ಹಣಕಾಸು ಶಿಸ್ತಿಗೆ ಪಾಠ

🌻 ಎಂ ಶಾಂತಪ್ಪ ಬಳ್ಳಾರಿ 🌻

 

*ಉಳಿತಾಯಕ್ಕೆ ಜಪಾನಿಯರ 'ಕಕೆಬೋ': ಹಣಕಾಸು ಶಿಸ್ತಿಗೆ ಪಾಠ*

 

ದುಡ್ಡು ಉಳಿಸೋಕೆ ಜನರು ನಾನಾ ಮಾರ್ಗಗಳನ್ನು ಅಳವಡಿಸಿಕೊಳ್ಳುತ್ತಾರೆ—ಅಪ್ಲಿಕೇಶನ್‌ಗಳು, ಎಕ್ಸೆಲ್ ಶೀಟುಗಳು, ಹಣಕಾಸು ಸಲಹೆಗಾರರು... ಆದರೆ ಅನೇಕರಿಗೆ ಕೊನೆಗೆ ಖರ್ಚು ನಿಯಂತ್ರಣ ಕೈಗೂಳುತ್ತದೆ. ಇಂಥ ಸಂದರ್ಭದಲ್ಲೇ ಜಪಾನಿನ 'ಕಕೆಬೋ' ಪದ್ಧತಿ ಬೆಳೆದುಬಂದಿದ್ದು, ಶಿಸ್ತಿನಿಂದ ಬದುಕುವುದನ್ನು ಕಲಿಸುತ್ತಿದೆ.

 

' *ಕಕೆಬೋ' ಅಂದರೆ ಏನು?*

 

'ಕಕೆಬೋ' ಎಂಬುದು ಜಪಾನೀ ಪದ. ಇದರ ಅರ್ಥ ‘ಮನೆಯ ಲೆಕ್ಕಾಚಾರದ ಪುಸ್ತಕ’. 1904ರಲ್ಲಿ ಜಪಾನಿನ ಮೊದಲ ಮಹಿಳಾ ಪತ್ರಕರ್ತೆ ಹನಿ ಮೊಟೊಕೊ ಈ ಪದ್ಧತಿಗೆ ಚಾಲನೆ ನೀಡಿದರು. ಶತಮಾನದಷ್ಟು ಕಾಲ ಕಕೆಬೋ ಜಪಾನಿಯ ಕುಟುಂಬಗಳ ದಿನನಿತ್ಯದ ಹಣಕಾಸಿನ ನಿರ್ವಹಣೆಗೆ ಮೌಲ್ಯಯುತ ಸಾಧನವಾಗಿಯೇ ಉಳಿದಿದೆ.

 

*ಸರಳತೆ ತನ್ನ ಶಕ್ತಿ*

 

'ಕಕೆಬೋ'ಯ ವಿಶೇಷತೆ ಅದರ ಸರಳತೆ. ಇದರಲ್ಲಿ ಕಂಪ್ಯೂಟರ್‌ಗಳು, ಮೊಬೈಲ್‌ ಅಪ್ಲಿಕೇಶನ್‌ಗಳು, ಅಥವಾ ಆಧುನಿಕ ತಂತ್ರಜ್ಞಾನಗಳ ಅಗತ್ಯವೇ ಇಲ್ಲ. ಕೇವಲ ಎರಡು ಪುಟಗಳಲ್ಲಿ ತಿಂಗಳ ಸಂಪೂರ್ಣ ಲೆಕ್ಕಾಚಾರವನ್ನು ಸಲೀಸಾಗಿ ನಿರ್ವಹಿಸಬಹುದು. ಇದರ ಮೂಲ ಧ್ಯೇಯ – ಮನಸ್ಸಿನ ಶಿಸ್ತಿಗೆ ಲೆಕ್ಕಾಚಾರದ ಮಾರ್ಗದರ್ಶನ.

 

**ನಮ್ಮ ಗುರಿ:*

 

ಹಣವನ್ನು ಸಂಪಾದಿಸುವುದಷ್ಟೇ ಮುಖ್ಯವಲ್ಲ. ಅದನ್ನು ಸರಿಯಾಗಿ ಬಳಸಿ, ಉಳಿತಾಯ ಮಾಡುವ ರೀತಿಯಲ್ಲಿಯೂ ನಾವು ಸಜಾಗರಾಗಬೇಕು. ನಮ್ಮ ಜೀವನದಲ್ಲಿ ಹಣಕಾಸು ಶಿಸ್ತು ತರುವ ಮಹತ್ತರ ಗುರಿಗಳನ್ನು ಈ ಕೆಳಗಿನಂತೆ ನಿರ್ಧರಿಸಬಹುದು:

 

1️⃣ ಎಷ್ಟು ಗಳಿಸುತ್ತಿದ್ದೇವೆ?

