ಸ್ವಾವಲಂಬಿ ವಿಭಾಗ

ಸ್ವಾವಲಂಬಿ ವಿಭಾಗ

ಸ್ವಾವಲಂಬಿ ಮುಖಾಂತರ ಮಾನಸಿಕವಾಗಿ, ಆರ್ಥಿಕವಾಗಿ ಹೇಗೆ ಪ್ರಬಲರನ್ನಾಗಿಸುವುದು ಎಂಬುದನ್ನು ತಿಳಿಸಿ, ಹೊಸ ಯೋಜನೆಗಳನ್ನು ಹೊತ್ತು ತಂದು ಪರಸ್ಪರ ಸದಸ್ಯರಿಗೆ ಬೆನ್ನೆಲುಬಾಗಿ ನಿಲ್ಲುವುದು, ವೃತ್ತಿ ಕೌಶಲ್ಯಗಳನ್ನು ಹೊಂದಿದ್ದು ಆರ್ಥಿಕವಾಗಿ ಕಷ್ಟದಲ್ಲಿರುವವರಿಗೆ ಸಹಾಯ ಹಸ್ತದ ನೆರವು ನೀಡಿ ಅವರಿಗೆ ಜೀವನೋಪಾಯ ಕಲ್ಪಿಸುವ ವ್ಯವಸ್ಥೆ ಹಾಗೂ ಸರ್ಕಾರದ ವಿವಿದ ಯೋಜನೆಗಳ ಫಲಾನುಭವಿಗಳಾಗಿಸುವ ನಿಟ್ಟಿನಲ್ಲಿ ಇಷ್ಟೆಲ್ಲಾ ಭರವಸೆ ದೊರಕಿದ ಮೇಲೆ ನಮಗೆ ಖಂಡಿತವಾಗಿಯೂ ಇನ್ನು ಹೆಚ್ಚಿನ ಸೇವೆಗಳನ್ನ ನೀಡಬಹುದು ಎಂಬ ದೃಢವಾದ ಮನೋಸೈರ್ಯ ಮೂಡುತ್ತದೆ, ಅದಕ್ಕೆ ಅಗತ್ಯವಿರುವ ಹೂಡಿಕೆಯನ್ನು ಸ್ವಾವಲಂಬಿ ಮುಖಾಂತರ ಆರ್ಥಿಕ ಬೆಂಬಲವನ್ನು ಕೂಡ ಪರಸ್ಪರ ನೀಡುತ್ತದೆ.

ಸಮಾಜದಲ್ಲಿನ ಹಲವು ಕಟ್ಟುಪಾಡುಗಳು, ಅಚಾರ- ವಿಚಾರಗಳಿಂದ ಮಹಿಳೆಯರಿಗೆ ಅನಾನುಕೂಲ ಆಗಿರುವುದೇ ಹೆಚ್ಚು. ಇದರಿಂದ ಪಾರಾಗಲು ಮಹಿಳೆಯರು

ಸ್ವಾವಲಂಬನೆಯ ಬದುಕನ್ನು ಕಟ್ಟಿಕೊಳ್ಳಬೇಕು. ಅವರನ್ನು ಸಬಲೀಕರಣದ ಹಾದಿಯಲ್ಲಿ ತರುವುದು ಕರ್ತವ್ಯ.

1. *ಆರ್ಥಿಕ ಸ್ವಾಯತ್ತತೆ ಹಾಗೂ ಉದ್ಯಮಶೀಲತೆ* :

* *ಸ್ವಾವಲಂಬಿ ಮಹಿಳಾ ಸಂಘಟನೆ* : ಮಹಿಳೆಯರು ಕೈಗಾರಿಕೆ, ಹಸ್ತಕಲಾ ಉತ್ಪನ್ನಗಳು, ಊಟದ ಸೇವೆ (ಕೇಟರಿಂಗ್), ಮನೆಯಲ್ಲಿಯೇ ಉಳಿತಾಯ ಯೋಜನೆಗಳನ್ನು ಪ್ರಾರಂಭಿಸಲು ಸಹಾಯ.

* *ನಾವು ನಮ್ಮ ಉದ್ಯೋಗ* – ಗುಂಪುಗಳನ್ನು ರಚಿಸಿ, ಉಚಿತ ತರಬೇತಿ, ಮಾರುಕಟ್ಟೆ ಸಂಪರ್ಕ, ಸಾಲ ಯೋಜನೆಗಳ ಮಾಹಿತಿ.

* *ಗೃಹ ಉದ್ಯೋಗ ವೇದಿಕೆ –* ಮನೆಯಲ್ಲಿಯೇ ವೃತ್ತಿ ಆರಂಭಿಸಲು ಸಲಹೆಗಳು, ಮಾರ್ಗದರ್ಶನ, ಆರ್ಥಿಕ ನೆರವು.

2. *ಮಾನಸಿಕ ಸಬಲೀಕರಣ* :

* *ನಾನು ಶಕ್ತಿವಂತಿ* – ಆತ್ಮವಿಶ್ವಾಸ ಹೆಚ್ಚಿಸಲು ಪ್ರೇರಣೆಮೂಲಕ ಉಪನ್ಯಾಸ, ಸಮಾವೇಶ.

