *ಮನಸ್ಸು ದುರ್ಬಲವಾದ ಕ್ಷಣದಲ್ಲಿ ಅವರು ನನಗೆ ಶಕ್ತಿಯುತವಾಗಿ ಪ್ರೇರಣೆ ನೀಡಿದರು, ನನ್ನನ್ನು ಯಶಸ್ಸಿನತ್ತ ದಬ್ಬಿದರು. ಅವರು ನನ್ನ ಕೈ ಹಿಡಿದು, ನಾನು ಸ್ವಲ್ಪ ಯಶಸ್ಸು ಸಾಧಿಸಿದಾಗಲೂ ಶಾಂತವಾಗಿ ನನ್ನನ್ನು ಅಭಿನಂದಿಸುತ್ತಿದ್ದರು. ಅವರು ನನ್ನ ಪಾಲಿಗೆ ಗುರುಗಳು ಹಾಗೂ ಮಾರ್ಗದರ್ಶಕರು*
*ಯಶಸ್ಸು ಎಂದರೆ ಕೇವಲ ಗುರಿ ತಲುಪುವುದು ಮಾತ್ರವಲ್ಲ, ಅದನ್ನು ಸಾಧಿಸಲು ನೀವು ಒಡ್ಡಿದ ಶ್ರಮವೇ ನಿಜವಾದ ಜಯ!* ಜೀವನದಲ್ಲಿ ಯಾವ ಕಠಿಣ ಪರಿಸ್ಥಿತಿಯು ಬಂದರೂ, ನಮ್ಮ ಶ್ರದ್ಧೆ ಮತ್ತು ಪರಿಶ್ರಮವೇ ಅದನ್ನು ಎದುರಿಸಲು ಶಕ್ತಿಯುಳ್ಳ ಅಸ್ತ್ರ. ನಾವು ಯಾವಾಗ ನಮ್ಮ ಕನಸುಗಳ ಕಡೆಗೆ ಹಾರುವ ಹಕ್ಕಿಯಾಗಿ ಪರಿವರ್ತನೆಗೊಳ್ಳುತ್ತೇವೋ ಅಂದೇ ನಿಜವಾದ ಜೀವನ ಶುರುವಾಗುತ್ತದೆ.
*"ಹಗಲು ಕನಸು ಕಾಣಿರಿ, ಏಕೆಂದರೆ ರಾತ್ರಿಯ ಕನಸುಗಳಿಗಿಂತ ಹಗಲು ಕನಸುಗಳು ನಿಮ್ಮ ಗುರಿಗಳನ್ನು ಸಾಧಿಸಲು ಪ್ರೇರೇಪಿಸುತ್ತವೆ."* ನಾನು ಸದಾ ನಂಬಿರುವುದು, ಕನಸುಗಳನ್ನು ಬಿಟ್ಟುಕೊಡುವುದಕ್ಕಿಂತ ಅದನ್ನು ನಿಜವಾಗಿಸಿಕೊಳ್ಳಲು ಶ್ರಮಿಸುವುದರಲ್ಲಿಯೇ ಬದುಕಿನ ಅರ್ಥ ಇದೆ.
*"ಜೀವನದಲ್ಲಿ ಸಫಲತೆ ಆಲಸ್ಯವನ್ನು ಬಿಡುವುದರಿಂದ ಮತ್ತು ಶ್ರಮವನ್ನು ಅಪ್ಪಿಕೊಳ್ಳುವುದರಿಂದ ಮಾತ್ರ ಸಾಧ್ಯ."* ನಮ್ಮ ಜೀವನದಲ್ಲಿ ಯಾವುದೇ ಸಾಧನೆಗೆ ಶ್ರಮ, ಸಹನೆ ಮತ್ತು ಶ್ರದ್ಧೆ ಇಂದಿಗೂ ಅತಿ ಮುಖ್ಯ.
ಪರಸ್ಪರ ಕುಟುಂಬದಿಂದ ನಾನು ಹಲವಾರು ಸ್ನೇಹಿತರನ್ನು, ಸಹೋದರ-ಸಹೋದರಿಯರನ್ನು ಸಂಪಾದಿಸಿದ್ದೇನೆ. ಇದು ನನಗೆ ಹೊಸ ಕುಟುಂಬದಂತೆ ಭಾಸವಾಗುತ್ತದೆ. ಅವರ ಪ್ರೀತಿ, ಬೆಂಬಲ ಮತ್ತು ಪ್ರೋತ್ಸಾಹವೇ ನನ್ನನ್ನು ಎದ್ದು ನಿಲ್ಲಲು ಶಕ್ತಿಯುಳ್ಳದಾಗಿದೆ.
*"ನೋವಿಲ್ಲದ ಜಯ ದೊಡ್ಡ ಜಯವಲ್ಲ, ಶ್ರಮವಿಲ್ಲದ ಗೆಲುವು ನಿಜವಾದ ಗೆಲುವಲ್ಲ!"* ಜೀವನದಲ್ಲಿ ನಾವು ಎಷ್ಟೇ ಕಷ್ಟ ಎದುರಿಸಿದರೂ, ಶ್ರಮಿಸುತ್ತಾ ಸಾಗಿದಾಗಲಷ್ಟೇ ನಿಜವಾದ ಯಶಸ್ಸು ನಮ್ಮ ಪಾದಗಳಲ್ಲಿ ಬಾಗಿಕೊಳ್ಳುತ್ತದೆ.
*ನನ್ನ ಕೊನೆಯ ಉಸಿರಿನ ತನಕ ಪರಸ್ಪರ ಹಾಗೂ ಅದರ ಸಂಬಂಧಿತ ಎಲ್ಲ ಕ್ಷೇತ್ರಗಳಲ್ಲಿ ನಾನು ಶ್ರಮಿಸುತ್ತೇನೆ ಎಂದು ನಾನು ಈ ಸಾಲುಗಳಲ್ಲಿ ವಚನಬದ್ಧನಾಗುತ್ತೇನೆ.* "ಯಶಸ್ಸು ಕೇವಲ ಗುರಿಯಲ್ಲ, ಅದು ಒಂದು ಪ್ರಯಾಣ — ಸದಾ ಕಲಿಯುತ್ತಾ, ಬೆಳೆಯುತ್ತಾ, ಸೇವೆ ಮಾಡುತ್ತಾ ಸಾಗುವ ಸಂಕಲ್ಪ."
*"ನೀನು ಮುಂದೆ ಸಾಗಬೇಕಾದರೆ ಹಿಂದಿನ ಯಶಸ್ಸಿಗೆ ಅಂಟಿಕೊಂಡು ಇರಬೇಡ, ಹೊಸ ಗುರಿಯತ್ತ ಧೈರ್ಯದಿಂದ ಹೆಜ್ಜೆ ಹಾಕು. ನಿನ್ನ ಶ್ರಮವು ನಿನ್ನ ಗೆಲುವಿಗೆ ನಾಳೆಯ ಬೆಳಕಾಗುತ್ತದೆ!"*
From Asadalla S Peerajade
Savadatti Belgaum District
Contact:9731961785