ಪರೋಪಕಾರಿ ಈಶ್ವರಲಿಂಗ ಆರೇರ

ನಾನು ವಿಜಯಪುರ ಜಿಲ್ಲೆಯ ಶಿವಣಗಿಯೆಂಬ ಗ್ರಾಮದವನು, ಹೆಸರು ಈಶ್ವರಲಿಂಗ ಆರೇರ ಅಂತ..

ನಾನು ಈ ಹಿಂದೆ 2021 ನವಂಬರ್ ನಾಲ್ಕರಂದು ನನ್ನ ಸಿ ಎಸ್ ಸಿ (ಕೇಂದ್ರ) ಜೀವನವನ್ನು ಪ್ರಾರಂಭಿಸಿದ್ದು, ಇದರಲ್ಲಿ ನಾನು ನನ್ನ ಹಳ್ಳಿಗೆರಿಗೆ ನನ್ನ ಊರಿನ ಜನರಿಗೆ ಏನಾದರೂ ಒಂದು ಹೊಸತನ್ನು ಮಾಡಿ ತೋರಿಸಬೇಕು, ತಿಳಿಸಿಕೊಡಬೇಕು, ಸಹಕಾರಿಯಾಗಬೇಕು ಎಂಬ ಮಹಾನ್ ಉದ್ದೇಶ ಅಥವಾ ಆಕಾಂಕ್ಷೆಯನ್ನು ಹೊತ್ತು ಈ ಒಂದು ಕೇಂದ್ರವನ್ನು ಪ್ರಾರಂಭಿಸಿದಾಗ...

 

ಸುಮಾರು ಒಂದುವರೆ ವರ್ಷದವರೆಗೆ ನಾನು ಸರಿಯಾಗಿ ನನ್ನ ಮನಸ್ಸನ್ನು ಕೇಂದ್ರೀಕೃತ ಗೊಳಿಸಲು ಆಗದೆ ಇದ್ದುದಕ್ಕೆ ಮುಖ್ಯ ಕಾರಣ ನನಗೆ ನನ್ನ ಸಿಎಸ್ಸಿ ಐಡಿ ಆಕ್ಟಿವೇಟ್ ಆಗದೆ ಇದ್ದುದೇ ಒಂದು ದೊಡ್ಡ ಕಾರಣವಾಗಿತ್ತು..

 

ತದನಂತರದ ದಿನಗಳಲ್ಲಿ ಬರಬರುತ್ತಾ ನನಗೆ ಸಿಎಸ್‌ಸಿ ಅಂದರೆ ಮುಳುವಾಯಿತೇನೋ ಅನ್ನುವಂತಹ ಒಂದು ಮಟ್ಟಕ್ಕೆ ನಾನು ಬಂದು ನಿಂತಾಗ ಯಾವುದೋ ಒಂದು ಸೂತ್ರದಿಂದ *ಕೊಡಗಿನ ಸಹೋದರ ಮಿಥುನ್* ಅವರ ಪರಿಚಯವಾಯಿತು ಅವರ ಪರಿಚಯವಾದುದ್ದೇ ತಡ ಅವರು ನನಗೆ *ಚಂದ್ರು ಅಣ್ಣನ* ಬಗ್ಗೆ ಹೇಳಿ ಪರಸ್ಪರದ ಬಗ್ಗೆಯೂ ತಿಳಿಸಿದರು ಆಗ ನಾನು ನನ್ನ ಹಿಂದಿನ ತಾಂತ್ರಿಕ ಜೀವನದಲ್ಲಿ ಇದೇ ತೆರನಾದ ಸಾಮಾಜಿಕ ಕಳಕಳಿಯುಳ್ಳ ಒಂದು ಗುಂಪಿನಲ್ಲಿ ಸಕ್ರಿಯನಾಗಿದ್ದ ಕಾರಣ ಪರಸ್ಪರ ಏನಿರಬಹುದು ಎನ್ನುವ ಕುತೂಹಲದೊಂದಿಗೆ ಅದರ ಜೊತೆಗೂಡಿ ಪರಸ್ಪರ ಸೇರಿದ ಒಂದು ತಿಂಗಳಲ್ಲಿ ಎಲ್ಲರಿಗೂ ಪ್ರೀತಿ ಪಾತ್ರನಾದುದಲ್ಲದೆ ಪರಸ್ಪರವೇ ಜೀವಾಳ, ಪರಸ್ಪರದ ಜೀವ ಜಲವೇ ನನ್ನುಸಿರು ಎನ್ನುವಷ್ಟಮರಮಟ್ಟಿಗೆ ನನ್ನನ್ನು ನಾನು ತೊಡಗಿಸಿಕೊಂಡಿದ್ದೇನೆ ಎಂದರೆ ತಪ್ಪಾಗಲಾರದು...

