ಪ್ರವಾಸಿ ವಿಭಾಗ

 

ಪ್ರತಿಯೊಬ್ಬರೂ ಕೂಡ ಪ್ರವಾಸಕ್ಕೆ ಹೋಗುವ ಮೂಲಕ ರಿಲ್ಯಾಕ್ಸ್ ಮಾಡಿಕೊಳ್ಳಲು ಬಯಸುತ್ತಾರೆ. ಜನರು ದಿನದಿಂದ ದಿನಕ್ಕೆ ಹೆಚ್ಚು ಪ್ರವಾಸಿ ಮುಖಿಯಾಗುತ್ತಿರುವ ಕಾರಣ ಈಗ ಪ್ರವಾಸೋದ್ಯಮ ಹಿಂದಿಗಿಂತಲೂ ಹೆಚ್ಚು ಬೃಹತ್ತಾಗಿ ಬೆಳೆಯುತ್ತಿದೆ. ಪ್ರವಾಸವು ದೇಶದ ಆರ್ಥಿಕ ಸ್ಥಿತಿಗತಿಗಳನ್ನು ರೂಪಿಸುವಲ್ಲಿ ಮಹತ್ವದ ಪಾತ್ರವಹಿಸುತ್ತಿದೆ, ಬಹಳಷ್ಟು ಜನರು ಪ್ರವಾಸ ಉದ್ಯಮದಲ್ಲಿ ಮಾರ್ಗದರ್ಶಿಯಾಗಿ ಕೆಲಸ ಮಾಡಲು ಆಸಕ್ತಿ ತೋರುತ್ತಿದ್ದಾರೆ ಆದರೆ ಅವರಿಗೆ ಯಾವುದೇ ತರಬೇತಿ ನೀಡಲು ಯಾವುದೇ ಸಂಸ್ಥೆಗಳು ಇಲ್ಲದ ಕಾರಣ ಪ್ರವಾಸೋದ್ಯಮವನ್ನೇ ನಂಬಿ ಅದರಲ್ಲೇ ಆದಾಯ ಕಂಡುಕೊಳ್ಳುತ್ತಿರುವ ಜನರು ನಮ್ಮಲ್ಲಿ ಕೆಲವರು ಮಾತ್ರ ಇದ್ದಾರೆ, ಅವರ ಜೀವನಕ್ಕೂ ಒಂದು ಭರವಸೆ ಮೂಡುವಂತಹ ಆಶಾಕಿರಣ ನಮ್ಮ ಪರಸ್ಪರ ಪರಿವಾರ ಪ್ರವಾಸಿ ವಿಭಾಗದ ಮೂಲಕ ಆದಾಯ ಮಾಡಿಕೊಡುತ್ತದೆ. 

ಈಗಾಗಲೇ ಪ್ರವಾಸಿ ಮಾರ್ಗದರ್ಶಿ ತರಬೇತಿ ಕಾರ್ಯಚಟುವಟಿಕೆಗಳನ್ನು ಆರಂಭಿಸಿ ಪರಿಣಿತ ಮಾರ್ಗದರ್ಶಿಗಳು, ಹೋಟೆಲ್, ರೆಸಾರ್ಟ್ ಬುಕಿಂಗ್ ಏಜೆಂಟ್ ಗಳು ಹಾಗೂ ಬಸ್, ರೈಲು, ವಿಮಾನ ಟಿಕೆಟ್ ಬುಕಿಂಗ್ ಮೂಲಕ ಹಣವನ್ನು ಗಳಿಸುವ ಮೂಲಕ ಸದೃಢ ಹೆಜ್ಜೆಯನ್ನು ಇಡಲು ಅನುವುಮಾಡಿಕೊಡುತ್ತದೆ. 

