ಮಾನವೀಯತೆಯ ಮಾತೆ ವೀಣಾ ಎಸ್

*ಪರಸ್ಪರ* ಅನ್ನೂವ ಹೆಸರಲ್ಲೆ  ಒಬ್ಬರಿಗೊಬ್ಬರು ಆತ್ಮಿಯತೆ, ಅನ್ಯೋನ್ಯತೆಯಿಂದ ಕೂಡಿ ಬಾಳುವ ಒಂದು ಕುಟುಂಬ ಅನ್ನೂವ ಅರ್ಥ ಸೂಚಿಸುತ್ತದೆ...

 

ನಾನು ಹೀಗ ಪರಸ್ಪರದ ಕುಟುಂಬದವಳು, ನಾನು ಪರಸ್ಪರದವಳು ಅನ್ನುವ ಹೆಮ್ಮೆ ನನಗಿದೆ.. ಈ ಪರಸ್ಪರಕ್ಕೆ ಸೇರುವ ಮೊದಲು ನಾನು ಒಬ್ಬ ಶಾಲಾ ಶಿಕ್ಷಕಿಯಾಗಿ ನಾನು ಕೆಲಸ ಮಾಡುತ್ತಿದ್ದೆ, ಕಾರಣಂತಾರದಿಂದ ನಾನು ಆ ಕ್ಷೇತ್ರದಿಂದ ಹೊರ ಬಂದು  ಅನ್ ಲೈನ್ ಸೇವೇಗಳ ಬಗ್ಗೆ ಅಲ್ಪ ಸ್ವಲ್ಪ ಜ್ಞಾನ ಇದ್ದುದ್ದರಿಂದ ಗ್ರಾಮ ಒನ್ ಕೇಂದ್ರ ಪ್ರಾರಂಭಿಸಿದೆ.... ನಾನು ನನ್ನ ಕೇಂದ್ರದಲ್ಲಿ ಗ್ರಾಹಕರಿಕೆ ಸೇವೆ ಕೊಡುವಾಗ ಸಾಕಷ್ಟು ಸಂದೇಹಗಳು ಇರುತ್ತಿತ್ತು, ತಾಂತ್ರಿಕವಾಗಿ ಸಮಸ್ಯೆ ಬಂದಾಗ ನಾನು ಗ್ರಾಹಕರಿಗೆ ಸೇವೆಯನ್ನು ಸಹ ನೀಡಲು ಆಗುತ್ತಿರಲಿಲ್ಲ,,, ಆದರೆ ನನ್ನ ಪರಸ್ಪರ ಕುಟುಂಬಕ್ಕೆ ಸೇರಿದ ಮೇಲೆ ನನಗೆ ಆನೆ ಬಲ ಸಿಕ್ಕಂತೆ ಆಗಿದೆ.. ನನ್ನ ಪ್ರತಿಯೊಂದು ಸಮಸ್ಯೆಯು ಕ್ಷಣದಲ್ಲೆ ಪರಿಹಾರ ಮಾಡುತ್ತಾರೆ.. ನನ್ನ ಆದಾಯದ ಮೂಲ ಸಹ ಹೆಚ್ಚಾಗಿದೆ.. ಪರಸ್ಪರದಲ್ಲಿ ಪ್ರತಿಯೊಬ್ಬರು ಸಹ ಯಾವುದೇ ನೀರಿಕ್ಷೇಗಳಿಲ್ಲದೆ ಪರಸ್ಪರ ಒಬ್ಬರಿಗೊಬ್ಬರು ಸಹಾಯ ಮಾಡುತ್ತಾರೆ.. ಅಣ್ಣ ತಮ್ಮ , ಅಕ್ಕ ತಂಗಿ ಅನ್ನೂವ ಬಾಂಧವ್ಯ ಬೆಸೆದಿದೆ.. ಯಾರಿಗಾದರೂ ಕುಟುಂಬದಲ್ಲಿ ಸಂಕಷ್ಟಕ್ಕೆ ಒಳಗಾದಾಗ ಇಡಿ ಪರಸ್ಪರ ಕುಟುಂಬ ಅವರಿಗೆ ಕೈಲಾದಷ್ಟು ಸಹಾಯ ಮಾಡಿ ಅವರಿಗೆ ಬೆನ್ನೆಲುಬಾಗಿ ಸಹಾಯ ಮಾಡುತ್ತೆ..

 

ಪರಸ್ಪರದಿಂದ ವಿವಿಧ ಜಿಲ್ಲೆಗಳಲ್ಲಿ ನೂರಿತ ಜ್ಞಾನ ಉಳ್ಳವರ ಪರಿಚಯ ಹಾಗೂ ಅವರಿಂದ ನಮಗೆ ಸಿಗುವ ಜ್ಞಾನ ಸಹಯ ಎಲ್ಲವೂ ಉಪಯೋಗವಾಗುತ್ತಿದೆ...

ಬರಿ ಸ್ವಾರ್ಥ ತುಂಬಿದ ಈ ಕಾಲದಲ್ಲಿ ಸಾವಿರಾರು ಜನರ ಒಳಿತನ್ನ ಬಯಸಿ ಯಾವುದೇ ಸ್ವಾರ್ಥವಿಲ್ಲದೆ ನಿಸ್ವಾರ್ಥವಾಗಿ ಸಾವಿರಾರು ಜನರಿಗೆ ಬದುಕಿನ ದಾರಿ ತೋರಿಸುತ್ತಿರುವ ಹಾಗು ಈ ಪರಸ್ಪರಕ್ಕಾಗಿ ಪ್ರತಿ ದಿನ ಅವರ ಸಮಯವನ್ನು ಕೊಟ್ಟು ಇನ್ನೊಬ್ಬರ ಏಳಿಗೆಯನ್ನು ಕಂಡು ಸಂತೋಷ ಪಡುವಂತಹ ವ್ಯಕ್ತಿಗಳು ಚಂದ್ರು ಅಣ್ಣ ಮತ್ತು ರಾಜಾಸಬ್ ಸರ್.. ಇವರಿಬ್ಬರಿಗೂ ನಮನಗಳು🙏🙏🙏🙏

 

✍🏻 ವೀಣಾ ಎಸ್

ಚಂದಾಪುರ