ಪ್ರತಿದಿನ, ವಾರ, ತಿಂಗಳು ಅಥವಾ ವರ್ಷಕ್ಕೆ ನಾವು ಎಷ್ಟು ಹಣ ಸಂಪಾದಿಸುತ್ತಿದ್ದೇವೆ ಎಂಬುದರ ಸ್ಪಷ್ಟ ಚಿತ್ರಣ ಅಗತ್ಯ. ನಿಜವಾದ ಆದಾಯವನ್ನು ತಿಳಿದುಕೊಳ್ಳುವುದು ಉಳಿತಾಯದ ಮೊದಲ ಹಂತ.

 

2️⃣ ಯಾವ ಖರ್ಚುಗಳಿಗೆ ಎಷ್ಟು ವಹಿಸುತ್ತಿದ್ದೇವೆ?

ನಮ್ಮ ದಿನನಿತ್ಯದ ಅಗತ್ಯ ಖರ್ಚುಗಳು ಯಾವುವು? ಮನೆ ಬಾಡಿಗೆ , ಆಹಾರ, ವಿದ್ಯುತ್, ಶಾಲಾ ಶುಲ್ಕ, ಪ್ರಯಾಣ, ಚಿಕಿತ್ಸೆ ಮುಂತಾದವುಗಳಿಗೆ ನಾವು ಎಷ್ಟು ವೆಚ್ಚ ಮಾಡುತ್ತಿದ್ದೇವೆ ಎಂಬುದನ್ನು ವಿಶ್ಲೇಷಿಸಬೇಕು.

 

3️⃣ ಎಷ್ಟು ಉಳಿತಾಯ ಮಾಡಬೇಕು?

ತುರ್ತು ಸಂದರ್ಭಗಳಿಗಾಗಿ, ಭವಿಷ್ಯದ ಯೋಜನೆಗಳಿಗಾಗಿ (ಮಕ್ಕಳ ಶಿಕ್ಷಣ, ನಿವೃತ್ತಿ) ಮತ್ತು ಜೀವನದ ಭದ್ರತೆಗಾಗಿ ನಿಶ್ಚಿತ ಪ್ರಮಾಣದ ಹಣವನ್ನು ಪ್ರತಿ ತಿಂಗಳು ಉಳಿತಾಯ ಮಾಡುವುದು ಅನಿವಾರ್ಯ.

 

4️⃣ ಯಾವ ಖರ್ಚುಗಳನ್ನು ಕಡಿಮೆ ಮಾಡಬಹುದು?

ಅಗತ್ಯವಿಲ್ಲದ ಖರೀದಿಗಳು, ಸಾಮಾನ್ಯ ವೆಚ್ಚಗಳಲ್ಲಿ ಉಳಿತಾಯ ಮಾಡುವ ಮಾರ್ಗಗಳು, ಮತ್ತು ವಿಭಿನ್ನ ಸೇವೆಗಳಲ್ಲಿ ವಿನ್ಯಾಸಮಾಡಿದ ಬದಲಾಗುವ ಪರ್ಯಾಯಗಳನ್ನು ಹುಡುಕುವುದು ನಮ್ಮ ಖರ್ಚುಗಳನ್ನು ತಗ್ಗಿಸಬಹುದು.

 

ಈ ಪ್ರಶ್ನೆಗಳಿಗೆ ಪ್ರತ್ಯುತ್ತರವಾಗಿ ನಾವು ನಮ್ಮ ವಾರ-ತಿಂಗಳ ಲೆಕ್ಕವನ್ನು ನಾವೇ ಬರೆದುಕೊಳ್ಳುತ್ತೇವೆ. ಇದರಿಂದ ಹಣ ಖರ್ಚು ಮಾಡುವಾಗ ವಿವೇಚನೆಯು ಉದಯವಾಗುತ್ತದೆ.

 

*ಖರೀದಿಗೆ ಮುನ್ನ ಈ ಪ್ರಶ್ನೆಗಳನ್ನು ಕೇಳಿಕೊಳ್ಳಿ*

 

*ಕಕೆಬೋ ಪ್ರಕಾರ, ಯಾವುದೇ ವಸ್ತುವನ್ನು ಕೊಳ್ಳುವುದಕ್ಕಿಂತ ಮೊದಲು ಈ ಪ್ರಶ್ನೆಗಳನ್ನು ನಾವೇ ನಮಗೆ ಕೇಳಬೇಕು:*

 

1. ಈ ವಸ್ತು ಇಲ್ಲದೇ ನಾನು ಬದುಕಬಹುದು ಅಲ್ವೇ?