ರಾಜ್ಯದ ಎಲ್ಲಾ ಜಿಲ್ಲೆಯ ಪಾರಂಪರಿಕ ಪ್ರವಾಸಿ ತಾಣಗಳಾದ ಧಾರ್ಮಿಕ ದೇವಾಲಯ, ಮಸೀದಿಗಳು, ಚರ್ಚ್ ಗಳು, ಕೋಟೆಗಳು, ಬೆಟ್ಟಗಳು, ನೈಸರ್ಗಿಕ ತಾಣಗಳು, ಜಲಪಾತಗಳು, ವಸತಿಗೃಹಗಳು, ಜಲ ಕ್ರೀಡೆ ಗಳು, ರೆಸಾರ್ಟ್, ಪಾರ್ಟಿ ಹಾಲ್, ರಾಷ್ಟ್ರೀಯ ಉದ್ಯಾನವನಗಳು, ಪಕ್ಷಿಧಾಮಗಳು, ಟ್ರಕ್ಕಿಂಗ್ ಸ್ಥಳಗಳು, ಗಿರಿಧಾಮಗಳು ಮುಂತಾದವುಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಅಲ್ಲಿ ಹಣಗಳಿಕೆ ಮಾರ್ಗಗಳನ್ನು ಜೋಡಿಸಬಹುದು.

ಜೊತೆಯಲ್ಲಿ ಕೇವಲ ಹಣ ಗಳಿಕೆಯು ಮುಖ್ಯವಾಗದೇ ಮುಂದಿನ ಜನಾಂಗಕ್ಕೆ ಸಹ ನಮ್ಮ ಪ್ರಕೃತಿ ಹಾಗೂ ಪಾರಂಪರಿಕ ಇತಿಹಾಸ ಉಳಿಸುವ ಜವಾಬ್ದಾರಿ ಸಹ ನಮ್ಮಗಳ ಮೇಲಿರುವ ಹೊಣೆಗಾರಿಕೆ ಹಾಗಾಗಿ ನಾವು ಜನಜಾಗೃತಿ ಮೂಡಿಸುವ ಫಲಕಗಳನ್ನು ಅಳವಡಿಸಿ ಕೋಟೆಗಳು, ದೇವಳಗಳು, ಜಲಪಾತ, ನದಿ, ಸಮುದ್ರದ ದಡಗಳಲ್ಲಿ ಸ್ಥಾಪಿಸಿ, ಪ್ಲಾಸ್ಟಿಕ್ ಮುಕ್ತ ಸ್ಥಳಗಳನ್ನಾಗಿ ಮಾಡಲು ಮುಂದಾಗಬೇಕಾಗಿದೆ.

ಪರಸ್ಪರ ಪ್ರವಾಸಿ ವಿಭಾಗದ ವಿವಿಧ ಜಿಲ್ಲೆಗಳ ಪರಿವಾರದ ಸಹಕಾರದೊಂದಿಗೆ ಪ್ರಸಿಧ್ದ ಪ್ರವಾಸಿ ತಾಣಗಳಲ್ಲಿ ನಮ್ಮ ಪರಿವಾರ ಈಗಾಗಲೇ ನೆಲೆಯೂರಿದ್ದು ಪ್ರವಾಸಿಗರಿಗೆ ಆತಿಥ್ಯನೀಡಲು‌ಸದಾ ಸಿದ್ದರಿರುವ ಸಹೃದಯ ತಂಡ ನಿರ್ಮಾಣವಾಗಿದೆ.

ಪರಸ್ಪರ ಪ್ರವಾಸಿ ವಿಭಾಗದ ಮೂಲಕ ವಿಶ್ವ ಪ್ರಸಿದ್ದ ಪ್ರೇಕ್ಷಣೀಯ ಸ್ಥಳಗಳಲ್ಲಿ ವಸತಿ ವ್ಯವಸ್ಥೆ ಸಹ ಪರಸ್ಪರ ತಂಡವೇ ಕಾರ್ಯನಿರ್ವಹಣೆ ಮಾಡುತ್ತಿದೆ.

.

ಪರಸ್ಪರ

ನಮ್ಮ ಪರಸ್ಪರ ಸಮೂಹ ಇರುವುದೇ ಸಮಾಜಮುಖಿ ಸೇವೆಯನ್ನು ಮಾಡುತ ಸ್ವಾವಲಂಬಿಗಳನ್ನಾಗಿ ಮಾಡುವುದು ಅದುವೇ ನಮ್ಮಿಂದ ನಮಗಾಗಿ ಎಂಬ ಧ್ಯೇಯ ವಾಕ್ಯದಿಂದ ವಿಭಿನ್ನ ವಿಚಾರದಿಂದ ತಲೆಯೆತ್ತಿದ ಸಮೂಹ.

ನಮ್ಮ ಸಂಪರ್ಕಗಳು