ಸ್ಪೂರ್ತಿಯ ಸೆಲೆ ವಿನಯ್

ನನ್ನ ಹೆಸರು ಆರ್ ವಿನಯ್ ಹಾಲಿ ನಾನು ರಾಮನಗರ ಜಿಲ್ಲೆ ಹಾರೋಹಳ್ಳಿ ತಾಲ್ಲೂಕಿನ ದೊಡ್ಡಮರಳವಾಡಿ ಎಂಬ ಹೋಬಳಿ ಕೇಂದ್ರದಲ್ಲಿ ಪ್ರಸಾದ್ ಸೈಬರ್ ಸೆಂಟರ್ ಎಂಬ ಹೆಸರಿನಲ್ಲಿ ಸಿ ಎಸ್ ಸಿ ಮತ್ತು ಗ್ರಾಮ ಒನ್ ಸೆಂಟರ್ ನಡೆಸುತ್ತಿದ್ದೇನೆ.ಹತ್ತು ವರ್ಷಗಳ ಹಿಂದೆ ಪ್ರಸಾದ್ ಸ್ಟೋರ್ ಎಂಬ ಹೆಸರಿನ ದಿನಸಿ ಅಂಗಡಿ ನೆಡೆಸುತ್ತಿದ್ದೆ ಕುತೂಹಲಕ್ಕಾಗಿ ಸಿ ಎಸ್ ಸಿ ಸೆಂಟರ್ ಗೆ ಅರ್ಜಿ ಸಲ್ಲಿಸಿದೆ. ವಿಧಿ ಲಿಕಿತವೋ ಹಣೆ ಬರಹವೋ ತಿಳಿಯದು ರಸ್ತೆ ಅಗಲೀಕರಣದಲ್ಲಿ ಸಂಪೂರ್ಣ ಅಂಗಡಿ ನೆಲಸಮವಾಯಿತು ಜೀವನಕ್ಕೆ ಮುಂದೇನು ಎಂಬ ಪ್ರಶ್ನೆ ಎದುರಾದಾಗ ಸಂಜೀವಿನಿಯಂತೆ ಸಿ ಎಸ್ ಸಿ ಲಾಗಿನ್ ದೊರೆಯಿತು.ಜೀವನ ಮತ್ತೊಂದು ಡಿಕ್ಕಿಗೆ ಹೊರಳಿತು.ಸಿ ಎಸ್ ಸಿ ಸೆಂಟರ್ ತೆರೆದಾಯಿತು ಅಲ್ಲಿ ಹೊಸ ಸವಾಲುಗಳು ತಾಂತ್ರಿಕ ಸಹಾಯ ಯಾರನ್ನ ಕೇಳಬೇಕೆಂದು ತಿಳಿಯ ಡೋಲಾಯಮನವಾದ ಪರಿಸ್ಥಿತಿ ಜಿಲ್ಲೆಯಲ್ಲಿ ಸಿಕ್ಕ 8-10 ಜನ ಸ್ನೇಹಿತರೆ ನಮ್ಮ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಯುತಿತ್ತು.ಎಲ್ಲ ಸ್ನೇಹಿತರು ಹೊಸಬರೇ ಸಮಸ್ಯೆ ಪರಿಹಾರ ಅಷ್ಟಕ್ಕಷ್ಟೆ.ಹೀಗಿರುವಾಗ ಸಿ ಎಸ್ ಸಿ ವತಿಯಿಂದ ಬೆಂಗಳೂರು ನಗರ ದಲ್ಲಿ ನೆಡೆದ ಒಂದು ಮೀಟಿಂಗ್ ನಲ್ಲಿ ಚಂದ್ರು ಸರ್ ಪರಿಚಯವಾದರು ಅವರ ಬಳಿ ತೆರಳಿ ನಮ್ಮ ಜಿಲ್ಲೆಯಲ್ಲಿ ನಾವು 8-10 ಸ್ನೇಹಿತರಿದ್ದು ನಾವೆಲ್ಲ ನಿಮ್ಮ ಸೆಂಟರ್ ಗೆ ಬರುತ್ತೇವೆ ನಮಗೆ ಮಾರ್ಗ ದರ್ಶನ ಮಾಡಿ ಎಂದು ಕೇಳಿದಾಗ ನೀವು 8-10 ಜನ ನಮ್ಮ ಊರಿಗೆ ಬರುವುದಕ್ಕಿಂತ ನಾನೇ ನಿಮ್ಮ ಊರಿಗೆ ಬರುತ್ತೇನೆ ಎಲ್ಲರನ್ನೂ ಒಗ್ಗೂಡಿಸಿ ಮುನ್ನಡೆಯೋಣ ಎಂಬ ಅವರ ಮಾತು ನಮ್ಮೆಲ್ಲ  ಸಿ ಎಸ್ ಸಿ ಸ್ನೇಹಿತರ ಜೀವನ ಪಥ ಬದಲಾಯಿಸಿತು ಎಂದರೆ ತಪ್ಪಾಗಲಾರದು. ಚಂದ್ರು ಸರ್ ಕೇವಲ ನಮ್ಮ ಜಿಲ್ಲೆ ಮಾತ್ರವಲ್ಲ ರಾಜ್ಯದ ಎಲ್ಲಾ ಸಿ ಎಸ್ ಸಿ ಮಿತ್ರರನ್ನು ಸೇರಿಸಿ ಪರಸ್ಪರ ಎಂಬ ದೊಡ್ಡ ಕುಟುಂಬವನ್ನೇ ಪ್ರಾರಂಭಿಸಿದರು ನಾನು ಕೂಡ ಈ ಕುಟುಂಬದ ಹೆಮ್ಮೆಯ ಸದಸ್ಯ. ಈ ಕುಟುಂಬದಿಂದ ನನಗೆ ನನ್ನ ದಿನ ನಿತ್ಯದ ವ್ಯಾಪಾರ ವ್ಯವಹಾರಗಳಲ್ಲಿ ಎದುರಾಗುವ ಎಲ್ಲಾ ತಾಂತ್ರಿಕ ಸಮಸ್ಯೆಗಳಿಗೆ ಸುಲಭ ಪರಿಹಾರ ದೊರೆಯುತ್ತದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪರಸ್ಪರ ಕುಟುಂಬದ ಮಿತ್ರರಿದ್ದಾರೆ ಎಂಬುದೇ ಖುಷಿಯ ವಿಚಾರ.

 

ನಮ್ಮ ಪರಸ್ಪರ ನನ್ನ ಪರಿವಾರ