ಪರಸ್ಪರದ ಪರಿವಾರ ವೀಣಾ ಗಂಗಾವತಿ

" ಪರಸ್ಪರ " ಎಂದರೆ

ನಮ್ಮಿಂದ, ನಮಗಾಗಿ, ನಮಗೋಸ್ಕರ ಇರುವಂತಹ ಒಂದು ನಿಸ್ವಾರ್ಥ ಸೇವಾ ಸಂಸ್ಥೆ. ಇಲ್ಲಿ ಜಾತಿ,ಧರ್ಮ,ಲಿಂಗ, ಭೇದ ವಿಲ್ಲದೆ ಎಲ್ಲರಿಗೂ ಸಮಾನ ಮತ್ತು ಮುಕ್ತ ಅವಕಾಶ ಕಲ್ಪಿಸುವ ಒಂದು ಮಹಾನ್ ವೇದಿಕೆ.

 

ಪರಸ್ಪರದ ಮೂಲ ಉದ್ದೇಶ

ಅಕ್ಷರ, ಆಹಾರ ಮತ್ತು ಆರೋಗ್ಯ ಎಂಬ ಮೂರು ಸಿದ್ಧಾಂತಗಳ ಜೊತೆ ಸರ್ವರನ್ನೂ ಆರ್ಥಿಕ ಸಬಲೀಕರಣದೆಡೆಗೆ ಕೊಂಡೊಯ್ಯುವುದು.

 

ಅಭಿಜ್ಞಾನ, ಅರಿವು, ಗುರುತು, ಜ್ಞಾನ, ತಿಳಿವಳಿಕೆ, ಪ್ರಜ್ಞೆ, ಬುದ್ಧಿ, ಸಂವೇದನೆ.

ಜೀವನದಲ್ಲಿ ಏನನ್ನಾದರೂ ಸಾಧಿಸುವ ಛಲ ಹೊಂದಿರುವ ವ್ಯಕ್ತಿ ಸತತ ಪರಿಶ್ರಮ ಮತ್ತು ದೃಢಸಂಕಲ್ಪ ಎಂಬ ಇವೆರಡು ಬಾಣಗಳನ್ನು ತನ್ನ ಬತ್ತಳಿಕೆಯಲ್ಲಿ ಯಾವಾಗಲೂ ಇಟ್ಟಿಕೊಂಡಿರಬೇಕಾಗುತ್ತದೆ. ಅದಾವ ಕಾಲದಲ್ಲಿ ಅವುಗಳ ಪ್ರಯೋಗ ಒದಗಿಬರುತ್ತದೆಯೋ ಗೊತ್ತಾಗುವುದಿಲ್ಲ!

ಅನೇಕ ಸಾಧಕರ ಜೀವನವನ್ನು ಓದುವುದರಿಂದ ಸ್ಪೂರ್ತಿ ದೊರೆಯುತ್ತದೆ. ಮನಸ್ಸು ಯಾವುದನ್ನು ಹೆಚ್ಚೆಚ್ಚು ಯೋಚಿಸುವುದೋ? ಓದುವುದೋ ? ವಿಮರ್ಷಿಸುವುದೋ? ಅದರ ಕಡೆ ಅದು ತುಂಬಾ ಫೋಕಸ್ ಆಗುತ್ತದೆ. ಇದು ಮನಸ್ಸಿನ ಸಹಜ ಗುಣ ಹಾಗೂ ಯಶಸ್ಸಿನ ರಹಸ್ಯವೂ ಹೌದು! ಯಶಸ್ಸಿಗೆ ಯಾವುದೇ ನಿರ್ದಿಷ್ಟ ಅಂಕೆಯ ಮೆಟ್ಟಿಲುಗಳಿಲ್ಲ.