 

2. ನಾನು ಈಗಿನ ಹಣಕಾಸಿನ ಸ್ಥಿತಿಯಲ್ಲಿ ಇದನ್ನು ಖರೀದಿಸಬಹುದೇ?

 

3. ನಾನು ಇದನ್ನು ನಿಜವಾಗಿಯೂ ಬಳಸುವೆನೆ?

 

4. ಈ ವಸ್ತುವಿಗೆ ಮನೆಯಲ್ಲಿ ಜಾಗವಿದೆಯೇ?

 

5. ನಾನು ಇದನ್ನು ಮೊದಲ ಬಾರಿ ಎಲ್ಲ ನೋಡಿದೆ? (ಜಾಹೀರಾತು ಅಥವಾ ಶಾಪಿಂಗ್ ಮೊಹದಿಂದ?)

 

6. ನಾನು ಬೇಸರ ಅಥವಾ ಸಡಗರದಿಂದ ಖರೀದಿ ಮಾಡುತ್ತಿರುವೆನೆ?

 

ಈ ಪ್ರಶ್ನೆಗಳು ನಮ್ಮ ಖರೀದಿ ಪ್ರಕ್ರಿಯೆಯಲ್ಲಿ ಅರಿವನ್ನು ತರಲಿದ್ದು, ಅನವಶ್ಯಕ ಖರ್ಚನ್ನು ತಡೆಯಲು ಸಹಾಯಕವಾಗುತ್ತವೆ.

 

*ಖರ್ಚು ನಿಯಂತ್ರಣದ ಕೆಲವು ಸಾದಾ ವಿಧಾನಗಳು*

 

* ನಿಯಮಿತವಾಗಿ ಬ್ಯಾಂಕ್‌ ಬ್ಯಾಲೆನ್ಸ್‌ ಪರಿಶೀಲಿಸಿ

 

* ನಗದು ಬಳಸಿ ವಹಿವಾಟು ಮಾಡಿ (ಡಿಜಿಟಲ್ ತಂತ್ರಜ್ಞಾನದಿಂದ ದೂರವಿರಲು ಅಲ್ಲ, ಆದರೆ ಹಣದ ಮೌಲ್ಯ ಅರಿಯಲು)

 

* 'ಡಿಸ್ಕೌಂಟ್ ಇದೆ' ಎಂಬ ನೆಪದಲ್ಲಿ ಅಗತ್ಯವಿಲ್ಲದ ವಸ್ತುಗಳನ್ನು ಖರೀದಿಸಬೇಡಿ

 

* ಖರೀದಿಯ ಕುರಿತು ಗೊಂದಲವಿದ್ದರೆ, ಅದು ಬೇಕಾದರೆ ಮುಂದಿನ ದಿನ ಖರೀದಿಸಿ

 

 

' *ಕಕೆಬೋ' ಒಂದು ಪುಸ್ತಕವಲ್ಲ – ಅದು ಜೀವನ ಶೈಲಿ.* ಹಣವನ್ನು ಜೋಪಾನವಾಗಿ ಉಪಯೋಗಿಸುವಂತೆ ಬೋಧಿಸುವ ಈ ಪದ್ದತಿ, ನಿಮ್ಮ ಖಾಸಗಿ ಹಣಕಾಸಿನಲ್ಲಿ ಶಿಸ್ತನ್ನು ತರಲು ತುಂಬಾ ಸರಳ ಮತ್ತು ಪರಿಣಾಮಕಾರಿ ಸಾಧನವಾಗಿದೆ.

 

*ಕಕೆಬೋ ಮಾದರಿಯಲ್ಲಿ ಖರ್ಚುಗಳ ವಿಂಗಡಣೆ*

 

1. *ಅವಶ್ಯಕತೆಗಳು (ಇಲ್ಲಿ ಹೊಂದಾಣಿಕೆ ಬೇಡ – ಬದುಕಿಗೆ ಬೇಕಾದ ಮೂಲಭೂತ ಅಗತ್ಯಗಳು)*

 

ಇವುಗಳ ಬಗ್ಗೆ ನಾವು ಆಲೋಚಿಸದೇ ಖರ್ಚು ಮಾಡಬೇಕಾಗುತ್ತದೆ, ಕಾರಣ ಇವು ನಮ್ಮ ದಿನನಿತ್ಯದ ಬದುಕಿಗೆ ಅವಶ್ಯಕ:

