*ವೈಯಕ್ತಿಕ ಮಾಹಿತಿ*
ಹೆಸರು- ರಾಣಿಚಂದ್ರಶೇಖರ್
ಊರು-ಕಾಗೇಹಳ್ಳದದೊಡ್ಡಿ.ಮಂಡ್ಯ ತಾಲ್ಲೋಕು
ವೃತ್ತಿ- ಕಾರ್ಯದರ್ಶಿ
ವಿ ಹೆಲ್ಪ್ ಗ್ರಾಮೀಣ ಮತ್ತು ನಗರಾಭಿವೃದ್ದಿ ಸಂಸ್ಥೆ ಮಂಡ್ಯ (ರಿ).ಹಾಗೂ
ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿ.

ಮೇಲ್ಕಂಡ ವಿಳಾಸದವರಾದ ಇವರು ಸುಮಾರು 20 ವರ್ಷಗಳಿಂದ ಸರ್ಕಾರದ ಕೆಲವು ಇಲಾಖೆಗಳು ಮತ್ತು ಸರ್ಕಾರೇತರ ಸಂಘ-ಸಂಸ್ಥೆಗಳು ಆಯೋಜಿಸಿ ನಡೆಸುವಂತಹ ಮಹಿಳೆಯರಿಗೆ ಇರುವಂತಹ ಕಾನೂನುಗಳು ಹಾಗೂ ಮಕ್ಕಳಿಗೆ ಇರುವಂತಹ ಹಕ್ಕುಗಳನ್ನು(ಪೋಕ್ಸೋ)ಕುರಿತು ರಾಜ್ಯಮಟ್ಟದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸುತ್ತಿರುವುದರೊಟ್ಟಿಗೆ ಶಾಲಾ-ಕಾಲೇಜು ಮಕ್ಕಳಿಗೆ ಮತ್ತು ಮಹಿಳೆಯರಿಗೆ ವ್ಯಕ್ತಿತ್ವ ವಿಕಸನ,ವೈಯಕ್ತಿಕ ಸ್ವಚ್ಛತೆ, ನಾಯಕತ್ವ ಗುಣಗಳು ಹಾಗೂ ಪೌಷ್ಠಿಕ ಆಹಾರ ಸೇವನೆಯ ಮಹತ್ವ ಮತ್ತು ಪೌಷ್ಟಿಕ ಆಹಾರ ತಯಾರಿಕೆ ಹಾಗೂ ದುಶ್ಚಟಗಳಿಂದಾಗುವ ದುಶ್ಪರಿಣಾಮಗಳನ್ನು ಕುರಿತು ಗ್ರಾಮಾಂತರ ಮಟ್ಟದಲ್ಲಿರುವ ಸರ್ಕಾರಿ ಶಾಲೆ & ಖಾಸಗಿ ಶಾಲೆ-ಕಾಲೇಜುಗಳಲ್ಲಿ ಮಾಹಿತಿ ನೀಡಿ ಅರಿವು ಮೂಡಿಸುತ್ತಿದ್ದಾರೆ ಹಾಗೂ ಮಹಿಳೆಯರಿಗೆ ಸ್ವಯಂ ಉದ್ಯೋಗ,ಸ್ವ ಸಹಾಯ,
ಹಾಗೂ ಸ್ತ್ರೀಶಕ್ತಿ ಸಂಘಗಳಿಗೆ,ನೊಂದಾಯಿತ ಯುವಕ-ಯುವತಿ ಸಂಘಗಳಿಗೆ ಪುಸ್ತಕ ನಿರ್ವಹಣೆ ಕುರಿತು ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡುತ್ತಿದ್ದಾರೆ.

