*ಪರಸ್ಪರ – ಬದುಕನ್ನು ಕಟ್ಟುವ ಪಾಠ*

🌻 ಎಂ ಶಾಂತಪ್ಪ ಬಳ್ಳಾರಿ🌻

 

ಪರಸ್ಪರ…

ಈ ಪದದಲ್ಲೇ ಒಂದು ಜೀವಂತ ಸ್ಪಂದನೆ ಇದೆ.

ಇದು ಕೇವಲ ಒಂದು ಪ್ಲಾಟ್‌ಫಾರ್ಮ್ ಅಲ್ಲ.

ಇದು ವ್ಯಕ್ತಿತ್ವ ಎಂಬ ಜೀವಾಳದೊಂದಿಗೆ ನಮ್ಮ ಕೈ ಹಿಡಿದು, ಗೊಂದಲದಿಂದ ಸ್ಪಷ್ಟತೆಗೆ, ಅಜ್ಞಾನದಿಂದ ಅರಿವಿಗೆ, ಭಯದಿಂದ ಭರವಸೆಗೆ ನಮ್ಮನ್ನು ಸಾಗಿಸುವ ಬದುಕಿನ ಪಾಠಶಾಲೆ.

 

ಬದುಕಿನಲ್ಲಿ ನಾವು ಕಲಿಯಬಹುದಾದ ಅತ್ಯುತ್ತಮ ಪಾಠ ಏನು ಗೊತ್ತಾ?

 

👉 ಜ್ಞಾನದಿಂದ ಬಂದ ಭದ್ರತೆ

👉 ಶಿಸ್ತಿನಿಂದ ಸಾಗುವ ಜೀವನ

👉 ಬುದ್ಧಿಮತ್ತೆಯಿಂದ ಕಟ್ಟಿದ ಭವಿಷ್ಯ

👉 ವ್ಯಕ್ತಿಗಳಿಂದ ವ್ಯಕ್ತಿತ್ವವನ್ನು ರೂಪಿಸಲು  ಸಾಮರ್ಥ್ಯ

 

ಈ 4 ಒಂದೇ ಜಾಗದಲ್ಲಿ ಸೇರಿಕೊಂಡಿರುವ ವೇದಿಕೆ ಎಂದರೆ — ಪರಸ್ಪರ

 

 

*ಜ್ಞಾನಪಟು ಹೂವಿನೊಳಗಿನ ಪರಿಮಳ – ನಿಜವಾದ ಆರ್ಥಿಕ ಶಿಕ್ಷಣ*

 

ಪರಸ್ಪರ ಎಂಬ ಜ್ಞಾನಪಟು ಹೂವಿನೊಳಗೆ ಅಡಗಿರುವ ಪರಿಮಳವೇ

👉 ನಿಜವಾದ ಆರ್ಥಿಕ ಶಿಕ್ಷಣ.

 

ಇಲ್ಲಿ ಹಣದ ಬಗ್ಗೆ ಮಾತಾಡುವುದು ಭಯ ಹುಟ್ಟಿಸಲು ಅಲ್ಲ,

ವ್ಯಕ್ತಿಗಳಿಂದ  ವ್ಯಕ್ತಿತ್ವ ರೂಪಿಸಲು.

 

ವಿದ್ಯಾವಂತರಿಗೂ, ಸಾಮಾನ್ಯ ಜನರಿಗೂ

ಒಂದೇ ರೀತಿ ಸರಳವಾಗಿ ಕೇಳಿಸುವ ಪ್ರಶ್ನೆಗಳು ಇಲ್ಲಿ ಉತ್ತರ ಪಡೆಯುತ್ತವೆ:

 

ಹಣ ಎಂದರೇನು?

 

ಹಣ ಹೇಗೆ ಕೆಲಸ ಮಾಡುತ್ತದೆ?

 

ಉಳಿತಾಯ ಮತ್ತು ಹೂಡಿಕೆ ನಡುವಿನ ವ್ಯತ್ಯಾಸ ಏನು?

 

ಎಲ್ಲಿ ಎಷ್ಟು ಹೂಡಬೇಕು?

 

ಏಕೆ ಆ ನಿರ್ಧಾರ ತೆಗೆದುಕೊಳ್ಳಬೇಕು?

 

 

*ಹಣ ಮರಗಳ ಮೇಲೆ ಬೆಳೆಯುತ್ತದೆಯೇ?*

 

ಈ ಪ್ರಶ್ನೆ ಕೇಳಿದರೆ ಬಹುತೆಕ ಜನ ನಗುತ್ತಾರೆ.

