ಯಶಸ್ವಿ ಉದ್ಯಮಿ ದಯಾನಂದ ತೋಟಗಿ

ಹೆಸರು : ದಯಾನಂದ ತೋಟಗಿ

ಧಾರವಾಡ ಜಿಲ್ಲೆ

ಸಂಕ್ಷಿಪ್ತ ಪರಿಚಯ :

ನಾನು ಬಾಲ್ಯದಿಂದಲೂ ಬಹಳ ಕಷ್ಟದಿಂದ ಮತ್ತು ಬಡತನದಿಂದ ಬೆಳೆದ ಯುವಕ.

ನಾನು ಕೋಟಬಾಗಿ ಗ್ರಾಮದಲ್ಲಿ 10 ನೇಯ ತರಗತಿ ವರೆಗೆ ವಿದ್ಯಾಭ್ಯಾಸ ಮುಗಿಸಿ. ನಂತರದ ಶಿಕ್ಷಣ ಗರಗ ಗ್ರಾಮದಲ್ಲಿ PUC ಮತ್ತು ಪದವಿ ಶಿಕ್ಷಣ ಪಡೆದಿದ್ದೇನೆ.

ಆ ಶಿಕ್ಷಣ ಪಡೆಯುವ ಸಂದರ್ಭದಲ್ಲಿ ಸಿಗುವ ರಜಾ ದಿನಗಳಲ್ಲಿ ಕೂಲಿ ಕೆಲಸಕ್ಕೆ ಹೋಗಿ ಶಿಕ್ಷಣದ ಖರ್ಚಿಗೆ ಮತ್ತು ಕುಟುಂಬಕ್ಕೆ ಆರ್ಥಿಕವಾಗಿ ಸಹಾಯ ಮಾಡುತ್ತಾ ಜೀವನ ಕಳೆದಿದ್ದೇನೆ.

 

ಪದವಿ ಶಿಕ್ಷಣ ಪ್ರಾರಂಭ ಮಾಡಿದಾಗ ಮನೆಯ ಆರ್ಥಿಕ ಪರಿಸ್ಥಿತಿ ಬಹಳ ಹದಗೆಟ್ಟಿತ್ತು. ಆ ಸಂದರ್ಭದಲ್ಲಿ ಕೆಲಸ ಹುಡುಕಲು ಪ್ರಯತ್ನ ಮಾಡಿದೆ ಅವಾಗ ನನಗೆ ಎಲ್ಲಿಯೂ ಸಹ ಕೆಲಸ ಸಿಗಲಿಲ್ಲ. ನಾನು ಕೆಲಸ ಹುಡುಕುವ ಸಲುವಾಗಿ ಬೇಕರಿ, ಹೋಟೆಲ್, ಡಾಬಾ ಇತರೆ ಸ್ಥಳಗಳಲ್ಲಿ ಕೆಲಸ ಕೇಳಿದಾಗ ಎಲ್ಲಿಯು ಸಹ ಕೆಲಸಕ್ಕೆ ಈಗ ಅವಶ್ಯಕತೆ ಇಲ್ಲ ಅಂತ ಹೇಳಿದ್ದು ನಾನು ಇನ್ನು ಮರೆತಿಲ್ಲ.

ನಂತರದ ದಿನಗಳಲ್ಲಿ ಪದವಿ ಶಿಕ್ಷಣ ಜೊತೆಗೆ ಸೋಲಾರ್ ಮತ್ತು ವಾಟರ್ ಹಿಟರ್ ಮಾರಾಟ ಮಾಡುವ ಕಚೇರಿಯಲ್ಲಿ ತಾತ್ಕಾಲಿಕವಾಗಿ ಕೆಲಸ ಸಿಕ್ಕಿತು.