ಜೊತೆಗೆ ರೈತರಿಗೆ,ರೈತ ಮಹಿಳೆಯರಿಗೆ ಅವರು ಬೆಳೆದ ಬೆಳೆಗಳಾದ ಭತ್ತ, ರಾಗಿ,ಜೋಳ,ತರಕಾರಿ,
ಹಣ್ಣುಗಳು ಹಾಗೂ ಹಾಲು,ತೆಂಗು ಮುಂತಾದುವುಗಳಿಂದ ಮೌಲ್ಯವರ್ಧನೆ ಮಾಡುವ ಬಗ್ಗೆ ಪ್ರಾತ್ಯಾಕ್ಷಿಕೆ ಮೂಲಕ ತರಬೇತಿ ನೀಡುತ್ತಿದ್ದು,
ಇದರೊಟ್ಟಿಗೆ ವೃತ್ತಿ ನಿರತ ಲೈಂಗಿಕ ಕಾರ್ಯಕರ್ತರಿಗೆ ಆಪ್ತ ಸಮಾಲೋಚನೆ,ಆರೋಗ್ಯ,ಪೌಷ್ಠಿಕ ಆಹಾರ ಸೇವನೆ ಮಹತ್ವ ಹಾಗೂ ಎಚ್ ಐ ವಿ ಯಿಂದಾಗುವ ದುಶ್ಪರಿಣಾಮಗಳು ಹಾಗೂ ಸ್ವಯಂ ಉದ್ಯೋಗ ಕೈಗೊಂಡು ಸಮಾಜದ ಮುಖ್ಯವಾಹಿನಿಯಲ್ಲಿ ಅವರುಗಳು ಸ್ವಾವಲಂಬಿಗಳಾಗಿ ನಿಲ್ಲುವಂತೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುತ್ತಿದ್ದಾರೆ.

ಜೊತೆಗೆ ಹವ್ಯಾಸಿ ಬರಹಗಾರಾದ ಇವರು ಪ್ರಸ್ತುತ ಸ್ಥಿತಿ-ಗತಿಗಳನ್ನಾಧರಿಸಿದ ಕೆಲವು ಲೇಖನಗಳು, ಕವಿತೆಗಳನ್ನು ಬರೆದು ಸೋಷಿಯಲ್ ಮೀಡಿಯಾಗಳಲ್ಲಿ ಒಂದಾದ ಮುಖಪುಸ್ತಕದ ಮೂಲಕ ಅರಿವು ಮೂಡಿಸುತ್ತಿದ್ದು ಹಲವಾರು ಮಹಿಳಾ ಕವಿಗೋಷ್ಠಿ,ಸಾಹಿತ್ಯ ಸಮ್ಮೇಳನ ಹಾಗೂ
ಪರಿಸರ ಕುರಿತ ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಕವಿತೆಗಳನ್ನು ಅಂತರ ರಾಜ್ಯ,ರಾಜ್ಯ,ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ವಾಚಿಸುತ್ತಿದ್ದು ಇದರ ಫಲವಾಗಿ ಸಮಾಜದಲ್ಲಿನ ಪ್ರಸ್ತುತ ಸ್ಥಿತಿಗಳಾದ ಮಕ್ಕಳ ಮೇಲಿನ ಆತ್ಯಾಚಾರ,
ಭಿಕ್ಷಾಟನೆ,ಬಾಲಕಾರ್ಮಿಕ ಪದ್ದತಿ,ಮತ್ತು
ಮಹಿಳೆಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ಶೋಷಣೆಗಳು,ಸಂಪ್ರದಾಯದ ಮೂಲಕ ಕೆಲವು ಕಟ್ಟುಪಾಡುಗಳು,ಬಡತನ,
ಶಿಕ್ಷಣ ವಂಚಿತ ಮಕ್ಕಳ ಕಲಿಕೆಯ ದಾಹ ಹಾಗೇ ಹಲವಾರು ವಿಷಯಗಳ ಬಗ್ಗೆ ಬೆಳಕು ಚೆಲ್ಲಲು ತಮ್ಮ ಚೊಚ್ಚಲ ಕವನ ಸಂಕಲನ *ಕೆಸರಿನ ಕಮಲ* ಮುದ್ರಣವಾಗಿದ್ದು ಏಪ್ರಿಲ್ ನಲ್ಲಿ ಲೋಕಾರ್ಪಣೆಗೊಳ್ಳಲು ಪೂರ್ವಸಿದ್ದತೆಯಲ್ಲಿದೆ.