ಆದರೆ ಪರಸ್ಪರ ಹೇಳುವುದು ಬೇರೆ…

 

ಹೌದು, ಹಣ ಬೆಳೆಯುತ್ತದೆ.

ಆದರೆ…

👉 ಅದು ಯಾವ ಮಣ್ಣಿನಲ್ಲಿ ನೆಡುತ್ತೀರಿ ಎಂಬುದರ ಮೇಲೆ ಅವಲಂಬಿತ.

 

*ನಿಮ್ಮ ₹1 ಅನ್ನು ನೀವು ಎಲ್ಲಿ ನೆಡುತ್ತೀರಿ?*

 

* ಅಂಚೆ ಕಚೇರಿಯಲ್ಲಿ ನೆಡಿದರೆ – ಅದು ಬಡ್ಡಿಗೆ ಬೆಳೆಯುತ್ತದೆ

 

* ಬ್ಯಾಂಕಿನಲ್ಲಿ ನೆಡಿದರೆ – ಅದು ಭದ್ರತೆಗೆ ಬೆಳೆಯುತ್ತದೆ

 

* ಷೇರುಗಳಲ್ಲಿ ನೆಡಿದರೆ – ಅದು ಸವಾಲಿಗೆ ಬೆಳೆಯುತ್ತದೆ

 

* ಭೂಮಿ ಅಥವಾ ಮನೆ ಮೇಲೆ ನೆಡಿದರೆ – ಅದು ಆಸ್ತಿಯಾಗಿ ಬೆಳೆಯುತ್ತದೆ

 

* ವಿಮೆಯಲ್ಲಿ ನೆಡಿದರೆ – ಅದು ಭವಿಷ್ಯ ನಿರ್ವಹಣೆಗೆ ಬೆಳೆಯುತ್ತದೆ

 

 

👉 ಪರಸ್ಪರದಲ್ಲಿ ಬಿತ್ತಿದ ಪ್ರತಿ ರೂಪಾಯಿ, ಒಂದು ಹಣವಲ್ಲ… ಒಂದು ಪಾಠ.

 

 

“ಹಣ ಇಡುವ ಮೊದಲು, ಹಣ ಹೇಗೆ ಕೆಲಸ ಮಾಡುತ್ತದೆ ಎಂದು ಕಲಿಯೋಣ”

 

*ಚಂದ್ರು ಸರ್ ಹೀಗೇ ಹೇಳುತ್ತಾರೆ.*

 

ಅವರ ಮಾತುಗಳಿಗೆ ಶುಲ್ಕವಿಲ್ಲ.

ಆದರೆ ಶ್ರದ್ಧೆಯಿಂದ ಕೇಳಿದರೆ,

👉 ಹಣವನ್ನು ಕೆಲಸ ಮಾಡಿಸುವ ಕೌಶಲ್ಯ ಸಿಗುತ್ತದೆ.

 

ಪರಸ್ಪರದಲ್ಲಿ ಕೇವಲ ಲಾಭದ ಮಾತಿಲ್ಲ,

👉 ಬದುಕಿನ ಲಾಜಿಕ್ ಇದೆ.

 

 

 

ಇಲ್ಲಿ ಕೇಳುವ ಪ್ರಶ್ನೆಗಳೇ ಬದುಕನ್ನು ಬದಲಾಯಿಸುತ್ತವೆ

 

ಪರಸ್ಪರದಲ್ಲಿ ನಾವು ಉತ್ತರ ಹುಡುಕುವ ಪ್ರಶ್ನೆಗಳು ಸಣ್ಣದಲ್ಲ:

 

* ಮನೆ ಸ್ವತಃ ಸಾಲ ತೀರಿಸುತ್ತದೆಯೇ? ಹೇಗೆ?

 

* ಗೃಹಸಾಲದ ಮೇಲಿನ ಬಡ್ಡಿ ಶೂನ್ಯವಾಗಬಹುದೇ? ನಿಜವೇ?

 

* ಮಕ್ಕಳ ಹೆಸರಿನಲ್ಲಿ ವಿಮೆ ಪಾಲಿಸಿಯೇ ಬೇಡವೇ? ಏಕೆ?

 

* ಶಿಕ್ಷಣ ವೆಚ್ಚ ದಿನೇದಿನೇ ಏರುತ್ತಿದೆ – ನಾವು ಏನು ಮಾಡಬೇಕು?