 

ಇದರಿಂದ ನಾನು ಒಂದು ಹಂತಕ್ಕೆ ನನ್ನ ಸಿಎಸ್‌ಸಿ ಕೇಂದ್ರ ವನ್ನು ಮುಚ್ಚಿಯೇ ಬಿಡಬೇಕೆಂಬ ಕಟು ನಿರ್ಧಾರಕ್ಕೆ ಬಂದಾಗ ಈ ನಮ್ಮ ಪರಸ್ಪರವೇ ನನ್ನನ್ನು ಈ ಒಂದು ಉನ್ನತ ಮಟ್ಟಕ್ಕೆ ಕೊಂಡೊಯ್ದು ಅಂದಿನ ದಿನದ ನೂರರಿಂದ 500ಕ್ಕೂ ಗಳಿಕೆ ಇಲ್ಲದ ನಾನು ಇಂದಿನ ದಿನಮಾನದ ಗಳಿಕೆ ಮೂರರಿಂದ ಐದು ಸಾವಿರ ನನ್ನದಿದೆ ಎಂದು ಹೆಮ್ಮೆಯಿಂದ ಹೇಳುಬಯಸುವೆ..

 

ನನಗೆ ನನ್ನ ಸಿಎಸ್‌ಸಿ ಹಿರಿಯರು ಈಗ ನನ್ನನ್ನು ಕಂಡರೆ ಬಲು ಪ್ರೀತಿಯಿಂದ ಕಾಣಲು ಕಾರಣೀಭೂತವಾದದ್ದು ಕೂಡ ಈ ನಮ್ಮ ಪರಸ್ಪರ ಹೇಗೆಂದರೆ,

*“ನಹೀ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ”* ಎಂದು ಸಂಸ್ಕøತ ಶ್ಲೋಕದಲ್ಲಿ ತಿಳಿಸಲಾಗಿದೆ. ಇದರರ್ಥ ಜ್ಞಾನಕ್ಕಿಂತ ಮಿಗಿಲಾದುದು ಮತ್ತು ಪವಿತ್ರವಾದುದು ಇನ್ನೊಂದಿಲ್ಲ. ಜ್ಞಾನವೊಂದು ಸಾರ್ವತ್ರಿಕ ಶಕ್ತಿಯಾಗಿದೆ. ಶಿಕ್ಷಣ(ಉದ್ಯಮ)ದ ಪ್ರಮುಖ ಗುರಿ ಜ್ಞಾನಾರ್ಜನೆಯಾಗಿದೆ. ಜ್ಞಾನದಿಂದ ವ್ಯಕ್ತಿಯ ಬದುಕಿನ ಎಲ್ಲ ಕ್ಷೇತ್ರಗಳನ್ನು ಬೆಳಗಿಸಬಹುದಾಗಿದೆ. “ಜ್ಞಾನವೇ ಶಕ್ತಿಯಾಗಿದ್ದು ಅದರಿಂದಲೇ ಎಲ್ಲ ಕೆಲಸಕಾರ್ಯಗಳು ಸಾಧ್ಯ” ಎಂದು ಸಾಕ್ರೆಟಿಸ್ ಹೇಳಿದ್ದಾನೆ.

*ಇಂತಹ ಒಂದು ಅಗಾಧ ಜ್ಞಾನದ ದೇಗುಲವೇ ಈ ನಮ್ಮ ಪರಸ್ಪರ ಎಂದು ಹೇಳಿದರೆ ತಪ್ಪಾಗಲಾರದು*

 

ಇದಕ್ಕೆಲ್ಲ ಕಾರಣ ಕೇವಲ ಪರಸ್ಪರ ಇದರ ಜೊತೆಗೆ ನಮ್ಮ ಪರಸ್ಪರ ಹಿರಿಯರ ಹಲವಾರು ಸಲಹೆ ಸಹಕಾರ ಸದಾ ನನ್ನ ಬೆನ್ನಿಗಿದ್ದಿದು ನನ್ನ ಅದೃಷ್ಟವೇ ಎನ್ನಬಹುದು ಹೀಗಾಗಿ ನಾನು ಈ ಮಟ್ಟದಲ್ಲಿ ಯಶಸ್ವಿಯಾಗಲು ಕಾರಣೀಭೂತ ಆಗಿದ್ದು ಕೇವಲ ನನ್ನ ಹೆಮ್ಮೆಯ ಪರಸ್ಪರ..

 

ಹಾಗಾಗಿ ಪರಸ್ಪರ ನಂಬಿಕೆಟ್ಟವರಿಲ್ಲವೋ ಮನುಜ ಪರಸ್ಪರವ ನಂಬಿ ಕೆಟ್ಟವರಿಲ್ಲವೂ ಅನುಜ ಎಂದು ಹೇಳಬಯಸುತ್ತೇನೆ ...

 

ಜೈ ಪರಸ್ಪರ

ನಿತ್ಯ ನಿರಂತರ

 

ನಿಮ್ಮವ

*ಈಶ್ವರಲಿಂಗ ಆರೇರ*

*ವಿಜಯಪುರ*