ವಿ ಹೆಲ್ಪ್ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಮಂಡ್ಯ (ರಿ).ಎಂಬ ಸಂಸ್ಥೆಯೊಂದನ್ನು ಪ್ರಾರಂಭಿಸಿ ಮಹಿಳೆಯರೊಟ್ಟಿಗೆ,ಮತ್ತು ಮಕ್ಕಳು ಹಾಗೂ ರೈತರೊಟ್ಟಿಗೆ ಕೆಲಸ ಮಾಡುತ್ತಿದ್ದು ಪ್ರಸ್ತುತ *ಪಡಿ ಸಂಸ್ಥೆ* ಮಂಗಳೂರು ರವರ ಸಹಯೋಗದಲ್ಲಿ ಮಂಡ್ಯ ತಾಲ್ಲೂಕಿನ ಹಳೇಬೂದನೂರು ಕ್ಲಸ್ಟರ್ ನ 8 ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಹಕ್ಕು ಕಾಯ್ದೆ-2009ನ್ನು ಸಂಪರ್ಕವಾಗಿ ಅಳವಡಿಸಲು 4 ಜನ ಸಂಪನ್ಮೂಲ ವ್ಯಕ್ತಿಗಳೊಟ್ಟಿಗೆ ಮಂಡ್ಯ ಜಿಲ್ಲೆಯ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದು, ಪ್ರಸ್ತುತವೂ 2023-2026ರವರೆಗೆ 8 ಸರ್ಕಾರಿ ಶಾಲೆಗಳು ಹಾಗೂ 2 ಎರಡು ಗ್ರಾಮಪಂಚಾಯಿತಿಗಳನ್ನು ಇಲಾಖೆಗಳಿಂದ ದತ್ತು ಪಡೆದು ಗುಣಾತ್ಮಕ ಶಿಕ್ಷಣ ತರುವಲ್ಲಿ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಕುರಿತು ಪಂಚಾಯತ್ ಸುಗಮಗಾರರಾಗಿ ತನ್ನ ತಂಡದೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದಾರೆ.ಹಾಗೂ ಇತ್ತೀಚೆಗೆ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಸಂಸ್ಥೆಯ ಉಪಶಾಖೆಯನ್ನು ತೆರೆದು ರಾಮನಗರ ಜಿಲ್ಲೆಯಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಹೊಲಿಗೆ ತರಬೇತಿ,ಆಹಾರ ತಯಾರಿಕೆ ಮತ್ತು ಸಂಸ್ಕರಣೆ, ಗೃಹೋಪಯೋಗಿ ವಸ್ತುಗಳ ತಯಾರಿಕೆ ತರಬೇತಿ, ಬ್ಯೂಟಿಷಿಯನ್ ತರಬೇತಿಗಳನ್ನು ವಿವಿಧ ಗ್ರಾಮಗಳಲ್ಲಿ ಹಮ್ಮಿಕೊಂಡಿದ್ದಾರೆ ಹಾಗೂ ಕಡ್ಡಾಯ ಶಿಕ್ಷಣಹಕ್ಕು ಕಾಯ್ದೆಯನ್ನು ಯಶಸ್ವಿಯಾಗಿ ಜಾರಿಗೆ ತರಲು ಕಾರ್ಯಕ್ರಮಗಳನ್ನು ರೂಪಿಸಿ ಸಾಗುತ್ತಿದ್ದಾರೆ.