 

* ಪಿಂಚಣಿ ಕೇವಲ ಆಸ್ತಿ ಅಲ್ಲ, ಆತ್ಮಸಂತೃಪ್ತಿಯ ಪ್ರತಿ – ಇದನ್ನು ಹೇಗೆ ಕಟ್ಟಬೇಕು?

 

 

👉 ಈ ಪ್ರಶ್ನೆಗಳಿಗೆ ಸಿಗುವ ಉತ್ತರಗಳು

ನಿಮ್ಮ ಅನುಭವ, ನಿಮ್ಮ ಕಲಿಕೆ, ಮತ್ತು ನಿಮ್ಮ ಭವಿಷ್ಯ ನಿರ್ಮಾಣ.

 

 

 

*ಪರಸ್ಪರ – ಭರವಸೆಯ- ವ್ಯಕ್ತಿತ್ವ  ಜ್ಞಾನವೃಕ್ಷ* 🌳

 

ಪರಸ್ಪರ ಒಂದು ದೊಡ್ಡ ಜ್ಞಾನವೃಕ್ಷ.

ಇಲ್ಲಿ ಎಲ್ಲರೂ ಒಂದೇ ಬನದ ಗಿಡಗಳು.

 

*ಈ ವೃಕ್ಷದ 14 ಶಾಖೆಗಳು:*

 

ಮಾನವತಾ ವೇದಿಕೆ

 

ಪಾಠಶಾಲಾ ವಿಭಾಗ

 

ಶಿಕ್ಷಣ ಮತ್ತು ಕೌಶಲ್ಯ

 

ತಾಂತ್ರಿಕ ನೆರವು

 

ಸ್ವಾವಲಂಬಿ ವಿಭಾಗ

 

ವ್ಯಾಪಾರ ವಿಭಾಗ

 

ಕೃಷಿ ವಿಭಾಗ

 

ದೇಸಿ ಸಂತೆ

 

ಉಳಿತಾಯ ಡಬ್ಬಿ

 

ಪ್ರವಾಸಿ ವಿಭಾಗ

 

ಬಹುಮುಖಿ ವಿಭಾಗ

 

ಅರಿವಿನ ಗುರುಕುಲ ವಿಭಾಗ

 

ತುರ್ತು ನಿಧಿ ವಿಭಾಗ

 

ಜೀವ ಜಲ ವಿಭಾಗ

 

 

ಪ್ರತಿ ವಿಭಾಗವೂ ಬದುಕಿನ ಒಂದೊಂದು ಅಂಶವನ್ನು ನೀರಿನಂತೆ ಪೋಷಿಸುತ್ತದೆ.

 

 

ಸ್ಫೂರ್ತಿದಾಯಕ ಮಾರ್ಗದರ್ಶಕ – ಚಂದ್ರು ಸರ್

 

ಮಲ್ಟಿಮೀಡಿಯಾ ಚಂದ್ರು ಸರ್ ಇಲ್ಲಿ ಕೇವಲ ಉಪನ್ಯಾಸಕ ಅಲ್ಲ.

👉 ಅವರು ಮಾರ್ಗದರ್ಶಕ.

 

ಅವರ ಭಾಷೆ ಸರಳ.

ಆದರೆ ಪರಿಣಾಮ ಗಾಢ.

 

ಅವರು ಹೇಳುವ ಒಂದು ಸಾಲು ಸಾಕು:

 

> “ಪಾಠವಿಲ್ಲದ ಹಣ, ಬಿತ್ತದೆ ಹೋದ ಬೀಜ.”

 

 

 

ಒಂದು ಪಾಠ – ಒಂದು ಬದುಕು – ಒಂದು ಪರಸ್ಪರ

 

ನಿಮ್ಮ ಹೂಡಿಕೆಗೆ ಶಕ್ತಿ ಬೇಕಾದರೆ,

👉 ಹೆಚ್ಚು ಹಣಕ್ಕಿಂತ ಹೆಚ್ಚು ಜ್ಞಾನ ಬೇಕು.

 

ನಿಮ್ಮ ಜೀವನದ ಪಾಠ ಯಾಕೆ ತೋಡದಿರಲಿ?

 

ಪರಸ್ಪರ ಎಂಬ ವೇದಿಕೆಯಲ್ಲಿ

ನಿಮ್ಮ ಬದುಕಿನ ಹಾಡು ಹಾಡಿ,

ವ್ಯಕ್ತಿತ್ವ ತುಂಬಿದ ನಾದವಾಗಿ

ನಿಮ್ಮ ಭವಿಷ್ಯವನ್ನು ಪೋಷಿಸಿ.

 

*ಪರಸ್ಪರ – ನಿರಂತರ* .