 

ಅಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಪರಿಚಯವಾಗಿದ್ದು ಗ್ರಾಮೋದ್ದಾರ ಕೇಂದ್ರ ಅಂತ ಪ್ರತಿ ಗ್ರಾಮಕ್ಕೊಂದು ಕೊಡುತ್ತಿದ್ದಾರೆ ಅಂತ ಸುದ್ದಿ ತಿಳಿಯಿತು.

ಆ ತಕ್ಷಣ ನಾನು 25000 ಸಾಲ ಮಾಡಿ ಗರಗ ಗ್ರಾಮಕ್ಕೆ ಬೇಕು ಅಂತ ಅರ್ಜಿ ಹಾಕಿದೆ

 

ನಂತರ ಗರಗ ಗ್ರಾಮದಲ್ಲಿ 2500 ಕೊಟ್ಟು ಬಾಡಿಗೆ ಅಂಗಡಿ ನೋಡಿ 1 ಕಂಪ್ಯೂಟರ್ 1 ಪ್ರಿಂಟರ್ ದೊಂದಿಗೆ ಪ್ರಾರಂಭವಾದ ನಮ್ಮ ಉದ್ಯೋಗ ಕಾಲ ಕ್ರಮೇಣ ಸಿ ಎಸ್ ಸಿ ಯೊಂದಿಗೆ ಮುನ್ನಡೆಯಿತು.

 

CSC ಗೆ ಬಂದ ತಕ್ಷಣ ಬಹಳ ಬದಲಾವಣೆ ಬಂದವು.

ನಮ್ಮ ಕಚೇರಿಯಲ್ಲಿ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಪ್ರಾರಂಭಿಸಿದೆ.

ಎಲ್ಲ ಟಾಸ್ಕ್ ಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದೆ ಮತ್ತು ಮೊದಲ ಸ್ಥಾನದಲ್ಲಿ ಬರಲು ಇಷ್ಟ ಪಡುತ್ತಿದ್ದೆ.

 

ರಾಜ್ಯ ಮಟ್ಟದ ಗ್ರೂಪ್ ಗಳಲ್ಲಿ ಶ್ರೀಯುತ ಮಲ್ಟಿ ಮೀಡಿಯಾ ಚಂದ್ರು ಅವರ ಸಂಪರ್ಕ ಆಯ್ತು ಅವರೊಂದಿಗೆ ಸಹ ಪ್ರತಿ ದಿನ ಹೊಸ ಸೇವೆ ಆಯ್ಕೆ ಮಾಡಿಕೊಂಡು ಅದನ್ನು ಹೆಚ್ಚಿನ ಮಟ್ಟದಲ್ಲಿ ಕೆಲಸ ಮಾಡಲು LEARN MORE EARN MORE ಇದು ರಾಜ್ಯದಲ್ಲಿ ಇರುವ VLE ಸ್ನೇಹಿತರನ್ನು ಒಂದುಗುಡಿಸಿತು.

 

ಇದರ ನಂತರದ ಭಾಗ ಪರಸ್ಪರ ಉದಯ ಎಲ್ಲ ಮಿತ್ರರನ್ನು ಒಂದೇ ವೇದಿಕೆಯಲ್ಲಿ ನೋಡಬೇಕು ಅನ್ನುವ ನಿಟ್ಟಿನಲ್ಲಿ ಮಾಡಿಕೊಂಡ ಸಮಾನ ಮನಸ್ಕರರ ವೇದಿಕೆ ಅದು ಪರಸ್ಪರ ಕುಟುಂಬ

 

ಪರಸ್ಪರ ಕುಟುಂಬದಿಂದ ರಾಜ್ಯದ ಎಲ್ಲ ಜಿಲ್ಲೆಯ ಸ್ನೇಹಿತ ಮಿತ್ರರು ಪರಿಚಯ ಆಗಿರುವುದು ಖುಷಿ ಮತ್ತು ಉತ್ತಮ ಬೆಳವಣಿಗೆ ಅಂತ ಹೇಳಬಹುದು.

