ಹೆಸರು: ಅರ್ಜುನ್ ಎನ್ ಎಸ್
ಊರು: ನರಸಿಂಹರಾಜಪುರ, ಚಿಕ್ಕಮಗಳೂರು ಜಿಲ್ಲೆ.
ವಿದ್ಯಾರ್ಹತೆ: ಡಿಪ್ಲೋಮ ಇನ್ ಎಲೆಕ್ಟ್ರಾನಿಕ್ಸ್
ವೃತ್ತಿ: ಶ್ರೀನಿಧಿ ಗ್ರಾಫಿಕ್ಸ್ & ಎಂಟರ್ ಪ್ರೈಸಸ್ ನ ಮಾಲೀಕನಾಗಿ ಕ್ರಿಯಾಶೀಲ ಬಹುಸೇವೆಗಳನ್ನು ಹಾಗೂ ವ್ಯವಹಾರವನ್ನು ನಡೆಸುತ್ತಿದ್ದು, ಕೇಂದ್ರ ಸರ್ಕಾರದ ಸೇವೆಗಳನ್ನು ನಾಗರಿಕರಿಗೆ ತಲುಪಿಸುವ ಸಾಮಾನ್ಯ ಸೇವಾ ಕೇಂದ್ರ ಮತ್ತು ಮುದ್ರಣ ಕ್ಷೇತ್ರ ಕಸ್ಟಮೈಸ್ಡ್ ಗಿಫ್ಟ್ ಶಾಪ್ ಹಾಗೂ ಕ್ರೀಡಾ ಸಾಮಾಗ್ರಿ ಉದ್ಯಮವನ್ನು ನಡೆಸುತ್ತಿದ್ದೇನೆ.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಜಾನಪದ ಪರಿಷತ್ತು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಜೂನಿಯರ್ ಚೇಂಬರ್ ಇಂಟರ್ನ್ಯಾಷನಲ್ ರಕ್ತದಾನಿಗಳ ಬಳಗ ಇನ್ನೂ ಹತ್ತು ಹಲವು ಸೇವಾ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ೨೫ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ್ದು ರಕ್ತದಾನವೂ ಕೂಡ ಒಂದು ರೀತಿಯ ಹವ್ಯಾಸವಾಗಿದೆ.
ಮೂರು ವರ್ಷಗಳ ಹಿಂದೆ ಶ್ರೀಯುತ ದಯಾನಂದ ಹೆಚ್.ಓ ತರೀಕೆರೆ ಇವರು ನನ್ನನ್ನು ಪರಸ್ಪರಕ್ಕೆ ಪರಿಚಯಿಸಿದರು. ನಂತರ ಎಲೆಮರೆ ಕಾಯಿಯಂತಿದ್ದ ನನ್ನನ್ನು ರಾಜ್ಯ ಮಟ್ಟಕ್ಕೆ ಪರಿಚಯಿಸಿದ್ದು ಶ್ರೀಯುತ ಮಲ್ಟಿಮೀಡಿಯಾ ಚಂದ್ರು ರವರು ನನ್ನ ಉತ್ಪನ್ನ ಗಳನ್ನೂ ರಾಜ್ಯದ ಮೂಲೆ ಮೂಲೆಗೂ ತಲುಪಿಸಿವಲ್ಲಿ ಕಾರಣರಾದವರು. ಪರಸ್ಪರದಿಂದ ಹಾಗೂ ಪರಸ್ಪರದ ಪರಿವಾರದಿಂದ ಸಾಕಷ್ಟು ಕಲಿಯುತ್ತಿದ್ದೇನೆ. ಅದರಲ್ಲಿ ಪರಸ್ಪರ ತುರ್ತು ನಿಧಿಯ ಪರಿಕಲ್ಪನೆಯಂತೂ ಅಧ್ಯದ್ಭುತ. ಪರಸ್ಪರ ದೇಸಿ ಸಂತೆಯಲ್ಲಿ ನನ್ನ ಉತ್ಪನ್ನಗಳನ್ನು ಮಾರಾಟ ಮಾಡಲು ಬಹಳ ಅನುಕೂಲವಾಗಿದೆ. ಪರಸ್ಪರದ ಬಗ್ಗೆ ಎಷ್ಟು ವರ್ಣಿಸಿದರೂ ಸಾಲದು.
ರಾಜ್ಯಮಟ್ಟದಲ್ಲಿ ಪರಸ್ಪರದ ಸ್ನೇಹಿತರು ಇದ್ದಾರೆ ಎಂಬ ಹೆಮ್ಮೆಯಿಂದ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
ಧನ್ಯವಾದಗಳು.
ಇಂತಿ ಅರ್ಜುನ್ ಎನ್.ಎಸ್
