2023-11-25

ಅನ್ವೇಷಣೆ ಕುಶಾಲನಗರ, ಕೊಡಗು ಜಿಲ್ಲೆ

Closed

ಜನರಿಗೆ ಆರ್ಥಿಕ ಜಾಗೃತಿ ಬೆಳೆಸಿ, ಉಳಿತಾಯ ಮತ್ತು ಹೂಡಿಕೆ ಕುರಿತು ತಿಳಿಸುವ ವಿಭಾಗ.   ಆರ್ಥಿಕ ಸೇವಾ/ಉಳಿತಾಯ ವಿಭಾಗವು ಸಮುದಾಯದ ಜನರಿಗೆ ಆರ್ಥಿಕ ಸುಧಾರಣೆ ಮತ್ತು ಶ್ರೇಷ್ಠತೆಗಾಗಿ ಹೂಡಿಕೆ ಮತ್ತು ಉಳಿತಾಯದ ಮಹತ್ವವನ್ನು ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ವಿಭಾಗವು ವ್ಯಕ್ತಿಗಳ ಮತ್ತು ಕುಟುಂಬಗಳ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ದಾರಿ ನಿರ್ದಿಷ್ಟಪಡಿಸುತ್ತದೆ, ಹಾಗೆಯೇ ಜನರಿಗೆ ಹಣವನ್ನು ಹೇಗೆ ಉತ್ತಮವಾಗಿ ನಿರ್ವಹಿಸಬೇಕು ಮತ್ತು ಹೂಡಿಕೆ ಮಾಡಬೇಕು ಎಂಬುದರ ಬಗ್ಗೆ ಜಾಗೃತಿಯನ್ನು ವೃದ್ಧಿಸುವುದಕ್ಕಾಗಿ ವಿವಿಧ ಆರ್ಥಿಕ ಶಿಕ್ಷಣ ಮತ್ತು ಸಲಹೆಗಳನ್ನು ನೀಡುತ್ತದೆ.

ಪರಸ್ಪರ ಎಂಬ ಸಮೂಹ ದಿಂದ ಈಗಾಗಲೇ ನಾವುಗಳು ಕಳೆದ ಐದಾರು ವರ್ಷಗಳಿಂದ ಸತತವಾಗಿ ಆನ್ಲೈನ್ ಮೂಲಕ ಸಾವಿರಾರು ತರಬೇತಿ ಕಾರ್ಯಾಗಾರಗಳನ್ನು ನಡೆಸುತ್ತಾ ಬಂದಿದ್ದೇವೆ..

ಮೊದಲ ಬಾರಿಗೆ ನಾವುಗಳು ರಾಜ್ಯದ ಪ್ರತಿಷ್ಠಿತ ಸಂಪನ್ಮೂಲ ತರಬೇತುದಾರರಿಂದ ಅನ್ವೇಷಣೆ ಕೌಶಲ್ಯ ತರಬೇತಿ ಕಾರ್ಯಾಗಾರ ವ್ಯಾಪಾರದಲ್ಲಿ ಏಳು ಅದ್ಭುತಗಳು ಎಂಬ ಶೀರ್ಷಿಕೆಯಡಿಯಲ್ಲಿ ಕುಶಾಲನಗರದ ಟಾಪ್ ಇನ್ ಟೌನ್ ಹೋಟೆಲ್ ಪ್ರೆಸಿಡೆಂಟ್ ಎಂಬ ಸ್ಥಳದಲ್ಲಿ ನಿಮ್ಮೆಲ್ಲರ ಸಹಕಾರದೊಂದಿಗೆ ತರಬೇತಿ ಕಾರ್ಯಕ್ರಮ ಆಯೋಜನೆ.

ವ್ಯಾಪಾರದಲ್ಲಿ ಏಳು ಅದ್ಬುತಗಳು

ಗ್ರಾಹಕರ ನಿರ್ವಹಣೆ

ಸಮಯ ನಿರ್ವಹಣೆ

ಸಿಬ್ಬಂದಿ ನಿರ್ವಹಣೆ

ವ್ಯಾಪಾರ ವಹಿವಾಟು ನಿರ್ವಹಣೆ

ವ್ಯಾಪಾರ ವಹಿವಾಟಿನ ಪ್ರಚಾರ

ಹಣಕಾಸು ನಿರ್ವಹಣೆ

ಮೃದು ಕೌಶಲಗಳು

ಹೀಗೆ ಏಳು ವಿಚಾರಗಳಿಗೆ ಸಂಬಂಧಿಸಿದಂತೆ ತರಬೇತಿ ಕಾರ್ಯಾಗಾರ ಮಾಡುವ ಮೂಲಕ ರಾಜ್ಯದ ಎಲ್ಲಾ ಜಿಲ್ಲೆಯ ಸುಮಾರು  ಮುನ್ನೂರು ಉದ್ಯಮಿಗಳಿಗೆ, ಯಶಸ್ವಿ ಉದ್ಯಮಿಗಳಾಗುವುದು ಹೇಗೆ ಎಂಬುದನ್ನು ಕಲಿಸುವ ಸಾಹಸಕ್ಕೆ ಮುಂದಡಿಯನ್ನು ಶ್ರೀಮತಿ ಸಿಂದು ಶ್ರೀ ಸುನಿ ಕುಶಾಲನಗರದ ಗ್ರಾಮೀಣ ಮಟ್ಟದ ಉದ್ಯಮಿಯವರ ಮುಂದಾಳತ್ವದಲ್ಲಿ ನಡೆಸಲು ಹೊರಟಿದ್ದೇವೆ.

ಈ ಕಾರ್ಯಾಗಾರದಲ್ಲಿ ಏಳು ವಿಚಾರಗಳ ಬಗ್ಗೆ ತರಬೇತಿ

ಪರಸ್ಪರ ಮೂಲಕ ಕೊಡಮಾಡುವ ಪ್ರತಿಷ್ಠಿತ ರಾಜ್ಯ ಮಟ್ಟದ ವರುಷದ ಕನ್ನಡಿಗ ಪ್ರಶಸ್ತಿ ಹಾಗೂ ಯಶಸ್ವಿ ಉದ್ಯಮಿ ಪುರಸ್ಕಾರ ಮತ್ತು ಪರಿಶ್ರಮ ಸಾಧಕರಿಗೆ ಸನ್ಮಾನಗಳು ಹಾಗೂ ನೂತನ ವ್ಯವಹಾರಗಳ ಪರಿಚಯಗಳನ್ನು ತಿಳಿಸುವ ಕಾರ್ಯಕ್ರಮಗಳು.

ಈ ಕಾರ್ಯಕ್ರಮ ಯಶಸ್ವಿಗೊಳಿಸಲು ತಮ್ಮೆಲ್ಲರ ಸಹಕಾರ, ಮಾರ್ಗದರ್ಶನ ಹಾಗೂ ಸಹಭಾಗಿತ್ವವನ್ನು ಸಕಲ ಪರಸ್ಪರ ಪರಿವಾರದ ವತಿಯಿಂದ ವಿನಂತಿಯನ್ನು ಮಾಡಿ ನಿಮ್ಮೆಲ್ಲರಿಗೂ ಪರಸ್ಪರ ಪರಿವಾರಕ್ಕೆ ಸ್ವಾಗತ ಹಾಗೂ ಧನ್ಯವಾದಗಳನ್ನು ತಿಳಿಸಲಾಗಿದೆ..