ಸುಮಾರು 23 ವರ್ಷಗಳಿಂದಲೂ ಹಲವಾರು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವುದರೊಟ್ಟಿಗೆ ಮಂಡ್ಯದ ವಿ,ಸಿ ಫಾರಂನಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ಜಿಲ್ಲೆಯ ರೈತ ಮಹಿಳೆಯರ ಪ್ರತಿನಿಧಿಯಾಗಿ ವೈಜ್ಞಾನಿಕ ಸಲಹಾ ಸಮಿತಿಯ ಸದಸ್ಯಳಾಗಿ 3 ವರ್ಷ ಸೇವೆ ಸಲ್ಲಿಸಿದ್ದು,ರಾಜ್ಯ ಮಟ್ಟದಲ್ಲಿರುವ ಕರ್ನಾಟಕ ರಾಜ್ಯ ಮಹಿಳಾ ತರಬೇತುದಾರರ *ಸಂಚಲನ*
ಮಂಗಳೂರು ಎಂಬ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳ ತಂಡದಲ್ಲಿ ಅಧ್ಯಕ್ಷೆ,ಉಪಾಧ್ಯಕ್ಷೆ, ಮತ್ತು ನಿರ್ದೇಶಕಳಾಗಿ 10 ವರ್ಷ ಸೇವೆ ಸಲ್ಲಿಸಿದ್ದು,
ಮಂಡ್ಯ ಕಾನೂನು ಸೇವಾ ಪ್ರಾಧಿಕಾರದಲ್ಲಿ ಕುಟುಂಬ ಕಲ್ಯಾಣ ಸಮಿತಿಯಲ್ಲಿ ಸದಸ್ಯರಾಗಿ ನೂರಾರು ಕುಟುಂಬಗಳು ಹೂಡಿದ್ದ ಕುಟುಂಬ ಕಲಹಗಳ ದಾವೆಗಳನ್ನು ಆಪ್ತ ಸಮಾಲೋಚಕಿಯಾಗಿ ಯಶಸ್ವಿಯಾಗಿ ನಿರ್ವಹಿಸಿರುವುದು ಇವರ ಮತ್ತೊಂದು ಹೆಗ್ಗಳಿಕೆ ಆಗಿದೆ.ಪ್ರಸ್ತುತ ಚನ್ನಪಟ್ಟಣದಲ್ಲಿ ಆಪ್ತ ಸಮಾಲೋಚನೆ ಕೇಂದ್ರವನ್ನು ಪ್ರಾರಂಭಿಸಿದ್ದು ನೊಂದ ಜನರಿಗೆ ಕಾನೂನಿನ ನೆರವನ್ನು ನೀಡುತ್ತಿದ್ದಾರೆ.
ಜೊತೆಗೆ ತಮ್ಮ ಬಹಳ ವರ್ಷಗಳ ಕನಸಾಗಿದ್ದ
ವಿ ಹೆಲ್ಪ್ ಆಹಾರ ತಯಾರಿಕೆ ಮತ್ತು ಸಂಸ್ಕರಣಾ ಘಟಕವನ್ನು ತನ್ನ ತವರೂರಾದ ಮಂಡ್ಯ ತಾಲ್ಲೋಕಿನ ಹಳೇಬೂದನೂರು ಗ್ರಾಮದಲ್ಲಿ ಪ್ರಾರಂಭಿಸಿ 8 ಜನ ಮಹಿಳಾ ಸದಸ್ಯರ ತಂಡದ ಸಹಕಾರದೊಟ್ಟಿಗೆ ಆರ್ಗ್ಯಾನಿಕ್ಸ್ ದೃಢೀಕರಣ ಪಡೆದು ರಾಗಿ ಮತ್ತು ಸಿರಿಧಾನ್ಯಗಳು ಹಾಗೂ ರಸಾಯನಿಕ ಮುಕ್ತ ಬೆಲ್ಲದಿಂದ ವಿವಿಧ ಮೌಲ್ಯವರ್ಧಿತ ಉತ್ಪನ್ನಗಳು ಹಾಗೂ ಸಿರಿಧಾನ್ಯ-ಅಕ್ಕಿಯಿಂದ ವಿವಿಧ ಬಗೆಯ ಹಪ್ಪಳಗಳ ತಯಾರಿಕೆ ಮತ್ತು ವಿವಿಧ ಮಸಾಲೆ ಪದಾರ್ಥಗಳನ್ನು ತಯಾರಿಸಿ
*ವಿ ಹೆಲ್ಪ್* ಎಂಬ ಬ್ರಾಂಡೆಡ್ ನಲ್ಲಿ ಸ್ವಂತಃ ತಾವೇ ಮಾರುಕಟ್ಟೆಯನ್ನು ಮಾಡುತ್ತಿದ್ದಾರೆ.
