ಸಿದ್ದಯ್ಯ ಹಿರೇಮಠ ಧಾರವಾಡ್

ಚಲಿಸುವ ಕಾಲವು ಕಲಿಸುವ ಪಾಠವ,

ಮರೆಯಬೇಡ ನೀ ತುಂಬಿಕೋ ಮನದಲಿ

ಇಂದಿಗೊ ನಾಳೆಗೊ ಮುಂದಿನ ಬಾಳಲಿ,

ಗೆಲ್ಲುವಂತ ಸ್ಪೂರ್ತಿ ದಾರಿದೀಪ ನಿನಗೆ ಆ ಅನುಭವ.

ನಾನು ಸಿದ್ದಯ್ಯ ಹಿರೇಮಠ ಧಾರವಾಡ್ ಜಿಲ್ಲೆಯಿಂದ ನಾನು CSC id 2020 ಯಲ್ಲಿ ವರ್ಕ್ ಮಾಡುತ್ತಾ 5 ವರ್ಷ ಆಯ್ತು ನಾನು ಸರಿ ಸುಮಾರು ಮೂರು ವರ್ಷದ ಹಿಂದೆ ಪರಸ್ಪರಕೆ ಸೇವಾ ಡಬ್ಬಿ ಇದ ತಂಡಕ್ಕೆ ಸೇರ್ಪಡೆಯಾದೆ ನನಗೆ ವೀಣಾ ಅಕ್ಕ ಅವರು ತಂಡವನ್ನು ಪರಿಚಯ ಮಾಡಿದರು.. ಏನಾದ್ರೂ ಮಾಡಬೇಕು ಏನಾದ್ರೂ ಕಲಿಬೇಕು ಅನ್ನೋ ಉದ್ದೇಶ ಇತ್ತು ಆದರೆ ಅದನ್ನು ಸಹಕಾರ ಗೊಳಿಸಿದ್ದು ಪರಸ್ಪರ ತಂಡ ಅಂತ ನಾನು ಹೆಮ್ಮೆಯಿಂದ ಹೇಳುತ್ತೇನೆ....ಪರಸ್ಪರ ಮೂಢನ ದಾರಿಯಲ್ಲಿ ಪ್ರೀತಿ ವಾತ್ಸಲ್ಯ ನೆನಪುಗಳ ಮೂಟೆಯನ್ನು ಹೊತ್ತು ಎಷ್ಟು ಎಷ್ಟು ದೂರವಾದರೂ ಚಲಿಸಬಹುದು...ನಮ್ಮ ಪರಸ್ಪರದ ಬದ್ಧತೆಯೊಂದಿಗೆ ಸಾಗಿದರೆ ನೆಮ್ಮದಿಯ ಗೂಡನ್ನು ತಲುಪಬಹುದು.....*ಇನ್ನೊಬ್ಬರಿಗೆ ಕಲಿಸುವ ಮುನ್ನ ನಾವು ಕಲಿಯಬೇಕು. ಉರಿಯುತ್ತಿರುವ ಹಣತೆಯಿಂದಲೇ ಇನ್ನೊಂದು ಹಣತೆಯನ್ನು ಹಚ್ಚಲು ಸಾಧ್ಯ.ನಾವು ಬೆಳಗುತ್ತ ಬೆಳಗಿಸೋಣ.ನನಗೇ ಇಷ್ಟೇ ಬರೋದು ಅಂತ ಇದ್ದ ನನ್ನ ಮನಸ್ಥಿತಿಯ ಬದಲಾವಣೆ ಮಾಡಿ ನಾವು ಇದ್ದೀವಿ ಜೊತೆಗೆ ಅಂತ ನನಗೇ ಕಲಿಸುತ್ತಾ ಸಾಗಿದ ಪರಸ್ಪರ ತಂಡದ ಎಲ್ಲಾ ಸದಸ್ಯರಿಗೆ ನಾನು ಜಸ್ಟ್ ಒಂದು ಚಿಕ್ಕ  ಧನ್ಯವಾದ ಹೇಳಿ ಋಣ ತೀರಿಸಲು ನನ್ನಿಂದ ಆಗದು.

ಯಾಕೆ ಅಂದ್ರೆ ಪರಸ್ಪರ ತಂಡ ಅದಕ್ಕೂ ಮೀರಿ ಕೊಟ್ಟಿದೆ ನನಗೆ ನಾನು ಚಿಕ್ಕವನು ನಿಮ್ಮ ಮುಂದೆ ಹೆಚ್ಚಿಗೆ ಬರೆಯೋಕೆ ಬರೋದಿಲ್ಲ ನೀವು ಹೇಳಿ ಕೊಟ್ಟ ಮಾರ್ಗದರ್ಶನದ ಮೇರೆಗೆ ನಾನು ನನ್ನ ಬದುಕನ್ನ ಸಾಗಿಸುತ್ತೇನೆ. ತಂಡದ ಪ್ರತಿಯೊಬ್ಬ ಸದಸ್ಯರಿಗೂ ಕೋಟಿ ಕೋಟಿ ಧನ್ಯವಾದ...ಸ್ಪೂರ್ತಿ ತುಂಬುವ ಹೃದಯಗಳು ನಮ್ಮೊಟ್ಟಿಗೆ ಇದ್ದರೆ ಅಸಾಧ್ಯವಾದದ್ದು ಕೂಡ ಸಾಧ್ಯವಾಗುತ್ತದೆ.....!!!

ಪರಸ್ಪರ ಇನ್ನು ಹೆಚ್ಚಿನ ಜನರಿಗೆ ಬದುಕು ಕಟ್ಟಿ ಕೊಡುವ ಪ್ರಯತ್ನ ಮಾಡುತ್ತಲೇ ಇರುತ್ತದೆ..!!