ಯಶಸ್ಸಿಗೆ ಶಾರ್ಟಕಟ್ , ಕಳ್ಳದಾರಿ ಅದು ಇದು ಎನ್ನುವುದು ಏನಿಲ್ಲ. ಅದೇನಿದ್ದರೂ ಮೂರ್ಖರು ಸೃಷ್ಟಿಸಿಕೊಂಡ ಭ್ರಮೆ. ಒಂದು ವೇಳೆ ಆ ಶಾರ್ಟಕಟ್ ನಲ್ಲಿ ದಕ್ಕಿಸಿಕೊಂಡ ಯಶಸ್ಸು ಬಹುಕಾಲ ಉಳಿಯುವುದಿಲ್ಲ. ಅದರ ವ್ಯಾಲಿಡಿಟಿ ತುಂಬ ಕಡಿಮೆ! ಹಾಗಾಗಿ ಸತತ ಪರಿಶ್ರಮ ಮತ್ತು ದೃಢಸಂಕಲ್ಪ ಇದರ ಜೊತೆ ಸಮಯಪಾಲನೆ, ಸತತ ಅಧ್ಯಯನ, ಏಕಾಗ್ರತೆ, ಹಾಗೂ ಬುದ್ಧಿವಂತಿಕೆ ಇವುಗಳನ್ನೆಲ್ಲ ಹದವಾದ ಪ್ರಮಾಣದಲ್ಲಿ ಮಿಶ್ರಣಮಾಡಿಕೊಂಡರೆ ಯಶಸ್ಸು ಅನ್ನುವ ಹಬ್ಬದೂಟವನ್ನು ಸವಿಯಬಹುದು!

ಇವೆಲ್ಲವೂ ಒಂದೇ ಒಂದು ಪರಸ್ಪರ ಎಂಬ ಕೊಂಡಿ ಇಂದ ಬೆಸೆದಿದೆ ಎಂದರೆ ಸುಳ್ಳ ಆಗಲಾರದು

ಇಂಥಹ ದೂರ ದೃಷ್ಟಿಕೋನ ಹೊಂದಿರುವ ಪರಿಕಲ್ಪನೆಯ ಪರಸ್ಪರ ಯೋಜನೆಯಲ್ಲಿ ನನಗೊಂದು ಅವಕಾಶ ನೀಡಿರುವ ಚಂದ್ರು  ಅಣ್ಣನವರಿಗೆ ಧನ್ಯವಾದಗಳು🙏

ಪರಸ್ಪರದಲ್ಲಿ ಸಣ್ಣ ಪುಟ್ಟ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದೇನೆ ಎಂದು ಹೇಳಲು ನನಗೆ ತುಂಬಾ ಹೆಮ್ಮೆ ಇದೆ. ಪರಸ್ಪರ ಸಮೂಹ ಎಂಬ ದೊಡ್ಡ ಯಶಸ್ಸಿನ ಮಹಾ ವೇದಿಕೆ ಸಿದ್ಧವಾಗಲು ಸತತ ಪರಿಶ್ರಮದ ಜೊತೆಗೆ ನಿರಂತರ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡುವಲ್ಲಿ ತಮ್ಮನ್ನು ಸಂಪೂರ್ಣವಾಗಿ ಪರಸ್ಪರಕ್ಕಾಗಿ ತೊಡಗಿಸಿಕೊಂಡಿರುವ ಎಲ್ಲಾ ಪರಸ್ಪರ ಸಹೃದಯಗಳಿಗೆ ಹೃತ್ಪೂರ್ವಕ ಧನ್ಯವಾದಗಳು ಅರ್ಪಿಸುತ್ತಾ ನಿಮ್ಮೆಲ್ಲರ ಸಕ್ರಿಯತೆ ಹಾಗೂ ಪಾಲ್ಗೊಳ್ಳುವಿಕೆ ಪರಸ್ಪರದೊಂದಿಗೆ ನಿರಂತರವಾಗಿ ಹೀಗೆ ಮುಂದುವರೆಯಲಿ ಎಂದು ಬಯಸುತ್ತೇನೆ.

 

✍️

ವೀಣಾ

ಶ್ರೀರಾಮನಗರ

ಗಂಗಾವತಿ ತಾಲೂಕು, ಕೊಪ್ಪಳ ಜಿಲ್ಲೆ