ಪರಸ್ಪರ ಸಮೂಹ

ಪರಸ್ಪರ ಸಮೂಹ

 ವಿಭಿನ್ನ ವಿಚಾರದಿಂದ ತಲೆಯೆತ್ತಿದ ಸಂಸ್ಥೆಯೇ ನಮ್ಮ ಈ ಪರಸ್ಪರ ಸಮೂಹ.

 ನನ್ನಿಂದ ನನಗಾಗಿ ಅನ್ನುವುದು ಪರ, ನಮ್ಮಿಂದ ನಮಗಾಗಿ ನಮಗೋಸ್ಕರ ವಾಗಿರುವುದು ಪರಸ್ಪರ.

ಕ್ಷಣಕ್ಷಣ ಬದಲಾಗುತ್ತಿರುವ ಈ ಕಾಲದಲ್ಲಿ ಸ್ವಂತಕ್ಕೆ ಮಾತ್ರ ಯೋಚನೆ ಮಾಡುವವರ ಮಧ್ಯೆ ಸಮಾಜದ ಒಳಿತಿಗಾಗಿ ಬದುಕಿನ ಬವಣೆ ನೀಗಿಸಲು ಹೋರಾಡುತ್ತಿರುವ ಜನರಿಗಾಗಿ ಆಶಾಕಿರಣವಾಗಿ ಉದಯಿಸಿದೆ ನಮ್ಮ ಈ ಪರಸ್ಪರ ಸಮೂಹ.

ನಮ್ಮ ಈ ಪರಸ್ಪರ ಸಮೂಹವು ಇರುವ ಉದ್ಯೋಗದಲ್ಲಿ ಸಂತುಷ್ಟಿ ಕಾಣದೆ ಇತ್ತಕಡೆ ಅದರಿಂದ ಹೊರಗಡೆ ಬರೋದು ಆಗದೇ ಇರುವಂತಹ ವೃತ್ತಿಬಾಂಧವರಿಗೆ ಉದ್ಯೋಗದ ಜೊತೆಗೆ  ಬದುಕು ಕಟ್ಟಿಕೊಂಡು ಆರ್ಥಿಕವಾಗಿ ಸದೃಢರನ್ನಾಗಿಸುವ ನಿಟ್ಟಿನಲ್ಲಿ ಹೊಸ ಹೊಸ ಭಿನ್ನ-ವಿಭಿನ್ನ ಉದ್ಯೋಗಗಳ ಮಾಹಿತಿ ಅದರ ಜೊತೆಗೆ ಹೆಚ್ಚು ಕಲಿಕೆ ಹೆಚ್ಚು ಗಳಿಕೆ ಅನ್ನುವ ಧ್ಯೇಯ ವಾಕ್ಯದೊಂದಿಗೆ ಕಾರ್ಯಾಗಾರ ಹಮ್ಮಿಕೊಂಡು ಸಫಲ ಜೀವನ ಸಾಗಿಸಲು ಸಹಾಯ ಮಾಡುತ್ತಿದೆ.

ಪರಸ್ಪರ ಸಮೂಹವು ಜಾತಿ-ಮತ ಬೇಧ ಎಂಬ ತಾರತಮ್ಯವಿಲ್ಲದೆ ಗಂಡು-ಹೆಣ್ಣೆಂಬ ಲಿಂಗಬೇಧವಿಲ್ಲದೆ ಪ್ರತಿಯೊಬ್ಬರನ್ನು ಸಮಾನತೆಯಿಂದ ಸಹಬಾಳ್ವೆ ನಡೆಸಲು ಅನುವು ಮಾಡಿಕೊಡುತ್ತದೆ.

ವಿದೇಶಿ ಸಂಸ್ಕೃತಿಗೆ ಮಾರುಹೋಗುತ್ತಿರುವ ಜನಾಂಗದ ಮಧ್ಯೆ ನಮ್ಮ ಭಾಷೆ ನಮ್ಮ ಸೊಗಡು ನಮ್ಮತನವನ್ನು ಎತ್ತಿಹಿಡಿಯಲು ಪಣತೊಟ್ಟು ಒಂದು ಜಿಲ್ಲೆ ಒಂದು ಉತ್ಪನ್ನ ಎಂಬ ವಿಭಿನ್ನ  ಧ್ಯೇಯದೊಂದಿಗೆ ಕರ್ನಾಟಕ ರಾಜ್ಯದಾದ್ಯಂತ  ಪ್ರತಿಯೊಂದು ಉತ್ಪನ್ನವನ್ನು ಪರಸ್ಪರ ಇ-ಸಂತೆ ಮುಖಾಂತರ ಪ್ರತಿ  ಮನೆಮನೆಗೆ ತಲುಪಿಸಲು ಶ್ರಮಿಸುತ್ತಿದೆ.

ಪರಸ್ಪರ ಹಾಗೂ ಪರಸ್ಪರ ಇತರಿಗಾಗಿ ವಿಭಿನ್ನವಾದ ಕೈಸಾಲ ಎಂಬ ಯೋಜನೆಯನ್ನು ಪರಿಚಯಿಸಿ ಯಶಸ್ವಿಯಾಗಿ ಕಾರ್ಯ ಪ್ರವೃತ್ತಿಯಾಗಿದೆ.