 

2020 ರಲ್ಲಿ ನನಗೆ ಕಂಪ್ಯೂಟರ್ ಜ್ಞಾನ ಸಹ ಇರಲಿಲ್ಲ ಆದರೂ ಸಹ ನಾನು ಕಲಿಯಬೇಕು ಅನ್ನುವ ಆಸೆಯೊಂದಿಗೆ ಪ್ರಾರಂಭ  ನನ್ನ ಈ ಕಂಪ್ಯೂಟರ್ ಉದ್ಯೋಗ ಪ್ರಾರಂಭವಾಯಿತು.

 

ನಂತರದ ದಿನಗಳಲ್ಲಿ ಸಿ ಎಸ್ ಸಿ ಯಲ್ಲಿ ಸಿಗುವ ಸೇವೆಗಳನ್ನು ಜನರಿಗೆ ತಲುಪಿಸುವಲ್ಲಿ ಯಶಸ್ವಿ ಅದೇನು.

ನನಗೂ ಸಹ ಉತ್ತಮ ಆದಾಯ ಸಿಗುತ್ತಾ ಬಂದಿತು

 

2021 ಡಿಸೇಂಬರ್ ನಲ್ಲಿ ದೆಹಲಿಯಲ್ಲಿ ನಡೆದ ಅಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಸಿ ಎಸ್ ಸಿ ಕಡೆಯಿಂದ ನಾನು ಸಹ ಆಯ್ಕೆ ಆಗಿದ್ದು ರಾಷ್ಟ ಮಟ್ಟದ ಪ್ರಶಸ್ತಿ ದೊರಕಿತ್ತು ಬಹಳ ಖುಷಿ.

 

ಸಿ ಎಸ್ ಸಿ ಕಡೆಯಿಂದ ಲಕ್ಷ ಗಟ್ಟಲೆ ಮೌಲ್ಯದ ವಸ್ತುಗಳು ನನಗೆ ಗಿಫ್ಟ್ ಮುಖಾಂತರ ಬಂದಿರುತ್ತವೆ.

ಅದರಲ್ಲಿ ಇನ್ಶೂರೆನ್ಸ್ ಕಡೆಯಿಂದ ಹೆಚ್ಚು ಕೊಡುಗೆ ಬಂದಿವೆ.

 

ಈ ಪಯಣ ಹೀಗೆ ಬಂದಿದ್ದು

ನಂತರ ಗರಗ ಗ್ರಾಮದಲ್ಲಿ 2 ಗುಂಟೆ ಜಾಗ ಖರೀದಿ ಮಾಡಿ 2 ವರ್ಷ ನಂತರ 26 ಲಕ್ಷದ ಮನೆ ಸಹ ಕಟ್ಟಿಸಿದ್ದು ಇದೆ ಉದ್ಯೋಗದಿಂದ

 

ನನ್ನ ಮನೆ ಗೃಹ ಪ್ರವೇಶಕ್ಕೆ ಇಡಿ ಪರಸ್ಪರ ಕುಟುಂಬ ಬಂದು ಹಾರೈಸಿದ್ದು ನನ್ನ ದೊಡ್ಡ ಖುಷಿ ಆಗಿದೆ

 

ನಾನು ಮತ್ತು ನನ್ನ ಹೆಂಡತಿ ಪರಸ್ಪರ ಕುಟುಂಬದ ಸದಸ್ಯರು

 

ನಮ್ಮ ವಿವಾಹ ಕಳೆದ ವರ್ಷ ಆಯಿತು

ಅದಕ್ಕೂ ಸಹ ಇಡಿ ಪರಸ್ಪರ ಸದಸ್ಯರು ಬಂದು ಆಶೀರ್ವಾದ ಮಾಡಿದ್ದೂ ಎಂದು ಮರೆಯದ ಕ್ಷಣ.

