ನನ್ನ ಹೆಸರು ಭರತ್ ಎ ಎನ್ ನಾನು ಬೆಂಗಳೂರು ನಗರ ಲಗ್ಗೆರೆಯಲ್ಲಿ ಪಿಎಂಆರ್ ಸೈಬರ್ ಎಂದು ಎರಡು ಶಾಖೆಗಳನ್ನು ನಡೆಸುತ್ತಿದ್ದೇನೆ ಹಾಗೂ ನವಚೈತನ್ಯ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಸಂಘ ಎಂದು ಲೇಬರ್ ಯೂನಿಯನ್ ನಡೆಸಿಕೊಂಡು ಬರುತ್ತಿದ್ದೇನೆ ನನ್ನ ಶಾಖೆಯಲ್ಲಿ ಮೂರು ಜನ ಕೆಲಸ ನಿರ್ವಹಿಸುತ್ತಿದ್ದಾರೆ ನಾನು 2022ರಲ್ಲಿ ಸಿ ಎಸ್ ಸಿ ಯನ್ನು ಸೇರಿಕೊಂಡೆ ಸಿ ಎಸ್ ಸಿ ಸೇರಿಕೊಂಡ ನಂತರ ನನಗೆ ನಮ್ಮ ಗುರುಗಳಾದ ಸ್ನೇಹಿತರಾದ ಮಾರ್ಗದರ್ಶಕರಾಗಿ ಚಂದ್ರು ಅಣ್ಣ ಸಿಕ್ಕಿದರು ಅವರಿಂದ ನನಗೆ ಈ ಪರಸ್ಪರ ಅಂತ ಒಂದು ದೊಡ್ಡ ಕುಟುಂಬ ಸಿಕ್ಕಿತು ಇದರಿಂದ ನಾನು ಹಲವಾರು ವಿಷಯಗಳು ಕಲಿತೆ ಹಾಗೂ ಇದರಿಂದ ನನಗೆ ತುಂಬಾ ಜನ ಸಹೋದರ ಸಹೋದರಿಗಳು ಸ್ನೇಹಿತರು ಹಿತೈಷಿಗಳು ಎಲ್ಲರೂ ದೊರೆತರು ನಾನು ಒಬ್ಬ ಪರಸ್ಪರದ ಸದಸ್ಯನೆಂದು ಅತಿ ಎಮ್ಮೆಯಿಂದ ಹೇಳಿಕೊಳ್ಳುತ್ತೇನೆ ನಮ್ಮ ಪರಸ್ಪರ ತಂಡದಲ್ಲಿ ಹಾಕುವ ಪ್ರತಿಯೊಂದು ಪೋಸ್ಟರ್ಗಳನ್ನು ನಾನು ನನ್ನ ಸ್ಟೇಟಸ್ ನಲ್ಲಿ ಹಾಕುವುದರಿಂದ ನನ್ನ ಸ್ಟೇಟಸ್ ಅನ್ನು ನೋಡಿದ ಕೆಲವರು ಪರಸ್ಪರ ಎಂದರೇನು ಎಂದು ಕೇಳಿ ಅದರ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ ನನ್ನ ದಿನದ ಆದಾಯ ಗಳಿಕೆಯನ್ನು ಹೆಚ್ಚಿಸುವಲ್ಲಿ ಪರಸ್ಪರ ಅತಿ ಅಮೂಲ್ಯವಾದ ಪಾತ್ರವನ್ನು ವಹಿಸಿದೆ. ನಮ್ಮ ಶಾಪಿಗೆ ಕರ್ನಾಟಕದ ಯಾವುದೇ ಮೂಲೆಯ ಯಾರಾದರೂ ಜನರು ಬಂದು ಯಾವ ಜಿಲ್ಲೆಯ ಕೆಲಸ ಕೇಳಿದರು ಮಾಡಿಕೊಡುತ್ತೇನೆ ಅದಕ್ಕೆ ಕಾರಣ ನನ್ನ ಪರಸ್ಪರ ತಂಡ ನಾನು ಪರಸ್ಪರ ತಂಡಕ್ಕೆ ಚಿರಋಣಿಯಾಗಿ ಇರಲು ಸದಾ ಕಾಲ ಬಯಸುತ್ತೇನೆ...