ಇವುಗಳೊಟ್ಟಿಗೆ ಮಂಡ್ಯದಲ್ಲಿ ಕಲ್ಪವೃಕ್ಷ ಎಂಟರ್ ಪ್ರೈಸಸ್ ಎಂಬ ಗೃಹೋಪಯೋಗಿ ವಸ್ತುಗಳಾದ ಫೆನಾಯಿಲ್,ಸೋಪಾಯಿಲ್,ಬ್ಲಿಚಿಂಗ್,ನೊಣದ ಔಷಧಿ,ಇತ್ಯಾದಿ ವಸ್ತುಗಳ ತಯಾರಿಕೆಯನ್ನು 22 ವರ್ಷಗಳಿಂದಲೂ ತಯಾರಿಸಿ ಮಾರಾಟ ಮಾಡುತ್ತಿದ್ದು 8 ಜನ ಪುರುಷರಿಗೆ ಉದ್ಯೋಗ ನೀಡಿ ಈ ಉದ್ಯಮವನ್ನು ಕೂಡ ಯಶಸ್ವಿಯಾಗಿ ನಡೆಸುತ್ತಿದ್ದಾರೆ.
ಇವರ ಈ ಸಾಮಾಜಿಕ ಕಾರ್ಯಗಳನ್ನು ಗುರುತಿಸಿ ನೆಹರು ಯುವ ಕೇಂದ್ರ ,ಮಂಡ್ಯ ಈ ಇಲಾಖೆಯು ನೀಡುವಂತಹ ಜಿಲ್ಲಾ ಯುವ ಪ್ರಶಸ್ತಿ (2008),
ಜಿಲ್ಲಾಡಳಿತ ಮಂಡ್ಯ ವತಿಯಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ (2011-12)ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
(2011-12),ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ನೀಡುವಂತಹ ಪ್ರತಿಷ್ಠಿತ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ (2011-12) ಸಂದಿದೆ,
ಜೊತೆಗೆ ಸಾಹಿತ್ಯ ಲಯನ್ಸ್ ಕ್ಲಬ್ ಮಂಡ್ಯದಿಂದ ಸಾಹಿತ್ಯ ರಾಜ್ಯೋತ್ಸವ ಪ್ರಶಸ್ತಿ(2018-19),ಎಸ್,ಡಿ,ಜಯರಾಂ
ಸಮಾಜಸೇವಾ ಪ್ರಶಸ್ತಿ(2023)ಹಾಗೂ ಸ್ಥಳೀಯ ಸಂಘ ಸಂಸ್ಥೆಗಳಿಂದ ಹಲವಾರು ಪುರಸ್ಕಾರ ಮತ್ತು ಅಭಿನಂದನೆಗಳು ಸಂದಿರುತ್ತವೆ.
ಜೊತೆಗೆ ಇತ್ತೀಚೆಗೆ ದೆಹಲಿಯಲ್ಲಿ ನಡೆದಂತ ಜಿ-20 ಸ್ಪಾನಸ್ಸ್ ಕಾರ್ಯಕ್ರಮದಲ್ಲಿ ಕರ್ನಾಟಕದ ರೈತ ಮಹಿಳೆಯರ ಪ್ರತಿನಿಧಿಯಾಗಿ ಭಾಗವಹಿಸಿ ಮೌಲ್ಯವರ್ಧಿತ ಉತ್ಪನ್ನಗಳ ಬಗ್ಗೆ ವಿವಿಧ ರಾಷ್ಟ್ರಗಳ ಪ್ರಧಾನಿಗಳ ಕುಟುಂಬದವರಿಗೆ ಮಾಹಿತಿ ನೀಡಿರುತ್ತಾರೆ.

ಪ್ರಸ್ತುತ ಮಂಡ್ಯ ಜಿಲ್ಲೆಯ ಪ್ರಖ್ಯಾತ ಸರ್ಕಾರಿ ಮಹಿಳಾ ಕಾಲೇಜಿನ ಅಕಾಡೆಮಿ ಕೌನ್ಸಿಲ್ ಮೆಂಬರ್ (2023 -26ರ ಸಾಲು)ಆಗಿ ಸೇವೆ ಸಲ್ಲಿಸುತ್ತಿರುತ್ತೇನೆ.