ಪರಸ್ಪರ ದಿಂದ ನಡೆಯುವ ಸಮಾವೇಶಗಳಲ್ಲಿ ಪರಸ್ಪರ ಸ್ವಉದ್ಯೋಗ ಮಳಿಗೆಗಳನ್ನು ಸ್ಥಾಪಿಸಿ ಗುಡಿಕೈಗಾರಿಕೆ, ಕರಕುಶಲ ಕಲೆ, ಸಾಹಿತ್ಯ ಕಲೆಗಳನ್ನು ಪ್ರೋತ್ಸಾಹಿಸುವುದು ಮತ್ತು ಆಧುನಿಕ ತಂತ್ರಜ್ಞಾನದ ಕುರಿತು  ಕಾರ್ಯಾಗಾರ ಹಮ್ಮಿಕೊಂಡು, ಯಶಸ್ವಿ ಜೀವನ ಸಾಗಿಸಲು ಜನರಿಗೆ ಸಹಕಾರಿಯಾಗಿದೆ.

ಹೆಚ್ಚಾಗಿ ಪರಸ್ಪರ ದೊಂದಿಗೆ ಆನ್ಲೈನ್ ಜಗತ್ತಿನೊಂದಿಗೆ  ನಂಟು ಇರುವ ಪ್ರತಿನಿಧಿ/ ಸದಸ್ಯರುಗಳನ್ನು ಹೊಂದಿದ್ದು, ಅವರ ದಿನನಿತ್ಯದ ಕಾರ್ಯದಲ್ಲಿ ಅಡೆತಡೆಗಳು ಆದಲ್ಲಿ ಹೊಸ ತಂತ್ರಜ್ಞಾನದ ಸಾಫ್ಟ್ವೇರ್ ಗಳನ್ನು ಅಳವಡಿಸಿಕೊಳ್ಳಲು,  ಪರಸ್ಪರ ತಾಂತ್ರಿಕ ಸಹಾಯ ಎಂಬ ವಿಭಾಗವನ್ನು  ಪ್ರಾರಂಭಿಸಿದೆ.

 ಪರಸ್ಪರ ಸಮೂಹ ಸೃಷ್ಟಿಯಾಗಲು ಕಾರಣೀಭೂತರಾದ ಯಶೋದ, ಸೀಮಾ, ವೇದ ಶ್ರೀ, ಮಹಾನಂದ, ಸುಜಾತ, ನಮಿತಾ ಶ್ಯಾಮ್, ಶೈಲಜಾ, ಸಿಂದುಶ್ರೀ, ದೀಪಾ, ರಾಜಲಕ್ಷ್ಮಿ, ಗಾಯಿತ್ರಿ ಹೀಗೆ ನೂರಾರು ರಾಜ್ಯದ ವಿವಿಧ ಜಿಲ್ಲೆಯ ಮಹಿಳಾ ಶಕ್ತಿಯ ಸಂಗಮ ಹಾಗೂ ಶಿವಾನಂದ ಸ್ವಾಮಿ, ರಾಜಾಸಾಬ್, ಕಾಂತರಾಜ್, ಸತ್ಯ, ಪ್ರಕಾಶ್ ಗೌಡ, ಕೃಷ್ಣ ಮೂರ್ತಿ, ಶಿವಕುಮಾರ್ ಮುರುಡೇಶ್ವರ, ಶಿವಕುಮಾರ್ ಹೊಂಬೆಳಕು, ಶಂಕರ್, ಜಿಯಾ ಉಲ್ಲಾ, ರಮೇಶ್ ರಾಥೋಡ್, ದಯಾನಂದ ಹೆಚ್ ಒ, ದಯಾನಂದ ತೋಟಗಿ, ಪ್ರಸನ್ನ, ಮಲ್ಲಿಕಾರ್ಜುನ ಪಾಟೀಲ್, ಪೃಥ್ವಿ ಕೃಷ್ಣ, ವಿನಯ್ ಕುಮಾರ್, ಅರ್ಜುನ್, ಸಿದ್ದಾರೆಡ್ಡಿ, ಗುರುಸಿದ್ದಾಚಾರಿ, ಹರೀಶ್ ಗೋಕರ್ಣ, ಅಸಾದ್ ಪಿರ್ಜೇಡಿ, ಆನಂದ್ ಸಾಗರ್, ಸುರೇಶ್, ರಾಜೇಶ್, ಶ್ರೀನಿವಾಸ ಕೋಲಾರ್, ವಾಸು, ಶಾಂತಪ್ಪ, ನಾರಾಯಣ್ ಹೀಗೆ ನೂರಾರು ಪ್ರಮುಖರ ಅವಿರತ ಶ್ರಮದ ಫಲವಾಗಿ ಪರಸ್ಪರ ಸಮೂಹ ರಾಜ್ಯಾದ್ಯಂತ ವ್ಯಾಪಿಸಿದೆ.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮೆರೆದಂತ ಎಲೆಮರೆ ಕಾಯಿ ಹಾಗೆ ಮರೀಚಿಕೆಯಾಗಿ ಉಳಿದಿರುವ ಅಂತಹ ಸಾಧಕರನ್ನು ಗುರುತಿಸಿ ಅಂತಹ ಸಾಧಕರಿಗೆ ಸನ್ಮಾನಿಸುವುದು ಪರಸ್ಪರ ಕಾರ್ಯಗಳಲ್ಲಿ ಒಂದು.

ಪರಸ್ಪರ ಸಮೂಹವು ಕರ್ನಾಟಕ ರಾಜ್ಯದ 31 ಜಿಲ್ಲೆಗಳಿಂದ ಸದಸ್ಯರುಗಳನ್ನು ಹೊಂದಿದೆ.

 ಪರಸ್ಪರ ದೊಂದಿಗೆ ಜೊತೆಗೂಡುವವರಿಗೆ ಪ್ರತಿ ಜಿಲ್ಲೆಯೊಂದಿಗೆ ಒಡನಾಟ ಬಾಂಧವ್ಯದ ಕೊಂಡಿಯನ್ನು ಪರಸ್ಪರ ಬೆಸೆಯುತ್ತದೆ.