 

ಮನೆ ಬಾಡಿಗೆ

 

ಆಹಾರ

 

ಸಾರಿಗೆ / ಸಂಚಾರ

 

ವೈದ್ಯಕೀಯ ಖರ್ಚು / ತುರ್ತು ನಿಧಿ / ಶಾಲಾ ಫೀಸ್

 

ಎಲ್ಪಿಜಿ ಸಿಲಿಂಡರ್

 

ಮೊಬೈಲ್ ಬಿಲ್ (ಅತ್ಯಾವಶ್ಯಕ ಮಟ್ಟದಲ್ಲಿ)

 

 

 

2. *ಅಗತ್ಯತೆಗಳು (ಇಲ್ಲಿ ಆದ್ಯತೆಗಳನ್ನು ಇಟ್ಟುಕೊಳ್ಳಿ – ಬೇಕಾದರೆ ಮಾತ್ರ ಖರೀದಿ)*

 

ಇವು ಲೈಫ್ಸ್ಟೈಲ್ ಸುಧಾರಣೆಗಾಗಿ ಸಹಾಯಕ, ಆದರೆ ಬೇರೆ ಆಯ್ಕೆಗಳಿಂದ ದೂರವಿದ್ದರೂ ಬದುಕು ಸಾಧ್ಯ. ಆದ್ದರಿಂದ ಖರ್ಚು ಮಾಡುವ ಮೊದಲು ಯೋಚಿಸಿ:

 

ಶಾಪಿಂಗ್

 

ರೆಸ್ಟೋರೆಂಟ್‌ನಲ್ಲಿ ಊಟ

 

ಹೊಸ ಫರ್ನಿಚರ್ ಖರೀದಿ

 

ಹೊಸ ಬೈಕ್ ಖರೀದಿ

 

ಮನೆಗೆ ಇಂಟೀರಿಯರ್ ಡಿಸೈನ್

 

ಚಿನ್ನ ಖರೀದಿ

 

 

👉 *ಸಲಹೆ* : ಇಲ್ಲಿ ಪ್ರಾಮುಖ್ಯತೆಯ ಆಧಾರವಾಗಿ ಪಟ್ಟಿ ಮಾಡಿ ಮತ್ತು ತಿಂಗಳಿಗೆ ಒಂದು ಅಥವಾ ಎರಡು ಮಾತ್ರ ಆಯ್ಕೆಮಾಡಿ.

 

 

3. *ಐಷಾರಾಮಿ ಖರ್ಚುಗಳು (ಇಲ್ಲ ಆದ್ಯತೆ ತಗ್ಗಿಸಿ, ಉಳಿತಾಯ ಹೆಚ್ಚಿಸಿ)*

 

ಇವು ಇನ್ಮುಂದೆ ಬಯಸಿದ ಜೀವನಶೈಲಿ ಅಥವಾ ಸಾಮಾಜಿಕ ಪ್ರಭಾವದಿಂದ ಖರ್ಚಾಗುವವು – ಆದರೆ ಇವುಗಳಿಲ್ಲದೇ ಜೀವನ ಸುಖವಾಗಿರುತ್ತದೆ:

 

ದುಬಾರಿ ಕಾರು ಖರೀದಿ

 

ದುಬಾರಿ ವಿದೇಶ ಪ್ರವಾಸ

 

ಪಂಚತಾರ ಹೋಟೆಲ್ ವಾಸ್ತವ್ಯ

 

ಮದ್ಯಪಾನ, ಧೂಮಪಾನ

 

ಪಾರ್ಟಿ ಮಾಡೋದು

 

ಅದ್ಧೂರಿ ವಿವಾಹ

 

 

👉 *ಸಲಹೆ* : ಈ ವಿಭಾಗದ ಖರ್ಚುಗಳನ್ನು ಕಡಿಮೆ ಮಾಡಿದಷ್ಟು ನಿಮ್ಮ ಉಳಿತಾಯ ಮತ್ತು ಶಾಂತಿ ಹೆಚ್ಚು!

 

 

*ನೀತಿ* :

" *ಮೊದಲು ಉಳಿಸಿ – ನಂತರ ಖರ್ಚು ಮಾಡಿ. ಖರ್ಚಿಗೆ ಮನಸ್ಸು ತಡೆಯದೇ, ಮನಸ್ಸಿಗೆ ಖರ್ಚು ಕಲಿಸಿ."*

 

*ಪರಸ್ಪರ ನಿರಂತರ*