 

ಪರಸ್ಪರ ದಿಂದ ಉದ್ಯೋಗದಲ್ಲಿ ಮತ್ತು ಜೀವನದಲ್ಲೂ ಸಹ ಬೆಳವಣಿಗೆ ಕಂಡು ಕೊಂಡಂತಹ ಒಬ್ಬ ವ್ಯಕ್ತಿ ನಾನಾಗಿದ್ದೇನೆ

 

ನಾನು ಈಗ ತಿಂಗಳಿಗೆ ಲಕ್ಷಕ್ಕಿಂತ ಹೆಚ್ಚು ಆದಾಯ ಬರುವ ಹಾಗೆ ಉದ್ಯೋಗ ಮಾಡುತ್ತಿದ್ದೇನೆ

 

ಮತ್ತು ನನ್ನ ಉದ್ಯೋಗ ಮಿತ್ರರಿಗೆ ತರಬೇತಿ ಮೂಲಕ ನನಗೆ ಗೊತ್ತಿರುವ ಸೇವೆಗಳನ್ನು ತಿಳಿಸಿ ಕೊಡುವ ಪ್ರಯತ್ನ ಮಾಡುತ್ತೇನೆ

 

2025 ರಲ್ಲಿ ಸ್ಟಾರ್ ಹೆಲ್ತ್ ಮತ್ತು ಸಿ ಎಸ್ ಸಿ ಕಡೆಯಿಂದ ಥೈಲ್ಯಾಂಡ್ ದೇಶಕ್ಕೆ ಹೋಗುವ ಅವಕಾಶ ಸಿಕ್ಕಿದ್ದು

ಅಂತಾರಾಷ್ಟ್ರೀಯ ಪ್ರಶಸ್ತಿಗೆ ಪಾತ್ರನಾಗಿದ್ದು ವಿಶೇಷ ಅನುಭವ

 

ಇನ್ಶೂರೆನ್ಸ್ ಅಲ್ಲಿ ಒಳ್ಳೆಯ ಬಿಸಿನೆಸ್ ಮಾಡುವ ನಾನು ಪ್ರತಿ ತಿಂಗಳು 10 ಲಕ್ಷ ಕ್ಕಿಂತ ಹೆಚ್ಚು ಪ್ರೀಮಿಯಂ ಸಂಗ್ರಹ ಮಾಡುವ ನಾನು

 

ಸಿ ಎಸ್ ಸಿ MD ಕ್ಲಬ್ ಟಾಸ್ಕ್ ನಲ್ಲಿ ಕರ್ನಾಟಕ ರಾಜ್ಯದಿಂದ ನಾನು ಸಿ ಎಸ್ ಸಿ MD ಅವರ ಜೊತೆ ವಿದೇಶಿ ಪ್ರವಾಸಕ್ಕೆ ನಾನು ಆಯ್ಕೆ ಆಗಿದ್ದೇನೆ

 

2025 ರಲ್ಲಿ

ನನಗೆ 2 ಅಂತಾರಾಷ್ಟ್ರೀಯ ಪ್ರಶಸ್ತಿ ಸಿಗುವ ಹಾಗೆ ಮಾಡಿದ್ದೂ ನನ್ನ ಸಿ ಎಸ್ ಸಿ

 

ನಾನು ರಾಜಾಸಾಬ್ ಸರ್ ತತ್ವ ಪಾಲಿಸುತ್ತೇನೆ

ಇರುವಷ್ಟು ದಿನ ಸಿ ಎಸ್ ಸಿ ಯಲ್ಲಿ ಇರುತ್ತೇನೆ ಎಂಬ ತತ್ವ

 

2020 ರಲ್ಲಿ ಏನು ಇಲ್ಲದ ನಾನು ಇಂದು ಈ ಉದ್ಯೋಗದಿಂದ ಸುಮಾರು 1 ಕೋಟಿ ಆದಾಯ ಮಾಡಿದ್ದೇನೆ

 

ನನ್ನ ಜೀವನ ಬದಲಾವಣೆ ಮಾಡಿದ ಸಿ ಎಸ್ ಸಿ ಗೆ ಧನ್ಯವಾದಗಳು 🙏