* *ಮಾನಸಿಕ ಆರೋಗ್ಯ ಕ್ಲಿನಿಕ್* – ಸ್ತ್ರೀಯರ ಸಾಮಾನ್ಯ ಮನೋಬಲ ಸಮಸ್ಯೆಗಳಿಗಾಗಿ ಸಮಾಲೋಚನೆ, ಮಾರ್ಗದರ್ಶನ.

* *ಜೀವನ ಕೌಶಲ್ಯ ತರಬೇತಿ –* ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ, ಪ್ರಭಾವಿ ಸಂವಹನ, ಸಂಘಟನೆ ಕೌಶಲ್ಯ.

3. *ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ* :

* *ಕೈಮಗ್ಗ ತರಬೇತಿ ಕೇಂದ್ರ* – ಹೊಲಿಗೆ, ಹೆಣಿಗೆ, ಜ್ಯುವೆಲ್ಲರಿ ತಯಾರಿಕೆ, ಕೃಷಿ ಆಧಾರಿತ ವೃತ್ತಿಗಳು.

* *ಡಿಜಿಟಲ್ ಶಿಕ್ಷಣ ತರಬೇತಿ* – ಬೇಸಿಕ್ ಕಂಪ್ಯೂಟರ್ ಜ್ಞಾನ, ಆನ್‌ಲೈನ್ ಉದ್ಯೋಗಾವಕಾಶಗಳ ಕುರಿತು ತರಬೇತಿ.

* *ಆರ್ಥಿಕ ಸ್ಮಾರ್ಟ್‌ನೆಸ್* – ಹಣದ ನಿರ್ವಹಣೆ, ಉಳಿತಾಯ, ಹೂಡಿಕೆ ಬಗ್ಗೆ ಶಿಕ್ಷಣ.

4. *ಪರಸ್ಪರ ಬೆಂಬಲ ಮತ್ತು ಸಹಾಯ ಹಸ್ತ:*

* *ಕಟ್ಟಿಗೆ ನೀವೆ, ಬೆಂಬಲ ನಾವು* – ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಪರಿಹಾರ ನಿಧಿ ಸಂಗ್ರಹ.

* *ಒಗ್ಗಟ್ಟಿನ ಶಕ್ತಿ* – ಮಹಿಳಾ ಸಹಕಾರ ಸಂಘ (Self-Help Group - SHG) ಸ್ಥಾಪನೆ.

* *ಬ್ಯಾಂಕ್ ಲೋನ್ & ಸರ್ಕಾರಿ ಯೋಜನೆಗಳ ನೆರವು* – ಅರ್ಥಪೂರ್ಣ ಯೋಜನೆಗಳ ಮೌಲ್ಯಮಾಪನ, ಸಬ್ಸಿಡಿ, ಅನುದಾನಗಳ ಬಗ್ಗೆ ಮಾಹಿತಿ.

5. *ಸಮಾನತೆ ಮತ್ತು ಸಾಂಸ್ಕೃತಿಕ ಬೆಳವಣಿಗೆ* :

* *ಸಮಾನತೆ ವೇದಿಕೆ* – ಮಹಿಳಾ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವ ಚಟುವಟಿಕೆಗಳು.

* *ಸಾಂಸ್ಕೃತಿಕ ಉತ್ಸವ* – ಮಹಿಳೆಯರ ಕಲೆ, ಪ್ರತಿಭೆ, ಕ್ರೀಡಾ ಚಟುವಟಿಕೆಗಳಿಗೆ ವೇದಿಕೆ.

* *ಸಮುದಾಯ ಪಾಠಶಾಲೆ* – ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಉಚಿತ ಶಿಕ್ಷಣ ಕಾರ್ಯಕ್ರಮ.

ಈ ಯೋಜನೆಗಳು ಮಹಿಳೆಯರನ್ನು ಆರ್ಥಿಕವಾಗಿ, ಮಾನಸಿಕವಾಗಿ ಪ್ರಬಲಗೊಳಿಸಿ, ಪರಸ್ಪರ ಬೆಂಬಲದ ಮೂಲಕ ಸ್ವಾವಲಂಬಿ ಜೀವನ ಕಟ್ಟುವಲ್ಲಿ ಸಹಾಯ ಮಾಡಬಹುದು.

ಹೆಚ್ಚಾಗಿ ಮಹಿಳೆಯರು ಸಂಸ್ಕೃತಿ, ಆಚಾರ ವಿಚಾರವನ್ನು ಉಳಿಸಿ ಬೆಳೆಸುವ ಮಹತ್ವದ ಜವಾಬ್ದಾರಿ ಹೊಂದಿದ್ದಾರೆ. ಈಗ ಎಲ್ಲಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಮುದಾಯವು ಸಂಕುಚಿತ ಭಾವನೆ ಇಲ್ಲದೇ ಸಮಾಜದ ಎಲ್ಲಾ ವರ್ಗದೊಂದಿಗೆ ಸಮಾನ ಭಾವನೆ ಹೊಂದ ಬೇಕಾಗಿದೆ.

     *ಪರಸ್ಪರ ನಿರಂತರ*

🌻 ಎಂ ಶಾಂತಪ್ಪ ಬಳ್ಳಾರಿ 🌻