ರಮೇಶ್ ರಾಠೋಡ್
ಪರಸ್ಪರದಲ್ಲಿ ನಾನು ಒಬ್ಬ ಸೇವಕ...

ನನ್ನ ಜೀವನ ಅವಧಿ ಎಲ್ಲಿ ಕೆಲಸ ಮಾಡುತ್ತ ಹಾದು ಹೋಗುತ್ತೋ ಅಂತಿದೆ ನಾನು... ಆದರೆ ಮನಸಲ್ಲಿ ಏನೋ ಮಾಡಲೇ ಬೇಕು ಎಂಬ ಧೃಢ ಸಂಕಲ್ಪ... ಅದು ಈಡೇರಿದ್ದು CSC ಯಿಂದ ... ಎಲ್ಲೋ ಬೋರ್ಡ್ ನೋಡಿ ನಾನು ರಿಜಿಸ್ಟರ್ ಮಾಡಿದ್ರು ಆಯಿತು ಅಂತ ಯೋಚನೆ ಮಾಡ್ತಿದ್ದೆ... ಕೆಲಸ ಮಾಡುತ್ತ ರಿಜಿಸ್ಟರ್ ಮಾಡೇ ಬಿಟ್ಟೆ... 6 ತಿಂಗಳು ಆಯಿತು ಆದರೂ ಅಪ್ರೂವಲ್ ಆಗಲಿಲ್ಲ. ಆಮೇಲೆ ನನ್ನ ಗೆಳೆಯನಿಂದ ನನಗೆ ಚಂದ್ರಣ್ಣ ಆನೇಕಲ್, multimedia ಚಂದ್ರು ಅಂತಾನೆ ಫೇಮಸ್ ಅವರ ನಂಬರ್ ಕೊಟ್ಟು ಕರೆ ಮಾಡು ಸಹಾಯ ಮಾಡ್ತಾರೆ ಅಂದ್ರು.... ಹಾಗೆ ಆಯಿತು ಬನ್ನಿ ಅಂತ ಹೇಳೇ ಬಿಟ್ರು ನಗು ಮುಖದ ಒಡೆಯ ❤️.
CSC ID approval ಮಾಡಿಸಿ ಕೊಟ್ರು ಹಾಗೆ ನಮ್ಮ್ ಜೊತೆಗೆ ಇರು ಅಂತ ಕೆಲವು ಸರ್ವಿಸ್ ಹೇಳಿಕೊಟ್ರು.
ಇದಾಗಿ ಸ್ವಲ್ಪ ದಿನದಲ್ಲಿ ನಮ್ಮದೊಂದು ಪ್ರೋಗ್ರಾಮ್ ಇದೆ ನೀವು ಬನ್ನಿ ಅಂದ್ರು... ಅದೇ ನಮ್ಮ್ ಪರಸ್ಪರ 1...ಅಲ್ಲಿ ನಾನು ವೀಕ್ಷಕನಾಗಿ ಬಂದೆ.... ನಂತರ ನನ್ನ ಕಾರ್ಯ ನಿಷ್ಠೆ ನೋಡಿ ನನ್ನನ್ನು ಒಂದು ಸ್ಥಾನ ಕೊಟ್ರು... ಆ ವೇದಿಕೆ ಎಂದಿಗೂ ಮರೆಯಲಾಗದು....
ವೇದಿಕೆ ಜೊತೆಗೆ ದುಡಿಯುವ ಕೌಶಲ್ಯವನ್ನು ಕಲಿಸಿ ಕೊಟ್ರು....
ನಮ್ಮ್ ಪರಸ್ಪರ 12 ವೇದಿಕೆ ಹುಟ್ಟಿತ್ತು ಅಲ್ಲಿಂದ ನನಗೆ ಅರಿವಿನ ಗುರುಕುಲ ಹಾಗೂ ಟೆಕ್ನಿಕಲ್ ಗ್ರೂಪ್ ಮೆಂಬರ್ ಆಗಿ ಕೆಲಸ ಮಾಡಲು ವೇದಿಕೆ ಕಲ್ಪಿಸಿದ್ರೂ...
ತುರ್ತು ಸಹಾಯ ಅಂತ ವೇದಿಕೆ ಅಂತರು ನಮ್ಮ ಜೀವನಕ್ಕೆ ಒಂದು ಶ್ರೇಷ್ಠ ವೇದಿಕೆ... ಎರಡು ಸಲ ನನ್ನ ಕಷ್ಟದಲ್ಲಿ ಸಹಾಯ ತಗೊಂಡೆ... ಪರಸ್ಪರದ ಕುಟುಂಬ ನನಗೆ ತುಂಬಾನೇ ಸಹಾಯ ಮಾಡಿತ್ತು... 🫶
ಈ ಕುಟುಂಬ ಕೈ ಹಿಡಿದಿದ್ದು ನಾನು ಹೊಸತನವನ್ನು ಕಲಿತು ಕಲಿಸುತ್ತ ಬೆಳಿತಿದೀನಿ....
ಒಳ್ಳೆ ಸ್ನೇಹಿತರು ನನಗೆ ಈ ಒಂದು ನಮ್ಮ ಹೆಮ್ಮೆಯ ಪರಸ್ಪರ ದಿಂದ ಸಿಕ್ಕಿರೋದು ನನ್ನ ಪುಣ್ಯ. ಕರ್ನಾಟಕದ ಯಾವುದೇ ಮೂಲೆಯಲ್ಲಿ ಹೋದರು ನಮ್ಮವರು ಇದಾರೆ ಅನ್ನೋದು ಹೆಮ್ಮೆಯ ವಿಷಯ.
ಜೈ ಪರಸ್ಪರ... 🙏❤️
